Monday, October 18, 2021

ಉಳ್ಳಾಲ: ವಿದ್ಯುತ್‌ ಶಾಕ್‌ ತಗುಲಿ ಮೆಸ್ಕಾಂ ಸಿಬ್ಬಂದಿ ಗಂಭೀರ

ಉಳ್ಳಾಲ: ಚೆಂಬುಗುಡ್ಡೆ ಮೆಸ್ಕಾಂ ಸಬ್ ಡಿವಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಚೆಂಬುಗುಡ್ಡ ಮೆಸ್ಕಾಂ ಕಚೇರಿ ಸಮೀಪ ನಿನ್ನೆ ಸಂಜೆ ವೇಳೆ ನಡೆದಿದೆ.

ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕು ಮಣಿಕಟ್ಟೆ ನಿವಾಸಿ ಬೊಮ್ಮಪ್ಪ (26) ಗಾಯಾಳು. ಮೆಸ್ಕಾಂ ಗುತ್ತಿಗೆದಾರ ಪ್ರವೀಣ್ ಸುವರ್ಣ ಎಂಬವರ ಕೈಕೆಳಗೆ ಗುತ್ತಿಗೆ ಆಧಾರದಲ್ಲಿ ಬೊಮ್ಮಪ್ಪ ಕೆಲಸ ನಿರ್ವಹಿಸುತ್ತಿದ್ದಾರೆ,

ಸಬ್ ಡಿವಿಷನ್‌ನಲ್ಲಿ ಪೈಂಟಿಂಗ್ ನಡೆಸುವ ಸಂದರ್ಭ, ಬೇರೊಂದು ಲೈನ್‌ನಲ್ಲಿದ್ದ ವಿದ್ಯುತ್ ಪ್ರವಹಿಸಿ ಬೊಮ್ಮಪ್ಪ ಅವರ ಸೊಂಟದ ಕೆಳಗಿನಿಂದ ಬೆಂಕಿ ತಗಲಿದೆ.

ತಕ್ಷಣ ವಿದ್ಯುತ್ ಸ್ಥಗಿತಗೊಂಡರೂ, ಸೊಂಟದ ಕೆಳಗೆ ಹತ್ತಿದ ಬೆಂಕಿಯಿಂದಾಗಿ ಗಂಭೀರ ತರಹದ ಸುಟ್ಟ ಗಾಯಗಳಾಗಿವೆ.

ತಕ್ಷಣ ಸಹುದ್ಯೋಗಿಗಳು ಏಣಿ ಮೂಲಕ ಸಬ್ ಡಿವಿಷನ್ ಮೇಲೇರಿ ಬೊಮ್ಮಪ್ಪ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...