Connect with us

    LATEST NEWS

    ಉಡುಪಿ : ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಇನ್ನಿಲ್ಲ

    Published

    on

    ಉಡುಪಿ : ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ (58) ನಿನ್ನೆ(ಸೆ.28) ನಿಧ*ನರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

    ಅದ್ಭುತ ಛಾಯಾಗ್ರಾಹಕ :

    ಗುರುದತ್ ಕಾಮತ್, ತಮ್ಮ ಅದ್ಭುತ ಕೈಚಳಕದ ಮೂಲಕ ಛಾಯಾಗ್ರಹಣದಲ್ಲಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಕಲಾವಿದರು. ನಿರಂತರ ಸಂಚಾರ ಹಾಗೂ ಪ್ರಕೃತಿಯ ಚಿತ್ರಗಳನ್ನು ಅಚ್ಚಳಿಯದಂತೆ ಸೆರೆಹಿಡಿದವರು.

    ನೂರಾರು ಛಾಯಾಗ್ರಹಕರಿಗೆ ಮಾರ್ಗದರ್ಶನ ಮಾಡಿದ ಗುರುಗಳು. ಇವರಿಂದ ಪರೋಕ್ಷ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಯಾವುದೇ ಹೊಸ ಕ್ಯಾಮರಾಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ, ಗುರುದತ್ ಅವರಿಂದ ಸಲಹೆ ಸೂಚನೆ ಪಡೆಯುವಷ್ಟರ ಮಟ್ಟಿಗೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.

    ಸ್ವಲ್ಪವೂ ಅಹಂಕಾರವಿರದ, ಸಜ್ಜನರಾಗಿದ್ದರು. ಇವರ ಛಾಯಾಗ್ರಹಣದ ವಿರಾಟ್ ಸ್ವರೂಪ ತಿಳಿದುಬಂದದ್ದು ಕಳೆದ ಶಿರೂರು ಮಠದ ಪರ್ಯಾಯದಲ್ಲಿ. ಆಗಿನ್ನೂ ತಂತ್ರಜ್ಞಾನ ಅಷ್ಟೊಂದು ಬೆಳೆದಿರದ ಕಾಲದಲ್ಲಿ, ಶಿರೂರು ಮಠದ ಹೆಸರಿನಲ್ಲಿ ವೆಬ್ಸೈಟ್ ಆರಂಭಿಸಿ ಪ್ರತಿದಿನ ನೂರಾರು ಅದ್ಭುತ ಚಿತ್ರಗಳನ್ನು ಸೆರೆಹಿಡಿದು ಕೃಷ್ಣ ಮಠದ ಆಚರಣೆಗಳಿಗೆ ಹೊಸ ನೋಟ ಕೊಟ್ಟವರು ಗುರುದತ್ ಕಾಮತ್.

    ಇದನ್ನೂ ಓದಿ : ಬಿಗ್ ಬಾಸ್ ಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹಿಂದೂ ಫೈರ್ ಬ್ರಾಂಡ್ ಚೈತ್ರಾ

    ನಂತರದ ದಿನಗಳಲ್ಲಿ ಸೋದೆ ಸ್ವಾಮೀಜಿಯೊಂದಿಗೆ ನಿರಂತರ ಸಂಚಾರ ನಡೆಸಿ ಸೆರೆ ಹಿಡಿದಿರುವ ಅದ್ಭುತ ಚಿತ್ರಗಳು ಧಾರ್ಮಿಕ ಕ್ಷೇತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆಗಳಾಗಿವೆ. ನಿರಂತರ ಸಂಚಾರಿ, ಮಹಾಮೌನಿ, ಕಲಾವಿದ ಮನಸ್ಸಿನ ಛಾಯಾಗ್ರಹಕ ಗುರುದತ್ ಕಾಮತ್ ಇನ್ನಿಲ್ಲ.

    LATEST NEWS

    ಹೈವೇಯಲ್ಲಿ ದರೋಡೆ; 1 ಕೋಟಿ ದೋಚಿದ ಕಳ್ಳರು

    Published

    on

    ಮಂಗಳೂರು/ತುಮಕೂರು: ದುಡಿದು ತಿನ್ನುವ ವಯಸ್ಸಿನಲ್ಲಿ ಸೋಮಾರಿಗಳಂತೆ ಅಡ್ಡ ದಾರಿ ಹಿಡಿದು ಯವ ಸಮುದಾಯ ಹಾಳಾಗುತ್ತಿರುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾರು ಅಡ್ಡಗಟ್ಟಿ ಒಂದು ಕೋಟಿ ಹಣವನ್ನ ಕಳ್ಳರು ದೋಚಿದ ಘಟನೆ ತುಮಕೂರು ತಾಲ್ಲೂಕಿನ ನೆಲಹಾಳ್‌ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿನ್ನೆ(ಶನಿವಾರ) ನಡೆದಿದೆ.


    1 ಕೋಟಿ ಹಣ ದರೋಡೆ:
    ಬೆಳಗಿನ ಜಾವ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು 350 ಕೆ.ಜಿ ಬೆಳ್ಳಿ ಗಟ್ಟಿ, 1 ಕೋಟಿ ಹಣ ದರೋಡೆ ಮಾಡಿದ್ದಾರೆ.
    ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ಗೆ ಸೇರಿದ ಹಣ ಮತ್ತು ಬೆಳ್ಳಿಯನ್ನ ದರೋಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.

    ದರೋಡೆ ಮಾಡಿ ಚಿನ್ನ,ಬೆಳ್ಳಿಯೊಂದಿಗೆ ಪರಾರಿ:
    ಅನಿಲ್‌ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್‌ ಜೊತೆಯಲ್ಲಿದ್ದರು. ನೆಲಹಾಳ್ ಬಳಿ ಮೂರು ಕಾರುಗಳಲ್ಲಿ ಬಂದ ಏಳೆಂಟು ಕಳ್ಳರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಕಾರಿನಿಂದ ಇಳಿದು ಬಾಲಾಜಿ, ಗಣೇಶ್‌, ವಿನೋದ್‌ ಕಳ್ಳರಿಂದ ಎಸ್ಕೇಪ್‌ ಆಗಿದ್ದಾರೆ.
    ಅನಿಲ್‌ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದ ಕಳ್ಳರು, ಸ್ವಲ್ಪ ದೂರ ಕರೆದೊಯ್ದು ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೇನಹಳ್ಳಿ ಬಳಿ ಅನಿಲ್‌ ಮತ್ತು ಕಾರನ್ನು ಬಿಟ್ಟು ಪರಾರಿಯಾಗಿರುವ ಕಳ್ಳರು‌. ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ.
    ಈ ಸಂಬಂಧ ಅನಿಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಅನಿಲ್‌ ತಮಿಳುನಾಡಿನ ಸೇಲಂನಲ್ಲಿ ಹತ್ತು ವರ್ಷದಿಂದ ಬೆಳ್ಳಿ ಆಭರಣ ಮಾರಾಟ ಮಳಿಗೆ ವ್ಯಾಪಾರ ಮಾಡುತ್ತಿದ್ದಾರೆ.
    ಕಳ್ಳರು ಎಲ್ಲಿಂದ ಬಂದಿದ್ದರು, ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    dehali

    5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮ*ಹತ್ಯೆ

    Published

    on

    ಮಂಗಳೂರು/ದೆಹಲಿ: ಇತ್ತೀಚೆಗೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸಾ*ವಿಗೆ ಶರಣಾಗುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದೀಗ 19 ವರ್ಷದ ವಿದ್ಯಾರ್ಥಿನಿ ಕಟ್ಟಡದ 5ನೇ ಮಹಡಿಯಿಂದ ಹಾ*ರಿ ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಿನ್ನೆ (ಸೆ.28) ಮಧ್ಯಾಹ್ನ ನಡೆದಿದೆ.


    ಅವಳ ಯಾವುದೇ ಸೂ*ಸೈಡ್ ನೋಟ್ ಪತ್ತೆಯಾಗಿಲ್ಲ. ಕೇವಲ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಆರು ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ನಿಂತಿರುವುದು ಕಂಡುಬಂದಿದೆ.
    ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿಯನ್ನು ಬಾತ್ರಾ ಆಸ್ಪತ್ರೆಗೆ ಕರೆದೊಯ್ದು ನಂತರ ಮಜೀದಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಸಾವ*ನ್ನಪ್ಪಿದ್ದಾಳೆ.ಘಟನಾ ಸ್ಥಳದಲ್ಲಿ ಕ್ರೈಂ ತಂಡ ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರ*ಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಪ್ರ*ಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Continue Reading

    DAKSHINA KANNADA

    ಕೆಸಿಸಿಐ ನೂತನ ಅಧ್ಯಕ್ಷರಾಗಿ ಆನಂದ್ ಜಿ.ಪೈ ನೇಮಕ

    Published

    on

    ಮಂಗಳೂರು : 2024-25 ನೇ ಸಾಲಿನ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ನೂತನ ಅಧ್ಯಕ್ಷರಾಗಿ ಆನಂದ್ ಜಿ.ಪೈ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 27 ರಂದು ಶುಕ್ರವಾರ ನಡೆದ ಕೆಸಿಸಿಐನ 84 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

    ಭಾರತ್ ಗ್ರೂಪ್‌ನ ಕಾರ್ಯತಂತ್ರದ ಯೋಜನೆ ಮತ್ತು ವೈವಿಧ್ಯೀಕರಣದ ಉಸ್ತುವಾರಿ ವಹಿಸಿಕೊಂಡರು. ಇವರು ಯುಎಸ್‌ನ ಮಿಚಿಗನ್‌ ನಲ್ಲಿರುವ ಆಂಡ್ರ್ಯೂಸ್ ವಿಶ್ವವಿದ್ಯಾಲಯದಿಂದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಜಿನಿಯರ್ ಆಗಿ ಪದವಿ ಪಡೆದರು. ನಂತರ ಅದೇ ವಿಶ್ವವಿದ್ಯಾಲಯದಿಂದ ಸಾಫ್ಟ್‌ವೇರ್ ಇಂಜಿನಿಯರ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಇದನ್ನೂ ಓದಿ : ಉಡುಪಿ : ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಇನ್ನಿಲ್ಲ

    2024-25 ನೇ ಸಾಲಿನ ಇತರ ಪದಾಧಿಕಾರಿಗಳ ವಿವರ :

    ಉಪಾಧ್ಯಕ್ಷರಾಗಿ ಪಿ.ಬಿ.ಅಹ್ಮದ್ ಮುದಸ್ಸರ್, ಗೌರವ ಕೋಶಾಧಿಕಾರಿಯಾಗಿ ಅಬ್ದುರ್ ರಹಮಾನ್ ಮುಸ್ಬಾ , ಗೌರವ ಕಾರ್ಯದರ್ಶಿಯಾಗಿ ಅಶ್ವಿನ್ ಪೈ ಮಾರೂರ್, ಆದಿತ್ಯ ಪದ್ಮನಾಭ ಪೈ ಜೊತೆಗೆ 12 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.

    Continue Reading

    LATEST NEWS

    Trending