ಮಂಗಳೂರು: ಮಾತಿನ ಮಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು.
ಬಳಿಕ ರೆಡಿಯೋ ಜಾಕಿ ವೃತ್ತಿಗೆ ವಿದಾಯ ಕೋರಿದ್ದ ಅವರು ಮನೆಯಲ್ಲೇ ಇದ್ದರು ಅಂತ ಹೇಳಲಾಗ್ತಿದೆ. ಆದರೆ ಫಿಟ್ ಆಂಡ್ ಫೈನ್ ಆಗಿದ್ದ ರಚನಾ ಹೃದಯಾಘಾತಕ್ಕೆ ಬಲಿಯಾಗಿರುವುದು ಸದ್ಯ ಎಲ್ಲರಿಗೂ ಶಾಕ್ ಕೊಟ್ಟಿದೆ.
ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ಮುದ್ದು ಮುಖದ ರಚನಾಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಅರ್‌ಜೆ ಕೆಲಸ ಬಿಟ್ಟಿದ್ದ ರಚನಾ ಪೋಷಕರು ಚಾಮರಾಜಪೇಟೆಯಲ್ಲಿದ್ದರು.
ರಚನಾ ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಅರಳು ಹುರಿದಂತೆ ಮಾತನಾಡುತ್ತಿದ್ದ ರಚನಾ ಸಖತ್ ಫಿಟ್ ಅಂಡ್ ಫೈನ್ ಆಗಿದ್ದರು.
ರಕ್ಚಿತ್ ಶೆಟ್ಟಿ ಅವರ ಸಿಂಪಲ್ಲಾಗಿ ಒಂದ್ ಸ್ಟೋರಿ ಸಿನಿಮಾದಲ್ಲಿ ರಚನಾ ಅಭಿನಯಿಸಿದ್ದು, ಸಿನಿಮಾದಲ್ಲೂ ರೆಡಿಯೋ ಜಾಕಿಯಾಗಿ ರಚನಾ ಪಾತ್ರದಲ್ಲೇ ನಟಿಸಿದ್ದರು.