Connect with us

    ರಿಲಾಯನ್ಸ್ ಜೀಯೋ ಜೊತೆ ಕೈ ಮಿಲಾಯಿಸಿದ ಫೇಸ್ ಬುಕ್ ..

    Published

    on

    ರಿಲಾಯನ್ಸ್ ಜೀಯೋ ಜೊತೆ ಕೈ ಮಿಲಾಯಿಸಿದ ಫೇಸ್ ಬುಕ್ ..

    ನವದೆಹಲಿ: ಲಾಕ್ ಡೌನ್ ನಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆ ಕುಸಿತದ ಹಾದಿಯಲ್ಲಿದ್ದು, ಇದರ ಲಾಭವನ್ನು ವಿದೇಶಿ ಕಂಪೆನಿಗಳು ಪಡೆಯುತ್ತಿವೆ.

    ಈಗಾಗಲೇ ಎಚ್ ಡಿಎಫ್ ಸಿ ಬ್ಯಾಂಕ್ ನ ಶೇರುಗಳನ್ನು ಚೀನಾ ಮೂಲದ ಕಂಪೆನಿ ಖರೀದಿಸಿದ್ದು, ಈಗ ಇನ್ನೊಂದು ಕಂಪೆನಿ ಭಾರತ ಟೆಲಿಕಾಂ ದಿಗ್ಗಜ ರಿಲಯನ್ಸ್ ಕಂಪೆನಿಯ ಷೇರುಗಳನ್ನು ಖರೀದಿಯಲ್ಲಿ ತೊಡಗಿದೆ.

    ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಸಂಪರ್ಕ ಮಾಧ್ಯಮಗಳನ್ನು ಹೊಂದಿರುವ ಫೇಸ್ ಬುಕ್ ಭಾರತದ ಟೆಲಿಕಾಂ ದಿಗ್ಗಜ ದೇಶೀಯ ಸಂಸ್ಥೆಯಾದ ರಿಲಯನ್ಸ್ ಜಿಯೊದಲ್ಲಿ ಶೇ 9.9ರಷ್ಟು ಷೇರುಗಳನ್ನು ಖರೀದಿಸಿದೆ.

    ಫೇಸ್ ಬುಕ್ 43,574 ಕೋಟಿ ಹೂಡಿಕೆ ಮಾಡುವ ಮೂಲಕ ಜಿಯೊದಲ್ಲಿ ಶೇ 9.9ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ.

    ರಿಲಯನ್ಸ್ ಈ ವಹಿವಾಟಿನ ಕುರಿತು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

    ಭಾರತದ ಜನರ ಹಾಗೂ ಭಾರತದ ಆರ್ಥಿಕತೆಗೆ ಅಗತ್ಯವಿರುವುದನ್ನು ಪೂರೈಸುವ ಮೂಲಕ ಈ ಪಾಲುದಾರಿಕೆಯು ಭಾರತದ ಸರ್ವತೋಮುಖ ಬೆಳವಣಿಗೆಗೆ ಪುಷ್ಠಿ ನೀಡಲಿದೆ.

    ನಮ್ಮ ಗಮನ ಭಾರತದ 6 ಕೋಟಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು, 12 ಕೋಟಿ ರೈತರು, 3 ಕೋಟಿ ಸಣ್ಣ ಗಾತ್ರದ ವ್ಯಾಪಾರಿಗಳು, ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಇದರೊಂದಿಗೆ ಜನರಿಗೆ ಹಲವು ಡಿಜಿಟಲ್ ಸೇವೆಗಳ ಕುರಿತು ತಿಳಿಸಿಕೊಡುವುದು ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ರಿಯಲನ್ಸ್ ಜಿಯೊ 38.80 ಕೋಟಿ ಚಂದದಾರರನ್ನು ಹೊಂದಿದೆ. ಪ್ರಸ್ತುತ ಒಡಂಬಡಿಕೆಯಿಂದ ಫೇಸ್ ಬುಕ್ ಮತ್ತು ಜಿಯೊ ಎರಡೂ ಸಂಸ್ಥೆಗಳಿಗೆ ಲಾಭದಾಯವಾಗಲಿದೆ.

    ಫೇಸ್ ಬುಕ್ ಮತ್ತಷ್ಟು ಭಾರತದ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಚೀನಾದ ನಂತರ ಭಾರತ ಅತಿ ದೊಡ್ಡ ಇಂಟರ್ನೆಟ್ ಮಾರುಕಟ್ಟೆ ಹೊಂದಿದೆ.

    ಫೇಸ್ ಬುಕ್ ಭಾರತದಲ್ಲಿ 40 ಕೋಟಿಗೂ ಹೆಚ್ಚು ವಾಟ್ಸ್ಆ್ಯಪ್ ಬಳಕೆದಾರರನ್ನು ಹೊಂದಿದ್ದು, ಪಾವತಿ ಸೇವೆಗಳಿಗೆ ಚಾಲನೆ ನೀಡಲು ಯೋಜನೆ ರೂಪಿಸಿದೆ.

    ಉತ್ತಮ ಟೆಲಿಕಾಂ ಪಾಲುದಾರರನ್ನು ಹೊಂದುವ ಮೂಲಕ ಫೇಸ್ಬುಕ್ ಜನ ಸಮೂಹಕ್ಕೆ ತಲುಪುವುದು ಸುಲಭವಾಗಲಿದೆ.

    ಜಿಯೊ ಡಿಜಿಟಲ್ ಕಂಪನಿ ಮಾಡುವ ರಿಲಯನ್ಸ್ ನ ಮಹಾತ್ವಾಕಾಂಕ್ಷೆಗೆ ಈ ಒಪ್ಪಂದವು ಪೂರಕವಾಗಲಿದೆ. 2021ರ ಮಾರ್ಚ್ ವೇಳೆಗೆ ಶೂನ್ಯ ಸಾಲದ ಕಂಪನಿಯಾಗಿ ಹೊರಹೊಮ್ಮಲು ರಿಲಯನ್ಸ್ ಪ್ರಯತ್ನಿಸುತ್ತಿದೆ.

    ಭಾರತದಲ್ಲಿ ಇಂಟರ್ನೆಟ್ ಬಳಕೆದಾರರು 2022ರ ವೇಳೆಗೆ 85 ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹಳ್ಳ ಹಿಡಿದ ಸ್ಮಾರ್ಟ್‌ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್

    Published

    on

    ಮಂಗಳೂರು: ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್‌ ಪಾಸ್‌ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್‌ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.

    ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್‌ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.

    ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ; ಓರ್ವ ಬಂಧನ

    ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.

    Continue Reading

    LATEST NEWS

    11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ

    Published

    on

    ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ  ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.

    ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್​ ಮನೆಮದ್ದು ಟ್ರೈ ಮಾಡಿ

    ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    FILM

    ಕನ್ನಡದ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ

    Published

    on

    ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್‌ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು  ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.

    ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ  ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್‌ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್‌ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.

    ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!

    ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್‌ಮೆಂಟ್‌ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್‌ಮೆಂಟ್‌ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್‌ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್‌ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.

    Continue Reading

    LATEST NEWS

    Trending