Connect with us

LATEST NEWS

ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿಗೆ ಜೀವಮಾನ ಸಾಧನೆ ಪ್ರಶಸ್ತಿ

Published

on

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಪ್ರತಿಷ್ಠಿತ ಪ್ರೈಮ್ ಪಾಯಿಂಟ್ ಪ್ರತಿಷ್ಠಾನವು, ಸಂಸತ್‌ನ ಹಿರಿಯರಿಗೆ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ನೇಮಕಗೊಂಡಿದ್ದಾರೆ.


ತಮಿಳುನಾಡಿನ ಹಿರಿಯ ಬಿಜೆಪಿ ಮುಖಂಡ ಎಚ್.ವಿ. ಹಂದೆ ಅವರನ್ನೂ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ರಾಷ್ಟ್ರೀಯವ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಸುಪ್ರಿಯಾ ಸುಳೆ

ಮತ್ತು ಬಿಜು ಜನತಾ ದಳ (ಬಿಜೆಡಿ)ದ ಅಮರ್ ಪಟ್ನಾಯಕ್ ಸೇರಿದಂತೆ ಒಟ್ಟು 11 ಜನ ಸಂಸದರು 2022ನೇ ಸಾಲಿನ ‘ಸಂಸದ್ ರತ್ನ’ ಪ್ರಶಸ್ತಿಗೆ ನಾಮ‌ನಿರ್ದೇಶನಗೊಂಡಿದ್ದಾರೆ ಎಂದು ಪ್ರತಿಷ್ಠಾನವು ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

11 ಜನ ಸಂಸದರಲ್ಲಿ ಲೋಕಸಭೆಯಿಂದ ಎಂಟು ಮತ್ತು ರಾಜ್ಯಸಭೆಯಿಂದ ಮೂವರು ಸದಸ್ಯರಿದ್ದಾರೆ. ಕೇರಳದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಸಂಸದ ಎನ್‌.ಕೆ. ಪ್ರೇಮಚಂದ್ರನ್ ಮತ್ತು ಶಿವಸೇನಾ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಅತ್ಯುತ್ತಮ ಸಾಧನೆಗಾಗಿ ‘ಸಂಸದ್ ವಿಶಿಷ್ಟ ರತ್ನ’ ಪ್ರಶಸ್ತಿಗೆ ನೇಮಕಗೊಂಡಿದ್ದಾರೆ.

ವಿದ್ಯುತ್ ಬರನ್ ಮಹತೋ (ಬಿಜೆಪಿ, ಜಾರ್ಖಂಡ್), ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್, ಅಂಡಮಾನ್, ನಿಕೋಬಾರ್ ದ್ವೀಪ), ಡಾ ಹೀನಾ ವಿಜಯಕುಮಾರ್ ಗವಿಟ್ (ಬಿಜೆಪಿ, ಮಹಾರಾಷ್ಟ್ರ),

ಸೌಗತ ರಾಯ್ (ಎಐಟಿಎಂಸಿ, ಪಶ್ಚಿಮ ಬಂಗಾಳ), ಸುಧೀರ್ ಗುಪ್ತಾ (ಬಿಜೆಪಿ, ಮಧ್ಯಪ್ರದೇಶ) ಅವರೂ ‘ಸಂಸದ್ ರತ್ನ’ ಪ್ರಶಸ್ತಿಗೆ ನೇಮಕಗೊಂಡಿರುವ ಲೋಕಸಭೆಯ ಇತರ ಸದಸ್ಯರಾಗಿದ್ದಾರೆ.

ಫೌಜಿಯಾ ತಹಸೀನ್ ಅಹ್ಮದ್ ಖಾನ್ (ಎನ್‌ಸಿಪಿ, ಮಹಾರಾಷ್ಟ್ರ) ರಾಜ್ಯಸಭೆಯ ಕಾರ್ಯಕ್ಷಮತೆಗಾಗಿ, ಕೆ.ಕೆ. ರಾಗೇಶ್ (ಸಿಪಿಐಎಂ, ಕೇರಳ) ಅವರು ‘ನಿವೃತ್ತ’ ವಿಭಾಗದ ಅಡಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಇವರೊಂದಿಗೆ ನಾಲ್ಕು ಪ್ರಮುಖ ಸಂಸದೀಯ ಸ್ಥಾಯಿ ಸಮಿತಿಗಳಾದ ಕೃಷಿ, ಹಣಕಾಸು, ಶಿಕ್ಷಣ ಮತ್ತು ಕಾರ್ಮಿಕ ಸಮಿತಿಗಳೂ ಪ್ರಶಸ್ತಿಗೆ ನೇಮಕಗೊಂಡಿವೆ.

ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಅವರಿದ್ದ ಆಯ್ಕೆ ಸಮಿತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ.

ಫೆಬ್ರುವರಿ 26ರಂದು ನವದೆಹಲಿಯಲ್ಲಿ ಆಯೋಜಿಸಲಾಗುವ‌ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

FILM

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

Published

on

ಮುಂಬೈ/ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಲೋಕದಲ್ಲಿ ತಮ್ಮದೇ ಆದ ಸ್ಟಾಂಡ್‌ ಕ್ರಿಯೇಟ್ ಮಾಡಿದ್ದಾರೆ. ಕೇವಲ ತಮಿಳು ಭಾಷೆ ಅಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ರಜನಿಗೆ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಚಾರ್ಮ್ ಅಬ್ಬಾ…! ವಯಸ್ಸಲ್ಲಿ 73 ಆದರೂ ಚಿರ ಯುವಕನಂತೆ ಕಾಣಿಸುವ ಎನರ್ಜಿ ಇವರದು. ಇನ್ನು ಇವರ ಸಿನೆಮಾ ರಿಲೀಸ್ ಆದ್ರೆ ಸಾಕು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತೆ. ಅದಕ್ಕೆ ಇತ್ತೀಚೆಗೆ ರಿಲೀಸ್ ಆದ ಜೈಲರ್ ಸಿನೆಮಾವೇ ಸಾಕ್ಷಿ. ಇದೀಗ ರಜನಿ ಹಾಗೂ ಐಶ್ವರ್ಯ ರೈ ಗೆ ಸಂಬಂಧಪಟ್ಟ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

rajani-aishwarya

14 ವರ್ಷಗಳ ಹಿಂದೆಯೇ ಕೆಲವರು ರಜನಿಕಾಂತ್ ಅವರನ್ನು ಹೀರೋ ಅಲ್ಲ ಎಂಬಂತೆ ವರ್ತಿಸಿದ್ದರಂತೆ. ಹೀಗಂತ ಖುದ್ದು ರಜನಿ ಅವರು ರೋಬೋ ಸಿನೆಮಾ ಪ್ರೆಸ್‌ಮೀಟ್‌ ನಲ್ಲಿ ಇಂಟ್ರಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ಈ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಐಶ್ವರ್ಯ ರೈ ಬಚ್ಚನ್‌ಗೆ, ಸೊಸೆಯ ‘ವಾಟ್‌ ದಿ ಹೆಲ್‌ ನವ್ಯಾ’ದಲ್ಲಿ ಡಿಮ್ಯಾಂಡ್‌…!

ಪ್ರೆಸ್‌ಮೀಟ್‌ನಲ್ಲಿ ಮಾತು ಆರಂಭಿಸಿದ ರಜನಿ ‘ನನ್ನ ಜೊತೆ ಹೀರೋಯಿನ್‌ ಆಗಿ ನಟಿಸಿರುವುದಕ್ಕೆ ಐಶ್ವರ್ಯಾಗೆ ಧನ್ಯವಾದಗಳು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆ ರಾಜಸ್ಥಾನ ಕುಟುಂಬದವರು ನನ್ನನ್ನು ನೋಡಲು ಬಂದರು. ಅದರಲ್ಲಿ ನಂದುಲಾಲ್ ಎಂಬವರು ನನ್ನನ್ನು ಮಾತನಾಡಿಸಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸರ್ ನಿಮ್ಮ ತಲೆ ಕೂದಲಿಗೆ ಏನಾಗಿದೆ ಎಂದು ಕೇಳಿದರು. ಬಿಡಿ ಎಲ್ಲಾ ಉದುರಿ ಹೋಗಿದೆ ಎಂದು ಹೇಳಿದೆ. ನಿಮ್ಮ ನಿವೃತ್ತಿ ಜೀವನ ಹೇಗಿದೆ. ಲೈಫ್ ಎಂಜಾಯ್ ಮಾಡ್ತಿದ್ದೀರಾ ಎಂದು ಕೇಳಿದರು. ಇಲ್ಲಾ ನಾನೊಂದು ಸಿನೆಮಾ ಮಾಡ್ತಾ ಇದ್ದೇನೆ. ಐಶ್ವರ್ಯ ರೈ ಹೀರೋಯಿನ್ ಅಂದೆ. ‘ಹೀರೋ ಯಾರು ಸರ್’ ಎಂದು ಮರು ಪ್ರಶ್ನಿಸಿದರು.  ಅವರ ಜೊತೆ ಇದ್ದವರು ಡ್ಯಾಡಿ ಇವರೇ ಹೀರೋ ಎಂದು ಮೆಲುಧ್ವನಿಯಲ್ಲಿ ಹೇಳ್ತಾರೆ. ನಂದುಲಾಲ್  ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡಿ ಏನೂ ಮಾತನಾಡದೆ ಹೊರಟು ಬಿಟ್ಟರು. ಅಷ್ಟರಾಗಲೇ ಮನೆ ಒಳಗಡೆಯಿಂದು ಒಂದು ಧ್ವನಿ ಬರುತ್ತೆ. ಐಶ್ವರ್ಯ ರೈ ಗೆ ಏನಾಗಿದೆ..? ಅಲ್ಲಾ ಅಭಿಷೇಕ್ ಹೇಗೆ ಒಪ್ಪಿದ್ರು..? ಅಮಿತಾಬಚನ್‌ಗಾದ್ರು ಎನಾಗಿದೆ.. ಐಶ್ವರ್ಯಾಳನ್ನು ಇವರ ಜೊತೆ ಹೀರೋಯಿನ್ ಮಾಡಲು ಒಪ್ಪಿದ್ದಾರಲ್ಲ  ಎಂಬ ಮಾತು ಕೇಳಿ ಬಂತು ಎಂದು ರಜನಿಕಾಂತ್ ಸಿನೆಮಾ ಪ್ರೆಸ್ ಮೀಟ್‌ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು.

Continue Reading

FILM

ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ಕರೀನಾ ಕಪೂರ್; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ, ಏನಂದ್ರು?

Published

on

ಮಂಗಳೂರು / ಬೆಂಗಳೂರು : ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ (Unicef India’s National Ambassador) ನೇಮಕಗೊಂಡಿದ್ದಾರೆ. ಈ ಬಗ್ಗೆ ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಭಾವನಾತ್ಮಕ ಪೋಸ್ಟ್ :

ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಟಾಕ್ಸಿಕ್ ನಿಂದ ಔಟ್ :

ಕರೀನಾ ಕಪೂರ್ ಇತ್ತೀಚೆಗೆ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಹಿಳಾ ಪ್ರಧಾನ ಚಿತ್ರವಾದ ಈ ಚಿತ್ರ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಸದ್ಯ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಅವರು ಬಿಝಿಯಾಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತಾದರೂ, ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್ 

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.

Continue Reading

DAKSHINA KANNADA

‘ಅಡ್ಡಣ ಪೆಟ್ಟು’ ದೈವಾರಾಧನೆಯ ವಿಶೇಷ ಆಚರಣೆ…! ಇದು ಸೌಹಾರ್ದತೆ ಬಯಸೋ ದೈವ..!

Published

on

ಮಂಗಳೂರು : ತುಳುನಾಡಿನ ದೈವಾರಾಧನೆಯಲ್ಲಿ ಒಂದಕ್ಕಿಂತ ಒಂದು ವಿಶೇಷವಾದ ಆಚರಣೆ ಹಾಗೂ ನಂಬಿಕೆಗಳು ಇದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಒಂದಷ್ಟು ಬದಲಾವಣೆಯೊಂದಿಗೆ ನಡೆಯುತ್ತದೆ ಕೂಡಾ. ಕೇರಳದ ಗಡಿಗೆ ಹೊಂದಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆಯೋ ದೈವಾರಾಧನೆ ಕೂಡಾ ಅದೇ ರೀತಿಯಾದ ವಿಶೇಷ ಆಚರಣೆಯೊಂದಕ್ಕೆ ಹೆಸರಾಗಿದೆ. ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೆಯ ಬಳಿಕ ನಡೆಯುವ ದೈವದ ನೇಮದಲ್ಲಿ ‘ಅಡ್ಡಣ ಪೆಟ್ಟು’ ಅನ್ನೋ ಸಂಪ್ರದಾಯವಿದೆ. ಗ್ರಾಮದ ಜಾತ್ರೆಯ ಪ್ರಮುಖ ಆಕರ್ಷಣೆ ಕೂಡಾ ಇದೇ ಆಗಿದ್ದು, ಇದನ್ನು ನೋಡಲೆಂದೆ ಸಾವಿರಾರು ಜನ ಬರ್ತಾರೆ.


ನಾಲ್ಕು ಮನೆತನಗಳ ನಡುವೆ ಹೊಡೆದಾಟ…!

‘ಅಡ್ಡಣ ಪೆಟ್ಟು’ ಇದು ಮಂಡೆಕೋಲು ಗ್ರಾಮದ ಜಾತ್ರೆ ಮುಗಿದ ಬಳಿಕ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದಲ್ಲಿ ಕಾಣುವ ದೃಶ್ಯ. ನಾಲ್ಕು ಗೌಡ ಮನೆತನದವರು ಬೆತ್ತದ ಗುರಾಣಿ ಹಿಡಿದು ಕೋಲಿನಿಂದ ಹೊಡೆದಾಡುವುದೇ ಈ ‘ಅಡ್ಡಣ ಪೆಟ್ಟು’ ಅನ್ನೋ ವಿಶಿಷ್ಠ ಆಚರಣೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಈ ರೀತಿ ಹೊಡೆದಾಟ ನಡೆಸ್ತಾರೆ. ಈ ವೇಳೆ ಉಳ್ಳಾಕುಲು ದೈವ ಮದ್ಯಪ್ರವೇಶ ಮಾಡಿ ಜಗಳ ಬಿಡಿಸುತ್ತದೆ. ಇದು ನೋಡಲು ಕೂಡಾ ಸಾಕಷ್ಟು ಕುತೂಹಲವಾಗಿದ್ದು, ಇದರ ಜೊತೆ ದೈವದ ಸಂದೇಶ ಕೂಡಾ ಇದೆ.


‘ಅಡ್ಡಣ ಪೆಟ್ಟು’ವಿನ ಹಿಂದೆ ಇದೆ ದೈವದ ಸಂದೇಶ..!

ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.

‘ಅಡ್ಡಣ ಪೆಟ್ಟು’ವಿನ ಆಚರಣೆ ಹೇಗೆ ?

ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.

Continue Reading

LATEST NEWS

Trending