LATEST NEWS
ದಸರಾ ಮಹೋತ್ಸವಕ್ಕೆ ಕೆಲವೇ ತಿಂಗಳುಗಳು ಬಾಕಿ.. ಗಜಪಯಣಕ್ಕೆ ಚಾಲನೆ..
Published
3 months agoon
By
NEWS DESK3ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ತಿಂಗಳುಗಳು ಬಾಕಿ ಇದ್ದು ಈಗಾಗಲೇ ಸಕಲ ಸಿದ್ಧತೆಗಳ ತಯಾರಿ ನಡೆಯುತ್ತಿದೆ. ಅದರಂತೆಯೇ ಇಂದು ಮೈಸೂರಿಗೆ ದಸರಾ ಗಜಪಡೆ ಆಗಮಿಸುತ್ತಿದೆ. ಮೈಸೂರಿನಲ್ಲಿ ಗತ ವೈಭವ ಕಳೆಗಟ್ಟುತ್ತಿವೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ನಡೆಯಲಿದೆ. ಗಜಪಯಣ ಕಾರ್ಯಕ್ರಮದ ಮೂಲಕ ಕಾಡಿನಿಂಡ ನಾಡಿಗೆ ಗಜಪಡೆಯ ಆಗಮನವಾಗಿದೆ.
ಇಂದು ಮೈಸೂರಿನ ಅರಣ್ಯ ಭವನದ ಆವರಣಕ್ಕೆ ದಸರಾ ಆನೆಗಳ ಎಂಟ್ರಿಯಾಗಿದ್ದು, ವೀರನಹೊಸಹಳಗಳ್ಳಿಯಿಂದ ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಆಗಮಿಸಿದೆ. ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ದಸರಾ ಗಜಪಡೆಗೆ ಪುಷ್ಪಾರ್ಚನೆ ನಡೆಯಿತು. ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳಿವೆ. ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸಲಿವೆ. ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ. ಇನ್ನು ಆನೆಗಳು, ಮಾವುತರು ಹಾಗು ಕಾವಾಡಿಗಳ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.
Baindooru
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
Published
12 minutes agoon
22/11/2024By
NEWS DESK4ಮಂಗಳೂರು/ ನವದೆಹಲಿ : ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಯ ಬಗ್ಗೆ ತೀವ್ರ ಆಕ್ಷೇಪ ಬಂದ ಬೆನ್ನಲ್ಲೇ ಕೆನಡಾ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೆನಡಾದೊಳಗೆ ಯಾವುದೇ ಕ್ರಿ*ಮಿನಲ್ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ :
ಕೆನಡಾ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿಜ್ಜರ್ ಹ*ತ್ಯೆಗೆ ಭಾರತದ ನಾಯಕರೇ ಸಂಚು ರೂಪಿಸಿದ್ದರು ಎಂಬುದಾಗಿ ವರದಿಯಲ್ಲಿ ಆರೋಪ ಮಾಡಲಾಗಿತ್ತು. ಇದೀಗ ಎಚ್ಚೆತ್ತ ಕೆನಡಾ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ. ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದೆ.
ಈ ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?
ಕಳೆದ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ನಡೆದಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ಎನ್‌ಎಸ್‌ಎ ದೋವಲ್ ಲಿಂಕ್ ಮಾಡುವ ಲೇಖನವನ್ನು ಕೆನಡಾದ ಪ್ರತಿಷ್ಠಿತ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಪ್ರಕಟಿಸಿತ್ತು. ಪ್ರಧಾನಿ ಮೋದಿಯವರಿಗೆ ನಿಜ್ಜರ್ ಹತ್ಯೆಯ ಬಗ್ಗೆ ಗೊತ್ತಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿಗಳು ನಂಬುತ್ತವೆ ಎಂಬುದಾಗಿ ಹೆಸರಿಸದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಭಾರತ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು.
Baindooru
ಕದ್ರಿ ಪಾರ್ಕ್‌ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್‌ನಿಂದ ಲಾಂಛನ ಬಿಡುಗಡೆ
Published
1 hour agoon
22/11/2024ಮಂಗಳೂರು : ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಶರಧಿ ಪ್ರತಿಷ್ಟಾನವು ಆಯೋಜಿಸುವ ‘ ಕಲಾ ಪರ್ಬ ‘ ಇದರ ಲಾಂಛನ ಮತ್ತು ಕರಪತ್ರವನ್ನು ಇಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಬಿಡುಗಡೆ ಗೊಳಿಸಿದರು.
ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ಕಲಾ ಪರ್ಬವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಇಲ್ಲಿ ಆಗುತ್ತಿರುವುದು ಕಲಾ ಸಂಭ್ರಮ ಮತ್ತು ಕಲಾ ಜಂಗಮ.
ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುವುದು. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸುವವರಿಗೆ ಉತ್ತಮ ಅವಕಾಶವಿದು.
ಲಾಂಛನದ ಅರ್ಥ :
ಈ ಕಲಾಪರ್ಬದ ಲಾಂಛನವು ಒಂದು ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಂದು ಕ್ಯಾನ್ವಾಸ್ ನಲ್ಲಿ 3 ಬಣ್ಣಗಳ ಸಂಗಮ ( K ) ಇಲ್ಲಿ ಕ್ಯಾನ್ವಾಸ್ ಕಲಾಕೃತಿಯ ಪ್ರತೀಕವಾದರೂ ನಮ್ಮ ಸಮಾಜವೇ ಒಂದು ರೀತಿಯ ಕ್ಯಾನ್ವಾಸ್ ಎಂಬ ಚೌಕಟ್ಟು. ಈ ಬದುಕಿನ ಚೌಕಟ್ಟಿನ ಒಳಗೆ ಎಲ್ಲರದ್ದೂ ಒಂದು ರೀತಿಯ ಬಣ್ಣದ ಬದುಕು. ನಮ್ಮ ನಿತ್ಯ ದಿನಚರಿ, ಚಟುವಟಿಕೆಗಳಿಂದ ಸಮಾಜಕ್ಕೆ, ಪ್ರಕೃತಿಗೆ ಒಂದು ಕೊಡುಗೆಯನ್ನು ನೀಡಬೇಕಾದರೆ ನಮ್ಮ ಸೀಮಿತ ಚೌಕಟ್ಟಿನಿಂದ ವಾದ ಮತ್ತು ಪಾದಗಳನ್ನು ಹೊರಗಿಡಲೇ ಬೇಕು. ಇದರ ಪ್ರತಿ ರೂಪವಾಗಿ ಕ್ಯಾನ್ವಾಸ್ ನಿಂದ ಒಂದು ಕಡೆ ಕುಂಚ ( ವಾದ…ತತ್ವ, ಸಿದ್ದಾಂತ ) ಹೊರಗೆ ಬಂದಿರುತ್ತದೆ. ಇನ್ನೊಂದು ಕಡೆ ಹೆಜ್ಜೆ ( ಪಾದ…ನಡೆ, ನಡತೆ ) ಹೊರಗೆ ಬಂದಿರುತ್ತದೆ.
ಅಂದರೆ ಕಲಾಕ್ಷೇತ್ರದಲ್ಲಿ ಆಗಲಿ, ಸಮಾಜದಲ್ಲಾಗಲಿ ನಾವು ನಮ್ಮದೇ ಸೀಮಿತ ಬಣ್ಣ, ಬದುಕು ಎಂಬ ಚೌಕಟ್ಟಿನಲ್ಲಿ ಕಂಡು ಕೊಂಡದ್ದಕ್ಕಿಂತ, ನಾವು ಚೌಕಟ್ಟು ಮೀರಿ ಹೊರ ಆಯಾಮವನ್ನು ತಲುಪಲು ಪ್ರಯತ್ನಿಸಿದರೆ ( ಖಾಸಗಿ ಬದುಕಿನಿಂದ ಸಾಮಾಜಿಕ ಬದುಕಿಗೆ ) ಉತ್ತಮವಾದ ಕಲಾಕೃತಿಯನ್ನು ಮತ್ತು ಸಮಾಜವನ್ನು ರೂಪಿಸಬಹುದು ಎಂಬುದು ಈ ಲಾಂಛನದ ಒಳಾರ್ಥ.
ಅದೇ ರೀತಿ ಕರ ಪತ್ರದಲ್ಲಿ ಬಣ್ಣದ ಹುಡುಗಿಯೊಬ್ಬಳು ಸಂಭ್ರಮಿಸುತ್ತಿದ್ದಾಳೆ. ಆಕೆಯ ಮುಖ ಬಣ್ಣದ ಪಾಲೇಟ್ ಮತ್ತು ನೀರಿನ ಹೂಜಿ, ಕೈ, ಕಾಲುಗಳು ಕುಂಚ ( ಚಿತ್ರ ಕಲಾ ಮೇಳ ಆಗಿರುವುದರಿಂದ ) ಕೆಳಗಿನ ಪಾದದ ಕುಂಚಗಳಲ್ಲಿ ಹೆಜ್ಜೆ – ಗೆಜ್ಜೆ ( ಈ ಪರ್ಬದಲ್ಲಿ ನೃತ್ಯವೂ ಇರುವುದರಿಂದ ) ಉಟ್ಟ ಲಂಗವು ಶಿಲಾ ಹಾಸುಗಳ ಪ್ರತಿರೂಪ ( ಈ ಪರ್ಬದಲ್ಲಿ ಶಿಲ್ಪ ಕಲೆಯೂ ಇರುವುದರಿಂದ ) ಎದೆ ಭಾಗದಲ್ಲಿ ಕ್ಯಾಮೆರಾ ಲೆನ್ಸ್ ( ಈ ಪರ್ಬದಲ್ಲಿ ಛಾಯಾ ಚಿತ್ರ ಪ್ರದರ್ಶನವೂ ಇರುವುದರಿಂದ ) ಇದೆಲ್ಲರ ಪ್ರತೀಕವಾಗಿ ಈ ಚಿತ್ರವನ್ನು ರಚಿಸಲಾಗಿದೆ.
ಬನ್ನಿ ಕಲಾ ಪರ್ಬ ನಿಮ್ಮದೇ…ಬಣ್ಣದ ಲೋಕದಲ್ಲಿ ಸಂಭ್ರಮಿಸೋಣ. ನಿಮ್ಮ ಬೆಂಬಲವೇ ಈ ಪರ್ಬದ ಯಶಸ್ಸು
LATEST NEWS
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Published
1 hour agoon
22/11/2024By
NEWS DESK3ಮಂಗಳೂರು/ಬೆಂಗಳೂರು: ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಈಗಾಗಲೇ ಮುಗಿದಿದ್ದು, ನಾಳೆ ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳ ಸೋಲು, ಗೆಲುವಿನ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನವೆಂಬರ್ 23ಕ್ಕೆ ನಿರ್ಧಾರವಾಗಲಿದ್ದು, ಈಗಾಗಲೇ ಎಕ್ಸಿಟ್ ಪೋಲ್ ಸಮೀಕ್ಷೆಯು ಬಂದಿದೆ. ಮೂರು ಕ್ಷೇತ್ರಗಳಲ್ಲಿ 2 ಕ್ಷೇತ್ರವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಒಂದರಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ಇದನ್ನೂ ಓದಿ:ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾ*ವು: ಮೂವರ ಬಂಧನ
ಜಿದ್ದಾಜಿದ್ದಿನ ಕ್ಷೇತ್ರವಾದ ಚೆನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ. ಯೋಗೆಶ್ವರ್ ಸೋಲಲಿದ್ದು, ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಕಾಣಲಿದ್ದಾರೆ ಎಂಬ ಲೆಕ್ಕಚಾರವಿದೆ. ಹೀಗಾಗಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಆದರೆ ಕಾಂಗ್ರೇಸ್ ನ ಡಿಕೆ ಬ್ರದರ್ಸ್ ಗೆ ಚನ್ನಪಟ್ಟಣ ಕ್ಷೇತ್ರ ತಮ್ಮ ಪ್ರತಿಷ್ಥೆಯ ಕಣವಾಗಿದೆ.
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ. ಈ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಸ್ಪರ್ಧಿಸಿದ್ದ ಅನ್ನಪೂರ್ಣ ತುಕರಾಂ ಜಯ ಗಳಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಈ ಮೂಲಕ ಕಾಂಗ್ರೆಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಂಡಂತಾಗುತ್ತದೆ.
ಮುಸ್ಲಿಂ ಪ್ರಾಬಲ್ಯವಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯುತರ ಮತಗಳೇ ನಿರ್ಣಾಯಕವಾಗಿದೆ. ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಬಿಜೆಪಿ ಆಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಅವರ ವಿರುದ್ದ ಕಾಂಗ್ರೆಸ್ ನ ಯಾಸಿರ್ ಅಹಮಾದ್ ಖಾನ್ ಪಠಣ್ ಸ್ಪರ್ಧಿಸಿದ್ದಾರೆ. ಈ ಬಾರಿ ಶಿಗ್ಗಾಂವಿಯಲ್ಲಿ ಮತದಾರರು ಬಿಜೆಪಿಯತ್ತ ವಾಲಿದ್ದಾರೆ. ಆ ಮೂಲಕ ಭರತ್ ಬೊಮ್ಮಾಯಿ ಗೆಲ್ಲುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ.
ಒಂದು ಕಡೆ ಕಾಂಗ್ರೆಸ್ ಗೆ ಈ ಉಪಚುನಾವಣೆಯ ಗೆಲುವು ಪ್ರತಿಷ್ಠೆಯ ಕಣವಾದರೆ, ಬಿಜೆಪಿ- ಜೆಡಿಎಸ್ ಗೆ ಮೂರು ಕ್ಷೇತ್ರವನ್ನು ಗೆಲ್ಲುವುದರ ಮೂಲಕ ಸರ್ಕಾರದ ವೈಫಲ್ಯವನ್ನು ತೋರಿಸುವ ಪ್ರಯತ್ನವಾಗಲಿದೆ. ಇದಕ್ಕೆಲ್ಲಾ ನಾಳೆಯ ಫಲಿತಾಂಶ ಉತ್ತರ ನೀಡಲಿದೆ.
LATEST NEWS
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
ಶೀಘ್ರದಲ್ಲೇ ಉಬರ್ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ