Connect with us

    International news

    ಹೋಟೆಲ್ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಸಾವು; ಘಟನೆಗೂ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ಯಾಕೆ?

    Published

    on

    ಮಂಗಳೂರು/ಅರ್ಜೆಂಟೀನಾ : ಹೋಟೆಲ್​ ಕೊಠಡಿಯ ಬಾಲ್ಕನಿಯಿಂದ ಬಿದ್ದು ಬ್ರಿಟನ್​ನ ಖ್ಯಾತ ಪಾಪ್ ಗಾಯಕ ಲಿಯಾಮ್ ಪಾಯ್ನ್ ಮೃ*ತಪಟ್ಟಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್​ನಲ್ಲಿ ತಾನು ತಂಗಿದ್ದ ಹೋಟೆಲ್​ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾ*ವನ್ನಪ್ಪಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು, ಮಾತ್ರವಲ್ಲದೇ ಅವರ ಸಾ*ವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಪೊಲೀಸರ ಹೇಳಿಕೆ ಏನು?

    ಬೋನಸ್ ಐರಿಸ್ ಪೊಲೀಸರು ಗಾಯಕನ ಸಾ*ವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಲಿಯಾಮ್, ನಗರದ ಕಾಸಾ ಸರ್ ಹೋಟೆಲ್​ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾ*ವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಬೋನಸ್ ಐರಿಸ್ ಭದ್ರತಾ ಮುಖ್ಯಸ್ಥ ಮಾಹಿತಿ ನೀಡಿ, ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಸ್ವಭಾವ ಹೊಂದಿದ್ದ. ಜೊತೆಗೆ ಮಾ*ದಕ ದ್ರವ್ಯ ವ್ಯಸನಿಯಾಗಿದ್ದ, ಮಾ*ದಕ ವಸ್ತು ಸೇವಿಸಿಯೇ ಆತ ಈ ಕೃ*ತ್ಯ ಎಸಗಿದ್ದಾನೆ ಎಂದಿದ್ದಾರೆ.

    ಹೋಟೆಲ್ ನವರು ಪೊಲೀಸರಿಗೆ ಕರೆ ಮಾಡಿದ್ಯಾಕೆ?

    ಲಿಯಾಮ್ ನಿ*ಧನ ಹೊಂದುವುದಕ್ಕೂ ಕೆಲ ಸಮಯ ಮುಂಚೆ ಕಾಸಾ ಸರ್ ಹೋಟೆಲ್​ನ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ‘ನಮ್ಮ ಹೋಟೆಲ್​ ನಲ್ಲಿರುವ ವ್ಯಕ್ತಿ ಬಹಳ ಗಲಾಟೆ ಮಾಡುತ್ತಿದ್ದಾನೆ, ಹೋಟೆಲ್​ನ ವಸ್ತುಗಳನ್ನು ಹಾಳು ಮಾಡುತ್ತಿದ್ದಾನೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ನೀವು ಈಗಲೇ ಇಲ್ಲಿಗೆ ಬನ್ನಿ’ ಎಂದು ಮಾತನಾಡಿದ್ದಾರೆ. ಈ ಕರೆ ದಾಖಲಾಗಿದೆ. ಕೆಲವರ ಆರೋಪದ ಪ್ರಕಾರ, ಪೊಲೀಸರು ಬಂದು ಬೆದರಿಸಿದ್ದರಿಂದಲೇ ಲಿಯಾಮ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

    ಮ*ದ್ಯ ವ್ಯಸನಿಯಾಗಿದ್ದ ಲಿಯಾಮ್ :

    ಲಿಯಾಮ್ ತಾನು ಮ*ದ್ಯ ವ್ಯಸನದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. 2023 ರಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದ ಲಿಯಾಮ್, ಮ*ದ್ಯ ವ್ಯಸನದಿಂದ ಸಮಸ್ಯೆ ಅನುಭವಿಸುತ್ತಿದ್ದೆ. ಚಿಕಿತ್ಸೆ ಬಳಿಕ ಕಳೆದ ಆರು ತಿಂಗಳಿನಿಂದಲೂ ನಾನು ಮ*ದ್ಯ ಸೇವಿಸಿಲ್ಲ ಎಂದಿದ್ದರು. ಆದರೆ ಈಗ ಹಠಾತ್ತನೆ ಮ*ದ್ಯ ಹಾಗೂ ಮಾ*ದಕ ವಸ್ತು ಸೇವಿಸಿ ಲಿಯಾಮ್ ನಿಧ*ನ ಹೊಂದಿದ್ದಾರೆ ಎಂಬ ವರದಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

    ಇದನ್ನೂ ಓದಿ : ತಿಂಗಳಲ್ಲೇ ಬಯಲಾಯ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಟ್ಟಿದ್ದ ಸೀರೆಯ ಸತ್ಯ!

    ಲಿಯಾಮ್, ಬ್ರಿಟನ್​ನ ಖ್ಯಾತ ಪಾಪ್ ಗಾಯಕರಲ್ಲಿ ಒಬ್ಬರು. ಬ್ರಿಟನ್​ನ ಖ್ಯಾತ ಸಂಗೀತ ಬ್ಯಾಂಡ್ ಒನ್ ಡೈರೆಕ್ಷನ್​ನ ಸದಸ್ಯರಾಗಿದ್ದರು. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  ಅವರಿಗೆ ಮಾಜಿ ಸಂಗಾತಿ ಶೆರಿಲ್‌ ಅವರಿಂದ 7 ವರ್ಷದ ಮಗನಿದ್ದಾನೆ.

    International news

    WATCH VIDEO : ಕಾಳಿಗೆ ಮೋದಿ ನೀಡಿದ್ದ ಕಿರೀಟಕ್ಕೆ ಕನ್ನ ಹಾಕಿದ ಕಳ್ಳ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಖದೀಮನ ಕೈಚಳಕ

    Published

    on

    ಮಂಗಳೂರು/ ಬಾಂಗ್ಲಾ : ಬಾಂಗ್ಲಾದೇಶದ ಜೇಶೋರೇಶ್ವರಿ ದೇವಸ್ಥಾನದಿಂದ ಕಾಳಿ ಮಾತೆಯ ಕಿರೀಟವನ್ನು ಕಳವು ಮಾಡಲಾಗಿದೆ. ಬೆಳ್ಳಿ ಮತ್ತು ಚಿನ್ನದ ಲೇಪಿತ ಕಿರೀಟವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಈ ಕಿರೀಟಕ್ಕೆ ಕಳ್ಳನ್ನೊಬ್ಬ ಕನ್ನ ಹಾಕಿದ್ದಾರೆ. ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನರೇಂದ್ರ ಮೋದಿ ಅವರು 2021ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಜೇಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಈ ಕಿರೀಟವನ್ನು ಕಾಳಿಗೆ ಉಡುಗೊರೆಯಾಗಿ ನೀಡಿದ್ದರು.

    ಆದರೀಗ ಕಾಳಿ ದೇವಿಗೆ ನೀಡಿದ್ದ ಈ ಉಡುಗೊರೆ ಕಿರೀಟವನ್ನು ಕಳವು ಮಾಡಲಾಗಿದೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಿರೀಟವನ್ನು ಪತ್ತೆ ಮಾಡಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

    ಇದನ್ನೂ ಓದಿ : Bigg Boss: ಕ್ರೇನ್ ಮೂಲಕ ನುಗ್ಗಿದ ಮುಸುಕುಧಾರಿಗಳು.. ಬಿಗ್​​ಬಾಸ್​ ಮನೆಯ ವಸ್ತುಗಳೆಲ್ಲ ಪೀಸ್​ ಪೀಸ್…
    ದೇವಾಲಯದ ಅರ್ಚಕ ಹಾಗೂ ದೇವಸ್ಥಾನ ಶುಚಿಗೊಳಿಸುವ ಸಿಬ್ಬಂದಿ ಕಾಳಿ ದೇವಿಯ ತಲೆಯಿಂದ ಕಿರೀಟ ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಬಾಂಗ್ಲಾದೇಶ ಪೊಲೀಸರು ಕಳ್ಳತನವಾಗಿದೆ ಎಂದು ಖಚಿತಪಡಿಸಿದ್ದು ತನಿಖೆಯನ್ನು ಆರಂಭಿಸಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

    Continue Reading

    International news

    ಪೋಲಿಯೋ ಲಿಸಿಕೆ ಅಭಿಯಾನಕ್ಕೆ ತಾಲಿಬಾನ್‌ ಅಡ್ಡಿ..!

    Published

    on

    ಮಂಗಳೂರು/ಅಫ್ಘಾನಿಸ್ತಾನ:  ಅಫ್ಘಾನಿಸ್ತಾನದಲ್ಲಿ 18 ಪೋಲಿಯೋ ಪ್ರಕರಣಗಳು ದೃಢಪಟ್ಟಿದ್ದು, ಇದರ ನಿರ್ಮೂಲನೆಗೆ ಸೂಕ್ತ ಕ್ರಮವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆದ್ರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಪೋಲಿಯೋ ರೋಗವನ್ನು ತೊಡೆದು ಹಾಕುವ ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡಿದೆ. ರಾಷ್ಟ್ರ ವ್ಯಾಪಿ ನಡೆಯಬೇಕಾಗಿದ್ದ ಪೋಲಿಯೋ ಲಸಿಕೆ ಅಭಿಯಾನವನ್ನೇ  ತಾಲಿಬಾನ್ ಸರ್ಕಾರ ರದ್ಧು ಮಾಡಿದೆ.

    ಕಳೆದ ವರ್ಷದಿಂದ ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಪ್ರಕರಣ ದಾಖಲಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಕ್ತ ಆರೋಗ್ಯ ಕ್ರಮಕ್ಕೆ ಸೂಚನೆ ನೀಡಿತ್ತು. ಆದ್ರೆ, ಕಾರಣ ನೀಡದ ತಾಲಿಬಾನ್ ಸರ್ಕಾರ ಲಿಸಿಕಾ ಅಭಿಯಾನಕ್ಕೆ ತಡೆ ನೀಡಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಆರೋಗ್ಯ ಅಧಿಕಾರಿಯೊಬ್ಬರು ದಿ ಗಾರ್ಡಿಯನ್‌ ಮಾಧ್ಯಮಕ್ಕೆ ಮಾಹಿತಿ ನೀಡಿ, “ಪ್ರಸ್ತುತ ಸರ್ಕಾರದ ನಾಯಕತ್ವವು ಮನೆ ಮನೆಗೆ ಲಸಿಕಾ ಅಭಿಯಾನ ನಡೆಸದಂತೆ ಆದೇಶಿಸಿದೆ” ಎಂದಿದ್ದಾರೆ. ಮನೆ ಮನೆ ಅಭಿಯಾನದ ಬದಲಾಗಿ ಮಸೀದಿಗಳಲ್ಲಿ ಪೋಲಿಯೋ ಲಸಿಕೆ ಹಾಕಿಸಲು ಸೂಚನೆ ನೀಡಿದೆ.

    ಪೋಲಿಯೋ ನಿರ್ಮೂಲನೆ ಯಶಸ್ವಿಯಾಗಬೇಕು ಅಂದ್ರೆ ಮನೆ ಮನೆಗೆ ತಲುಪಿ ಲಸಿಕೆ ನೀಡಬೇಕಾಗಿದೆ. ಆದ್ರೆ, ತಾಲಿಬಾನ್ ಆಡಳಿತದ ಆದೇಶದಿಂದ ದೇಶವು ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ : ಸೆಪ್ಟಂಬರ್ 29 ರಿಂದ ಆಕಾಶದಲ್ಲಿ ಎರಡು ಚಂದ್ರ ಗೋಚರ..! ಏನಿದು ವಿಸ್ಮಯ..?

    ವಿಶ್ವಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವು ವಿಶ್ವದಲ್ಲಿ ಪೋಲಿಯೋ ಉಳಿಸಿಕೊಂಡಿರುವ ಎರಡು ದೇಶಗಳಾಗಿವೆ. ಪೋಲಿಯೋ ಮುಕ್ತ ಜಗತ್ತಿಗಾಗಿ ನಿರಂತರ ಪ್ರಯತ್ನಗಳ ಹೊರತಾಗಿಯೂ ಈ ಎರಡು ದೇಶಗಳಲ್ಲಿ ಇದು ಅಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪೋಲಿಯೋ ಪ್ರಕರಣ ಈ ಎರಡು ದೇಶದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    Continue Reading

    International news

    ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ದಿಸ್ಸನಾಯಕೆ ಪ್ರಮಾಣವಚನ

    Published

    on

    ಮಂಗಳೂರು/ಕೊಲಂಬೊ : ಮಾರ್ಕ್ಸ್ ವಾದಿ ನಾಯಕ ಅನುರಾ ಕುಮಾರ ದಿಸ್ಸನಾಯಕೆ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಸೋಮವಾರ(ಸೆ.23) ಪ್ರಮಾಣವಚನ ಸ್ವೀಕರಿಸಿದ್ದಾರೆ. 56 ವರ್ಷದ ದಿಸ್ಸ ನಾಯಕೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರಮಾಣವಚನ ಬೋಧಿಸಿದರು.

    ನ್ಯಾಷನಲ್ ಪೀಪಲ್ಸ್ ಪವರ್ ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್ ವಾದಿ ಜನತಾ ವಿಮುಕ್ತಿ ಪೆರೆಮುನಾ ಪಕ್ಷದಿಂದ ದಿಸ್ಸನಾಯಕೆ ಕಣಕ್ಕಿಳಿದಿದ್ದರು. ವಿರೋಧ ಪಕ್ಷ ಸಮಗಿ ಜನ ಬಲವೇಗಯ ಅಭ್ಯರ್ಥಿ ಸಜಿತ್ ಪ್ರೇಮದಾಸ್ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ : WATCH: ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    2022ರಲ್ಲಿ ಎದುರಾದ ತೀವ್ರ ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾ ಚೇತರಿಸಿಕೊಳ್ಳುತ್ತಿದೆ. ದೇಶವನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುವುದಾಗಿ ಪ್ರಚಾರದ ವೇಳೆ ನಿರ್ಗಮಿತ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಚಾರದ ವೇಳೆ ಹೇಳಿಕೊಂಡಿದ್ದರು. ಮರು ಆಯ್ಕೆ ಬಯಸಿದ್ದ ಸಿಂಘೇ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.  ಶನಿವಾರ(ಸೆ.21) ಮತದಾನ ನಡೆದಿದ್ದು. ಭಾನುವಾರ ಫಲಿತಾಂಶ ಪ್ರಕಟವಾಗಿದೆ.

     

     

    Continue Reading

    LATEST NEWS

    Trending