Friday, August 12, 2022

ಅಕ್ರಮ ಜಾನುವಾರು ಮಾಂಸ ಸಾಗಾಟ: ತಲಪಾಡಿಯಲ್ಲಿ ಇಬ್ಬರು ವಶಕ್ಕೆ

ಮಂಗಳೂರು: ಕೇರಳ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಕಾರಿನಲ್ಲಿ ಜಾನುವಾರು ಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣಾಧಿಕಾರಿ ತಂಡದ ಪೊಲೀಸರು ತಲಪಾಡಿಯಲ್ಲಿ ಬಂಧಿಸಿ, ಅವರಿಂದ ಸಾಗಾಟಕ್ಕೆ ಬಳಸಿದ ಓಮ್ನಿ ಕಾರು ಸಹಿತ 200 ಕೆ.ಜಿ ದನದ ಮಾಂಸ ವಶಕ್ಕೆ ಪಡೆದುಕೊಂಡಿದ್ದಾರೆ.


ಉಪ್ಪಳ ಮೂಸೋಡಿ ಅಡಕ ನಿವಾಸಿ ಮಹಮ್ಮದ್ ನೌಫಾಲ್ ಹಾಗೂ
ಮಂಜೇಶ್ವರ ಹೊಸಬೆಟ್ಟು ನಿವಾಸಿ ಮಹಮ್ಮದ್ ಆಸೀಫ್ ಬಂಧಿತರು.

ಇಬ್ಬರು ಮಂಗಳೂರಿನಲ್ಲಿ ಮಾರಾಟ ನಡೆಸಲು ಮಾಂಸವನ್ನು ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಲಪಾಡಿ ಬಳಿ ತಡೆದು ತಪಾಸಣೆ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...

ಉಳ್ಳಾಲ: ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಕಿಂಡರ್‌ ಗಾರ್ಡನ್‌ ಶಿಕ್ಷಕಿಯ ಡೆಡ್‌ಬಾಡಿ ಬಾವಿಯಲ್ಲಿ ಪತ್ತೆ

ಮಂಗಳೂರು: ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಲಿಟಲ್ ಕಿಂಡರ್ ಗಾರ್ಡನಿನ ಶಿಕ್ಷಕಿ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.ಮೃತರನ್ನು ಹರಿಣಾಕ್ಷಿ(50) ಎಂದು ಗುರುತಿಸಲಾಗಿದೆ.ಇಂದು ಬೆಳಗ್ಗೆ ಮಕ್ಕಳು ಎದ್ದಾಗ ತಾಯಿ ಹರಿಣಾಕ್ಷಿ ಮನೆಯಲ್ಲಿ...

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...