ಮಣಿಪಾಲ: ಹೊರ ರಾಜ್ಯ ಮೂಲದ ಯುವಕ, ಯುವತಿಯರಿಬ್ಬರು ಪಿಜ್ಜಾ ಶಾಪ್‌ವೊಂದಕ್ಕೆ ಮದ್ಯ ಸೇವನೆ ಮಾಡಿ ಬಂದಿದ್ದು ಈ ಸಂದರ್ಭ ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ ಮಾಡಿದ ಘಟನೆ ಉಡುಪಿ ಮಣಿಪಾಲದ ಡಿಸಿ ಆಫೀಸ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವೇಳೆ ಪಿಜ್ಜಾ ಶಾಫ್ ನ ಸಿಬ್ಬಂದಿ ಇಬ್ಬರನ್ನು ಹೊರಗೆ ಕಳುಹಿಸಿದ್ದು ಆತನ ಮೇಲೆ ಯುವತಿ ಹಲ್ಲೆಗೆ ಮುಂದಾಗಿದ್ದಾಳೆ.
ಇತ್ತ ತಲೆಗೆ ತಣ್ಣೀರು ಹಾಕಿ ನಶೆ ಇಳಿಸಲು ಮುಂದಾದ ಸಾರ್ವಜನಿಕರ ಮೇಲೂ ಯುವತಿ ಹಲ್ಲೆಗೆ ಯತ್ನಿಸಿದ್ದಾಳೆ. ತನ್ನ ಜೊತೆಗಿದ್ದ ಯುವಕನಿಗೂ ನಶೆ ರಾಣಿ ತನ್ನ ಚಪ್ಪಲಿ ಏಟು ಕೊಟ್ಟಿದ್ದಾಳೆ.
ಮಧ್ಯದ ನಶೆಯಲ್ಲಿ ಇದ್ದ ಯುವತಿ ನಿಲ್ಲಲಾಗದೇ ಪದೇ ಪದೇ ರಸ್ತೆಯಲ್ಲಿ ಬೀಳ್ತಾ ಇದ್ದಳು. ಕೊನೆಗೆ ಯುವತಿಯನ್ನು ಮಣಿಪಾಲ ಪೊಲೀಸರು ಠಾಣೆ ಕರೆದುಕೊಂಡು ಹೋಗಿದ್ದಾರೆ.
ಆದರೆ ಕುಡಿದ ಮತ್ತಿನಲ್ಲಿದ್ದ ಆಕೆಯ ಮೇಲೆ ಸಾರ್ವಜನಿಕರು ಮನಸ್ಸು ಬಂದಂತೆ ಹಲ್ಲೆ ನಡೆಸಿದ್ದು ಹಾಗೆಯೇ ಪೊಲೀಸರ ಸಮ್ಮುಖದಲ್ಲೇ ಅವಳ ಮೇಲೆ ನೀರೆರಚಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.