Connect with us

LATEST NEWS

ವಂಚನೆ ಆರೋಪ: ಫ್ರೀಡಂ ಆ್ಯಪ್‌ನ ಸಿ.ಎಸ್. ಸುಧೀರ್ ವಿರುದ್ಧ FIR

Published

on

ಬೆಂಗಳೂರು: ಹಣ ನೀಡದೇ ವಂಚಿಸಿರುವ ಆರೋಪದಡಿ ಇಂಡಿಯನ್ ಮನಿ ಫ್ರೀಡಂ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್. ಸುಧೀರ್ ಅವರನ್ನು ಬನಶಂಕರಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


‘ವಂಚನೆಗೀಡಾಗಿರುವ ಯುವತಿ ಸೇರಿ 21 ಮಂದಿ ದೂರು ನೀಡಿದ್ದಾರೆ. ಅದರನ್ವಯ ಕಂಪನಿಯ ಸಂಸ್ಥಾಪಕರಾದ ಸುಧೀರ್ ಸೇರಿ 23 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ದೂರಿನ ವಿವರ
ಸುಧೀರ್ ಹಾಗೂ ಇತರರು, ಜನರನ್ನು ವಂಚಿಸುವ ಉದ್ದೇಶದಿಂದ ಸಂಚು ರೂಪಿಸಿ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಆ್ಯಪ್‌ ಪ್ರಚಾರಕ್ಕಾಗಿ ಅಮಾಯಕ ಯುವಕ–ಯುವತಿಯರನ್ನು ಬಳಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.‘ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಕಂಪನಿಯವರು, ಆ್ಯಪ್‌ ಪ್ರಚಾರ ಮಾಡುವಂತೆ ಹೇಳಿದ್ದರು.

ಹೆಚ್ಚು ಡೌನ್‌ಲೋಡ್‌ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು 15 ಸಾವಿರ ರೂ ನೀಡುವುದಾಗಿ ಹೇಳಿದ್ದರು. ಅದರಂತೆ ಯುವಕ–ಯುವತಿಯರು, ಹಣ ಗಳಿಸಬಹುದೆಂದು ತಿಳಿದು ಸಂಬಂಧಿಕರು ಹಾಗೂ ಸ್ನೇಹಿತರನ್ನೇ ಚಂದಾದಾರರನ್ನಾಗಿ ಮಾಡಿಸಿದ್ದರು.

ಯುವಕ–ಯುವತಿಯರಿಂದ ಎಲ್ಲ ಕೆಲಸ ಮಾಡಿಸಿಕೊಂಡ ಕಂಪನಿಯವರು, ನಿಗದಿತ ದಿನದೊಳಗೆ ಸಂಬಳ ಕೊಟ್ಟಿಲ್ಲ. ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ. ಕಾರಣ ನೀಡದೇ ಎಲ್ಲರನ್ನೂ ಕೆಲಸದಿಂದ ತೆಗೆದಿದ್ದಾರೆ’ ಎಂದು ದೂರಲಾಗಿದೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಸುಧೀರ್ ಹಾಗೂ ಇತರರು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ.

2 Comments

2 Comments

  1. Not required

    12/04/2023 at 9:46 AM

    Yes he is big cheater.he designed a eco system such that many people getting cheated by this person.he is not transparent even after business he will not transfer the money such person should be totally kicked out by people.i feel many thousands of people faced this problem..

  2. Mohanakumara P J

    13/04/2023 at 7:54 PM

    This freedom app is a big scam, iam one among them and i lost my money … Big scam… Dont trust this fellow

Leave a Reply

Your email address will not be published. Required fields are marked *

FILM

ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

Published

on

ಮುಂಬೈ: ಬಾಲಿವುಡ್ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಡ್ಯಾನ್ಸ್ ದೀವಾನೆ ಸೀಸನ್ 4 ಅನ್ನು ಹೋಸ್ಟ್ ಮಾಡುತ್ತಿರುವ ಖ್ಯಾತ ನಿರೂಪಕಿ ಭಾರತಿ ಸಿಂಗ್  ತೀವ್ರ ಹೊಟ್ಟೆ ನೋವಿನಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

bharathi

‘ಕಳೆದ ಮೂರು ದಿನಗಳಿಂದ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದೇನೆ’ ಎಂದು ತನ್ನ ವ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಗ್ಯಾಸ್ಟ್ರೊನಲ್ ಅಥವಾ ಆಮ್ಲೀಯ ಅಸ್ವಸ್ಥತೆ ಆಗಿರಬಹುದೆಂದು ಭಾವಿಸಿ ನಿರ್ಲಕ್ಷ ಮಾಡಿದ್ದರಂತೆ. ಆದರೆ, ನೋವು ತಡೆದುಕೊಳ್ಳಲಾಗದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವ್ಲಾಗ್‌ನಲ್ಲಿ ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಭಾರತಿಗೆ ಪಿತ್ತಕೋಶದಲ್ಲಿ ಕಲ್ಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏನೂ ತಿನ್ನಲು ಆಗುತ್ತಿಲ್ಲ ತಿಂದರೂ ವಾಂತಿ ಆಗುತ್ತಿದೆ ಎಂದ ಹೇಳಿದ ಅವರು ಭಾವುಕರಾದರು.

ಮುಂದೆ ಓದಿ..;‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಈ ನಡುವೆ ಭಾರತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ.

 

Continue Reading

DAKSHINA KANNADA

ಪ್ರವಾಸಿಗರಿಗೆ ಗುಡ್ ನ್ಯೂಸ್ : ಮತ್ತೆ ಆರಂಭವಾಯ್ತು ಲಕ್ಷದ್ವೀಪ – ಮಂಗಳೂರು ಸ್ಪೀಡ್ ಪ್ಯಾಸೆಂಜರ್ ಹಡಗು

Published

on

ಮಂಗಳೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ವಾಯುವಿಹಾರ ನಡೆಸುವ ಮೂಲಕ ಲಕ್ಷದ್ವೀಪ ಬಾರಿ ಸುದ್ದಿಯಾಗಿತ್ತು. ಈ ವೇಳೆ ಮಂಗಳೂರು ಲಕ್ಷದ್ವೀಪ ನಡುವೆ ಈ ಹಿಂದೆ ಇದ್ದ ಪ್ರಯಾಣಿಕರ ಹಡಗು ಆರಂಭಿಸಲು ಬೇಡಿಕೆ ಕೂಡಾ ಆರಂಭವಾಗಿತ್ತು.

ಇದೀಗ ಲಕ್ಷದ್ವೀಪದ ಆಡಳಿತ ಮಂಗಳೂರಿಗೆ ಸ್ಪೀಡ್ ಪ್ಯಾಸೆಂಜರ್ ಹಡಗನ್ನು ಆರಂಭಿಸಿದೆ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸ್ಪೀಡ್ ಪ್ಯಾಸೆಂಜರ್ ಬೋಟ್‌ನಲ್ಲಿ 150 ಜನ ಲಕ್ಷದ್ವೀಪವಾಸಿಗಳು ಆಗಮಿಸಿದ್ದಾರೆ.

ಪ್ರಯಾಣ ದರ ಎಷ್ಟು?


ಮಂಗಳೂರು ಲಕ್ಷದ್ವೀಪದ ನಡುವೆ ಮತ್ತೆ ಸಂಪರ್ಕ ಸೇತುವೆ ನಿರ್ಮಿಸಲು ಲಕ್ಷದ್ವೀಪ ಆಡಳಿತ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭಿಸಿದೆ. ಕೋವಿಡ್ ಆರಂಭಕ್ಕೂ ಮೊದಲು ಮಂಗಳೂರು ಲಕ್ಷದ್ವೀಪದ ನಡುವೆ ಎರಡು ಪ್ರಯಾಣಿಕ ಹಡಗುಗಳು ಸಂಚಾರ ಮಾಡುತ್ತಿತ್ತು. ಸಾಕಷ್ಟು ಪ್ರಯಾಣಿಕರು ಮಂಗಳೂರು ಲಕ್ಷದ್ವೀಪ ನಡುವೆ ಪ್ರಯಾಣ ಮಾಡುವ ಮೂಲಕ ಅದರ ಅನುಕೂಲ ಪಡೆದುಕೊಂಡಿದ್ದರು.


ಲಕ್ಷದ್ವೀಪದವರಿಗೆ ತಮ್ಮ ದೈನಂದಿನ ಅವಶ್ಯಕತೆಗೆ ಮಂಗಳೂರು ಅವಲಂಬಿತರಾಗಿದ್ದರೆ, ಮಂಗಳೂರಿನ ಜನರಿಗೆ ಲಕ್ಷದ್ವೀಪ ವೀಕೆಂಡ್ ಪಾಯಿಂಟ್. ಆದ್ರೆ ಕೋವಿಡ್ ಕಾರಣದಿಂದ ಲಕ್ಷಾದ್ವೀಪಕ್ಕೆ ಇದ್ದ ಹಡಗಿನ ವ್ಯವಸ್ಥೆ ನಿಂತು ಹೋಗಿದ್ದು, ಈಗ ಮತ್ತೆ ಆರಂಭವಾಗಿದೆ. ಹಿಂದೆ 24 ಗಂಟೆ ಇದ್ದ ಪ್ರಯಾಣ ಕೇವಲ 5.30 ರಿಂದ 6 ಗಂಟೆಗಳಿಗೆ ಇಳಿದಿದೆ. ಹಡಗಿನಲ್ಲಿ ಎಲ್ಲಾ ವ್ಯವಸ್ಥೆ ಇರೋ ಕಾರಣದಿಂದ ಜನರು ಕೂಡಾ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ದರ ಕೇವಲ 450 ರೂ. ಆಗಿದೆ.

ಹೆಚ್ಚಿನ ಹಡಗಿಗೆ ಬೇಡಿಕೆ :


ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಆರಂಭದಿಂದ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಲಕ್ಷದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿನಿಂದ ತೆರಳುವ ಮೂಲಕ ಅಲ್ಲೂ ಕೂಡಾ ಆರ್ಥಿಕ ಅಭಿವೃದ್ದಿ ಆಗಲಿದೆ.


ಸ್ಪೀಡ್ ಪ್ಯಾಸೆಂಜರ್ ಹಡಗು ಕನಿಷ್ಟ ಎರಡು ದಿನಕ್ಕೊಮ್ಮೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಈಗ ಆರಂಭವಾಗಿರೋ ಹಡಗಿನಲ್ಲಿ ಸುಖಕರ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿವಿ, ಎಸಿ, ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಹಡಗಿನ ಬಳಕೆ ಮಾಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಹಡಗಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೀಗ ಆರಂಭಗೊಂಡಿರೋ ಪ್ರಯಾಣಿಕರ ಹಡಗು ಸೇವೆ ಜೂನ್ ತಿಂಗಳ ಬಳಿಕ ಸ್ಥಗಿತವಾಗಲಿದೆ.

ಇದನ್ನೂ ಓದಿ :  ‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಮಳೆಗಾಲ ಕಳೆದ ಬಳಿಕ ಇದು ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ, ಮತ್ತೆ ಆರಂಭಿಸುವ ಬಗ್ಗೆ ಲಕ್ಷಾದ್ವೀಪ ಆಡಳಿತ ಭರವಸೆ ನೀಡಿದೆ. ಒಟ್ಟಾರೆ ಹೇಳೋದಾದ್ರೆ ಸದ್ಯಕ್ಕಂತೂ ಲಕ್ಷದ್ವೀಪಕ್ಕೆ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭದಿಂದ ಮಂಗಳೂರಿನ ಜನರಿಗಂತೂ ಸಾಕಷ್ಟು ಖುಷಿಯಾಗಿರೋದಂತು ನಿಜ.

Continue Reading

LATEST NEWS

ಈಜಲು ಹೋದ ಅಣ್ಣ ನೀರು*ಪಾಲು.! ತಂಗಿಯ ವೀಡಿಯೋದಲ್ಲಿ ಸೆರೆಯಾಯ್ತು ಅಣ್ಣನ ಸಾ*ವಿನ ಕೊನೆ ಕ್ಷಣ..!

Published

on

ಕೋಲಾರ: ಕೃಷಿ ಹೊಂಡದಲ್ಲಿ ಈಜುತ್ತಿರುವುದನ್ನು ತಂಗಿ ವೀಡಿಯೋ ಮಾಡುತ್ತಿದ್ದಾಗಲೇ ಸಹೋದರ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನಾಗವಾಳ ಗ್ರಾಮದಲ್ಲಿಈ ಘಟನೆ ನಡೆದಿದೆ.

swim death

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್(26 ವ) ಮೃತ ದುರ್ದೈವಿ. ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗಾವಾಳಕ್ಕೆ ಬಂದಿದ್ದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ತಂಗಿಯ ಜೊತೆ ಕೃಷಿ ಹೊಂಡದ ಬಳಿ ಹೋಗಿದ್ದಾರೆ.  ಅಲ್ಲಿ ತಂಗಿಯ ಬಳಿ ವೀಡಿಯೋ ಮಾಡಲು ಮೊಬೈಲ್ ಕೊಟ್ಟು ಹೊಂಡಕ್ಕೆ ಈಜಲು ಧುಮುಕಿದ್ದಾರೆ. ಸರಿಯಾಗಿ ಈಜಲು ಗೊತ್ತಿರದ ಗೌತಮ್ ನೀರಿಗೆ ಧುಮುಕಿದ್ದು, ಇತ್ತ ತಂಗಿ ಈಚೆ ಬಾ ಎಂದು ಕೂಗುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ. ನೋಡು ನೋಡುತ್ತಿದ್ದಂತೆ ಗೌತಮ್ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಗೌತಮ್ ನೀರಿನಲ್ಲಿ ಮುಳುಗುವ ದೃಶ್ಯ ಸೆರಯಾಗಿದೆ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

Trending