Connect with us

    LATEST NEWS

    ಮಾಜಿ ಸಚಿವ ‘ಮನೋಹರ್ ತಹಶೀಲ್ದಾರ್’ ನಿ*ಧನ

    Published

    on

    ಮಂಗಳೂರು/ಬೆಂಗಳೂರು : ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (80) ನಿನ್ನೆ (ನ.20) ನಿ*ಧನರಾಗಿದ್ದಾರೆ.

    ಮನೋಹರ್ ತಹಶೀಲ್ದಾರ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಮನೋಹರ್ ತಹಶೀಲ್ದಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

    ಇದೀಗ ಇವರ ಅ*ಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!

    Published

    on

    ಮಂಗಳೂರು/ಧಾರವಾಡ: ಅಣ್ಣ-ತಮ್ಮಂದಿರ ಹೆಂಡತಿಯರು ಸ್ವಂತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿರುವ ಪ್ರಕರಣ ಎಸ್, ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ಅಪಹರಣ ಕೇಸ್ ಬೇಧಿಸಿ 6 ಮಕ್ಕಳನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

    ನ. 7ರಿಂದ ಇಬ್ಬರು ತಾಯಂದಿರು ಹಾಗೂ ಆರು ಮಕ್ಕಳು ನಾ*ಪತ್ತೆಯಾಗಿದ್ದರು. ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವುದಾಗಿ ಕರೆದುಕೊಂಡು ಹೋಗಿದ್ದ ತಾಯಂದಿರು, ನಂತರ ಪತ್ತೆಯಾಗಿರಲಿಲ್ಲ.‌ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಮೇಲೆ ಮಕ್ಕಳು ಹಾಗೂ ತಾಯಂದಿರಿಗಾಗಿ ಹುಡುಕಾಟ ನಡೆದಿತ್ತು. ತಾಯಂದಿರಿಬ್ಬರು ಮುತ್ತುರಾಜ್ ಮತ್ತು ಸುನಿಲ ಎಂಬವರೊಂದಿಗೆ ಅ*ನೈತಿಕ ಸಂಬಂಧ ಹೊಂದಿದ್ದು, ಮಕ್ಕಳನ್ನು ಸ್ವತಃ ಕಿಟ್ನಾಪ್ ಮಾಡಿ ಬಳಿಕ ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

    ‘ಮಕ್ಕಳು ಬೇಕಾದರೆ ಹತ್ತು ಲಕ್ಷ ಕೊಡಿ, ಹಣ ಕೊಡಿ. ಇಲ್ಲದಿದ್ದರೆ, ಮಕ್ಕಳನ್ನು ಎಲ್ಲಿಯಾದರೂ ಬಿಟ್ಟು ನೇಪಾಳಕ್ಕೆ ಹೋಗುತ್ತೇವೆ’ ಎಂದು ಹೇಳಿದ್ದರು. ಇದರಿಂದ ಪೊಲೀಸರು ಹೈದರಾಬಾದ್, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಕೊನಗೂ ಬೆಂಗಳೂರಿನಲ್ಲಿ‌ ಮಕ್ಕಳ ಸಮೇತ ತಾಯಂದಿರನ್ನು ಪತ್ತೆ ಮಾಡಿದ್ದಾರೆ‌.

    Continue Reading

    LATEST NEWS

    ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    Published

    on

    ಇತ್ತೀಚೆಗೆ ರಿಲೀಸ್ ಆದ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಈ ಚಿತ್ರಗಳಿಗೆ ಕೆಟ್ಟ ವಿಮರ್ಶೆ ಸಿಕ್ಕವು. ‘ಕಂಗುವ’ ಸಿನಿಮಾ ನೋಡಿ ಬಂದ ಎಲ್ಲರೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದರು. ಸಿನಿಮಾ ನೋಡುತ್ತೇನೆ ಎಂದು ಹೊರಡಬೇಕು ಎಂದುಕೊಂಡಿದ್ದವರಿಗೆ ಈ ವಿಮರ್ಶೆಯಿಂದ ಹಿನ್ನಡೆ ಆಯಿತು. ಇದನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ನಿರ್ಮಾಪಕರ ಸಂಘ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.

    ಇತ್ತೀಚೆಗೆ ಯೂಟ್ಯೂಬರ್​​ಗಳ ಸಂಖ್ಯೆ ಹೆಚ್ಚಿದೆ. ಎಲ್ಲರೂ ಯೂಟ್ಯೂಬ್ ಮಾಡಿಕೊಂಡು, ಸಿನಿಮಾ ವಿಮರ್ಶೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮೈಕ್ ಹಿಡಿದು ಥಿಯೇಟರ್​ನಿಂದ ಹೊರ ಬರುವ ಪ್ರೇಕ್ಷಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಪ್ರೇಕ್ಷಕರು ತಮಗೆ ಅನಿಸಿದ್ದನ್ನು ಹೇಳುತ್ತಾರೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪ್ರಭಾವ ಬೀರುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ವಿಮರ್ಶೆ ಎಂದರೆ ಸಿನಿಮಾ ಬಗ್ಗೆ ಸಂಪೂರ್ಣ ವಿವರ ಇರಬೇಕು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದಷ್ಟೇ ಹೇಳಲಾಗುತ್ತದೆ. ಈ ರೀತಿಯ ವಿಮರ್ಶೆಗಳಿಂದಲೇ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾ ಹಿನ್ನಡೆ ಅನುಭವಿಸಿತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಕಾರಣಕ್ಕೆ ತಮಿಳು ನಿರ್ಮಾಪಕರ ಸಂಘದವರು ಥಿಯೇಟರ್​ ಮುಂಭಾಗದಲ್ಲಿ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಿದ್ದಾರೆ. ಇದರ ಪ್ರಕಾರ ಯಾರೂ ಥಿಯೇಟರ್ ಬಳಿ ಮೈಕ್ ಹಿಡಿದು ಬರುವಂತಿಲ್ಲ.

    ‘ಈ ರೀತಿಯ ವಿಮರ್ಶೆಗಳು ಸಿನಿಮಾಗೆ ತೊಂದರೆ ಮಾಡುತ್ತವೆ. ಈ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ’ ಎನ್ನುವ ಅಭಿಪ್ರಾಯವನ್ನು ನಿರ್ಮಾಪಕರ ಕೌನ್ಸಿಲ್ ನೀಡಿದೆ. ಇದಕ್ಕೆ ಯೂಟ್ಯೂಬರ್​ಗಳು ವಿರೋಧ ಹೊರಹಾಕಿದ್ದಾರೆ.

    ‘ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇದನ್ನು ನಾವು ಜನರಿಗೆ ತಲುಪಿಸುತ್ತೇವೆ. ಇದರಲ್ಲಿ ತಪ್ಪೇನಿದೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಈ ರೀತಿಯ ವಿಮರ್ಶೆಗಳಿಂದಲೇ ಸೋತಿತು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಈ ಸಿನಿಮಾಗಳು ಉತ್ತಮವಾಗಿರಲಿಲ್ಲ ಎಂಬ ಕಾರಣಕ್ಕೆ ಸೋತಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ.

    Continue Reading

    kerala

    ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ

    Published

    on

    ಮಂಗಳೂರು/ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿ*ಕ್ಕಿಯಾಗಿ ಮೃ*ತಪಟ್ಟ ದಾರುಣ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ.

    ಮೃ*ತಪಟ್ಟ ವಿದ್ಯಾರ್ಥಿನಿ ದೇವಾನಂದ (17) ಎಂದು ಗುರುತಿಸಲಾಗಿದೆ.

    ಮಯನಾಡು ಹೈಯರ್ ಸೆಕೆಂಡರಿ ಶಾಲೆಯ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ದೇವಾನಂದ ಮಾಯನಾಡು ರೈಲು ನಿಲ್ದಾಣದಲ್ಲಿ ಹಳಿ ದಾಟಿ ಪ್ಲಾಟ್‌ಫಾರ್ಮ್ಗೆ ಹತ್ತಲು ಯತ್ನಿಸುತ್ತಿದ್ದಾಗ ಈ ದು*ರ್ಘಟನೆ ನಡೆದಿದೆ.

    ಮಯನಾಡು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್ನಲ್ಲಿ ನಿಲುಗಡೆಗೊಂಡಿದ್ದ ನಾಗರ್‌ಕೋಯಿಲ್-ಕೊಟ್ಟಾಯಂ ಪ್ಯಾಸೆಂಜರ್ ರೈಲು ಅದರ ಮುಂಭಾಗದ ಹಳಿಯನ್ನು ದಾಟಿ ಎರಡನೇ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿದಾಗ ನೇತ್ರಾವತಿ ಎಕ್ಸ್ಪ್ರೆಸ್ ಬಂದಿದೆ.

    ದೇವಾನಂದ ತನ್ನ ಸಹಪಾಠಿಗಳೊಂದಿಗೆ ರೈಲ್ವೇ ಪ್ರವೇಶಿಸಿ ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್ಗೆ ಎಳೆದೊಯ್ದರು, ಆದರೆ ದೇವಾನಂದ ರೈಲಿಗೆ ಡಿ*ಕ್ಕಿ ಹೊಡೆದು ಜೀ*ವ ಕಳೆದುಕೊಂಡಿದ್ದಾರೆ. ಮಕ್ಕಳು ರೈಲಿನ ಮುಂದೆ ಇರುವುದನ್ನು ತಿಳಿದ ರೈಲಿನ ಲೊಕೊ ಪೈಲಟ್ ನಿಲ್ಲಿಸದೆ ಹಾರ್ನ್ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.

    Continue Reading

    LATEST NEWS

    Trending