Connect with us

LATEST NEWS

ಫೆ.18ರಂದು ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಭಾಗಿ

Published

on

ಮಂಗಳೂರು: ಕರ್ಣಾಟಕ ಬ್ಯಾಂಕಿನ 98ನೆ ಸಂಸ್ಥಾಪಕರ ದಿನಾಚರಣೆಯು ಫೆಬ್ರವರಿ 18, 2022 ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.


ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಉಪನ್ಯಾಸ ನೀಡಲಿದ್ದಾರೆ.
ಉಪನ್ಯಾಸದ ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ-ಕೊಳಲು ವಾದನ ನೆರವೇರಲಿದೆ. ವಿದ್ವಾನ್ ಹೇರಂಬ್ ಮತ್ತು ವಿದ್ವಾನ್ ಹೇಮಂತ್ ಇವರುಗಳು ಕೊಳಲು ವಾದನವನ್ನು ನಡೆಸಿಕೊಡಲಿದ್ದಾರೆ.

ಪಕ್ಕವಾದ್ಯಗಳಲ್ಲಿ ವಿದ್ವಾನ್ ವಿಠ್ಠಲ್ ರಂಗನ್ ವಯೋಲಿನ್ ವಾದನದಲ್ಲಿ, ವಿದ್ವಾನ್ ಪತ್ರಿ ಸತೀಶ್ ಮೃದಂಗ ವಾದನದಲ್ಲಿ, ವಿದ್ವಾನ್ ಡಾ.ಎಸ್ ಕಾರ್ತಿಕ್ ಘಟಂ ವಾದನದಲ್ಲಿ ಸಹಕಾರವನ್ನು ನೀಡಲಿದ್ದಾರೆ.
ಬ್ಯಾಂಕಿನ ಅಧ್ಯಕ್ಷರಾದ ಪಿ. ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


ಈ ಕಾರ್ಯಕ್ರಮವನ್ನು ‘ನಮ್ಮ ಕುಡ್ಲ’ ಚಾನೆಲ್, ‘ನಮ್ಮ ಟಿವಿ’ ಚಾನೆಲ್ ಹಾಗು ‘ಆಕಾಶವಾಣಿ-ಮಂಗಳೂರು’ ನೇರಪ್ರಸಾರ ಮಾಡಲಿದೆ. ಅದಲ್ಲದೆ ಇದು ಬ್ಯಾಂಕಿನ ಯುಟ್ಯೂಬ್ ಹಾಗೂ ಫೇಸ್‍ಬುಕ್‍ಗಳಲ್ಲಿಯೂ ನೇರಪ್ರಸಾರವಾಗಲಿದೆ.

ಕಾರ್ಯಕ್ರಮದ ವೆಬೆಕ್ಸ್ ಲೊಗಿನ್ ಐಡಿಯನ್ನು (Log in ID) ದಿನಾಂಕ 18/02/2022 ರಂದು ಬ್ಯಾಂಕಿನ ವೆಬ್‍ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

“1924 ಫೆಬ್ರವರಿ 18ರಂದು ಜನ್ಮತಾಳಿದ ಕರ್ಣಾಟಕ ಬ್ಯಾಂಕ್ ಫೆಬ್ರವರಿ 18, 2022 ರಂದು 99ರ ಹರೆಯಕ್ಕೆ ಪಾದಾರ್ಪಣೆ ಮಾಡಲಿದೆ.

ಬ್ಯಾಂಕು ಇನ್ನೊಂದು ವರ್ಷದಲ್ಲಿ ಶತಮಾನದ ಸಂಭ್ರಮವನ್ನು ಕಾಣಲಿದೆ”. ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!

Published

on

ಮಂಗಳೂರು : ಜಗತ್ತು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಕೊಳ್ಳುತ್ತದೆ. ಹೊಸ ಆವಿಷ್ಕಾರಗಳು ಜನರ ಹುಬ್ಬೇರಿಸುವಂತೆ ಮಾಡುತ್ತದೆ. ರೋಬೋಟ್ ತಂತ್ರಜ್ಞಾನವೇನೋ ಹಳತು. ಆದ್ರೆ, ಈಗ ಈ ರೊಬೋಟ್ ಬಗ್ಗೆ ನಾವು ಹೇಳುತ್ತಿರುವ ಸುದ್ದಿ ಹೊಸತು. ಹೌದು, ಇಲ್ಲೊಬ್ಬ ರೋಬೋಟ್ ಅನ್ನೇ ಮದುವೆಯಾಗುತ್ತಿದ್ದಾನೆ. ಇದು ಸಾಧ್ಯನಾ ಅನ್ಬೇಡಿ! ಇದು ಸಾಧ್ಯ ಎಂದು ಯುವಕ ಸಾರಲು ಹೊರಟಂತಿದೆ.


ಎಲ್ಲಿ ನಡೆಯಲಿದೆ ಈ ಅಚ್ಚರಿಯ ಘಟನೆ?

ರೋಬೋಟ್ ತಂತ್ರಜ್ಞಾನ ಆವಿಷ್ಕಾರ ಆದಂದಿನಿಂದಲೂ ಅಚ್ಚರಿ ಹುಟ್ಟು ಹಾಕುತ್ತಿರುವುದೇನೋ ಸರಿ. ಆದ್ರೆ ಮದುವೇನೂ ಆಗ್ಬೋದಾ!? ಈ ಹಿಂದೆ ಸಿನಿಮಾವೊಂದರಲ್ಲಿ ರೋಬೋಟ್ ನ್ನು ಮದುವೆಯಾಗಿದ್ದ ಕಥೆ ಹೆಣೆಯಲಾಗಿತ್ತು. ‘ತೇರೆ ಬಾತೋಮೆ ಅಯ್ಸಾ ಉಲ್ಜಾದಿಯಾ’ ಅನ್ನೋ ಈ ಹಿಂದಿ ಸಿನೆಮಾದಲ್ಲಿ ಹೀರೋ ರೋಬೋಟ್ ಅನ್ನು ಮದುವೆಯಾಗಿ, ಸಂಸಾರ ಮಾಡುವ ಕಥೆ ಇದೆ.


ಇದೀಗ ರಾಜಸ್ಥಾನದಲ್ಲಿ ಯುವಕನೊಬ್ಬ ರೋಬೋಟ್‌ ಜೊತೆ ಮದುವೆ ಆಗಲು ಮುಂದಾಗಿದ್ದಾನೆ. ಅಂದಹಾಗೆ, ಈ ಯುವಕ ಸಾಫ್ಟ್ ವೇರ್ ಇಂಜಿನಿಯರ್. ಆತನ ಹೆಸರು ಸೂರ್ಯಪ್ರಕಾಶ್ ಸುಮೋತಾ. ಸಿಕರ್ ಎಂಬ ಗ್ರಾಮವೊಂದರ ಸೂರ್ಯಪ್ರಕಾಶ್ ಸುಮೋತಾ ರೋಬೋಟ್ ಜೊತೆ ಮದುವೆಯಾಗಲು ಮುಂದಾಗಿದ್ದಾರೆ.

ಮದುವೆ ದಿನಾಂಕ ಫಿಕ್ಸ್ ಆಗಿಲ್ಲ :


ಮಾರ್ಚ್ 22 ರಂದು ರೋಬೋಟ್ ಜೊತೆ ಎಂಗೇಜ್ ಮೆಂಟ್ ಮುಗಿಸಿಕೊಂಡಿದ್ದು, ಮದುವೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ರೋಬೋಟ್‌ ಜೊತೆ ಮದುವೆಗೆ ಮುಂದಾಗಿರುವ ಸೂರ್ಯಪ್ರಕಾಶ್ ಸುಮೋತಾ ಮೂಲತಃ ಬಡ ಕೃಷಿ ಕುಟುಂಬದಿಂದ ಬಂದವರು. ತಂದೆ – ತಾಯಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಗ ರೋಬೋಟ್ ಜೊತೆ ಸಂಸಾರ ಮಾಡುತ್ತೇನೆ ಅಂದ್ರೆ ತಂದೆ – ತಾಯಿ ಒಪ್ತಾರೆಯೇ ? ಸೂರ್ಯಪ್ರಕಾಶ ತಂದೆ – ತಾಯಿ ಈ ಮದುವೆಗೆ ಸಮ್ಮತಿ ಸೂಚಿಸಿಲ್ಲ. ಕುಟುಂಬದ ಸದಸ್ಯರು ಸೂರ್ಯಪ್ರಕಾಶ್‌ಗೆ ಓಕೆ ಅಂದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ತಂದೆ ತಾಯಿ ಕೂಡಾ ಈ ರೋಬೋಟ್ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ರೋಬೋ ತಯಾರಿಗೆ 19 ಲಕ್ಷ ಖರ್ಚು :

ಎನ್‌ಎಮ್‌ಎಸ್‌ 5.0 ಗಿಗಾ ಎಂದು ರೋಬೋಟ್‌ಗೆ ಹೆಸರಿಟ್ಟಿದ್ದು, ಈ ರೋಬೋಟ್ ತಯಾರು ಮಾಡಲು ಸೂರ್ಯಪ್ರಕಾಶ್ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ರೋಬೋಟನ್ನು ತಮಿಳನಾಡು ಹಾಗೂ ನೋಯ್ಡಾದ ಕಂಪೆನಿಗಳು ಜಂಟಿಯಾಗಿ ತಯಾರು ಮಾಡುತ್ತಿದೆ. ಇನ್ನು ರೋಬೋಟ್‌ಗೆ ಬೇಕಾದ ಸಾಫ್ಟ್‌ವೇರ್‌ ಹಾಗೂ ಅದರ ಕಮಾಂಡ್‌ಗಳನ್ನು ಖುದ್ದು ಸೂರ್ಯಪ್ರಕಾಶ್ ರೆಡಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೋಬೋಟ್‌ಗಳನ್ನು ಕೃಷಿಯಲ್ಲಿ ಬಳಕೆ ಮಾಡಿ ಅವುಗಳ ವರ್ತನೆಯನ್ನು ಸೂರ್ಯಪ್ರಕಾಶ ಅಧ್ಯಯನ ಮಾಡಿದ್ದಾನೆ.

ಇದೇ ವೇಳೆ ಮನೆಯವರು ಮದುವೆಗೆ ಒತ್ತಾಯಿಸಿದಾಗ ಈ ರೀತಿ ರೋಬೋಟ್‌ ಜೊತೆ ಮದುವೆ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಕಳೆದ ಎರಡು ವರ್ಷದಿಂದ ಪರಿಪೂರ್ಣ ಮನುಷ್ಯರಂತೆ ವರ್ತಿಸೋ ರೋಬೋಟ್ ತಯಾರಿಯಲ್ಲಿ ಸೂರ್ಯಪ್ರಕಾಶ್ ತೊಡಗಿಸಿಕೊಂಡಿದ್ದರು.

Continue Reading

LATEST NEWS

ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

Published

on

ಕಾರ್ಕಳ : ಭಾರೀ ಸೆಕೆಯಿಂದಾಗಿ ಮನೆಯೊಳಗಡೆ ಮಲಗಲಾಗದೇ ಮನೆ ಟೆರೇಸ್ ಮೇಲೆ ಮಲಗಲು ಹೋಗಿದ್ದ ಶಿಕ್ಷಕ ಗಾಢ ನಿದ್ದೆಯಲ್ಲಿ ಉರುಳಿ ಬಿದ್ದು ಸಾ*ವನ್ನಪ್ಪಿದ ಘಟನೆ ಅಜೆಕಾರು ಕುಮೇರಿಯಲ್ಲಿ ನಡೆದಿದೆ. ಸುಂದರ ನಾಯ್ಕ(55) ಇಹಲೋಕ ತ್ಯಜಿಸಿದ ಶಿಕ್ಷಕ.

ಸುಂದರ ಅವರು ಆಶ್ರಯ ನಗರದ ನಿವಾಸಿಯಾಗಿದ್ದು, ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಸೆಕೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದ ಇವರನ್ನು ಮನೆ ಮಂದಿ ಬೆಳಿಗ್ಗೆ 6:30ಕ್ಕೆ ಎಬ್ಬಿಸಲೆಂದು ಹೋದಾಗ ಇವರು ಟೆರೇಸ್‌ನಿಂದ ಕೆಳಕ್ಕೆ ಬಿದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃ*ತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮೃತ ಶಿಕ್ಷಕ ಸುಂದರ್ ನಾಯ್ಕ್ ಪತ್ನಿ ಪುತ್ರಿಯರನ್ನು ಅಗಲಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ಗಳ ಹಗಲು ದರೋಡೆ..! ಏನಿದು ಘಟನೆ?

Published

on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸೇರಿದಂತೆ ಆಸುಪಾಸಿನ ಜನತೆಗೆ ಸರಕಾರಿ ಬಸ್ಸು ಸಿಬ್ಬಂದಿ ಹಗಲು ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಕ್ಕೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಡುವ ಸರಕಾರಿ ಬಸ್ ಸಿಬ್ಬಂದಿ ಹಗಲು ದರೋಡೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಏಪ್ರಿಲ್ 28ರಂದು ಹುಬ್ಬಳ್ಳಿ ಕಡೆಯ ದಂಪತಿ ಕುಕ್ಕೆ ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ‌ಗೆ ಹೋಗುವ ಸಲುವಾಗಿ ಬಿಎಂಟಿಸಿಯ KA 57 F 3463 ನಂಬರಿನ ಬಸ್ಸಿಗೆ ಹತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಬಸ್ ಹೋಗುತ್ತದೆ ಎಂದು ಬಸ್ಸಿನ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ಈ ಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಮತ್ತು ಬಸ್ಸಿನ ಸಿಬ್ಬಂದಿ ಹೇಳಿದ್ದನ್ನೇ ನಂಬಿದ ಹುಬ್ಬಳ್ಳಿ ಈ ದಂಪತಿ ಬೆಂಗಳೂರು ಮಹಾನಗರ ಪಾಲಿಕೆಯ ಡಿಪೋ ನಂಬರ್‌2ರ ಈ ಸರಕಾರಿ ಬಸ್ ಹತ್ತಿದ್ದಾರೆ. ಬಸ್ಸಿನ ನಿರ್ವಾಹಕ ಮಹಿಳೆಗೆ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಎಂಬುದಾಗಿ ಉಚಿತ ಟಿಕೆಟ್ ನೀಡಿದ್ದೂ, ಜೊತೆಯಲ್ಲಿ ಇದ್ದ ಪತಿ ಮತ್ತು ಮಕ್ಕಳಿಂದ 150 ರೂಪಾಯಿ ಹಣ ಪಡೆದು ಟಿಕೆಟ್ ನೀಡಿಲ್ಲ ಎನ್ನಲಾಗಿದೆ. ಇಷ್ಟು ಹಣ ಪಡೆದು ಇವರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕೈಕಂಬ ಎಂಬಲ್ಲಿ ಬಸ್ಸಿಂದ ಇಳಿಸಿ ಹೋಗಿದ್ದಾರೆ. ನಂತರದಲ್ಲಿ ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸುಮಾರು ಆರು ಕಿಲೋ ಮೀಟರ್ ದೂರ ನಡೆದು ಕುಕ್ಕೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣ ತಲುಪಿದ್ದಾರೆ. ನಂತರದಲ್ಲಿ ಸ್ಥಳೀಯರಲ್ಲಿ ತಮಗಾದ ಅನ್ಯಾಯದ ಬಗ್ಗೆ ಕಣ್ಣೀರಿಟ್ಟು ಇಂತಹ ಬಸ್ಸ್‌ಗಳ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

subrahmanya

ಇಂತಹ ಘಟನೆಗಳು ಈ ಭಾಗದಲ್ಲಿ ಪದೇಪದೇ ಮರುಕಳಿಸುತ್ತಿದ್ದೂ,ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಸಹಾ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮುಂದೆ ಓದಿ..;ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಆದುದರಿಂದ ಈ ಭಾಗದಲ್ಲಿ ನಡೆಯುವ ಈ ಹಗಲು ದರೋಡೆಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ರೈಲು ಬಳಕೆದಾರರ ವೇದಿಕೆ ನೆಟ್ಟಣ ಸಂಘವು ಆಗ್ರಹಿಸಿದೆ.

Continue Reading

LATEST NEWS

Trending