LATEST NEWS
ಆನೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿ ಸಾವು
ಮಂಗಳೂರು/ಬೆಂಗಳೂರು : ಆನೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಕಾವಾಡಿ ನೀರಲ್ಲಿ ಮುಳಗಿ ಸಾ*ವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಗೋಪಾಲ್(20) ಮೃ*ತ ಕಾವಾಡಿ. ಗೋಪಾಲ್ ಕಳೆದ ಒಂದೂವರೆ ವರ್ಷದಿಂದ ಸಂಪತ್ ಎಂಬ ಆನೆಯನ್ನು ನೋಡಿಕೊಳ್ಳುತ್ತಿದ್ದರು.
ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಆನೆಯನ್ನು ಸ್ನಾನ ಮಾಡಿಸುತ್ತಿದ್ದರು. ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮು*ಳುಗಿ ಕಾವಾಡಿಗ ಸಾ*ವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ.
ಇದನ್ನೂ ಓದಿ : ದೀಪಾವಳಿಯಂದು ಈ ಜೀವಿಗಳನ್ನು ನೋಡಿದ್ರೆ ನಿಮ್ಮ ಲಕ್ ಚೇಂಜ್!
ವಿಷಯ ತಿಳಿಯುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಪೊಲೀಸರು, ಈಜು ತಜ್ಞರು, ಅ*ಗ್ನಿ ಶಾಮಕ ದಳದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಗೋಪಾಲ್ ಮೃ*ತದೇಹ ಹೊರತೆಗೆದರು. ಮ*ರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
LATEST NEWS
Zomato ಪ್ರತಿ ಆರ್ಡರ್ ಗೆ ₹10 ಶುಲ್ಕ ಹೆಚ್ಚಳ!
ನವದೆಹಲಿ: ಆನ್ ಲೈನ್ ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್ ಫಾರ್ಮ್ ಫೀ) ₹10 ಹೆಚ್ಚಳ ಮಾಡಿದೆ.
ಹಬ್ಬಗಳ ಸಂದರ್ಭದಲ್ಲಿ ಆರ್ಡರ್ ಗಳ ಸಂಖ್ಯೆ ಹೆಚ್ಚಿರುವುದರಿಂದ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಸದ್ಯ ದೆಹಲಿಯಲ್ಲಿ ₹10 ಹೆಚ್ಚು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಬೇರೆ ಬೇರೆ ನಗರದಲ್ಲಿ ಶುಲ್ಕದ ದರ ಬದಲಾಗಲಿದೆ ಎಂದಿರುವ ಕಂಪನಿ ಯಾವ ನಗರದಲ್ಲಿ ಎಷ್ಟು ಶುಲ್ಕ ಇರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
ಕಳೆದ ಏಪ್ರಿಲ್ ತಿಂಗಳಿನಲ್ಲಿಯೂ ಜೊಮಾಟೊ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು ₹4 ಏರಿಕೆ ಮಾಡಿತ್ತು. ಈಗ ಮತ್ತೆ ದರ ಏರಿಸಿ ಪ್ರಕಟಣೆ ಹೊರಡಿಸಿದೆ.
LATEST NEWS
ಗ್ರಾಹಕನಿಗೆ 50 ಪೈಸೆ ಹಿಂತಿರುಗಿಸದ ಅಂಚೆ ಕಚೇರಿಗೆ 15,000 ರೂ. ದಂಡ
ಚೆನ್ನೈ: ಬರೀ 50 ಪೈಸೆ ಅಲ್ವಾ ಎಂದು ಗ್ರಾಹಕನ ಬೇಡಿಕೆ ನಿರ್ಲಕ್ಷಿಸಿದ ಅಂಚೆ ಕಚೇರಿಯೊಂದಕ್ಕೆ 15,000 ರೂ. ದಂಡ ವಿಧಿಸಿದ ಅಪರೂಪದ ಘಟನೆ ನಡೆದಿದೆ.
ಚೆನ್ನೈನ ಮಾನ್ಯ ಎಂಬುವರು 2023ರ ಡಿಸೆಂಬರ್ನಲ್ಲಿ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಮಾಡಲು 30 ರೂ. ನೀಡಿದ್ದರು. ಅದಕ್ಕೆ ನಿಗದಿತ ಶುಲ್ಕ 29.50 ರೂ. ಆಗಿತ್ತು. ಬಾಕಿ 50 ಪೈಸೆ ಕೊಡಲು ಸಿಬಂದಿ ಒಪ್ಪಿಲ್ಲ. ನಮ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೊತ್ತ ರೌಂಡಾಫ್ ಆಗಿದ್ದು, 30 ರೂ. ತೋರಿಸುತ್ತಿದ್ದು ಅಷ್ಟನ್ನೇ ಪಾವತಿ ಮಾಡಿ ಎಂದರು. ಅದಕ್ಕೆ ಒಪ್ಪದ ಮಾನ್ಯ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿ ಮಾಡುತ್ತೇನೆ ಎಂದರೂ ಸಿಬ್ಬಂದಿ ಒಪ್ಪಿರಲಿಲ್ಲ.
ಅಂಚೆ ಕಚೇರಿ ವಿರುದ್ಧ ಚೆನ್ನೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿ, ಪ್ರತಿ ದಿನ ರೌಂಡಾಫ್ ಮಾಡುವುದರಿಂದ ಬೃಹತ್ ಮೊತ್ತ ಸಂಗ್ರಹಿಸಿದಂತಾಗುತ್ತದೆ. ಇದು ಕಪ್ಪುಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸರಕಾರಕ್ಕೆ ಬರುವ ಜಿಎಸ್ಟಿ ನಷ್ಟವಾಗುತ್ತದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ವೇದಿಕೆ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
LATEST NEWS
ಮುಸ್ಲಿಂ ಯುವತಿಯ ವರಿಸಿದ ಹಿಂದು ಯುವಕ; ಪೊಲೀಸ್ ಠಾಣೆ ಮೆಟ್ಟಿಲೇರಿದ ಅಂತರ್ ಧರ್ಮೀಯ ವಿವಾಹ
ಮಂಗಳೂರು: ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗೆಂದು ಪೊಲೀಸರ ಮೊರೆ ಹೋದ ಸಂದರ್ಭದಲ್ಲಿ ಯುವತಿಯನ್ನು ಪೊಲೀಸರು ಯುವಕನ ಜೊತೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು, ಇದರಿಂದ ಪ್ರಿಯಕರ ಪೊಲೀಸ್ ಠಾಣೆ ಮುಂದೆಯೇ ಪ್ರತಿಭಟನೆ ಮಾಡಿದ್ದಾನೆ. ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ.
ಈ ಘಟನೆ ನಡೆದಿರುವುದು ಹಾವೇರಿ ಮಹಿಳಾ ಠಾಣೆಯಲ್ಲಿ. ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರ ಪ್ರತಿಭಟನೆ ಮಾಡಿದ್ದಾನೆ. ಕಳೆದ ಮೂರು ವರ್ಷದಿಂದ ಯುವಕ ಪ್ರದೀಪ್ ಬಣಕಾರ್ ಮತ್ತು ತಂಜಿಮ್ ಭಾನು ಪರಸ್ಪರ ಪ್ರೀತಿ ಮಾಡುತ್ತಿದ್ದು, ಹದಿನೈದು ದಿನದ ಹಿಂದೆ ಮನೆಯಿಂದ ಓಡಿ ಹೋಗಿ, ವಿವಾಹವಾಗಿದ್ದಾರೆ.
ಅಲ್ಲಿಂದ ನೇರವಾಗಿ ಹಾವೇರಿ ಮಹಿಳಾ ಪೊಲೀಸ್ ಠಾಣೆಗೆ ಜೋಡಿ ಬಂದಿದ್ದು, ಮನೆಯವರ ಬೆದರಿಕೆ ಇದ್ದುದ್ದರಿಂದ ರಕ್ಷಣೆ ಕೋರಿ ಬಂದಿದ್ದರು. ಪೊಲೀಸರು ಇದೀಗ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ, ಎಲ್ಲಾ ಸಮಸ್ಯೆ ಬಗೆಹರಿಸಿದಿದ್ದರೂ, ಆಕೆಯನ್ನು ಮಾತ್ರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಆಕೆಯನ್ನು ಮನೆಗೆ ಕಳಿಸಿಕೊಂಡುವಂತೆ ಪ್ರಿಯಕರ ಹೇಳಿದ್ದಾನೆ.
ಆದರೆ ಪೊಲೀಸರು ಈಗ ಹೊರಗೆ ಹೋದರೆ ಸಮಸ್ಯೆ ಆಗುತ್ತೆ, ಇಬ್ಬರಿಗೂ ಏನಾದರೂ ಮಾಡಬಹುದು. ಅದಕ್ಕೆ ಅಲ್ಲಿಯೇ ಕೂರಿಸಿದ್ದಾರೆ ಎಂದು ಹೇಳಿದ್ದಾನೆ. ನಾನು ನನ್ನ ಹೆಂಡ್ತಿನ ಕರೆದುಕೊಂಡು ಹೋಗಬೇಕು ಎಂದು ಸ್ಟೇಷನ್ ಮುಂದೆಯೇ ಕೂತುಕೊಳ್ತೇನೆ ಎಂದು ಯುವಕ ಪಟ್ಟು ಹಿಡಿದು ಕುಳಿತಿರುವುದಾಗಿ ವರದಿಯಾಗಿದೆ.
- FILM3 days ago
ಇರಲು ಮನೆ ಇರಲಿಲ್ಲ; ಮೆಜೆಸ್ಟಿಕ್ನಲ್ಲೇ ಸುತ್ತಾಡಿದ್ದ ಸಿಹಿ ಕುಟುಂಬ; ಕಷ್ಟಗಳ ನೆನೆದು ಪುಟಾಣಿ ಕಣ್ಣೀರು
- BIG BOSS6 days ago
ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ: ಬಿಗ್ ಬಾಸ್ ನಿಂದ ಹೊರಬಂದ ಜಗದೀಶ್ ಫಸ್ಟ್ ರಿಯಾಕ್ಷನ್!
- LATEST NEWS3 days ago
ನಿಜವಾದ ಸಾಧನೆ: ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ವೈದ್ಯರಾಗಲು ಹೊರಟ 4 ಸಹೋದರಿಯರು
- BIG BOSS5 days ago
ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ