Connect with us

LATEST NEWS

ಕೊರೊನಾ ಸೋಂಕಿನಿಂದ ಇಹಲೋಕ ತ್ಯಜಿಸಿದ ಖ್ಯಾತ ಹಿರಿಯ ಬಂಗಾಳ ನಟ ಸೌಮಿತ್ರ ಚಟರ್ಜಿ!

Published

on

ಕೊರೊನಾ ಸೋಂಕಿನಿಂದ ಇಹಲೋಕ ತ್ಯಜಿಸಿದ ಖ್ಯಾತ  ಬಂಗಾಳ ಹಿರಿಯ ನಟ ಸೌಮಿತ್ರ ಚಟರ್ಜಿ

ಬಂಗಾಳ:ಬಂಗಾಳಿ ಸಿನಿಮಾದ ಬಹುಖ್ಯಾತ ಹಿರಿಯ ನಟ ಸೌಮಿತ್ರ ಚಟರ್ಜಿ ಇಂದು ಬೆಳಗ್ಗೆ ಬೆಲ್ಲಿ ವ್ಯೂ ಕ್ಲಿನಿಕ್​ನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಭಾರತ ಚಲನಚಿತ್ರ ರಂಗದಲ್ಲಿ ಖ್ಯಾತರಾಗಿದ್ದ ಚಟರ್ಜಿ ಅವರು ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಜಿತ್ ರೇ ಚಟರ್ಜಿ ಅವರು 14 ಸಿನಿಮಾಗಳಲ್ಲಿ ನಟಿಸಿದ್ದಾರೆಸೌಮಿತ್ರಾ ಚಟರ್ಜಿ ಅಥವಾ ಸೌಮಿತ್ರ ಚಟ್ಟೋಪಾಧ್ಯಾಯ ಭಾರತೀಯ ಚಲನಚಿತ್ರ ನಟ. ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಸಹಯೋಗದೊಂದಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದರು, ಅವರೊಂದಿಗೆ ಅವರು ಹದಿನಾಲ್ಕು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

85 ವರ್ಷದ ಚಟರ್ಜಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಅಕ್ಟೋಬರ್ 5ರಂದು ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಜೊತೆಗೆ ಇತರೆ ಆರೋಗ್ಯ ಸಮಸ್ಯೆ ಅವರಿಗಿತ್ತು. ಹಾಗಾಗಿ  ಅಕ್ಟೋಬರ್ 9ರಂದು ಆಸ್ಪತ್ರೆಗೆ ದಾಖಲಾದರು.

ಮರುದಿನದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಅಕ್ಟೋಬರ್ 11ರಂದು ಎರಡು ಬಾರಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಲಾಗಿತ್ತು  ಆದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ಉಸಿರಾಟದಲ್ಲಿ ಸುಧಾರಣೆ ಕಂಡುಬಂದರೂ ಅವರು ಶ್ವಾಸಕೋಶ ಮತ್ತು ಮೂತ್ರದ ಸೋಂಕಿನಿಂದ ಬಳಲುತ್ತಿದ್ದರು. ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಟರ್ಜಿ ಚಿಕಿತ್ಸೆ ಪಡೆಯುತ್ತಿದ್ದರು.

12 ಮಂದಿಯ ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೂ ವಯೋಸಹಜ ಕಾಯಿಲೆ ಜೊತೆಗೆ ಕೊರೊನಾದಿಂದ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
1935ರಂದು ಕೋಲ್ಕತ್ತದಲ್ಲಿ ಜನಿಸಿದ ಚಟರ್ಜಿ ಅವರು 1959ರಲ್ಲಿ ಮೊದಲ ಬಾರಿಗೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ಸತ್ಯಜಿತ್ ರೇ ಅವರ ವರ್ಲ್ಡ್ ಆಫ್ ಅಪು (ಅಪೂರ್ ಸಂಸಾರ್) ಸಿನಿಮಾದಲ್ಲಿ ನಟಿಸಿದ್ದದಾರೆ.

ರೇ ಅವರ ಸೋನಾರ್ ಕೆಳಾ (1974 ಹಾಗೂ ಜೊ ಬಾಬಾ ಫೆಲುನಾಥ್ (1979) ಚಿತ್ರಗಳಲ್ಲಿ ಫೆಲುಡಾ ಸರಣಿಯ ಪುಸ್ತಕಗಳಲ್ಲಿ ಕಲ್ಕತ್ತಾದ ಪ್ರಸಿದ್ಧಖಾಸಗಿ ತನಿಖಾಧಿಕಾರಿ ಫೆಲುಡಾ / ಪ್ರದೋಷ್ ಚಂದ್ರ ಮಿಟ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇವು ಇಂದಿಗೂ ಸೌಮಿತ್ರ ಚಟರ್ಜಿ ಅವರ ಸ್ಮರಣೀಯ ಪಾತ್ರಗಳಾಗಿವೆ.
ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸೌಮಿತ್ರ ಚಟರ್ಜಿ ನೀಡಿರುವ ಸೇವೆಯನ್ನು ಪರಿಗಣಿಸಿ ಅವರಿಗೆ 2012ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ಇದಕ್ಕೂ ಮುನ್ನ 2004ರಲ್ಲಿ ಭಾರತದ ಅತ್ಯುನ್ನತ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಗೌರವಕ್ಕೂ ಭಾಜನರಾಗಿದ್ದಾರೆ.

DAKSHINA KANNADA

Sullia: ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ..!

Published

on

ಸುಳ್ಯ: ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂದು ಗುರುತಿಸಲಾಗಿದೆ.

ಸುಳ್ಯದಲ್ಲಿರುವ ಆರಂಬೂರು ಸೇತುವೆ ಬಳಿಯ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿಯು ಕಾಣೆಯಾಗಿದ್ದಾರೆ. ಬಳಿಕ ಅವರ ಹುಡುಕಾಟ ನಡೆಸಲಾಗಿದೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಕಾರಣದಿಂದ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಳಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಸುಳ್ಯ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ

Continue Reading

DAKSHINA KANNADA

Sullia: ಮದ್ಯ ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ- ಎಪಿಎಂಸಿ ಕಾರ್ಯದರ್ಶಿ ಅಮಾನತು

Published

on

ಸುಳ್ಯ: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸರಕಾರಿ ವಾಹನ ಚಲಾಯಿಸಿದ ಪ್ರಕರಣದ ಆರೋಪಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್‌ ಕುಮಾರ್‌ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ನವೀನ್‌ ಕುಮಾರ್ ಮಂಗಳವಾರ ರಾತ್ರಿ ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ಇಲಾಖೆಯ ನಾಮಫ‌ಲಕವಿರುವ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ಚಲಾಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದ್ದರು. ಈ ಸಂದರ್ಭ ತಾನು ಸುಳ್ಯ ಎಪಿಎಂಸಿ ಕಾರ್ಯದರ್ಶಿ, ನನ್ನದು ತಪ್ಪಾಯಿತು ಎಂದು ಕ್ಷಮೆ ಯಾಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಎಪಿಎಂಸಿ ಕಾರ್ಯದರ್ಶಿಯವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಅವರಿಗೆ ಸುಳ್ಯ ಎಪಿಎಂಸಿ ಪ್ರಭಾರ ವಹಿಸಲಾಗಿದೆ.

 

Continue Reading

LATEST NEWS

ಕೋಟಿಯ ಒಡೆಯನಾದ 8ನೇ ತರಗತಿ ಪೋರ..!!

Published

on

ನವದೆಹಲಿ: ಕೌನ್ ಬನೇಗಾ ಕರೋಡ್ ಪತಿ ಎಂಬ ಹಿಂದಿ ಶೋ ನಲ್ಲಿ ಕೋಟಿ ಗೆದ್ದ 14ವರ್ಷದ ಪೋರ ಸಣ್ಣ ವಯಸ್ಸಿನಲ್ಲೇ ದಾಖಲೆ ಬರೆದಿದ್ದಾನೆ.

ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್  ನಡೆಸಿಕೊಡುವಂತಹ ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಎಂಬ ಶೋ ನಲ್ಲಿ ಹರಿಯಾಣದ ಮಹೇಂದ್ರಗಢ್ ಮೂಲದ 8ನೇ ತರಗತಿ ವಿದ್ಯಾರ್ಥಿ ಮಯಾಂಕ್ ಭಾಗವಹಿಸಿ 15 ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿ ಗೆದ್ದು ದಾಖಲೆ ಬರೆದಿದ್ದಾನೆ. ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಡೆಯುವ ಜನಪ್ರಿಯ ಪ್ರಶ್ನೆಗಳಿಗೆ ಉತ್ತರಿಸಿದ 14 ವರ್ಷದ ಕಿರಿಯ ಪೋರ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ.ಗೆದ್ದ ಹೆಗ್ಗಳಿಕೆಗೆ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ಪಾತ್ರನಾಗಿದ್ದಾನೆ. 14 ವರ್ಷದ ಈ ಬಾಲಕ 1 ಕೋಟಿ ರೂ.ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾನೆ. 15 ಪ್ರಶ್ನೆಗಳಿಗೆ ಉತ್ತರ ಕೊಟ್ಟು, 1 ಕೋಟಿ ರೂ ಗೆದ್ದು, 16ನೇ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದ್ದಾನೆ. ಈತನ ಗುರಿ ಕೇವಲ ಒಂದು ಕೋಟಿ ಆಗಿರಲಿಲ್ಲ. ಏಳು ಕೋಟಿಯನ್ನು ಗುರಿಯಾಗಿಸಿಟ್ಟುಕೊಂಡಿದ್ದ. ಏಳು ಕೋಟಿಯ ಪ್ರಶ್ನೆಗೆ ಉತ್ತರಿಸೋಕೆ ಆಗದೇ ಆಟದಿಂದ ವಾಪಸ್ಸಾಗಿದ್ದಾನೆ. ಈತನ ಸಾಧನೆಗೆ ಹರಿಯಾಣ ಸಿಎಂ ಮನೊಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಇದು ಮೊದಲ ಬಾರಿ 14 ವರ್ಷದ ಪೋರ ಕೋಟಿಗೆದ್ದ ಇತಿಹಾಸವಾಗಿದೆ.

Continue Reading

LATEST NEWS

Trending