Connect with us

    LATEST NEWS

    ನಗರದ ಕೆಪಿಟಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಎನ್ಎಚ್ಎಐ ಅನುಮೋದನೆ

    Published

    on

    ಮಂಗಳೂರು: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಅನುಮೋದನೆ ನೀಡಿದೆ.


    ಕೆಪಿಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಿರುವ ಕಾರಣ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ಹೆದ್ದಾರಿಗೆ ಮಂಗಳೂರು ಏರ್ ಪೊರ್ಟ್ ರಸ್ತೆಯಿಂದ ನಗರ ಪ್ರವೇಶ ರಸ್ತೆಯ ಸಂಪರ್ಕದಿಂದಾಗಿ ವಾಹನ – ದಟ್ಟಣೆ ನಿತ್ಯ ಅಧಿಕವಾಗುತ್ತಿದೆ.

    ಹೀಗಾಗಿ ಪರ್ಯಾಯ ರಸ್ತೆ ವ್ಯವಸ್ಥೆಯ ಬಗ್ಗೆ ಸ್ಥಳೀಯವಾಗಿ ಆಗ್ರಹ ವ್ಯಕ್ತವಾಗಿತ್ತು. ಇದರಂತೆ ಇದೀಗ ಫೈಓವರ್ ನಿರ್ಮಾಣಕ್ಕೆ ಪ್ರಾಧಿಕಾರವು ನಿರ್ಧಾರ ಕೈಗೊಂಡಿದೆ.

    ಸುಮಾರು 34.60 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

     

    Click to comment

    Leave a Reply

    Your email address will not be published. Required fields are marked *

    BIG BOSS

    BBK11: ಈ ವಾರ ಬಿಗ್ ಬಾಸ್‌ ಮನೆಯಿಂದ ಆಚೆ ಬರೋದು ಯಾರು? ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್!

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.

    ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್​ ಆಗಿದ್ದ ಕಾರಣ ನಾಮಿನೇಷನ್​ ಪ್ರಕ್ರಿಯೆ ನಡೆದಿಲ್ಲ.

    ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್​ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್​ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.​

    ಇನ್ನೂ ಬಿಗ್​ಬಾಸ್​ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಈಗ ಬಿಗ್​ಬಾಸ್​ ಮನೆಗೆ ಈ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

    Continue Reading

    BIG BOSS

    BIGG BOSS: ಬಿಗ್​​ಬಾಸ್​​ ಮನೆಯಲ್ಲಿ ಕಿಸ್ಸಿಂಗ್ ಟಾಸ್ಕ್​.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!

    Published

    on

    ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್​ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್​ಬಾಸ್​​ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದ್ದು ಯಾವ್ಯಾವ ಸ್ಪರ್ಧಿ ಏನೆಲ್ಲಾ ಮಾಡಿದರು ಎನ್ನುವುದು ಇಲ್ಲಿದೆ.

    ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್​​ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್​ ಬೋರ್ಡ್​ ಮೇಲೆ ಕಿಸ್​ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.

    ಈ ರೀತಿ ಟಾಸ್ಕ್​​ ಆಡುವಾಗ ಧನರಾಜ್​ಗೆ ರಜತ್ ಕರೆಕ್ಟ್​ ಆಗಿ ಕಿಸ್​ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್​ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.

    ಇನ್ನು ಈ ಟಾಸ್ಕ್​ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್​ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ.

    Continue Reading

    LATEST NEWS

    ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಅನ್ಯಕೋ*ಮಿನ ಯುವಕ

    Published

    on

    ಮಂಗಳೂರು/ರಾಯಚೂರು : ಧರ್ಮಾತೀತವಾಗಿ ಅಯ್ಯಪ್ಪಸ್ವಾಮಿಯನ್ನು ಆರಾಧಿಸುತ್ತಿದ್ದ, ಅನ್ಯಕೋ*ಮಿನ ವ್ಯಕ್ತಿಯೊಬ್ನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕಯಗೊಳ್ಳುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

    ಬಾಬು ಗೌರಂಪೇಟ್ ಎಂಬಾತ ಮಾಲೆ ಧರಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

     

    ಇದನ್ನೂ ಓದಿ : 8 ಅಯ್ಯಪ್ಪ ಮಾಲಾಧಾರಿಗಳ ಸಾವು – ಮುಖ್ಯಮಂತ್ರಿಗಳ ನಿಧಿಯಿಂದ ತಲಾ 5 ಲಕ್ಷ ಪರಿಹಾರ ಘೋಷಣೆ

     

    ಮಕರ ಸಂಕ್ರಾಂತಿ ಪ್ರಯುಕ್ತ ಶಬರಿಮಲೆ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತು ಮಾಲೆ ಧರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಅನೇಕ ಹಿಂದು ಭಕ್ತರೊಡನೆ ಬಾಬು ಕೂಡ ಜತೆಯಾಗಿ ಹೆಜ್ಜೆ ಹಕಿದ್ದಾರೆ. ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಸರದಿ ಸಾಲಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಬಾಬು ಅವರು ಎಲ್ಲರಂತೆ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸುತ್ತಾರೆ. ಎಲ್ಲರೊಡಗೂಡಿ ಪಾದಯಾತ್ರೆ ನಡೆಸುತ್ತಾರೆ. ಅಲ್ಲದೇ, ಶಬರಿಮಲೆಗೆ ತೆರಳಿ ಭಕ್ತಿ ಸಮರ್ಪಿಸುತ್ತಾರೆ.

    ಬಾಬು ಭಕ್ತಿ ಭಾವಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಿಂದೂ ಮುಸ್ಲಿಂ ಎಂದು ಕಿತ್ತಾಡುವ ಜನರಿಗೆ ಬಾಬು ಗೌರಂಪೇಟ್ ನಡೆ ಆದರ್ಶವಾಗುತ್ತಿದೆ.

    Continue Reading

    LATEST NEWS

    Trending