LATEST NEWS
WATCH : ಹೀಗೂ ಉಂಟೇ..!? ಮೀನನ್ನು ತಿನ್ನದೇ ಬದುಕಿಸಿದ ಕಾಗೆ, ಬೆಳ್ಳಕ್ಕಿ ! ವೀಡಿಯೋ ವೈರಲ್
ಪ್ರಾಣಿ – ಪಕ್ಷಿಗಳು ಬೇಟೆಯಾಡಿ ತಮ್ಮ ಆಹಾರಗಳನ್ನು ತಾವೇ ಸೇವಿಸುವುದು ಸಾಮಾನ್ಯ ಸಂಗತಿ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಬೇಟೆಯಾಡಿ ತಿನ್ನುವುದು ನೈಸರ್ಗಿಕ ಪ್ರಕ್ರಿಯೆ. ಇದು ಆಹಾರ ಚಕ್ರವಾಗಿದೆ. ಹಾಗಂತ ಬೇಟೆಯಾಡಿ ಸಿಕ್ಕಿದ ಆಹಾರವನ್ನು ಅದು ತಿಂದು ಹೊಟ್ಟೆ ಹಸಿವು ನೀಗಿಸಿಕೊಳ್ಳದೆ ಬಿಡುವುದುಂಟೇ? ಅಯ್ಯೋ! ಇಲ್ಲ ಸ್ವಾಮಿ ಅನ್ಬೇಡಿ, ಯಾಕೆಂದರೆ, ಅಂತಹ ಘಟನೆ ನಡೆಯುತ್ತದೆ. ಅದಕ್ಕೆ ನಿದರ್ಶನವೂ ಇಲ್ಲಿದೆ.
ಹೌದು, ನಿಸರ್ಗಕ್ಕೆ ವಿರುದ್ಧವಾದ ಘಟನೆಯೊಂದು ನಡೆದಿದೆ. ಸಿಕ್ಕ ಬೇಟೆಯೊಂದನ್ನು ತಿನ್ನದೇ ರಕ್ಷಿಸಿದ ಹಕ್ಕಿಗಳ ಕಥೆಯಿದು. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಮೀನಿನ ಮೇಲೆ ಕರುಣೆ ತೋರಿದ ಹಕ್ಕಿಗಳು!
ಸಾಮಾನ್ಯವಾಗಿ ಕಾಗೆ, ಬೆಳ್ಳಕ್ಕಿಗಳು ಮೀನುಗಳನ್ನು ಕಂಡರೆ ಸಾಕು ತಿಂದೇ ತಿನ್ನುತ್ತವೆ. ಸುಲಭವಾಗಿ ಸಿಕ್ಕರೆ? ಕೇಳ್ಬೇಕೇ…ಗಬಕ್! ಎಂದು ನುಂಗಿ ಬಿಡುತ್ತವೆ. ಆದರೆ, ಇಲ್ಲಿ ಹಾಗಲ್ಲ, ಹಕ್ಕಿಗಳು ಕರುಣೆ ತೋರಿವೆ. ಕಣ್ಣೆದುರು ಮೀನು ಬಿದ್ದಿದ್ದರೂ ಅದನ್ನು ತಿನ್ನದೇ ಹಾಗೇ ನೀರಿಗೆ ಬಿಟ್ಟು ಪರೋಪಕಾರಿ ಮನೋಭಾವ ತೋರಿದ್ದಾವೆ.
ಜಾರ್ಖಂಡ್ ನ ಅಧಿಕಾರಿಯೊಬ್ಬರು ಈ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀರಿಲ್ಲದ ಜಾಗದಲ್ಲಿ ಜೀವಂತ ಮೀನೊಂದು ಬಿದ್ದಿರುತ್ತದೆ. ಇದನ್ನು ಕಾಗೆಯೊಂದು ನೋಡುತ್ತದೆ. ಮೀನಿನ ಬಾಲ ಹಿಡಿದೆಳೆಯುತ್ತೆ. ದೃಶ್ಯ ನೋಡುವವರು ಇನ್ನೇನು ಮೀನನ್ನು ತಿನ್ನುತ್ತೇನೋ ಅಂದುಕೊಳ್ಳಬೇಕು. ಆದರೆ, ಅದು ಹಾಗೆ ಮಾಡುವುದಿಲ್ಲ. ಬದಲಿಗೆ ಸ್ವಲ್ಪ ನೀರಿರುವಲ್ಲಿ ಅದನ್ನು ಹಾಕುತ್ತದೆ.
ಆದಾದ ಮೇಲೆ ಬೆಳ್ಳಕ್ಕಿಯೊಂದು ಮೀನಿನ ಬಳಿ ಬರುತ್ತದೆ. ಹಸಿದ ಹೊಟ್ಟೆಗೆ ಸಿಕ್ಕಿತು ಭಕ್ಷ ಎಂದು ಅದು ತಿನ್ನಲಿದೆ ಎಂದೇ ವೀಕ್ಷಕರು ಭಾವಿಸಬೇಕು. ಹಾಗೆ ಅದು ಅದನ್ನು ಕೊಕ್ಕಲ್ಲಿ ಹಿಡಿಯುತ್ತದೆ. ಆದರೆ, ಅದು ನಾವಂದುಕೊಂಡ ಹಾಗೆ ಮಾಡುವುದಿಲ್ಲ. ಮೀನನ್ನು ಇನ್ನಷ್ಟು ನೀರಿರುವ ಜಾಗಕ್ಕೆ ಬಿಡುತ್ತದೆ. ಮೀನು ಈಜಿ ನೀರೊಳಗೆ ಸೇರಿ ಮರೆಯಾಗುತ್ತದೆ.
36 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಹಕ್ಕಿಗಳ ಔದಾರ್ಯವನ್ನು ಕಾಣಬಹುದು. ನೋಡಿದವರೆಲ್ಲ ‘ವ್ಹಾ!” ಅನ್ನದೇ ಇರಲಾರರು.
‘ಸಮಯ ಚೆನ್ನಾಗಿದ್ದಾಗ, ನಿಮ್ಮ ಬದ್ಧ ವೈರಿಗಳು ಕೂಡಾ ನಿಮ್ಮ ಸಹಾಯಕರಾಗುತ್ತಾರೆ’ ಎಂಬ ಕ್ಯಾಪ್ಶನ್ ನೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : ಪ್ರಾಣ ಸಂಕಟದಲ್ಲಿದ್ದ ಹೆಬ್ಬಾವು..! ರಕ್ಷಣೆ ವೇಳೆ ದೇಹದಲ್ಲಿ 11 ಬುಲ್ಲೆಟ್ ಪತ್ತೆ..!
ಇದೊಂದು ಹಳೆಯ ವೀಡಿಯೋವಾದರೂ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೀಡಿಯೋ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇಂತಹ ವೀಡಿಯೋ ನೋಡಿಲ್ಲ ಎಂದು ಕೆಲವರು ಹೇಳಿದರೆ, ಗ್ರೇಟ್ ಜಾಬ್ ಎಂದು ಕೆಲವರು ಹೇಳಿದ್ದಾರೆ. ಎಂತಹ ವಿಚಾರವಿದು! ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
LATEST NEWS
ರತನ್ ಟಾಟಾ ಆಸ್ಪತ್ರೆಗೆ ದಾಖಲು; ವದಂತಿಗಳ ಬಗ್ಗೆ ಉದ್ಯಮಿ ಕೊಟ್ರು ಉತ್ತರ.!
ಮುಂಬೈ: ಹಿರಿಯ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಸ್ವತಃ ರತನ್ ಟಾಟಾ ಪ್ರತಿಕ್ರಿಯೆ ನೀಡಿದ್ದಾರೆ.
ವಯೋ ಸಹಜ ಕಾರಣಗಳಿಂದಾಗಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದೆ, ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮುಂಬೈ ನ ಆಸ್ಪತ್ರೆಗೆ ರತನ್ ಟಾಟ ದಾಖಲಾಗಿದ್ದಾರೆ ಎಂಬ ವರದಿಗಳನ್ನು ಊಹಾಪೋಹ ಎಂದು ರತನ್ ಟಾಟಾ ತಮ್ಮ ಸಾಮಾಜಿಕ ಜಾಲತಾಣ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ತಪಾಸಣೆಗೆ ಒಳಗಾಗುತ್ತಿದ್ದೇನೆ ಎಂದಿದ್ದಾರೆ.
ಆತಂಕಕ್ಕೆ ಯಾವುದೇ ಕಾರಣವಿಲ್ಲ. ನಾನು ಉತ್ತಮ ಉತ್ಸಾಹದಲ್ಲಿ ಇರುತ್ತೇನೆ ಎಂದು ಅವರು ಹೇಳಿದ್ದು, ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ವಿನಂತಿಸಿ ಪೋಸ್ಟ್ ಮಾಡಿದ್ದಾರೆ.
FILM
ಶೀಘ್ರದಲ್ಲಿ ತೆರೆಗೆ ಬರಲಿದೆ ‘ದೃಶ್ಯಂ-3’..! ಕ್ಲೂ ಕೊಟ್ಟ ಚಿತ್ರ ತಂಡ..!
ಮಂಗಳೂರು : ಮುಂದೇನಾಗುತ್ತದೆ ಎಂದು ಚಿತ್ರ ಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ ತನ್ನ ಮೂರನೇ ಅಧ್ಯಾಯದಲ್ಲಿ ಉತ್ತರ ನೀಡಲು ಮುಂದಾಗಿದೆ. ಸಿನಿಮಾ ಇಂಡಸ್ಟ್ರೀಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ದೃಶ್ಯಂ’ ಸಿನೆಮಾ ಈಗಾಗಲೇ ‘ದೃಶ್ಯಂ2’ ಮೂಲಕ ಕಥಾನಾಯಕನ ಕ್ರಿಮಿನಲ್ ಮೈಂಡ್ ಬಗ್ಗೆ ಚರ್ಚೆ ಹುಟ್ಟು ಹಾಕಿತ್ತು. ಇದೀಗ ‘ದೃಶ್ಯಂ3’ ಮೂಲಕ ಈ ಕಥೆಗೆ ಅಂತ್ಯ ಹಾಡಲು ಚಿತ್ರ ತಂಡ ಸಿದ್ಧವಾಗಿದೆ.
ಕೇವಲ ಮಲೆಯಾಳಂ ಮಾತ್ರವಲ್ಲದೆ ಇಡೀ ಸಿನೆಮಾ ಇಂಡಸ್ಟ್ರೀಯಲ್ಲೇ ಸಂಚಲನ ಮೂಡಿಸಿದ ಸಿನೆಮಾ ‘ದೃಶ್ಯಂ’. ಸಸ್ಪೆನ್ಸ್ ಥ್ರಿಲರ್ ಸಿನೆಮಾವಾಗಿ ಜನರಿಗೆ ಇಷ್ಟವಾಗಿದ್ದ ಈ ಸಿನೆಮಾ ‘ದೃಶ್ಯಂ2’ ಮೂಲಕ ಇಡೀ ಸಿನೆಮಾ ಇಂಡಸ್ಟ್ರೀಯನ್ನೇ ಅಲ್ಲಾಡಿಸಿತ್ತು. ಕಥೆಯನ್ನೂ ಹೀಗೂ ಬರೆಯಬಹುದು ಅನ್ನೋದನ್ನ ‘ದೃಶ್ಯಂ’ ಮತ್ತು ‘ದೃಶ್ಯಂ2’ ಮೂಲಕ ಜೀತು ಜೋಸೆಫ್ ತೋರಿಸಿಕೊಟ್ಟಿದ್ದರು.
ತನ್ನ ಕುಟುಂಬದ ರಕ್ಷಣೆಗಾಗಿ ಕಥಾನಾಯಕ ಯಾವ ರೀತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯಶಸ್ವಿಯಾಗಿದ್ದ ಮತ್ತು ಮೃತ ದೇಹವನ್ನು ಹೇಗೆ ಅಡಗಿಸಿ ಇಟ್ಟಿದ್ದ ಅನ್ನೋದು ‘ದೃಶ್ಯಂ’ ಸಿನೆಮಾದ ಕಥಾವಸ್ತು. ಇನ್ನು ‘ದೃಶ್ಯಂ2’ ನಲ್ಲಿ ಕಥಾ ನಾಯಕನ ಪ್ಲ್ಯಾನ್ ಬಿ ಪ್ರಕಾರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಅಸ್ತಿಗಳನ್ನು ಬದಲಾಯಿಸಿ ತನ್ನ ಕುಟುಂಬವನ್ನು ಕಾಪಾಡುವುದು ಕಥಾವಸ್ತುವಾಗಿತ್ತು.
ಇದನ್ನೂ ಓದಿ : ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಕಥಾನಾಯಕನ ಈ ಕ್ರಿಮಿನಲ್ ಬುದ್ದಿಗೆ ಕೊನೆ ಇಲ್ಲವಾ ಎಂದು ‘ದೃಶ್ಯಂ2’ ನೋಡಿದ ಚಿತ್ರ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದೀಗ ‘ದೃಶ್ಯಂ3’ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಮೂಲಕ ಉತ್ತರ ನೀಡಲು ಮುಂದಾಗಿದೆ.
2025 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ವೇಳೆ ಚಿತ್ರವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದೆ. ಸಿನೆಮಾದ ಚಿತ್ರೀಕರಣ ಆರಂಭವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದೆ. ಚಿತ್ರದ ಕಥೆ ಸಿದ್ದವಾಗಿದ್ದು, ‘ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್’ ಎಂದು ಅಭಿಮಾನಿಗಳು ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ.
DAKSHINA KANNADA
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆಪ್ಟಂಬರ್ 29 ರಂದು ಪಂಪ್‌ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.
ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಇದನ್ನೂ ಓದಿ : ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು
ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.
- BIG BOSS4 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS7 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS5 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS6 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ