Friday, August 12, 2022

“ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ” ಮಳೆ ಅವಾಂತರದ ಬಗ್ಗೆ ಮಾಜಿ ಶಾಸಕ ಲೋಬೊ ವ್ಯಂಗ್ಯ

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದಾದ್ಯಂತ ಅವ್ಯವಸ್ಥೆ ಉಂಟಾಗಿದೆ. ಮಳೆ ಪ್ರಾರಂಭವಾಗುವ ಮೊದಲು ಪೂರ್ವ ತಯಾರಿ ಮಾಡದಿದ್ದರೆ ಇಂದಿನ ಅವಾಂತರಕ್ಕೆ ಕಾರಣವಾಗುತ್ತದೆ.

ಇದು ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ (ಕಕ್ಕಸ ಬಂದಾಗ ಜಾಗ ಹುಡುಕುವುದು) ಎಂದು ಮಾಜಿ ಶಾಸಕ ಜೆ.ಆರ್‌.ಲೋಬೋ ವ್ಯಂಗ್ಯವಾಡಿದರು.

ಮಲ್ಲಿಕಟ್ಟೆಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಸ್ತೆಯನ್ನೆಲ್ಲಾ ಅಗೆದಿದ್ದರಿಂದ ಪಾದಾಚಾರಿಗಳು ನಡೆಯಲು ಸಾಧ್ಯವಾಗುತ್ತಿಲ್ಲ.

ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಮಾರ್ಟ್‌ ಸಿಟಿಯ ಕಾಮಗಾರಿ ಅವೈಜ್ಞಾನಿಕ ಆಗಿರುವುದರಿಂದ ಇವತ್ತಿನ ಮಂಗಳೂರಿಗೆ ಈ ಸ್ಥಿತಿ ಬಂದಿದೆ. ಯಾರು ಇದಕ್ಕೆ ಹೊಣೆ? ಎಂದು ಪ್ರಶ್ನಿಸಿದರು.

ಮಂಗಳೂರಿಗೆ ನೆರೆ ಅಥವಾ ಮಳೆ ಅದು ಸ್ವಾಭಾವಿಕ. ಆದರೆ ಪಡೀಲ್‌, ಕೊಟ್ಟಾರ, ಕಣ್ಣೂರು, ಪಂಪ್‌ವೆಲ್‌ನಲ್ಲಿ ಪದೇ ಪದೇ ನೀರು ನಿಲ್ಲುವುದಾದರೆ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಅದಕ್ಕೆ ಪರಿಹಾರ ಇಲ್ಲವೇ ಎಂದು ಪ್ರಶ್ನಿಸಿದರು.


ಇದೇ ವೇಳೆ ಪೌರ ಕಾರ್ಮಿಕ ಮುಷ್ಕರದ ಬಗ್ಗೆ ಮಾತನಾಡಿ, ಮಂಗಳೂರು ನಗರದಲ್ಲಿ ಗಬ್ಬು ವಾಸನೆ ಬರುತ್ತಿದ್ದು, ತ್ಯಾಜ್ಯದ ರಾಶಿ ರಾಶಿ ಬಿದ್ದಿದೆ.

ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರಾಗಿ ನೇಮಕಗೊಳಿಸಿ ಅಥವಾ ಖಾಸಗಿಯವರಿಗೆ ಗುತ್ತಿಗೆ ನೀಡುವಾಗ ಕೆಲಸದ ಅವಧಿ, ಇ.ಎಸ್.ಐ, ಪಿ.ಎಫ್, ಪಿಂಚಣಿ, ಹೆರಿಗೆ ರಜೆ, ಎಲ್ಲವೂ ಸೌಕರ್ಯ ಅವರಿಗೂ ಸಿಗಬೇಕು ಆದರೆ ಅದು ಯಾಕೆ ಪರಿಪಾಲನೆಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...

ಬೆಳ್ತಂಗಡಿ: ಅನ್ಯಕೋಮಿನ ಜೋಡಿ ಪತ್ತೆ-ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ: ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.ಗದಗ ಮೂಲದ ರಫೀಕ್(21) ಎಂಬಾತ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು, ಖಾಸಗಿ ಲಾಡ್ಜ್‌ಗೆ ರೂಮ್ ಬುಕ್ಕಿಂಗ್...

ಕಟೀಲು ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ರಾಷ್ಟ್ರಧ್ವಜ: ಮನೆಮನೆಗೆ ವಿತರಣೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ಸಿದ್ಧಪಡಿಸಿದ ರಾಷ್ಟ್ರಧ್ವಜವನ್ನು ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮನೆಗಳಿಗೆ ವಿತರಿಸಲು ವಿದ್ಯಾರ್ಥಿಗಳಿಗೆ ನೀಡಲಾಯಿತು.ಈ ಸಂದರ್ಭ ಕಟೀಲು ದೇಗುಲದ...