Connect with us

DAKSHINA KANNADA

ಪಿಲಿಕುಳ ನಿಸರ್ಗಧಾಮದಲ್ಲಿ ನೆರೆ: ಪ್ರವಾಸಿಗರಿಗೆ ಸದ್ಯ ನಿರ್ಬಂಧ

Published

on

ಮಂಗಳೂರು: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮದ ಮೃಗಾಲಯದೊಳಕ್ಕೆ ಭಾರಿ ಪ್ರಮಾಣದಲ್ಲಿ ನೆರೆ ನೀರು ನುಗ್ಗಿದೆ. ಇದರಿಂದಾಗಿ ಸದ್ಯ ಪ್ರವಾಸಿಗರಿಗೆ ಪ್ರವೇಶಾವಕಾಶ ನಿರ್ಬಂಧಿಸಲಾಗಿದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.

ಪಿಲಿಕುಳ ಜೈವಿಕ ಉದ್ಯಾನಕ್ಕೆ ನೀರು ನುಗ್ಗಿದ್ದು, ಇಲ್ಲಿಗೆ ತೆರಳುವ ರಸ್ತೆಯೂ ಜಲಾವೃತವಾಗಿದೆ. ಮತ್ತೊಂದೆಡೆ ಉದ್ಯಾನದ ಒಳಭಾಗದಲ್ಲೂ ನೀರು ನುಗ್ಗಿ ಸಂಕಷ್ಟ ಎದುರಾಗಿದೆ.

ಇದರಿಂದಾಗಿ ಪಿಲಿಕುಳದ ವೀಕ್ಷಣೆಗೆ ಪ್ರವಾಸಿಗರಿಗೆ ಹೋಗಲಾಗುತ್ತಿಲ್ಲ. ಕಡವೆಗಳು ಇರುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಉದ್ಯಾನದ ಅಲ್ಲಲ್ಲಿ ನೀರು ನುಗ್ಗಿ ಪ್ರಾಣಿಗಳ ವಾಸ್ತವ್ಯಕ್ಕೂ ಕಷ್ಟವಾಗಿದೆ.

ಮಳೆಗಾಲದಲ್ಲಿ ಸಾಧಾರಣವಾಗಿ ನೀರು ಬರುತ್ತದೆಯಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ನೀರು ಒಳನುಗ್ಗಿದೆ. ಸದ್ಯ ಪ್ರವಾಸಿಗರಿಗೆ ಪಿಲಿಕುಳ ಮೃಗಾಲಯಕ್ಕೆ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ ಎಂದು ಭಂಡಾರಿ ಹೇಳಿದ್ದಾರೆ.

DAKSHINA KANNADA

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!

Published

on

ಮಂಗಳೂರು: ನಾವು ಯಾವುದೇ ಹಿಂದೂ ಧರ್ಮದವರ ಮನೆಗೆ ಹೋದಾಗ ಅಲ್ಲಿ ಏನು ನೋಡುತ್ತೇವೊ ಗೊತ್ತಿಲ್ಲ ಆದರೆ ಮನೆಯ ಎದುರೊಂದು ತುಳಸಿ ಗಿಡ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನ ಕೊಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮಹಿಳೆಯರು ದೇವರಿಗೆ ದೀಪ ಇಟ್ಟು ಬಳಿಕ ತುಳಸಿ ಗಿಡಕ್ಕೆ ಕಲಶದಲ್ಲಿ ನೀರನ್ನು ಹಾಕುತ್ತಾರೆ.

ಕೆಲವರ ಮನೆಯಲ್ಲಿ ಒಂದೇ ತುಳಸಿ ಗಿಡವನ್ನು ನೋಡಿದರೆ ಇನ್ನು ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುತ್ತದೆ. ಆರೋಗ್ಯದ ಪ್ರಯೋಜನವಾಗಿಯೂ ಇದನ್ನು ಬಳಸುತ್ತಾರೆ. ಆದರೆ ಕೆಲವೊಂದು ನಿಯಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತುಳಸಿ ಗಿಡವನ್ನು ಇಟ್ಟು ಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ತುಳಸಿ ಗಿಡ ಬೆಸ ಸಂಖ್ಯೆಯಲ್ಲಿ ಇರಬೇಕು:

ಕೆಲವೊಂದು ಮನೆಯಲ್ಲಿ ತುಳಸಿ ಗಿಡ ಎಲ್ಲಾ ಕಡೆಯಲ್ಲಿ ಬೆಳೆಯುತ್ತದೆ. ಇನ್ನು ಕೆಲವು ಮನೆಯಲ್ಲಿ ನೆಟ್ಟ ಒಂದು ಗಿಡವೂ ಸರಿಯಾಗಿ ಉಳಿಯುವುದು ಕಷ್ಟ. ಆದರೆ ತುಳಸಿ ಗಿಡದ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. 1, 3, 5, 7 ಹೀಗೆ ಬೆಸಸಂಖ್ಯೆಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಇದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ಹೀಗೆ ನೆಡಬೇಕು:

ತುಳಸಿ ಗಿಡವನ್ನು ನೇರವಾಗಿ ನೆಲದ ಮೇಲೆ ನೆಡಬಾರದು. ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಈ ಸಸಿಯನ್ನು ಕುಂಡದಲ್ಲಿ ಅಥವಾ ತೊಟ್ಟೆಯಲ್ಲಿ ಪ್ರತ್ಯೇಕವಾಗಿ ನೆಡಬೇಕು. ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಯಾವೂದೇ ರೀತಿಯ ಅಶುದ್ಧತೆಗಳು ತುಳಸಿ ಗಿಡವನ್ನು ಮುಟ್ಟುವುದಿಲ್ಲ.

ಈ ದಿನದಂದು ತುಳಸಿಯನ್ನು ಕೀಳಬಾರದು:

ತುಳಸಿ ಗಿಡವನ್ನು ಎಲ್ಲಾ ದಿನ ನೆಡಬಾರದು. ತುಳಸಿಯನ್ನು ಭಾನುವಾರದಂದು ಮತ್ತು ಏಕಾದಶಿಯ ದಿನದಂದು ನೆಡಬಾರದು ಮತ್ತು ಅದರ ಎಲೆಗಳನ್ನು ತೆಗೆಯಬಾರದು. ಈ ಎರಡು ದಿನ ತುಳಸಿಯನ್ನು ಕೀಳುವುದು ಮತ್ತು ಮುಟ್ಟುವುದು ಮಾಡಿದರೆ ಅಶುಭವೆಂದು ಹೇಳುತ್ತಾರೆ.

ತುಳಸಿಯನ್ನು ನಾವು ಮನೆಯಲ್ಲಿ ನೆಡುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನೆಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸಮ ಸಂಖ್ಯೆಯಲ್ಲಿ ತುಳಸಿ ಗಿಡವಿದ್ದರೆ ಯಾವೂದಾದರು ಒಂದನ್ನು ಬೇರೆಯವರಿಗೆ ದಾನ ಮಾಡಿ. ಇದರಿಂದ ಯಾವೂದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Continue Reading

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

DAKSHINA KANNADA

ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಸಂಭ್ರಮ

Published

on

ಬಂಟ್ವಾಳ : ಬಾಳ್ತಿಲ ಗ್ರಾಮದ ಕುದ್ರಬೆಟ್ಟು ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ದಕ್ಷಿಣ ಭಾಗದ ಗುಡ್ಡಗಳ ನಡುವೆ ಹಚ್ಚ ಹಸುರಿನ ಮೇರು ವೃಕ್ಷಗಳಿಂದ ನಯನಮನೋಹರ ಪರಿಸರದ ನಡುವೆ ಕಂಗೊಳಿಸುತ್ತಿರುವ ಊರಿನ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಶ್ರದ್ಧಾ ಭಕ್ತಿಯ ಕೇಂದ್ರ ಶ್ರೀ ಮಣಿಕಂಠ ಮಂದಿರದ ವಠಾರದಲ್ಲಿರುವ ಸಾನಿಧ್ಯವೇ “ಶ್ರೀ ಕಲ್ಲುರ್ಟಿ ದೈವಸ್ಥಾನ ಕುದ್ರೆಬೆಟ್ಟು”.

ಇಲ್ಲಿ ಶ್ರದ್ಧಾ ಭಕ್ತಿಯಿಂದ ತಾಯಿ ಕಲ್ಲುರ್ಟಿಯಲ್ಲಿ ಪ್ರಾರ್ಥಿಸಿದರೆ, ಭಕ್ತರ ಇಷ್ಟಾರ್ಥಗಳು ಕ್ಷಣಮಾತ್ರದಲ್ಲಿ ಈಡೇರುತ್ತದೆ ಎಂಬ ನಂಬಿಕೆಯಿದೆ. ಈ ಕ್ಷೇತ್ರದಲ್ಲಿ ದಿನೇ ದಿನೇ ಹರಕೆ ಸೇವೆಗಳು, ಅಗೆಲು ಸೇವೆಗಳ ಸಂಖ್ಯೆ ಗಣನೀಯ ಏರುತ್ತಿವೆ. ಸುಮಾರು 15 ವರ್ಷಗಳ ಹಿಂದೆ ಈ ಸಾನಿಧ್ಯದ ಪ್ರತಿಷ್ಠಾ ಕಾರ್ಯಗಳು ನಡೆದಿವೆ.

ಇದೀಗ ಶಿಥಿಲಾವಸ್ಥೆಯಲ್ಲಿರುವ ಈ ಸಾನಿಧ್ಯವನ್ನು ಊರ ಪರ ಊರ ಭಗವತ್ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲು ನಿರ್ಧರಿಸಿದ್ದು, ಆ ಪ್ರಕಾರ ಜನಶಕ್ತಿ ಸೇವಾ ಟ್ರಸ್ಟ್ (ರಿ )ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ( ರಿ) ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದೆ. ಅಂತೆಯೇ, ಇದೀಗ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂತನ ಸಾನಿಧ್ಯ ನಿರ್ಮಿಸಲಾಗಿದ್ದು, ಅದರ ಪುನಃ ಪ್ರತಿಷ್ಠಾ ಮಹೋತ್ಸವ ಶುಕ್ರವಾರ ನಡೆದಿದೆ.

ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಿತು.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಕಲ್ಲಡ್ಕ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶ್ರೀಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮ ನಡೆಯಿತು. ಇದೇ ಸಂದರ್ಭ ದೈವಸ್ಥಾನದ ಪುನಃ ಪ್ರತಿಷ್ಠಾ ಕಾರ್ಯಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಊರಿನ ಪರ ಊರಿನ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

Continue Reading

LATEST NEWS

Trending