Tuesday, July 5, 2022

ಟೊಮ್ಯಾಟೊದಲ್ಲಿ ಸ್ಫೋಟಕ ವಸ್ತು! ಗಡಿಭಾಗದಲ್ಲಿ ಭರ್ಜರಿ ಕಾರ್ಯಾಚರಣೆ!

ಟೊಮ್ಯಾಟೊದಲ್ಲಿ ಸ್ಫೋಟಕ ವಸ್ತು! ಗಡಿಭಾಗದಲ್ಲಿ ಭರ್ಜರಿ ಕಾರ್ಯಾಚರಣೆ

ಬೆಂಗಳೂರು: ಟೊಮ್ಯಾಟೊ ಬಾಕ್ಸ್​ನಲ್ಲಿ 7000 ಜಿಲೆಟಿನ್ ಸ್ಟಿಕ್​ಗಳು ಹಾಗೂ 7500 ಡಿಟೋನೇಟರ್​ಗಳು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಟೊಮ್ಯಾಟೊ ಸಾಗಿಸುವ ನೆಪದಲ್ಲಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕೇರಳ ಪೊಲೀಸರು  ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೊಯಮುತ್ತೂರ್​ನಿಂದ ಕೇರಳಕ್ಕೆ ಟೆಂಪೋದಲ್ಲಿ 30 ಬಾಕ್ಸ್​ ಟೊಮ್ಯಾಟೊ ಸಾಗಾಟ ಮಾಡಲಾಗುತ್ತಿತ್ತು.

ಟೊಮ್ಯಾಟೊ ತುಂಬಿದ್ದ ಬಾಕ್ಸ್​ಗಳಲ್ಲಿ ಜಿಲೆಟಿನ್ ಸ್ಟಿಕ್, ಡಿಟೋನೇಟರ್​ಗಳನ್ನು ಬಚ್ಚಿಟ್ಟು ಟೆಂಪೋದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಿಂದ ಕೇರಳದ ಅಲುವಾಕ್ಕೆ ಕೊಂಡೊಯ್ಯಲಾಗುತ್ತಿತ್ತು.

ಟೆಂಪೋವನ್ನು ಕೇರಳ ಪೊಲೀಸರು ಪರಿಶೀಲನೆ ನಡೆಸಿದಾಗ 7 ಬಾಕ್ಸ್​ನಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿವೆ.

ಟೆಂಪೋ ಚಾಲಕ ಪ್ರಭು ಹಾಗೂ ಮತ್ತೋರ್ವ ವ್ಯಕ್ತಿಯನ್ನು ತಮಿಳುನಾಡು ಹಾಗೂ ಕೇರಳ ಗಡಿಭಾಗ ವಾಳಯಾರ್ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...