ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂರು ನಾಲ್ಕು ದಿನಗಳಿಂದ ಗ್ರಾಮ ಜಲಾವೃತಗೊಂಡು ಕೃಷಿ ಭೂಮಿಗೆ ನೀರು ನುಗ್ಗಿ ನೂರಾರು ಎಕರೆ ಕೃಷಿಭೂಮಿ ನೀರಿನಲ್ಲಿ ಮುಳುಗಡೆಯಾದ ಘಟನೆ ಉಡುಪಿಯ ಬೈಂದೂರಿನ ನಾವುಂದದಲ್ಲಿ ನಡೆದಿದೆ.
ರೈಲ್ವೆ ಮಾರ್ಗದ ಮಧ್ಯ ನೀರು ಹೋಗುವ ದಾರಿ ಎತ್ತರವಾಗಿದ್ದು ನೀರು ಸರಿಯಾಗಿ ಹೊಳೆ ಸೇರುತ್ತಿಲ್ಲ. ಅಲ್ಲಿ ಇರುವ ರಾಜಕಾಲುವೆ ಕೂಡಾ ಕಿರಿದಾಗಿದ್ದು ಅನೇಕ ರೀತಿಯಲ್ಲಿ ತೊಂದರೆಗಳಾಗುತ್ತಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಗ್ರಾಮಸ್ಥರು ‘ಈ ಸಮಸ್ಯೆ ಬಗ್ಗೆ ಸ್ಥಳೀಯ ಪಂಚಾಯತ್‌ನಲ್ಲಿ ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ.
ಇದರಿಂದಾಗಿ ನಾಟಿ ಮಾಡಿದ ಕೃಷಿಭೂಮಿ ಹಾಳು ಬೀಳುವಂತಾಗಿದೆ, ನೆಟ್ಟಿ ಮಾಡುವ ಹಲವು ಗದ್ದೆಗಳು ನೀರಿನಲ್ಲಿ ಕೊಳೆತು ಹೋಗಿದ್ದು ಇನ್ನಾದರೂ ಸಂಬಂಧ ಪಟ್ಟವರು ಈ ಭಾಗದ ರೈತರಿಗೆ ಕೃಷಿ ಮಾಡಲು ಸಹಾಯ ಆಗುವ ಹಾಗೆ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.