Connect with us

    LATEST NEWS

    ಮ್ಯಾನೇಜರ್‌ಗೆ ವಂಚನೆ; ಲಕ್ಷಾಂತರ ನಗದು ಸಹಿತ ವೈಟರ್ ಪರಾರಿ

    Published

    on

    ಮಣಿಪಾಲ: ಹೊಟೇಲ್ ಮ್ಯಾನೇಜರ್‌ಗೆ ವೈಟರ್ ವಂಚಿಸಿ ಲಕ್ಷಾಂತರ ನಗದಿನೊಂದಿಗೆ ಪರಾರಿಯಾದ ಘಟನೆ ಮಣಿಪಾಲದ ಈಶ್ವರನಗರ ಹೊಟೇಲ್‌ನಲ್ಲಿ ನಡೆದಿದೆ.


    ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಗಿರೀಶ್ ವಂಚನೆಗೊಳಗಾದವರು.
    ಹೊಟೇಲ್‌ನಲ್ಲಿ ವೈಟರ್‌ ಆಗಿ ಕೆಲಸ ಮಾಡಿಕೊಂಡಿದ್ದ ಜಯಮೋಹನ್ ಸೊಮೇಶ್ ಎಂಬಾತ ಗಿರೀಶ್ ಅವರೊಂದಿಗೆ ವಾಸವಾಗಿದ್ದನು. ಸೆ.29 ರಂದು ಗಿರೀಶ್ ಅವರು ಕೆಲಸ ಮುಗಿಸಿ ರೂಮಿಗೆ ಬಂದು 26,650 ರೂ. ನಗದು ಹಾಗೂ 10,000 ರೂ. ಬೆಲೆಬಾಳುವ ವಿವೋ ವೈ 18 ಮಾದರಿಯ ಮೊಬೈಲ್ ಫೋನ್ ಅನ್ನು ತನ್ನ ರೂಮಿನ ಡ್ರಾವರಲ್ಲಿಟ್ಟು ಮಲಗಿದ್ದರು.
    ಮರುದಿನ ಬೆಳಿದ್ದೆ ನೋಡಿದಾಗ ಜಯಮೋಹನ್ ಸ್ಥಳದಲ್ಲಿರಲಿಲ್ಲ. ಡ್ರಾವರ್‌ನಲ್ಲಿ ಇಟ್ಟಿದ್ದ ನಗದು, ಮೊಬೈಲ್ ಹಾಗೂ ಹೊಟೇಲ್ ಹೆಸರಿನಲ್ಲಿರುವ ಎಚ್‌ಡಿಎಫ್‌ಸಿ ಖಾತೆಯಿಂದ 81,000 ರೂ. ಗಳನ್ನು ಗೂಗಲ್ ಪೇ ಮೂಲಕ ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾದ್ದು, ತನಿಖೆ ನಡೆಸುತ್ತಿದ್ದಾರೆ.

    LATEST NEWS

    ವಯನಾಡ್ ಭೂಕುಸಿತ: ಪರಿಹಾರ ಧನ ಏಕೆ ವಿತರಿಸಿಲ್ಲ; ಕೇಂದ್ರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

    Published

    on

    ವಯನಾಡ್ ಭೂಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹಣ ವಿತರಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇರಳ ಹೈಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

    ಕರ್ನಾಟಕ ಮತ್ತು ತಮಿಳುನಾಡಿನಂತಹ ನೆರೆಯ ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಧನ ಒದಗಿಸಲಾಗಿದೆ ಎಂಬ ವಿಚಾರವನ್ನು ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರಿದ್ದ ವಿಭಾಗೀಯ ಪೀಠ ಗಮನಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನಿಧಿ ವಿತರಿಸುವುದನ್ನು ಪರಿಗಣಿಸಬೇಕು ಎಂದು ಅದು ಸೂಚಿಸಿತು.

    ಭೂಕುಸಿತದಿಂದ ತೀವ್ರ ಹಾನಿ ಮತ್ತು ನಷ್ಟ ಅನುಭವಿಸಿದ್ದರೂ ಕೇರಳಕ್ಕೆ ಇನ್ನೂ ಯಾವುದೇ ಪರಿಹಾರ ಧನ ಒದಗಿಸಿಲ್ಲ ಎಂದು ಅಮಿಕಸ್ ಕ್ಯೂರಿ (ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲ) ರಂಜಿತ್ ಥಂಪನ್ ಗಮನ ಸೆಳೆದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು.

    ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್, ಅಮಿಕಸ್ ನೀಡಿದ ಸಲಹೆಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶ ಕೋರಿದರು. ಹೀಗಾಗಿ ಅಕ್ಟೋಬರ್ 18ರೊಳಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮತ್ತು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

    ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಮತ್ತುನಿಯಂತ್ರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.

    Continue Reading

    LATEST NEWS

    ಟೀ ಕುಡಿದ್ರೆ ತಲೆನೋವು ನಿಜವಾಗ್ಲೂ ಕಮ್ಮಿ ಆಗುತ್ತಾ? ಚಹಾ ಪ್ರಿಯರೇ ನೀವು ಓದಲೇಬೇಕಾದ ಸ್ಟೋರಿ!

    Published

    on

    ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಹಲವರಿಗೆ ಟೀ ಬೇಕೆ ಬೇಕು. ಟೀ ಸೇವಿಸಿದ ಮೇಲೆಯೇ ಅವರ ದಿನಚರಿ ಮುಂದುವರೆಯುತ್ತದೆ. ಟೀ ಎಷ್ಟರ ಮಟ್ಟಿಗೆ ಹೆಸರು ಮಾಡಿದೆ ಎಂದರೆ ಪಾಶ್ಷಿಮಾತ್ಯ ದೇಶಗಳಲ್ಲೂ ಇದನ್ನು ತುಂಬಾ ಇಷ್ಟಪಡುವವರಿದ್ದಾರೆ. ಟೀ ಕುಡಿಯದೇ ಇದ್ದರೆ ತುಂಬಾ ತಲೆಕೆಡಿಸಿಕೊಳ್ಳುವ ಜನರೂ ಇದ್ದಾರೆ. ಅದು ಏಕೆ ಗೊತ್ತಾ? ಇದಕ್ಕೆ ಏನಿರಬಹುದು ಕಾರಣ?

    ಯಾವಾಗ ಟೀ ಕುಡಿದರೆ ಉತ್ತಮ ಗೊತ್ತಾ? ಮನೆಯಲ್ಲಿ ಟೀ ಕುಡಿಯಲು ಸಾಧ್ಯವಾಗದಿದ್ದರೆ ಕೊನೆಗೆ ರಸ್ತೆ ಅಂಚಿನಲ್ಲಿರುವ ಚಿಕ್ಕ ಗೂಡಂಗಡಿಯಲ್ಲಿ ಟೀ ಕುಡಿದು ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ನಮಗೆ ಟೀ ಬೇಕು ಅಷ್ಟೆ. ಹಲವರು ದೈನಂದಿನ ಟೀ ಕಳೆದುಕೊಳ್ಳುವುದರಿಂದ ಮನಸ್ಸಿಗೆ ತುಂಬಾ ತೊಂದರೆಯಾಗುತ್ತೆ. ಮುಖ್ಯವಾದುದನ್ನು ಏನೂ ಬಿಟ್ಟಂತೆ ಅನುಭವವಾಗುತ್ತೆ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಟೀಗೆ ಜನ ಎಡಿಕ್ಟ್ ಆಗಿದ್ದಾರೆ.

    ಟೀ ಸೇವನೆಯಿಂದ ನಮ್ಮ ದೇಹಕ್ಕೆ ವಿವಿಧ ಪ್ರಯೋಜನಗಳು ಇದೆ ಹಾಗೆಯೇ ಕೆಲ ಸಮಸ್ಯೆಗಳು ಇದೆ. ಒಂದು ನಿಗದಿತ ಸಮಯದಲ್ಲಿ ಟೀ ಕುಡಿಯುವುದು ಉತ್ತಮ. ಫ್ರೀ ಇದ್ದಾಗಲೆಲ್ಲ ಟೀ ಕುಡಿದರೆ ನಿಮ್ಮ ಆರೋಗ್ಯ ಕೆಡುವುದು ಪಕ್ಕಾ.

    ಚಹಾ ಬಗ್ಗೆ ವೈದ್ಯರು ಹೇಳುವುದೇನು? ಇನ್ನು ಕೆಲ ನುರಿತ ವೈದ್ಯರು ಟೀ ಸೇವನೆಯಿಂದ ತಲೆ ನೋವು ಕಡಿಮೆ ಆಗಲ್ಲ ಎಂದು ವರದಿ ಮಾಡಿದ್ದಾರೆ. ಅತೀಯಾದ ಟೀ ಸೇವನೆ ಹಾನಿಕಾರಕ. ಟೀ ಸೇವಿಸುವುದರಿಂದ ತಲೆ ನೋವಿಗೆ ಸಂಬಂಧಿಸಿ ಯಾವ ಪರಿಣಾಮವೂ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಟೀನಲ್ಲಿ ಹಲವು ವಿಧವಿದೆ. ಬ್ಲ್ಯಾಕ್ ಮತ್ತು ಗ್ರೀನ್ ಟೀ ಕುಡಿದರೆ ಹಲವು ಪ್ರಯೋಜನಗಳಿವೆ.

    ಬ್ಲ್ಯಾಕ್ ಟೀ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ, ಇದು ನಿಮಗೆ ತಲೆನೋವುಗೆ ಸಹಾಯ ಮಾಡುತ್ತದೆ. ಹಾಗೂ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ವಿಶೇಷವಾಗಿ ಕೆಫೀನ್ ಅನ್ನು ತಲೆನೋವು ಅನುಭವಿಸುವವರು ಸ್ವೀಕರಿಸುತ್ತಾರೆ.

    ಹಲವರ ಫೇವರೇಟ್ ಈ ಮಸಾಲೆ ಟೀ :

    ಸಾಮಾನ್ಯವಾಗಿ ಮಸಾಲಾ ಟೀ ನಲ್ಲಿ ಬಳಸುವ ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಹಲವು ಬಗೆಯ ಉತ್ತಮ ಗುಣಲಕ್ಷಣಗಳನ್ನು ಹೊಂದಿದ್ದು ಇದು ತಲೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಮೈಗ್ರೇನ್ ರೋಗಿಗಳಿಗೆ ಚಿಕಿತ್ಸೆ ನೀಡಲು ಶುಂಠಿ ಪರಿಣಾಮಕಾರಿ ಎಂದು ವೈದ್ಯರು ದೃಢಪಡಿಸಿದ್ದಾರೆ. ಮಸಾಲೆ ಟೀ ತಲೆನೋವನ್ನು ಗುಣಪಡಿಸುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಕೆಲವು ತಜ್ಞರು ಟೀನಲ್ಲಿರುವ ಮಸಾಲೆಗಳು ಹಿತವಾದ ಪರಿಣಾಮವನ್ನು ಬೀರಬಹುದು ಮತ್ತು ಮಾನಸಿಕ ಒತ್ತಡ ಸಂಬಂಧಿತ ತಲೆನೋವುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.

    ಚಹಾವನ್ನು ಸೇವಿಸಲು ಇದು ಸರಿಯಾದ ಸಮಯವಲ್ಲ:

    ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಸೇವಿಸುವುದನ್ನು ತಡೆಯಲು ಸಂಶೋಧನಾ ಸಂಸ್ಥೆ ಸಲಹೆ ನೀಡಿದೆ. ಏಕೆಂದರೆ ಇದರಲ್ಲಿ ಟ್ಯಾನಿನ್ ಎಂಬ ಅಂಶವು ಕೆಫೀನ್‌ನಂತೆ ಇರುತ್ತದೆ. ಈ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಅಡ್ಡಿ ಪರಿಣಾಮಪಡಿಸಬಹುದು. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    Continue Reading

    LATEST NEWS

    Viral Video: ಪ್ರೀತಿಯಿಂದ ಮನದರಸಿಯ ದೃಷ್ಠಿ ತೆಗೆದ ಅರಸ; ಪ್ರತಿ ವಧುವಿನ ಕಲರ್‌ಫುಲ್ ಕನಸು.. ಯಾವುದು ಗೊತ್ತಾ ??

    Published

    on

    ಎರಡು ಮನಸ್ಸುಗಳ ಬೆಸೆಯುವ ಪವಿತ್ರ ಬಂಧವೇ ಮದುವೆ. ಹಾಗಾಗಿ ನವ ಜೋಡಿಯು ತಮ್ಮ ಮದುವೆ ಕ್ಷಣಗಳನ್ನು ಸುಂಧುರವಾಗಿಸಲು ಬಯಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧುವು ಮಂಟಪಕ್ಕೆ ಬರುತ್ತಿದ್ದಂತೆ ದೃಷ್ಟಿ ತೆಗೆದು ಆಕೆಯ ಕೈಹಿಡಿದು ವರನೇ ಕರೆದುಕೊಂಡು ಬಂದಿದ್ದಾನೆ.


    Zoopgo ಹೆಸರಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ  ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಧುವು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟಿದ್ದಾಳೆ. ಆಕೆಯನ್ನು ನೋಡಿದ ವರನು, ಕೈಯಲ್ಲಿ ಹಣವನ್ನು ಹಿಡಿದು ಆಕೆಯ ದೃಷ್ಟಿ ತೆಗೆದಿದ್ದಾನೆ. ಈ ವೇಳೆ ವಧುವು ವರನನ್ನು ನೋಡುತ್ತಾ ನಗುತ್ತಾ ನಿಂತಿದ್ದಾಳೆ. ಆ ಬಳಿಕ ಕೈಹಿಡಿದು ಆಕೆಯನ್ನು ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ.

    ಈ ವಿಡಿಯೋಗೆ “ಪ್ರತಿಯೊಬ್ಬ ವಧು ತನ್ನ ವರನು ತನ್ನನ್ನು ಹೀಗೆ ಸ್ವಾಗತಿಸಬೇಕೆಂದು ಕನಸು ಕಾಣುತ್ತಾಳೆ.” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. 31 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರೂ ಪ್ರತಿಕ್ರಿಯೆ ನೀಡಿದ್ದು, ‘ಆ ಹುಡುಗಿಗೆ ಒಳ್ಳೆಯ ವರ ಸಿಕ್ಕಿದ್ದಾನೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಆ ಹುಡುಗನನ್ನು ಮದುವೆಯಾಗುತ್ತಿರುವ ಆಕೆಯು ನಿಜಕ್ಕೂ ಅದೃಷ್ಟವಂತಳು’ ಎಂದಿದ್ದಾರೆ. ಇನ್ನೊಬ್ಬರು ‘ವರನು ಹಣವನ್ನು ವ್ಯರ್ಥ ಮಾಡಲಿಲ್ಲ, ಅದನ್ನು ಯಾರಿಗೂ ನೀಡಲಿಲ್ಲ‘ ಎಂದಿದ್ದಾರೆ.

     

    ವಿಡಿಯೋ ನೋಡಿ:

    Continue Reading

    LATEST NEWS

    Trending