Connect with us

    DAKSHINA KANNADA

    ಮಾಜಿ ಶಾಸಕ ಮೋಯಿದ್ದೀನ್ ಬಾವ ಸಹೋದರ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಮಮ್ತಾಜ್ ಅಲಿ ಕಾರು ಪತ್ತೆ

    Published

    on

    ಕೂಳೂರು: ಮಾಜಿ ಶಾಸಕ ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6 ರ ರವಿವಾರ ಬೆಳಿಗ್ಗೆ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.
    ಈ ಹಿನ್ನಲೆಯಲ್ಲಿ, ಅವರು ನದಿಗೆ ಹಾರಿರಬಹುದು ಅಥವಾ ಯಾರಾದರು ಎಸೆದಿರಬಹುದು ಎಂಬ ಶಂಕೆಯಿಂದ ನದಿಯಲ್ಲಿ ಎ.ಸ್.ಡಿ.ಆರ್.ಎಫ್. ಅಗ್ನಿಶಾಮಕ ದಳದ ತಂಡದವರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೋಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ.


    ಘಟನೆ ಸಂಭವಿಸುವ ಮೊದಲು, ಮಮ್ತಾಜ್ ಅಲಿ ಮಗಳಿಗೆ ವಾಟ್ಸಾಪ್ ಮೂಲಕ ‘ಇನ್ನು ಹಿಂತಿರುಗಿ ಬರುವುದಿಲ್ಲ’ ಎಂಬ ಸಂದೇಶ ರವಾನಿಸಿರುವುದು ಆತಂಕಕ್ಕೆ ಕಾರಣವಾಗಿದೆ.
    ಸ್ಥಳಕ್ಕೆ ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದು, “ಮಮ್ತಾಜ್ ಅವರು ಮುಂಜಾನೆ ಮೂರು ಗಂಟೆಗೆ ಮನೆಯಿಂದ ಬಿಎಂಡಬ್ಲೂ ಕಾರ್ ಚಲಾಯಿಸಿಕೊಂಡು ಬಂದಿದ್ದರು. 5 ಗಂಟೆ ಸುಮಾರಿಗೆ ಕೂಳೂರು ಸೇತುವೆಯಲ್ಲಿ ಕಾರು ಅಪಘಾತವಾದ ಸ್ಥಿತಿಯಲ್ಲಿ ಕಂಡಿದ್ದು, ಅವರು ನಾಪತ್ತೆಯಾಗಿದ್ದಾರೆ.

    ಅವರ ಮಗಳು ಈ ಕುರಿತು ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ” ಎಂದರು.
    ನದಿಗೆ ಹಾರಿರುವ ಬಗ್ಗೆ ಸಂಶಯವಿದ್ದು ಶೋಧಕಾರ್ಯ ನಡೆಸಿದ್ದು, ಎಫ್.ಎಸ್.ಎಲ್ ಅಧಿಕಾರಿಗಳು ಆಗಮಿಸಿ ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದ ಸದಸ್ಯರಿಂದಲೂ ಕೆಲವೊಂದು ಮಾಹಿತಿ ದೊರಕಿದ್ದು,ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

     

    ವಿಡಿಯೋ ನೋಡಿ: 

    DAKSHINA KANNADA

    ಪುತ್ತೂರು: ಪಿಕಪ್ ಗುದ್ದಿ ರಿಕ್ಷಾ ಪಲ್ಟಿ – ಹಲವರಿಗೆ ಗಾಯ

    Published

    on

    ಪುತ್ತೂರು: ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಪಿಕಪ್ ಡಿಕ್ಕಿಯಾಗಿ ಹಲವರಿಗೆ ಗಾಯವಾದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಜಂಕ್ಷನ್‌ನಲ್ಲಿ ನಡೆದಿರುವುದು ತಿಳಿದು ಬಂದಿದೆ.

     

    ಇದನ್ನೂ ಓದಿ; ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ಎದುರಿನ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    Published

    on

    ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಇಂದು (ಅ.6) ಪಾಳು ಬಿದ್ದ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಕೊಲ್ಯ, ಕುಜುಮಗದ್ದೆಯಲ್ಲಿ ನಡೆದಿದೆ.


    ಪ್ರಸಾದ್ (44) ಮೃತ ದುರ್ದೈವಿ. ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ. ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು.
    ಇಂದು ಬೆಳಿಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪಾದರಕ್ಷೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಣುಕಿ ನೋಡಿದಾಗ ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್, ತಾಯಿ, ತಂದೆ, ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.
    ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು, ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಸುಳ್ಯ : ವೈದ್ಯಕೀಯ ಪರೀಕ್ಷೆಗೆ ಕರೆ ತರಲಾಗಿದ್ದ ಆರೋಪಿ ಪರಾರಿ!

    Published

    on

    ಸುಳ್ಯ : ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ  ತಪಾಸಣೆಗೆಂದು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆತ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾನೆ. ಇದೀಗ ಸುಳ್ಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ತಮಿಳುನಾಡು ಮೂಲದ ಕಾರ್ತಿಕ್ ಪರಾರಿಯಾದ ಆರೋಪಿ.

    ಸಂಪಾಜೆಯ ಮನೆಯೊಂದರಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಯಾಗಿದ್ದ ಕಾರ್ತಿಕ್ ಸುಳ್ಯ ಪೊಲೀಸರು ಹಲವು ಸಮಯಗಳ ಬಳಿಕ ಬಂಧಿಸಿದ್ದರು. ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಯಾರೋ ಸುಳಿವು ನೀಡಿದ ಮೇರೆಗೆ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಸುಳ್ಯಕ್ಕೆ ಕರೆದುಕೊಂಡು ಬಂದಿದ್ದರು.

    ಇದನ್ನೂ ಓದಿ : ಮಂಗಳೂರು : ಖಾಸಗಿ ಬಸ್ಸಿಗೆ ‘ಇಸ್ರೇಲ್‌’ ಹೆಸರು; ತೀವ್ರ ಆಕ್ಷೇಪದ ಬಳಿಕ ‘ಜೆರುಸಲೇಂ’ ಎಂದು ಬದಲಾಯಿಸಿದ ಮಾಲಕ

    ಆದರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ನಡುವೆ ಆರೋಪಿ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ದೂಡಿ ಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮರುಬಂಧನಕ್ಕಾಗಿ ಆರೋಪಿಗೆ ಬಲೆ ಬೀಸಿದ್ದಾರೆ.

    Continue Reading

    LATEST NEWS

    Trending