ನವದೆಹಲಿ: ಅಗ್ನಿಪಥ ಯೋಜನೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯವು 10 ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಿದೆ.
ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸಿದ ಮತ್ತು ಹಿಂಸಾತ್ಮಕ ಪ್ರತಿಭಟನೆ ಆಯೋಜಿಸಿದ ಆರೋಪದ ಮೇಲೆ ವಿವಿಧ ರಾಜ್ಯಗಳಲ್ಲಿ 10 ಜನರನ್ನು ಬಂಧಿಸಿದೆ.
ಇದೇ ವೇಳೆ ಸುಳ್ಳು ಸುದ್ದಿಗಳನ್ನು ಯಾರಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅನುಮಾನ ಸೃಷ್ಠಿಯಾದರೆ ಪಿಐಬಿ ಸುಳ್ಳು ಸುದ್ದಿ ಪರಿಶೀಲನಾ ಸಂಖ್ಯೆಯಾದ 8799711259 ಮೊಬೈಲ್ ಸಂಖ್ಯೆಗೆ ಸಂದೇಶ ರವನಿಸಿ ದೂರು ನೀಡಬಹುದು.
ಹಾಗೂ ಅನುಮಾನಗಳಿದ್ದಲ್ಲಿ ಕೂಡಾ ಬಗೆಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಿಹಾರ ಹಾಗೂ ತೆಲಂಗಾಣದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲು ವಾಟ್ಸಾಪ್‌ನಲ್ಲಿ ಪ್ರಚೋದಿಸಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದ ಕೂಡಲೇ ಕೇಂದ್ರ ಈ ಕ್ರಮ ಕೈಗೊಂಡಿದೆ.