Connect with us

  FILM

  ಅತ್ತ ಸೂರ್ಯೋದಯ ಇತ್ತ ಭೂಮಿ ಸೇರಿದ ಅಪ್ಪು: ಮಂಗಳವಾರ ಹಾಲು–ತುಪ್ಪ ಕಾರ್ಯ

  Published

  on

  ಬೆಂಗಳೂರು: ಪೂರ್ವದಲ್ಲಿ ಸೂರ್ಯ ಉದಯಿಸುತ್ತಿರುವ ಹೊತ್ತಿನಲ್ಲೇ ಗಂಧದ ಗುಡಿಯ ‘ರಾಜಕುಮಾರ’ ಪುನೀತ್, ಭೂಮಿ ತಾಯಿಯ ಮಡಿಲಿನೊಳನೆ ಚಿರನಿದ್ರೆಗೆ ಜಾರಿದರು.

  ಮಾನವತೆಯ ಪಡಿಚ್ಚಿನಂತೆ ಬದುಕಿನುದ್ದಕ್ಕೂ ಜೀವಿಸಿದ ನಟ ಪುನೀತ್ ರಾಜ್‌ಕುಮಾರ್ ಇನ್ನು ನೆನಪು ಮಾತ್ರ. ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದ ಅಪ್ಪು ಭಾನುವಾರ ಬೆಳಿಗ್ಗೆ ಭೂ ತಾಯಿಯ ಗರ್ಭ ಸೇರಿದರು.

  ಅಪ್ಪ ಡಾ.ರಾಜ್‌ಕುಮಾರ್, ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅವರ ಮುದ್ದಿನ‌ ಮಗ, ತಂದೆ ತಾಯಿಯೊಂದಿಗೆ ಕಂಠೀರವ ಸ್ಟುಡಿಯೊದಲ್ಲಿ ಚಿರ ನಿದ್ರೆಗೆ ಜಾರಿದರು.


  ಸರಳತೆಯ ಪ್ರತಿರೂಪದಂತಿದ್ದ ಪ್ರೀತಿಯ ಅಪ್ಪು, ಶ್ವೇತ ವಸ್ತ್ರಧಾರಿಯಾಗಿ ನಿಸ್ತೇಜವಾಗಿ ಮಲಗಿರುವುದನ್ನು ಕಂಡು ರಾಜ್ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು.

  ಸ್ಟುಡಿಯೊದ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
  ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಅಲ್ಲಿಯವರೆಗೂ ಪುನೀತ್‌ ಅವರ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಮಂಗಳವಾರದವರೆಗೂ ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ.

  FILM

  ದರ್ಶನ್‌ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ ಸ್ಯಾಂಡಲ್ ವುಡ್ ಕ್ವೀನ್..!

  Published

  on

  ಬೆಂಗಳೂರು/ಮಂಗಳೂರು:  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ವಿರುದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ.  ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಜೈಲು ಸೇರಿರುವ ದರ್ಶನ್‌ ಗೆ ಅಷ್ಟೊಂದು ಹೈಪ್ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಅಷ್ಟೊಂದು ಅಭಿಮಾನಿಗಳನ್ನು ದರ್ಶನ್ ಹೊಂದಿಲ್ಲ. ಬೇರೆ ನಟರು ದರ್ಶನ್‌ಗಿಂತ ಹೆಚ್ಚು ಫ್ಯಾನ್ ಫಾಲೋಯಿಂಗ್‌ನ್ನು ಹೊಂದಿದ್ದಾರೆ. ಇನ್ನು ದರ್ಶನ್ ಸುತ್ತಮುತ್ತ ಇರುವವರೆಲ್ಲಾ ನಟೋರಿಯಸ್ ಕಿಲ್ಲರ್‌ಗಳು ಎಂದು ರಮ್ಯಾ ಹೇಳಿದ್ದಾರೆ.

  ದರ್ಶನ್ ಕೊಲೆ ಆರೋಪ ವಿಚಾರ ಭಾರೀ ಚರ್ಚೆಗೆ ಎಡೆ ಮಾಡಿದೆ. ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತೆ ಮಾಡಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ಕ್ವೀನ್‌ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ರಾಷ್ಟ್ರೀಯ ಚಾನೆಲ್‌ವೊಂದರಲ್ಲಿ ಸಂದರ್ಶನ ನೀಡುವಾಗ ದರ್ಶನ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದಾರೆ.

  Read More..;  ದರ್ಶನ್‌ ಕೊಲೆ ಪ್ರಕರಣ ಬೆನ್ನಲ್ಲೇ ‘ಯಶ್’ ವೀಡಿಯೋ ವೈರಲ್..! ಅಭಿಮಾನಿಗಳಿಗೆ ಯಶ್ ಹೇಳಿದ್ದೇನು?

  ದರ್ಶನ್‌ಗೆ ಹೈಪ್‌ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಇಲ್ಲ. ಅವರಿಗಿಂತ ಬೇರೆ ನಟರಿಗೆ ಹೆಚ್ಚು ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಫ್ಯಾನ್ಸ್‌ ಇದ್ದಿದ್ರೆ ಅವರು ಮಾಡೋ ಸಿನೆಮಾಗಳೆಲ್ಲಾ ಹಿಟ್ ಆಗಬೇಕಿತ್ತು. ಸಿನೆಮಾ ಅಲ್ಲದೆ ರಾಜಕೀಯದಲ್ಲೂ ಕಳೆದ ಆರು ತಿಂಗಳಿನಿಂದ ರಾಜಕಾರಣಿಗಳ ಪರ ಪ್ರಚಾರ ನಡೆಸಿದ್ದರು. ಆದರೆ ಅವರಲ್ಲಿ ಕೆಲವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇನ್ನು ದರ್ಶನ್ ಅರೆಸ್ಟ್‌ ಆದ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ 20ರಿಂದ 50 ಜನ ನಿಂತ ಮಾತ್ರಕ್ಕೆ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್‌ ಫಾಲೋಯಿಂಗ್ ಇದ್ದಾರೆ ಅನ್ನೋದು ಸರಿಯಲ್ಲ ಎಂದು ರಮ್ಯಾ ಹೇಳಿದ್ದಾರೆ. ದರ್ಶನ್ ಸುತ್ತಮುತ್ತಲೂ ಇರುವ ಜನರು ನಟೋರಿಯಸ್‌ಗಳು. ಕೊಲೆ, ಅಪಹರಣ, ಜನರ ಮೇಲೆ ಹಲ್ಲೆ ಮಾಡುವುದರಲ್ಲಿ ತೊಡಗಿಕೊಂಡವರು. ದರ್ಶನ್ ಫ್ಯಾನ್‌ ಕ್ಲಬ್‌ ಅಪಹರಣ, ಕೊಲೆಗಳನ್ನು ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ.

  ಇನ್ನು ನಟ ದರ್ಶನ್ ಜೈಲು ಸೇರುತ್ತಿದ್ದಂತೆಯೇ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು . ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದರೆ ಪೊಲೀಸರಿಗೆ ದೂರು ಕೊಡಬೇಕಿತ್ತು. ಅವರು ವಿಚಾರಿಸಿಕೊಳ್ಳುತ್ತಿದ್ದರು.  ಆದರೆ ನೀವು ಜನರನ್ನು ಹೊಡೆದು ಕೊಲ್ಲುವುದಲ್ಲ. ಈ ವಿಚಾರದಲ್ಲಿ ನಾನು ಪೊಲೀಸರ ಕೆಲಸವನ್ನು ಮೆಚ್ಚುತ್ತೇನೆ. ಯಾವುದೇ ಒಂದು ಒತ್ತಡಕ್ಕೆ ಮಣಿಯದೇ ತನಿಖೆ ಮಾಡುತ್ತಿದ್ದು, ಪೊಲೀಸರ ಮೇಲೆ ಜನರು ಭರವಸೆ ಉಳಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಪೋಸ್ಟ್‌ ಹಾಕಿದ್ದರು.

  Continue Reading

  FILM

  ದರ್ಶನ್‌ ಕೊಲೆ ಪ್ರಕರಣ ಬೆನ್ನಲ್ಲೇ ‘ಯಶ್’ ವೀಡಿಯೋ ವೈರಲ್..! ಅಭಿಮಾನಿಗಳಿಗೆ ಯಶ್ ಹೇಳಿದ್ದೇನು?

  Published

  on

  ಮಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಸ್ಯಾಂಡಲ್‌ವುಡ್‌ ಸ್ಟಾರ್ ನಟ ಈ ಹತ್ಯೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈಗಾಗಲೇ ಹತ್ಯೆಗೆ ಸಂಬಂಧಪಟ್ಟವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ತೀವ್ರ ತನಿಖೆ ನಡೆಯುತ್ತಿದೆ.

  ಇನ್ನು ಸ್ಟಾರ್ ನಟ, ಹೆಚ್ಚು ಫ್ಯಾನ್‌ ಫಾಲೋವರ್ಸ್‌ನ್ನು ಹೊಂದಿರುವ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇದರಿಂದಾಗಿ ಕನ್ನಡ ಚಿತ್ರರಂಗವೇ ಶಾಕ್‌ಗೆ ಒಳಗಾಗಿದೆ. ದರ್ಶನ್‌ ರವರ ಗೆಳತಿ ಪವಿತ್ರಾಗೌಡಾಳಿಗೆ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ. ಇದರಿಂದ ಕೋಪಗೊಂಡು ದರ್ಶನ್ ಹಾಗೂ ಡಿ ಗ್ಯಾಂಗ್‌ ಈ ಕೃತ್ಯ ಎಸಗಿದ್ದಾರೆ. ಇದೀಗ ದರ್ಶನ್, ಪವಿತ್ರಾ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ.

  Read More..; ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ : ಅನುಕುಮಾರ್ ಬಂಧನದ ಸುದ್ದಿ ಕೇಳಿ ತಂದೆ ಹೃದಯಾ*ಘಾತದಿಂದ ಸಾ*ವು

  ಇದೀಗ ಈ ಬೆನ್ನಲ್ಲೇ ಪಾನ್ ಇಂಡಿಯಾ ಸ್ಟಾರ್ ಯಶ್ ಅವರ ಹಳೆ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹೌದು, ಯಶ್ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯನ್ನು ಹಿಡಿದು ಇದೀಗ ಪಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಅಭಿಮಾನಿಗಳ ಬಗ್ಗೆ ಹೇಳಿರುವ ಹಳೆ ವೀಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯಶ್ ಅವರು ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಅಷ್ಟೇ ಅಲ್ಲ, ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಮಾಡಲ್ಲ ಎಂದಿದ್ದರು. ಈ ಮಾತನ್ನು ಅವರು ಈಗಲೂ ಉಳಿಸಿಕೊಂಡು ಬರುತ್ತಿದ್ದಾರೆ.  ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ.

  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್‌ ಅರೆಸ್ಟ್‌ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆಗೂ ಎಡೆಮಾಡಿಕೊಟ್ಟಿದೆ. ಕನ್ನಡ ಚಿತ್ರರಂಗ ತಲೆ ತಗ್ಗಿಸುವಂತಾಗಿದೆ. ಆದರೆ ದರ್ಶನ್ ಫ್ಯಾನ್ಸ್ ಮಾತ್ರ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಈ ಮಧ್ಯೆ ಯಶ್‌ರವರ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

  Continue Reading

  FILM

  ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ : ಅನುಕುಮಾರ್ ಬಂಧನದ ಸುದ್ದಿ ಕೇಳಿ ತಂದೆ ಹೃದಯಾ*ಘಾತದಿಂದ ಸಾ*ವು

  Published

  on

  ಚಿತ್ರದುರ್ಗ: ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ತನ್ನ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ಕೇಳಿದ ಆರೋಪಿಯ ತಂದೆ ಹೃದಯಾಘಾ*ತದಿಂದ ಮೃ*ತಪಟ್ಟಿದ್ದಾರೆ. ಸಿಹಿ ನೀರು ಹೊಂಡ ಎಂಬಲ್ಲಿ ಈ ಘಟನೆ ನಡೆದಿದೆ. ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ (60) ಕುಸಿದುಬಿದ್ದು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದಾರೆ.


  ಕುಸಿದು ಬಿದ್ದ ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಡಿಮೆ ರಕ್ತದೊತ್ತಡದಿಂದಾಗಿ ಹೃದಯ ಸ್ತಂಭನವಾಗಿ ಶುಕ್ರವಾರ(ಜೂ.14) ವಿಧಿವಶರಾಗಿದ್ದಾರೆ.

  ಒಂದೆಡೆ ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ಅನುಕುಮಾರ್ ಪೊಲೀಸರ ಮುಂದೆ ಶರಣಾಗಿದ್ದರೆ, ಮತ್ತೊಂದೆಡೆ ಅವರ ತಂದೆ ಚಂದ್ರಪ್ಪ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾರೆ. ಆಟೋ ಚಾಲಕನಾಗಿದ್ದ ಅನು ಕುಮಾರ್ ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದು, ಕುಟುಂಬದ ಆಧಾರವಾಗಿದ್ದರು.

  ಇದನ್ನೂ ಓದಿ : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

  ಅತ್ತ ಮಗ ಜೈಲು ಸೇರಿದ್ರೆ, ಇತ್ತ ಪತಿ ಚಂದ್ರಪ್ಪ ಇಹಲೋಕ ತ್ಯಜಿಸಿರುವುದರಿಂದ ಜಯಮ್ಮ ಶೋಕಸಾಗರದಲ್ಲಿ ಮುಳುಗಿದ್ದಾರೆ.

  Continue Reading

  LATEST NEWS

  Trending