Connect with us

    ಟ್ಯಾಟು ಹಾಕಿಸಿಕೊಂಡು ಕಣ್ಣು ಕಳೆದುಕೊಂಡ ಮಹಿಳೆ: ಪೋಲೆಂಡ್‌ನ ರೂಪದರ್ಶಿ ಅಲೆಕ್ಸಾಂಡ್ರಾ ಸಡೊವ್‌ಸ್ಕ

    Published

    on

    ಟ್ಯಾಟು ಹಾಕಿಸಿಕೊಂಡು ಕಣ್ಣು ಕಳೆದುಕೊಂಡ ಮಹಿಳೆ: ಪೋಲೆಂಡ್‌ನ ರೂಪದರ್ಶಿ ಅಲೆಕ್ಸಾಂಡ್ರಾ ಸಡೊವ್‌ಸ್ಕ

    ವಾರ್ಸಾ: ಪೋಲ್ಯಾಂಡ್‌ನ ರೂಪದರ್ಶಿಯೊಬ್ಬರು ತನ್ನ ಕಣ್ಣುಗಳಿಗೆ ಹಚ್ಚೆ ಹಾಕಿಸಿಕೊಳ್ಳಲು ಹೋಗಿ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ.

    ಪೋಲ್ಯಾಂಡ್ ದೇಶದ ರೋಕ್ಲಾ ನಗರದ 25 ವರ್ಷದ ರೂಪದರ್ಶಿ ಅಲೆಕ್ಸಾಂಡ್ರಾ ಸಡೊವ್‌ಸ್ಕ ರ್ಯಾಪ್ ತಾರೆ ಪೊಪೆಕ್ ಅಭಿಮಾನಿ. ಇದೇ ಕಾರಣಕ್ಕೆ ತಾನು ಪೊಪೆಕ್ ರೀತಿ ಕಾಣಿಸಿಕೊಳ್ಳಲು ತನ್ನ ಎರಡೂ ಕಣ್ಣುಗಳನ್ನು ಕಪ್ಪು ಮಾಡಿಕೊಳ್ಳುವುದಕ್ಕಾಗಿ ಕಣ್ಣಗುಡ್ಡೆಗಳಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ, ಹಚ್ಚೆ ಹಾಕಿದ ವ್ಯಕ್ತಿಯು ದೊಡ್ಡ ಪ್ರಮಾದ ಮಾಡಿದ್ದಾನೆ.

    ದೇಹದ ಚರ್ಮದ ಮೇಲೆ ಬಳಸುವ ಬಣ್ಣವನ್ನೇ ಅವನು ಕಣ್ಣುಗಳಿಗೂ ಹಚ್ಚಿದ್ದಾನೆ. ಈಗ ಈ ಬಣ್ಣವು ಇಡೀ ಕಣ್ಣನ್ನು ಆವರಿಸಿದ್ದು, ಒಂದು ಕಣ್ಣಿನ ದೃಷ್ಟಿಯನ್ನು ಅವರು ಈಗಾಗಲೇ ಕಳೆದುಕೊಂಡಿದ್ದಾರೆ. ಶೀಘ್ರದಲ್ಲೇ ಇನ್ನೊಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

    Click to comment

    Leave a Reply

    Your email address will not be published. Required fields are marked *

    LATEST NEWS

    ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದ ಲಾರಿ; ಇಬ್ಬರು ಸಾ*ವು

    Published

    on

    ಮಂಗಳೂರು/ವಿಜಯನಗರ : ಲಾರಿಯೊಂದು ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಂಗಳೂರಿನಿಂದ ರಾಜಸ್ಥಾನದತ್ತ ಹೊರಟಿದ್ದ ಲಾರಿಯು ಮೂವರ ಮೇಲೆ ಹರಿದು ಈ ದುರ್ಘಟನೆ ನಡೆದಿದೆ.

    ಆಲೂರಿನ ಸಿದ್ದಲಿಂಗಯ್ಯ(39), ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ದೇವಸಮುದ್ರದ ಕೊಟ್ರಯ್ಯ(26) ಮೃ*ತ ರ್ದುದೈವಿಗಳು.

    ಇದನ್ನೂ ಓದಿ : ಅಮಾ*ನವೀಯ ಕೃ*ತ್ಯ; ಲೈಂ*ಗಿಕ ಕಿರು*ಕುಳ ನೀಡಿ ಬಾಲಕಿಯ ಹ*ತ್ಯೆ

    ಗಾ*ಯಗೊಂಡ ಮತ್ತೊಬ್ಬ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ರೋಗಿ ಕೊಳಲು ನುಡಿಸುತ್ತಿದ್ದಾಗಲೇ ಮೆದುಳಿನ ಆಪರೇಷನ್

    Published

    on

    ಬೆಳಗಾವಿ: ರೋಗಿ ಕೊಳಲು ನುಡಿಸುತ್ತಾ ಮಾತನಾಡುತ್ತಿರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬೆಳಗಾವಿಯ ಕೊಲ್ಲಾಪುರ ಕನೇರಿ ಮಠದ ಸಿದ್ದಗಿರಿ ಆಸ್ಪತ್ರೆಯಲ್ಲಿ ನಡೆದಿದೆ.

    ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸುವಾಗ ಮೆದುಳಿಗೆ ಅರಿವಳಿಕೆ ನೀಡಿರಲಿಲ್ಲ. ಹೀಗಾಗಿ ರೋಗಿ ಸಂಪೂರ್ಣವಾಗಿ ಪ್ರಜ್ಞಾಸ್ಥಿತಿಯಲ್ಲೇ ಇದ್ದರು. ಕೇವಲ ಮೆದುಳಿನ ಭಾಗದ ಹೊರಭಾಗದಲ್ಲಿ ಮಾತ್ರ ಅರಿವಳಿಕೆ ನೀಡಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ರೋಗಿ ನಿರಂತರವಾಗಿ ಕೊಳಲು ನುಡಿಸುತ್ತಿದ್ದರು.

    ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದ ಡಾ| ಶಿವಶಂಕರ ಮರಜಕ್ಕೆ, ಹಳ್ಳಿ ಭಾಗದಲ್ಲಿ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಒಂದು. ಬೇರೆ ಕಡೆಗೆ ಇದಕ್ಕೆ 10 ರಿಂದ 15 ಲಕ್ಷ ರೂ. ವೆಚ್ಚ ಆಗುತ್ತದೆ. ನಮ್ಮಲ್ಲಿ ಕೇವಲ 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

    Continue Reading

    LATEST NEWS

    ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ : ಸಿಎಂ ಸಿದ್ಧರಾಮಯ್ಯ

    Published

    on

    ಮೈಸೂರು : ಈ ಬಾರಿಯ ಮೈಸೂರು ದಸರಾವನ್ನು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ  ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಘೋಷಿಸಿದ್ದಾರೆ.

    ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಗಜಪಡೆ ತಾಲೀಮು ಆರಂಭವಾಗಿದೆ. ಅಕ್ಟೋಬರ್​ 3 ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ.

    ಇದನ್ನೂ ಓದಿ : ಮೈಸೂರು ದಸರಾಗೆ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅರಮನೆ ಅಲಂಕಾರ

    2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12 ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆಗೊಳ್ಳಲಿದೆ.

    Continue Reading

    LATEST NEWS

    Trending