Connect with us

    LATEST NEWS

    ಕುಂದಾಪುರ: ಚಲಿಸುತ್ತಿರುವ ಬಸ್‌ನಲ್ಲಿ ಬೆಂಕಿ-ಪ್ರಯಾಣಿಕರು ಪಾರು

    Published

    on

    ಕುಂದಾಪುರ: ಚಲಿಸುತ್ತಿರುವ ಬಸ್ ನಲ್ಲಿ ಏಕಾಏಕಿ ಬೆಂಕಿ ಉಂಟಾಗಿ ಬಸ್ ಪೂರ್ತಿ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ನಿನ್ನೆ ಕುಂದಾಪುರ ಬೈಂದೂರು ರಾ.ಹೆ. 66ರ ಮುಳ್ಳಿಕಟ್ಟೆ ಸಂಭವಿಸಿದೆ.


    ಅದೃಷ್ಟವಶಾತ್ ನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣವೇ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೆಳಗಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅವಘಡ ಸಂಭವಿಸಿದ್ದನ್ನು ತಪ್ಪಿಸಿದ್ದಾರೆ. ಬಸ್ ಬೈಂದೂರು ಕಡೆಯಿಂದ ಕುಂದಾಪುರಕ್ಕೆ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ.

    DAKSHINA KANNADA

    ULLALA : ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರ ದು*ರ್ಮರಣ

    Published

    on

    ಉಳ್ಳಾಲ : ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳ ಸಹಿತ ತಂದೆ ತಾಯಿ ಇಹಲೋಕ ತ್ಯಜಿಸಿರುವ ಘಟನೆ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ನಡೆದಿದೆ.

    ಮದನಿ ನಗರದ ನಿವಾಸಿ ಅಬೂಬಕ್ಕರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಇದು ಪಕ್ಕದಲ್ಲಿದ್ದ ಯಾಸೀರ್ ಎಂಬವರ ಮನೆಯ ಮೇಲೆ ಬಿದ್ದು ಯಾಸೀರ್ ಅವರ ಮನೆಯ ಗೋಡೆ ಕುಸಿತದಿಂದ ಈ ದುರಂ*ತ ಸಂಭವಿಸಿದೆ.

    ಇದನ್ನೂ ಓದಿ  : ಗೋಬಿ ಮಂಚೂರಿ ಆಯ್ತು..! ಈಗ ಚಿಕನ್‌ ಕಬಾಬ್‌, ಫಿಶ್‌ ಫುಡ್‌ ಮೇಲೆ ಕಣ್ಣು…!

    ಯಾಸೀರ್, ಪತ್ನಿ ಮರಿಯಮ್ಮ, ಮಕ್ಕಳಾದ ರಿಯಾನಾ ಹಾಗೂ ರಿಫಾನಾ ಇಹಲೋಕ ತ್ಯಜಿಸಿದವರು. ಘಟನೆ ನಡೆದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿದ್ದರು. ಈ ವೇಳೆಗಾಗಲೇ ಮನೆಯ ಒಳಗಿದ್ದ ನಾಲ್ವರೂ ಇಹಲೋಕ ತ್ಯಜಿಸಿದ್ದರು.

    Continue Reading

    dehali

    ಸ್ಪೀಕರ್ ಹುದ್ದೆಗೆ ಚುನಾವಣೆ..! ಇತಿಹಾಸದಲ್ಲೇ ಮೊದಲು..!

    Published

    on

    ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲು ಎನ್‌ಡಿಎ ಹಿಂದೇಟು ಹಾಕಿದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.


    ಹದಿನೆಂಟನೇ ಲೋಕಸಭೆಯಲ್ಲಿ ಹತ್ತು ವರ್ಷಗಳ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಇದೇ ಕಾರಣದಿಂದ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಲು ಆರಂಭಿಸಿವೆ. ಅಧಿವೇಶನದ ಆರಂಭದಲ್ಲಿ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿಯ ಕಾಂಗ್ರೆಸ್ ಸಂಸದರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ನೇಮಿಸಲಾಗಿತ್ತು. ಇದೀಗ 18 ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ನಿಂದ ಓಂ ಬಿರ್ಲಾ ಅವರ ಹೆಸರು ಮತ್ತೆ ಮುಂದಿಡಲಾಗಿದೆ. ಒಮ್ಮತದ ಸ್ಪೀಕರ್ ಆಯ್ಕೆಯ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷದ ನಡುವೆ ನಡೆದ ಮಾತುಕತೆ ವಿಫಲವಾಗಿದೆ.

    ಇದನ್ನು ಓದಿ: ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ

    ಓಂ ಬಿರ್ಲಾ ಅವರನ್ನು ಒಮ್ಮತದ ಆಯ್ಕೆಯಾಗಿ ಪರಿಗಣಿಸಲು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಕಾನೂನುಬದ್ಧವಾಗಿ ವಿರೋಧ ಪಕ್ಷಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮನವಿ ಮಾಡಿತ್ತು. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕೂಡ ನಡೆದಿತ್ತು. ಆದರೆ ವಿರೋಧ ಪಕ್ಷದ ಮನವಿಗೆ ಎನ್‌ಡಿಎನಿಂದ ಸಕಾರಾತ್ಮಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
    ಎನ್‌ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಇರುವ ಕಾರಣ ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ತೊಂದರೆ ಇಲ್ಲ. ಆದ್ರೆ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ . ಹೀಗಾಗಿ ಅಸಹಕಾರದ ಹೆಜ್ಜೆಯನ್ನು ವಿರೋಧ ಪಕ್ಷ ಇಡಲು ಅವರೇ ಪ್ರೇರೇಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    Continue Reading

    LATEST NEWS

    ದಕ್ಷಿಣ ಭಾರತದ ಜೈನ ಮುಖಂಡ, ಬೆಳಗಾವಿಯ ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲ ಇನ್ನಿ*ಲ್ಲ

    Published

    on

    ಬೆಳಗಾವಿ: ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾವಸಾಹೇಬ ಪಾಟೀಲ ಅವರು ನಿಧ*ನರಾಗಿದ್ದಾರೆ. ರಾವಸಾಹೇಬ ಪಾಟೀಲರು ಜೈನ ಮುಖಂಡರು, ಖ್ಯಾತ ಉದ್ಯಮಿಯೂ ಆಗಿದ್ದರು.

    ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸಹಕಾರಿ ಧುರೀಣರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದು ಬೆಳಗ್ಗೆ ಇ*ಹಲೋಕವನ್ನು ತ್ಯ*ಜಿಸಿದ್ದಾರೆ.

    ರಾವಸಾಹೇಬ ಪಾಟೀಲರ ನಿ*ಧನದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳ ಆಂ*ಕ್ರದನ ಮುಗಿಲು ಮುಟ್ಟಿದೆ. ಮೃ*ತರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಪಟ್ಟಣದಲ್ಲಿ ಇಂದು ಸಂಜೆ ಅಂ*ತ್ಯಸಂ*ಸ್ಕಾರ ನಡೆಯಲಿದೆ.

    ರಾವಸಾಹೇಬ ಪಾಟೀಲರು ಅರಿಹಂತ ಉದ್ಯೋಗ ಸಮೂಹ ಸಂಸ್ಥೆಯ ಸಂಸ್ಥಾಪಕ‌ ಅಧ್ಯಕ್ಷರಾಗಿದ್ದರು. ಹಲವಾರು ಉದ್ಯಮ ಜೊತೆಗೆ ಅರಿಹಂತ ಬ್ಯಾಂಕ್‌ ಶಾಖೆಗಳನ್ನ ಹೊಂದಿದ್ದರು. ಸದ್ಯ ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    Continue Reading

    LATEST NEWS

    Trending