Monday, January 24, 2022

ತುಳುನಾಡಿನಲ್ಲೇ ತುಳು ಭಾಷಾ ಶಿಕ್ಷಕರ ಗೋಳು: 2 ವರ್ಷದಿಂದ ಇಲ್ಲ ಗೌರವ ಸಂಬಳ..!

ಮಂಗಳೂರು: ತುಳು ಭಾಷೆ ನಮ್ಮ ಹೆಮ್ಮೆ, ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಇದಕ್ಕಾಗಿ ಸಾರ್ವಜನಿಕ ಧರಣಿ, ಪ್ರತಿಭಟನೆ, ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ ಟ್ಯಾಗ್‌ ಆಂದೋಲನ ನಡೆಸುತ್ತಿರುವವರು. ಈ ಕರುಣಾಜನಕ ಕಥೆ ಕೇಳಲೇಬೇಕು.

ತುಳು ಅಕಾಡೆಮಿಯು ಸರಿಸುಮಾರು ಒಂದೂವರೆ ವರ್ಷದಿಂದೀಚೆಗೆ ತುಳು ಕಲಿಸುವ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ.

ಇದರ ಮಧ್ಯೆ ಸಂಬಳ ಸಿಗದಿದ್ದರೂ ಟೀಚರ್‌ಗಳು ತುಳುವಿನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.

ತುಳುವರ ಒತ್ತಾಸೆಯ ಮೇರೆಗೆ 2017ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ತೃತೀಯ ಭಾಷೆಯಾಗಿ ತುಳುವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಯಿತು.

ಇದರಂತೆ ಉಡುಪಿ ಜಿಲ್ಲೆಯಲ್ಲಿ 5 ಶಾಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 37 ಶಾಲೆಗಳು ಸೇರಿ ಒಟ್ಟಿಗೆ 42 ಶಾಲೆಗಳಲ್ಲಿ 43 ಶಿಕ್ಷಕರು ತುಳು ಭಾಷೆಯನ್ನು ಪಠ್ಯವಾಗಿ ಕಲಿಸುವ ಕಾಯಕ ಮಾಡುತ್ತಿದ್ದಾರೆ.

ಈ ಶಿಕ್ಷಕರಿಗೆ 3000 ಸಾವಿರ ರೂಪಾಯಿ ಗೌರವಧನವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುತಿತ್ತು.

ಅದರಂತೆ ಪ್ರತಿಯೊಂದು ತರಗತಿಗೆ ವಾರದಲ್ಲಿ ಸರಿಸುಮಾರು 4 ಗಂಟೆಗಳಷ್ಟು ತರಗತಿಗಳನ್ನು ತೆಗೆದುಕೊಳ್ಳಬೇಕು ಎಂಬುವುದು ನಿಯಮ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಶಾಲೆಗಳು ಹೊರತುಪಡಿಸಿ 8 ರಿಂದ 10ನೇ ತರಗತಿವರೆಗೆ ತುಳು ಐಚ್ಛಿಕ ಭಾಷೆಯನ್ನು ಕಲಿಸಲಾಗುತ್ತಿದೆ.

ಕೊರೋನಾ ಆರಂಭಕ್ಕೂ ಮುನ್ನ ಈ ಶಿಕ್ಷಕರಿಗೆ ಪ್ರತಿತಿಂಗಳು ಕ್ಲಪ್ತಸಮಯಕ್ಕೆ ಗೌರವಧನ ಬರುತ್ತಿತ್ತು.

ನಂತರ ಕೊರೋನಾ ಅಲೆಯಿಂದಾಗಿ ಶಾಲೆಗಳು ಮುಚ್ಚಿ ಹೋದ ಪರಿಣಾಮ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ ಇದೀಗ ಕೊರೋನಾ ಪ್ರಭಾವ ಕಡಿಮೆಯಾದ ಕಾರಣ ಮತ್ತೆ ತರಗತಿ ಪ್ರಾರಂಭವಾಗಿವೆ.

ಇದಾಗಿ ತಿಂಗಳು ಐದಾಗುತ್ತಾ ಬಂದರೂ ಇದುವರೆಗೂ ತುಳು ಶಿಕ್ಷಕರಿಗೆ ಗೌರವಧನ ಮಾತ್ರ ಮರೀಚೀಕೆಯಾಗಿ ಉಳಿದಿದೆ.

ಇದನ್ನೇ ನಂಬಿಕೊಂಡಿರುವ ಹತ್ತಾರು ಶಿಕ್ಷಕರ ಬದುಕು ಮೂರಾಬಟ್ಟೆಯಾಗಿದೆ. 2019ರ ಶೈಕ್ಷಣಿಕ ವರ್ಷದಲ್ಲಿ 1020 ಮಕ್ಕಳು ತುಳು ಐಚ್ಛಿಕ ಭಾಷೆಯನ್ನಾಗಿ ಆರಿಸಿದ್ದಾರೆ. ಪ್ರಸ್ತುತ ಎಷ್ಟು ಮಕ್ಕಳು ತುಳು ಭಾಷೆಯನ್ನು ಆರಿಸಿಕೊಂಡಿದ್ದಾರೆಂಬ ಸರಿಯಾದ ಮಾಹಿತಿ ಸಿಕ್ಕಿಲ್ಲ. ಈವರೆಗೆ ನಡೆದ ಪರೀಕ್ಷೆಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಪಾಸು ಸಹ ಆಗಿದ್ದಾರೆ.

ಈ ಫಲಿತಾಂಶಕ್ಕೆ ತುಳು ಶಿಕ್ಷಕರ ಬದ್ಧತೆ ಮುಖ್ಯ ಕಾರಣವಾಗಿದೆ. ಈ ಮುಂಚೆ ಕೊರೋನಾ ಸಮಯದಲ್ಲಿ ಒಂದು ಬಾರಿ ಅಕಾಡೆಮಿ ವತಿಯಿಂದ ಮೂರು ಸಾವಿರ ಹಾಗೂ ತುಳು ಕೂಟದಿಂದ

ಮೂರು ಸಾವಿರ ಸೇರಿಸಿ ಆರು ಸಾವಿರ ಗೌರವಧನ ನೀಡಿದ್ದು ಬಿಟ್ಟರೆ ಮತ್ತೇನು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೆಸರು ಹೇಳಲಿಚ್ಛಿಸದ ತುಳು ಶಿಕ್ಷಕಿ.

ಜಿಲ್ಲೆಯ ಒಂದು ಶಾಲೆಯಲ್ಲಂತೂ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ತುಳು ಕಲಿಸುವ ಶಿಕ್ಷಕಿಗೆ ಅಲ್ಲಿನ ಮುಖ್ಯ ಶಿಕ್ಷಕರೇ ಹಲವು ತಿಂಗಳ ಕಾಲ ತಮ್ಮ ಕೈಯಿಂದ ಸಂಬಳ ನೀಡಿದ್ದಾರೆ ಎಂಬವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.

ಕೊರೋನಾ ಅಲೆ ಆರಂಭವಾದ ನಂತರ ತುಳು ಕಲಿಯುವ ಮಕ್ಕಳು ಕಲಿಕೆಯಿಂದ ವಂಚಿತಾಗಬಾರೆಂಬ ಉದ್ದೇಶದಿಂದ ಆನ್‌ಲೈನ್‌ ಪಾಠಗಳು ಪ್ರಾರಂಭಿಸಲಾಗಿತ್ತು.

ಈ ವೇಳೆ ತಮ್ಮ ಮನೆಯಿಲ್ಲ ದೈನಂದಿನ ಖರ್ಚಿಗೆ ತತ್ವಾರ ಇದ್ದರೂ, ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಧಾರೆ ಎರೆದಿದ್ದಾರೆ ಈ ಶಿಕ್ಷಕರು.

ತುಳು ಅಕಾಡಮಿ ಅವರನ್ನು ಸಂಬಳ ನೀಡದೇ ನಡು ನೀರಿನಲ್ಲಿ ಕೈ ಬಿಟ್ಟರೂ ಶಿಕ್ಷಕರು ಮಾತ್ರ ತುಳು ವಿದ್ಯಾರ್ಥಿಗಳ ಕೈ ಬಿಟ್ಟಿಲ್ಲ.

ಇದೀಗ ಕೊರೋನಾ ಬಂದಾಗಿನಿಂದ ಇದು ಮೂರನೇ ಶೈಕ್ಷಣಿಕ ವರ್ಷ, ಇನ್ನು 3 ತಿಂಗಳಲ್ಲಿ ಮತ್ತೆ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ಈ ತುಳುವ ಶಿಕ್ಷಕರ ಕೈಯಲ್ಲಿದೆ.

ಸಂಬಳ ಕೊಡುವ ಯೋಗ್ಯತೆ ಇಲ್ಲದಿದ್ದರೆ ಯಾಕೆ ಅಕಾಡೆಮಿ ನಡೆಸುತ್ತೀರಿ?
ತುಳು ಅಕಾಡೆಮಿಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬರುತ್ತದೆ. ಜೊತೆಗೆ ಸ್ಥಳೀಯರ ದೊಡ್ಡ ಸಂಸ್ಥೆಗಳು ತುಳು ಭಾಷಾ ಮೆಲಿನ ಅಭಿಮಾನದಿಂದ ಹಣಕಾಸು ನೆರವು ಅಕಾಡೆಮಿಗೆ ನೀಡುತ್ತಿದೆ.

ತುಳು ಹಬ್ಬ, ಹರಿದಿನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಕಾಡೆಮಿಗೆ ತುಳುವನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯುವ ಶಿಕ್ಷಕರಿಗೆ ಸಂಬಳ ನೀಡುವ ಯೋಗ್ಯತೆ ಇಲ್ಲವೇ? ಎಂದು ತುಳು ಭಾಷಾ ಪ್ರೇಮಿಯೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.

ಹೈಸ್ಕೂಲು ಟೀಚರಗಳದ್ದು ಡೋಲಾಯಾಮಾನ ಬದುಕು
ದಕ್ಷಿಣ-ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರೌಢಶಾಲೆಗಳು ಖಾಸಗಿ ಶಾಲೆಗಳಾಗಿವೆ. ಇದರಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ಮಧ್ಯಮ ಹಾಗೂ ಬಡ ವರ್ಗದವರು.

ಇವರಿಗೆ ಸಿಗುವ ಗೌರವಧನ ಮೂರು ಸಾವಿರ ರೂಪಾಯಿ ದೊಡ್ಡ ಮೊತ್ತವೇ ಸರಿ.

ಕೆಲವು ಶಾಲೆಗಳಲ್ಲಿ ಕೇವಲ ತುಳು ಭಾಷೆ ಬೋಧಿಸಲೆಂದೇ ದೂರದೂರಿನಿಂದ ಶಿಕ್ಷಕರು ಬರುತ್ತಾರೆ. ಖರ್ಚಿಗೆ ದುಡ್ಡಿಲ್ಲದಿದ್ದರೂ ಇಂದು ಅಥವಾ ನಾಳೆ ನಮಗೆ ಬರಬೇಕಾದ ಗೌರವ ಧನ ಬರಬಹುದೆಂಬ ನಿರೀಕ್ಷೆಯಿಂದ ಅಲ್ಲಿ-ಇಲ್ಲಿ ಸಾಲ ಮಾಡಿ ಹಣ ಒಟ್ಟುಗೂಡಿಸಿ ಪ್ರಯಾಣಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ್ದಾರೆ.

ಆದರೆ ಒಂದೂವರೇ ವರ್ಷ ಕಳೆದರೂ ಒಂದು ನಯಾಪೈಸೆಯನ್ನು ತುಳು ಶಿಕ್ಷಕರಿಗೆ ನೀಡದಿರುವುದು ಬೇಸರ ತರಿಸಿದೆ.

Hot Topics

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಮಂಗಳೂರಿನ ಕುವರಿ ರೆಮೊನಾ ಇವೆಟ್ಟಾ ಪಿರೇರಾಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಮಂಗಳೂರು: ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಮಂಗಳೂರಿನ ರೆಮೊನಾ ಇವೆಟ್ಟಾ ಪಿರೇರಾ ಅವರಿಗೆ ದೊರೆತಿದೆ.ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಈ ಗೌರವ ಲಭಿಸಿದ್ದು, ಪುರಸ್ಕಾರವು ಒಂದು ಲಕ್ಷ ಮೊತ್ತ,...