ಮಂಗಳೂರು: ಇಂಡಿಗೊ ವಿಮಾನ ಸಂಸ್ಥೆಯು ಮಂಗಳೂರು– ಮುಂಬೈ ನಡುವೆ ನಿತ್ಯ ವಿಮಾನ ಯಾನ ಸೇವೆಯನ್ನು ಭಾನುವಾರದಿಂದ ಆರಂಭಿಸಿದೆ.
ಇಂಡಿಗೊ ಸಂಸ್ಥೆಯ 6ಇ–5236 ಸಂಖ್ಯೆಯ ವಿಮಾನ ಬೆಳಿಗ್ಗೆ 8.50ಕ್ಕೆ ಮುಂಬೈನಿಂದ ಹೊರಟು ಬೆಳಿಗ್ಗೆ 10.20ಕ್ಕೆ ಮಂಗಳೂರನ್ನು ತಲುಪಲಿದೆ.
ಮತ್ತು 6ಇ 5237 ಸಂಖ್ಯೆಯ ವಿಮಾನ ಮಂಗಳೂರಿನಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಮುಂಬೈ ತಲುಪಲಿದೆ.
ಈ ಸೇವೆಗಾಗಿ ಸಂಸ್ಥೆಯು ಏರ್‌ಬಸ್ ಎ 320 ಮಾದರಿಯ ವಿಮಾನಗಳನ್ನು ಬಳಸಲಿದೆ.
ಭಾನುವಾರ ಮುಂಬೈನಿಂದ ನಗರಕ್ಕೆ ಬಂದ ವಿಮಾನದಲ್ಲಿ 55ಮಂದಿ ಪ್ರಯಾಣಿಸಿದ್ದರು.
ಬಳಿಕ ಮಂಗಳೂರಿನಿಂದ ಮುಂಬೈಗೆ ತೆರಳಿದ ವಿಮಾನದಲ್ಲಿ ಒಂದು ಶಿಶು ಸೇರಿ 143 ಮಂದಿ ಪ್ರಯಾಣಿಸಿದ್ದರು.
ಈ ಹೊಸ ಸೇವೆ ಸಲುವಾಗಿ ಶುಕ್ರವಾರ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಮೊದಲ ಪ್ರಯಾಣದಲ್ಲಿ ಇಬ್ಬರು ಶಿಶುಗಳು ಸಹಿತ 88 ಮಂದಿ ಮುಂಬೈನಿಂದ
ಮಂಗಳೂರಿಗೆ ಹಾಗೂ 99 ಮಂದಿ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.