Connect with us

    LATEST NEWS

    ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌

    Published

    on

    ಬೆಂಗಳೂರು: ವಿಶೇಷ ತನಿಖಾ ತಂಡದಲ್ಲಿರುವ ಎಡಿಜಿಪಿ ಚಂದ್ರಶೇಖರ್‌ಗೆ ಬೆದರಿಕೆ ಆರೋಪದ ಹಿನ್ನೆಲೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

    ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆದರಿಕೆ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿರುವ ಹಿನ್ನೆಲೆ, ಹೆಚ್‌.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅವರ ಅಪ್ತ ಸುರೇಶ್ ಬಾಬು ಮೇಲೆ ದೂರು ದಾಖಲಾಗಿತ್ತು.

    ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡಿರುವುದಾಗಿ ದೂರು ನೀಡಲಾಗಿತ್ತು. ಎಸ್‌ಐಟಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹೆಚ್ಚಿನ ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತಿದೆ. ಸಾಕ್ಷ್ಯಾಧಾರ ಇರುವ ಹಿನ್ನೆಲೆ ರಾಜ್ಯಾಪಾಲರ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು.ಇದೇ ವಿಚಾರವಾಗಿ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿತ್ತು.

    LATEST NEWS

    ತಹಶೀಲ್ದಾರ್ ಕೊಠಡಿಯಲ್ಲೇ ನೇ*ಣಿಗೆ ಶರಣಾದ ಸಿಬ್ಬಂದಿ; ಡೆತ್ ನೋಟ್‌ ಪ*ತ್ತೆ

    Published

    on

    ಮಂಗಳೂರು/ಬೆಳಗಾವಿ: ತಹಶೀಲ್ದಾರ್ ಕೊಠಡಿಯಲ್ಲಿಯೇ ಎಸ್‌ಡಿಎ ಸಿಬ್ಬಂದಿ ನೇ*ಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಮಂಗಳವಾರ (ನ.5) ನಡೆದಿದೆ.

    ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಆ*ತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ..

    ತಹಶೀಲ್ದಾರರು ಕುಳಿತುಕೊಳ್ಳುವ ಕೋರ್ಟ್ ಕೇಸು ಪಡೆಯುವ ಸ್ಥಳದಲ್ಲಿಯ ಫ್ಯಾನ್ ಗೆ ನೇ*ಣು ಬಿ*ಗಿದುಕೊಂಡಿದ್ದಾನೆ. ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುತ್ತಿದ್ದಂತೆ ವಿಚಾರ ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಆ*ತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ (ತಹಶೀಲ್ದಾರರ ಟೇಬಲ್ ಬಳಿ) ಡೆ*ತ್ ನೋಟ್ ಪ*ತ್ತೆಯಾಗಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ

    Continue Reading

    LATEST NEWS

    ಶಿರಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಉರುಳಿದ ಕ್ಯಾಂಟರ್

    Published

    on

    ಗುಂಡ್ಯ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನಲ್ಲಿ ಕ್ಯಾಂಟರ್ ವಾಹನವೊಂದು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಸೋಮವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಮಂಗಳವಾರದಂದು ಕ್ಯಾಂಟರ್ ಮೇಲೆತ್ತುವ ಕೆಲಸ ಆರಂಭಿಸಲಾಗಿದೆ.

    ಕ್ರೇನ್‌ ಮೂಲಕ ಕ್ಯಾಂಟರ್ ಮೇಲೆತ್ತುವ ಕೆಲಸದಿಂದಾಗಿ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾಫಿಕ್ ಜಾಮ್‌ ಅದ್ಯಾವ ರೀತಿ ಆಗಿದೆ ಅಂದ್ರೆ ಸುಮಾರು 10 ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದೆ.

    ಕೆಲ ಲಘು ವಾಹನ ಚಾಲಕರು ಘಾಟ್‌ನಲ್ಲಿ ತಿರುವು ಪಡೆದುಕೊಂಡು ಬಿಸಲೆ ಘಾಟ್‌ ಮೂಲಕ ಸಂಚಾರ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಕೆಲವೊಂದು ಕಡೆ ಮುಂದೆ ಹೋಗುವ ಆತುರದಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಅಲ್ಲೂ ಕೂಡಾ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಂಟರ್ ಮೇಲತ್ತುವ ಕಾರ್ಯ ನಡೆಯುತ್ತಿರುವ ಪ್ರದೇಶದ ಇಕ್ಕೆಲೆಗಳಲ್ಲೂ ವಾಹನ ದಟ್ಟಣೆ ಇರುವ ಕಾರಣ ತಡರಾತ್ರಿಯಾದರೂ ಸುಲಲಿತ ಸಂಚಾರ ಅನುಮಾನವಾಗಿದೆ.

    Continue Reading

    LATEST NEWS

    ಮುಳ್ಳಿನ ಪೊದೆಯ ನಡುವೆ ನವಜಾತ ಶಿಶು ಪತ್ತೆ; ಮಗುವನ್ನು ಬದುಕಿಸಲು ಪೊಲೀಸರ ಪರದಾಟ

    Published

    on

    ಮಂಗಳೂರು/ವಾಡಿ: ಕೈ ಚೀಲದಲ್ಲಿ ಹಾಕಿ ಮುಳ್ಳಿನ ಪೊದೆಯ ನಡುವೆ ನವಜಾತ ಶಿಶುವನ್ನು ಎಸೆದು ಹೋದ ಅಮಾನುಷ ಘಟನೆ ನಡೆದಿದ್ದು, ಮಗುವನ್ನು ಬದುಕುಳಿಸಲು ಪೊಲೀಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಪರದಾಡಿದ ಪ್ರಸಂಗ ಮಂಗಳವಾರ(ನ.5) ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

    ಹೆತ್ತ ಕೆಲವೇ ಕ್ಷಣದಲ್ಲಿ ತನ್ನ ಹಸುಗೂಸನ್ನು ನಾಯಿ ಹಂದಿಗಳಿರುವ ತಾಣದಲ್ಲಿ ಎಸೆದು ಹೋದ ಮಹಿಳೆಯ ಮೃಗೀಯ ಮನಸ್ಥಿತಿ ಅನಾವರಣಗೊಂಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದೆ.

    ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡಾದ ಜನವಸತಿ ಪ್ರದೇಶದ ಬಹಿರ್ದೆಸೆ ತಾಣದಲ್ಲಿ ಕೇಸರಿಬಾಯಿ ಎಂಬುವವರಿಗೆ ಹೆಣ್ಣು ಶಿಶು ಕಣ್ಣಿಗೆ ಬಿದ್ದಿದೆ. ತಕ್ಷಣ ಬಡಾವಣೆಯ ಆಶಾ ಕಾರ್ಯಕರ್ತೆ ಹಾಗೂ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಮಗುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಾಯ ಮಾಡಿದ್ದಾರೆ.

    ನಾಯಿ, ಹಂದಿಗಳ ಪಾಲಾಗುತ್ತಿದ್ದ ಶಿಶುವನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ತಂದರೆ ಅಲ್ಲಿ ವೈದ್ಯರು ಹಾಗೂ ನರ್ಸ್ ಗಳು ಇಲ್ಲದಿರುವುದು ಪೊಲೀಸರ ಪರದಾಟಕ್ಕೆ ಕಾರಣವಾಯಿತು. ನಂತರ ತಾಲೂಕ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದ ಪೊಲೀಸರು ಮಗುವಿನ ರಕ್ಷಣೆಗೆ ಮನವಿ ಮಾಡಿದ್ದಾರೆ.

    ವೈದ್ಯರು ಶಿಶುವಿನ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಪತ್ತೆಯಾದ ನವಜಾತ ಶಿಶುವನ್ನು ಕಲಬುರ್ಗಿ ಅಮೂಲ್ಯ ಶಿಶುವಿಹಾರಕ್ಕೆ ಕಳಿಸಿಕೊಡಲಾಗಿದ್ದು, ಮಗುವನ್ನು ದತ್ತು ಪಡೆಯಲು ಅನೇಕರು ಮುಂದೆ ಬಂದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending