Connect with us

    LATEST NEWS

    ದೇವಳಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಿ-ಪೇಜಾವರ ಶ್ರೀ

    Published

    on

    ಉಡುಪಿ: ಧಾರ್ಮಿಕ ಶ್ರದ್ದಾ ಕೇಂದ್ರಗಳು ಸರ್ಕಾರದ ಕೈಯಲ್ಲಿ ಇರಬಾರದು. ಅದು ಹಿಂದೂ ಸಂಸ್ಥೆಗಳ ಕೈಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ತಿರುಪತಿ ಲಡ್ಡು ಪ್ರಸಾದ ಘಟನೆಯಿಂದ ಸತ್ಯವಾಗಿ ನಮಗೆ ಕಾಣುತ್ತದೆ. ಹೀಗಾಗಿ ದೇವಸ್ಥಾನವನ್ನು ಶೀಘ್ರವಾಗಿ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಹೇಳಿದರು.

    ತಿರುಪತಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಲಡ್ಡು ಪ್ರಸಾದಕ್ಕೆ ದನದ ತುಪ್ಪದ ಬದಲು ಪ್ರಾಣಿ ಜನ್ಯ ಕೊಬ್ಬಿನ ಮಿಶ್ರಣ ಬಳಕೆ ಮಾಡಿರುವ ವಿಚಾರ ಕೇಳಿ ಖೇದವಾಗಿದೆ. ಮೀನಿನ ಎಣ್ಣೆ, ಹಂದಿ ಹಸುವಿನ ಕೊಬ್ಬ ಬಳಸಿ ಪ್ರಸಾದ ತಯಾರಿಸಿರುವುದು ಸಮಾಜಕ್ಕೆ ಭಗವಂತನಿಗೆ ಬಗೆದಿರುವ ಅಪಚಾರ. ಇಂತಹ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು ಖಂಡನೀಯ ಎಂದರು.

    ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!

    ತಿರುಪತಿ ಶ್ರೀನಿವಾಸನನ್ನು ಗೋರಕ್ಷಕ ಎಂದು ಕಾಣುತ್ತೇವೆ. ಅಂತಹ ಶ್ರೀನಿವಾಸ ದೇವರಿಗೆ ಹಸು ಕೊಬ್ಬು ಬಳಸಿದ ಪ್ರಸಾದ ನೀಡಿರುವುದು ಅಪರಾಧ. ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಮಾಡಿರುವ ಹಲ್ಲೆ ಇದು. ಹಿಂದೂಗಳು ಉಪಯೋಗ ಅನರ್ಹವಾಗಿರುವ ವಸ್ತುಗಳನ್ನು ತಯಾರಿಸುವ ಅಡ್ಡೆಗಳನ್ನು ಕಂಡುಹಿಡಿದು ಶಿಕ್ಷಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

    LATEST NEWS

    ತಿರುಪತಿ ಲಡ್ಡು ಕಲಬೆರಕೆ ವಿಚಾರ; ಜಗನ್ ಮನೆ ಬಳಿ ಉದ್ವಿಗ್ನತೆ!

    Published

    on

    ಆಂದ್ರಪ್ರದೇಶ/ಮಂಗಳೂರು : ವೈಎಸ್‌ಆರ್ ಸರ್ಕಾರದ ಅವಧಿಯಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ಕಲಬೆರಕೆಯಾಗಿರುವುದು ದೃಢಪಟ್ಟಿರುವುದರಿಂದ ಮಾಜಿ ಸಿಎಂ ಹಾಗೂ ವೈಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಸೆ.22 ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರು ಹಾಗೂ ಹಿಂದೂ ಧಾರ್ಮಿಕ ಸಂಘಟನೆಗಳು ಜಗನ್ ನಿವಾಸದ ಎದುರು ಆಕ್ರೋಶ ವ್ಯಕ್ತಪಡಿಸಿದರು. ಸಹಸ್ರಾರು ಮಂದಿ ಭಕ್ತರು ಸೇರಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

    ತಾಡಪಲ್ಲಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಜಗನ್ ನಿವಾಸದ ಎದುರು ಧಿಕ್ಕಾರದ ಘೋಷಣೆಗಳನ್ನು ಕೂಗಿದ ಭಕ್ತರು ಜಗನ್ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಗನ್ ಮನೆಯ ಗೇಟ್‌ನಲ್ಲಿ ಜಮಾಯಿಸಿದರು. ಪೊಲೀಸರು ತಡೆಯಲು ಮುಂದಾದಾಗ ಪರಿಸ್ಥಿತಿ ಉದ್ವಿಗ್ನಕ್ಕೆ ಕಾರಣವಾಯಿತು.

    ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!

    ಮಾತಿನ ಚಕಮಕಿ:
    ಈ ವೇಳೆ ಪೊಲೀಸರು ಹಾಗೂ ಯುವಮೋರ್ಚಾ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯದ್ವಾರದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಿದ ಭಕ್ತರು ವೈಎಸ್ಆರ್ ಕಚೇರಿ ಮುಂಭಾಗಕ್ಕೆ ತೆರಳಿ ಗೋಡೆಗಳಿಗೆ ಕೆಂಪು ಬಣ್ಣ ಎರಚಿದ್ದಾರೆ. ಬಳಿಕ ಜಗನ್ ಮನೆಗೆ ನುಗ್ಗಲು ಯತ್ನ ನಡೆಸಿದ್ದಾರೆ. ಬೃಹತ್ ಗೇಟ್ ಮುಚ್ಚಿದ್ದರಿಂದ ಗೇಟಿನ ಮೇಲೂ ಕೆಂಪು ಬಣ್ಣ ಸುರಿದಿದ್ದಾರೆ.

    Continue Reading

    DAKSHINA KANNADA

    WATCH: ಕೆಪಿಟಿ ಬಳಿ ಭೀಕರ ಅಪಘಾ*ತ: ಲಾರಿಯಡಿ ಬಿದ್ದ ಬೈಕ್ ಸವಾರ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು : ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಗಂಭೀ*ರವಾಗಿ ಗಾ*ಯಗೊಂಡಿರುವ ಘಟನೆ ಮಂಗಳೂರಿನ ಕೆಪಿಟಿ ಬಳಿ ನಡೆದಿದೆ. ತಲಪಾಡಿ ಕಿನ್ಯಾ ಮೂಲದ ಅಶೋಕ್(44) ಗಂಭೀ*ರವಾಗಿ ಗಾಯಗೊಂಡವರು.

    ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್​ ಬಳಿಯ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.

    ಇದನ್ನೂ ಓದಿ : ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    ಪರಿಣಾಮ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.  ಅಪಘಾ*ತದ ದೃಶ್ಯ ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    LATEST NEWS

    ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    Published

    on

    ಮಂಗಳೂರು/ ಬಳ್ಳಾರಿ : ಸೆ.12ರಂದು ನಡೆದಿದ್ದ ಹಣ, ಆಭರಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಕಂಬಿ ಎಣಿಸುತ್ತಿದ್ದಾರೆ.  ಬ್ರೂಸ್‌ಪೇಟೆ ಹೆಡ್ ಕಾನ್‌ಸ್ಟೇಬಲ್ ಮಹಬೂಬ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಆರೀಫ್‌, ಜೊತೆಗೆ ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್ ಬಂಧಿತರು. ಆರೋಪಿಗಳಿಂದ ಒಟ್ಟು 22,41,000 ಮೌಲ್ಯದ ಹಣ, ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ. ಕೃ*ತ್ಯದಲ್ಲಿ ಭಾಗಿಯಾಗಿದ್ದ ಕಾನ್ಸ್ಟೇಬಲ್  ಮೆಹಬೂಬ್‌ ನನ್ನು ಅಮಾನತು ಮಾಡಲಾಗಿದೆ.

    ಏನಿದು ಪ್ರಕರಣ?

    ರಘು ಎಂಬುವವರು ಸೆ. 12ರಂದು ಮುಂಜಾನೆ 22,99,000 ಹಣ ಮತ್ತು 15,90,000 ಮೌಲ್ಯದ 318 ಗ್ರಾಂ ಚಿನ್ನಾಭರಣಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಟ್ಯಾಂಕ್‌ ಬಾಂಡ್‌ ರಸ್ತೆ ಕಡೆಯಿಂದ ರಾಯದುರ್ಗ ಬಸ್ ನಿಲ್ದಾಣದ ಕಡೆಯ ಓಣಿಯಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ರಘು ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದರು.

    ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಮತ್ತು ಬ್ರೂಸ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಸಿಂಧೂರ್‌ ತನಿಖೆಗಾಗಿ ನಗರ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಬ್ರೂಸ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಎಂ.ಎನ್. ಸಿಂಧೂರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ, ಸೆ. 21ರಂದು ಆರೀಫ್‌ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

    ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್‌ಎಂಬುವವರೊಂದಿಗೆ ಎರಡು ಬೈಕ್‌ಗಳಲ್ಲಿ ಹೋಗಿ ಹಣ ಮತ್ತು ಬಂಗಾರವುಳ್ಳ ಬ್ಯಾಗ್ ಕಸಿದು ಬಂದಿದ್ದಾಗಿ ವಿಚಾರಣೆ ವೇಳೆ ಆರೀಫ್‌ ತಿಳಿಸಿದ್ದ. ದರೋಡೆ ಮಾಡಿದ ಹಣ ಮತ್ತು ಆಭರಣವನ್ನು ಆರೀಫ್ ತನ್ನ ತಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಂಚಿ, 9 ಲಕ್ಷವನ್ನು ತನ್ನ ಆತ್ಮೀಯನಾಗಿದ್ದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹಬೂಬ್‌ಗೆ ಆರೀಫ್‌ಗೆ ನೀಡಿದ್ದ.ಕದ್ದ ಮಾಲು ಸಾಗಿಸಲು ಆರೀಫ್‌ಗೆ ಮೆಹಬೂಬ್‌ ವಾಹನದ ವ್ಯವಸ್ಥೆ ಮಾಡಿದ್ದ ಎಂದು ಗೊತ್ತಾಗಿದೆ. ಮೆಹಬೂಬ್‌ ನಿಂದ 6.90 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಹುಡುಗಿಗಾಗಿ ನಡೀತು ಜಗಳ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ ಯುವಕ

    ಸಿಕ್ಕಿಬಿದ್ದಿದ್ದು ಹೇಗೆ?

    ಘಟನೆ ನಡೆಯುತ್ತಲೇ ಪೊಲೀಸರು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ದುಷ್ಕರ್ಮಿಗಳ ಅಸ್ಪಷ್ಟ ಚಹರೆ ಸಿಕ್ಕಿತ್ತು. ಹೀಗಿರುವಾಗಲೇ ದುಷ್ಕರ್ಮಿಗಳ ವರ್ತನೆಯಲ್ಲಿ ಆಗಿದ್ದ ಬದಲಾವಣೆ ಪ್ರಕರಣಕ್ಕೆ ತಿರುವು ಕೊಟ್ಟಿತ್ತು.

    ಕುಡಿಯುವುದು ಜನರ ಮೇಲೆ ದಬ್ಬಾಳಿಕೆ ನಡೆಸುವುದು ದರೋಡೆಕೋರರು ಹೆಚ್ಚು ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ರವಾನೆಯಾಗಿತ್ತು. ಇದೇ ಅನುಮಾನದ ಮೇಲೆ ಆರೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    Continue Reading

    LATEST NEWS

    Trending