ಬೆಂಗಳೂರು : ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಆತಂಕ ಮೂಡಿಸಿರುವ ಹೊಸ ಮಾದರಿಯ ಓಮಿಕ್ರಾನ್ ಸೋಂಕು ದೇಶಕ್ಕೂ ಕಾಲಿಟ್ಟಿದ್ದು ಪತ್ತೆಯಾದ ಎರಡೂ ಸೋಂಕು ಕರ್ನಾಟದಲ್ಲಿ ದೃಢಪಟ್ಟಿದೆ.
66 ವರ್ಷದ ವೃದ್ದ ಮತ್ತು 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರೋನ್ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದೆ. 46 ವರ್ಷದ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ 5 ಜನರಲ್ಲಿ ಕೊರೊನಾ ಪಾಸಿಟಿವ್ ಸೋಂಕು ಧೃಡಪಟ್ಟಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್, ಈ ವಿಷಯವನ್ನು ಖಚಿತಪಡಿಸಿದ್ದು ಸೂಕ್ತ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ 2 ಮಾದರಿಯ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಅದೇ ರೀತಿ ವಿವಿಧ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಆಫ್ರಿಕಾ ಸೇರಿದಂತೆ ಓಮಿಕ್ರಾನ್ ಸೋಂಕು ಪತ್ತೆಯಾಗಿರುವ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ವಿಮಾನನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವ ಜೊತೆಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ನೆಗೆಟಿವ್ ವರದಿ ಬಂದವರು ಮನೆಯಲ್ಲಿ ಕಡ್ಡಾಯವಾಗಿ 7 ದಿನಗಳ ಕಾಲ ಕ್ವಾಂರಟೈನಲ್ಲಿ ಇರುವುದು ಸೇರಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ್ದಾರೆ.
ಜಗತ್ತಿನಲ್ಲಿ ಇರುವರೆಗೂ 29 ರಾಷ್ಟ್ರಗಳಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು 373 ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಜಗತ್ತಿನ ಉಳಿದ ಭಾಗಗಳಲ್ಲಿ ಓಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಎಲ್ಲ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.
ಕೊರೋನೋ ಸೋಂಕಿನ ವಿವಿಧ ರೂಪಾಂತರಗಳ ಗಿಂತ ಒಮಿಕ್ರಾನ್ ಸೋಂಕು ಅತಿವೇಗವಾಗಿ ಪ್ರಸರಣ ಹೊಂದುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಮಿಕ್ರಾಮ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಜೊತೆಗೆ ವಿಮಾನ ನಿಲ್ದಾಣದಲ್ಲಿ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ತಿಳಿಸಿದ್ದಾರೆ..
ಏನಿದು ಒಮಿಕ್ರಾನ್ ..?
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿಯಾದ ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ಈಗ ಆತಂಕಗೊಂಡಿದೆ. ಈ ಹಿಂದಿನ ಎಲ್ಲಾ ಕೊರೊನಾ ವೈರಾಣುಗಳಿಗಿಂತ ಹೆಚ್ಚು ಪ್ರಸರಣ ಶಕ್ತಿ ಹಾಗೂ ಹೆಚ್ಚು ಪರಿಣಾಮಕಾರಿ ಗುಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಆತಂಕಕಾರಿ ರೂಪಾಂತರಿ ಎಂದು ಘೋಷಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ, ಅಲ್ಲಿನ ಆರೋಗ್ಯ ಇಲಾಖೆ ಹೆಚ್ಚಿನ ಮಟ್ಟದ ತಪಾಸಣೆಗಳನ್ನು ನಡೆಸುತ್ತಿತ್ತು. ನ. 22-23ರಂದು ಅಲ್ಲಿ ಎರಡೇ ದಿನಗಳಲ್ಲಿ 2,465 ಪ್ರಕರಣಗಳು ಪತ್ತೆಯಾಗಿದ್ದವು. ಅವರಿಂದ ಪಡೆಯಲಾದ ಸ್ಯಾಂಪಲ್‌ಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು. ಕೊರೊನಾ ವೈರಾಣುವಿನ ಮೇಲೆ ಮುಳ್ಳಿನಾಕಾರದ ಪ್ರೊಟೀನ್ ಯುಕ್ತ ಅಂಗಾಶಗಳಿವೆ. ಇವನ್ನು ಸ್ಪೈಕ್‌ಗಳೆಂದು ಕರೆಯುತ್ತಾರೆ. ಮನುಷ್ಯನ ದೇಹದಲ್ಲಿನ ಜೀವಾಂಶಗಳಿಗೆ ಅಂಟಿಕೊಳ್ಳಲು ಈ ಪ್ರೊಟೀನ್ ಸ್ಪೈಕ್‌ಗಳೇ ಕಾರಣ. ಒಮಿಕ್ರಾನ್ ರೂಪಾಂತರಿಯಲ್ಲಿ ಇರುವ ಈ ಸ್ಪೈಕ್‌ಗಳಲ್ಲಿನ ಪ್ರೊಟೀನ್ 30 ಬಾರಿ ರೂಪಾಂತರ ಹೊಂದಿದ್ದು, ಇವು ಹಿಂದಿನ ರೂಪಾಂತರಿಗಿಂತ ಹೆಚ್ಚು ಬಲಿಷ್ಠವಾಗಿವೆ. ಅಸಲಿಗೆ, ನಮ್ಮಲ್ಲಿರುವ ಕೊರೊನಾ ಲಸಿಕೆಗಳಲ್ಲಿರುವ ಪ್ರತಿ ಕಾಯಗಳು ಈ ಸ್ಪೈಕ್‌ಗಳನ್ನು ಸುತ್ತುವರಿದೆ ಅವುಗಳು ಮನು ಷ್ಯನ ದೇಹದ ಜೀವಕಣಗಳ ರಿಸಿಪ್ಟರ್‌ಗಳೊಂದಿಗೆ ಸಂಯೋಗ ಹೊಂದುವುದನ್ನು ತಡೆಯುತ್ತದೆ. ಆದರೆ ಒಮಿಕ್ರಾನ್‌ನಲ್ಲಿರುವ ಸ್ಪೈಕ್‌ಗಳು ಕನಿಷ್ಟ 30 ಪೀಳಿಗೆಯನ್ನು (ರೂಪಾಂತರ) ದಾಟಿ ಬಂದಿರುವುದರಿಂದ ಇವು ಹೆಚ್ಚು ಬಲಿಷ್ಠವಾಗಿದೆ. ಅಂದರೆ, ಈಗ ಲಭ್ಯವಿರುವ ಲಸಿಕೆಗಳು ಈ ಪ್ರೋಟೀನ್‌ಗಳನ್ನು ನಿಷ್ಕ್ರಿಯ ಗೊಳಿಸುವುದು ಅನುಮಾನ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಈಗಲೇ ಹೇಳಲಾಗದು. ಸೂಕ್ತ ಅಧ್ಯಯನಗಳನ್ನು ನಡೆಸಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.