Connect with us

    LATEST NEWS

    ಶೈಕ್ಷಣಿಕ ಶ್ರೇಷ್ಠತೆಗಾಗಿ ‘ಡಾ। ಫಖ್ರುದ್ದೀನ್ ಕುನಿಲ್’, ಗೆ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿ ಪ್ರಧಾನ

    Published

    on

    ಮಂಗಳೂರು/ದುಬೈ: ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಆಯೋಜಿಸಲಾದ ‘ದುಬೈ ಗಡಿನಾಡ ಉತ್ಸವ’ ವು ಅಕ್ಟೋಬರ್ 13ರಂದು, ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯಲ್ಲಿ ನಡೆಯಿತು.


    ಈ ವಿಶೇಷ ಕಾರ್ಯಕ್ರಮದಲ್ಲಿ ಅಕಾಡೆಮಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಿತು. ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಕುನಿಲ್ ಗ್ರೂಪ್ ಅಧ್ಯಕ್ಷರಾದ ‘ಡಾ। ಫಖ್ರುದ್ದೀನ್ ಕುನಿಲ್’, ಗೆ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿ ನೀಡಿ ಗೌರವಿಸಿತು.


    ಇವರ ನಾಲ್ಕು ಶಾಲೆಗಳು 7000 ವಿದ್ಯಾರ್ಥಿಗಳಿಗೆ ಪೋಷಕ ಭೂಮಿಯಾಗಿ ಮಾರ್ಪಟ್ಟಿವೆ. 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 100% ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿವೆ, ಇದು ಡಾ. ಫಖ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ.

    ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ದೊರೆತರೆ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್ ಅವರು ಬಿ.ಎ., ಬಿ.ಕಾಂ, ಬಿ.ಎಸ್ಸಿ ಮತ್ತು ಬಿ.ಬಿ.ಎ.ಯಲ್ಲಿ ಪದವಿ ಕೋರ್ಸ್‌ಗಳನ್ನು ಪರಿಚಯಿಸಲು ಯೋಜನೆಯನ್ನು ರೂಪಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಅವಕಾಶಗಳನ್ನು ಇನ್ನಷ್ಟು ಸಮೃದ್ಧಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.

    LATEST NEWS

    ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

    Published

    on

    ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ರಾಷ್ಟೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಘಟಕ ಮತ್ತು ಲಯನ್ಸ್ ಕ್ಲಬ್ ಕುಡ್ಲ ಇದರ ಸಹಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು.

    ಈ ಶಿಬಿರವನ್ನು ಶ್ರೀ ಶಿವಭಕ್ತಿ ಯೋಗ ಸಂಘದ ಸದಸ್ಯರಾದ ಶ್ರೀ ಕೆ ಪ್ರವೀಣ್ ಕುಮಾರ್ ಉದ್ಘಾಟಿಸಿದರು. ಗೌರವ ಅತಿಥಿಯಾಗಿ ಲಯನ್ಸ್ ಕುಡ್ಲ ಇದರ ಅಧ್ಯಕ್ಷರಾದ ಲಯನ್ ಪ್ರಮೋದ್ ರೈ ರವರು ಮಾತನಾಡಿ, ರಕ್ತದಾನ ಮಾಡುದರಿಂದ ನಾವು ಅರೋಗ್ಯವಾಗಿರುತ್ತೇವೆ. ನಮ್ಮಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದರು.

    ಮುಖ್ಯ ಅತಿಥಿಯಾಗಿ ಇಂಡಿಯನ್ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರವೀಣ್ ಮಾತನಾಡಿ, ರಕ್ತದಾನದಲ್ಲಿ ಜಾತಿ ಮತ ಭೇದವಿಲ್ಲ. ರಕ್ತದಾನ ಶ್ರೇಷ್ಠ ಮಹಾದಾನ ಎಂದು ಹೇಳಿ ರಕ್ತದ ಮಹತ್ವದ ಕುರಿತು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಪ್ರಕಾಶ್ ರವರು ರಕ್ತದಾನ ಮಾಡುದರಿಂದ ನಮ್ಮ ದೇಹದ ಅರೋಗ್ಯ ಮತ್ತು ನಮ್ಮ ಹೃದಯದ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

    ಇನ್ನೊರ್ವ ಮುಖ್ಯ ಅತಿಥಿಯಾಗಿ ಬಿ.ಎಡ್ ವಿಭಾಗದ ಪ್ರಾಂಶುಪಾಲರಾದ ಶ್ರೀ ಉದಯಕುಮಾರ್ ರವರು ಮಾತನಾಡಿ ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಯುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶ್ರೀ ವಸಂತ ಕಾರಂದೂರ್ ರವರು ರಕ್ತದಾನ ಮಹಾದಾನ, ರಕ್ತದಾನ ಮಾಡಿದವರು ಶ್ರೇಷ್ಠರು. ರಕ್ತಗೂ ಕೂಡ ಭೇದ-ಭಾವ ಇಲ್ಲ ಎಂದರು. ನಮ್ಮ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. ಕಬ್ಬಿಣ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದರು.

    ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿಯ ಸೀನಿಯರ್ ಮೆನೇಜರ್ ಕುಶಾಲಪ್ಪ ಗೌಡ ಲಯನ್ಸ್ ಕ್ಲಬ್ ಕುಡ್ಲದ ನಿವೃತ ಅಧ್ಯಕ್ಷರಾದ – ಕಾರ್ಯದರ್ಶಿ ಉಪಸ್ಥಿತರಿದ್ದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಶ್ರೀ ಯತೀನ್, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಧಿಕಾರಿ ಬಾಲಚಂದ್ರ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕಿ ಶ್ರೀಮತಿ ರವಿಕಲ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಉಪಕಾರ್ಯಕ್ರಮಧಿಕಾರಿ ಕುಮಾರಿ ಪ್ರತೀಕ್ಷಾ, ಉಪನ್ಯಾಸಕರಾದ ಉಮೇಶ್ ಹೆಗ್ಡೆ, ಕ್ಯಾಪ್ಟನ್ ಪ್ರವೀಣ್ ಭಾಗವಹಿಸಿದರು. ಕಾರ್ಯಕ್ರಮವನ್ನು ಧನುಶ್ರೀ ನಿರೂಪಿಸಿದರು. ನಿರೀಕ್ಷಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಶೇಲ್ಮಾ ವಂದಿಸಿದರು. ಒಟ್ಟು 90 ವಿದ್ಯಾರ್ಥಿಗಳು, ಹಳೇವಿದ್ಯಾರ್ಥಿಗಳು ರಕ್ತದಾನ ಮಾಡಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

    Continue Reading

    LATEST NEWS

    ನಾ*ಪತ್ತೆಯಾಗಿದ್ದ ವ್ಯಕ್ತಿ ಅ*ಸ್ಥಿಪಂಜರವಾಗಿ ಪತ್ತೆ!

    Published

    on

    ದಾವಣಗೆರೆ: ಕಡ್ಲೇಬಾಳು ಗ್ರಾಮದಿಂದ ನಿಗೂಢವಾಗಿ ನಾ*ಪತ್ತೆಯಾಗಿದ್ದ ವ್ಯಕ್ತಿಯ ಶ*ವ ಅಣಜಿ ಕೆರೆ ಬಳಿ ಅಸ್ಥಿಪಂಜರದ ರೂಪದಲ್ಲಿ ಪ*ತ್ತೆಯಾಗಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

     

    ಕಡ್ಲೇಬಾಳು ಗ್ರಾಮದ ತಿಪ್ಪೇಶ(42) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ತಿಪ್ಪೇಶ ಕಳೆದ 15 ದಿನದಿಂದ ನಾ*ಪತ್ತೆಯಾಗಿದ್ದು, ಆ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾ*ಪತ್ತೆಯಾಗಿದ್ದ ದಿನ ತಿಪ್ಪೇಶ್ ತೆಗೆದುಕೊಂಡು ಹೋಗಿದ್ದ ಬೈಕ್‌ ಅಣಜಿ ಕೆರೆ ಏರಿಯ ಬದಿ ಪೊದೆಗಳ ಮಧ್ಯೆ ಪತ್ತೆಯಾಗಿದ್ದು, ತಿಪ್ಪೇಶ ಅ*ಸ್ಥಿಪಂಜರದ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಅ*ಪಘಾತವೋ ಅಥವಾ ಯಾರಾದರೂ ಏನಾದರೂ ಮಾಡಿರಬಹುದಾ ಎಂಬುದು ತನಿಖೆ ನಂತರ ಗೊತ್ತಾಗಬೇಕಷ್ಟೇ. ಕುರಿಗಾಹಿಗಳು ಅ*ಸ್ಥಿಪಂಜರ ನೋಡಿದ ನಂತರವೇ ತಿಪ್ಪೇಶ ಮೃ*ತಪಟ್ಟಿರುವುದು ತಿಳಿದು ಬಂದಿದೆ.

    ತಿಪ್ಪೇಶನ ಅ*ಸ್ಥಿ ಎಂದು ತಿಳಿದದ್ದು ಹೇಗೆ ?

    ದಾವಣಗೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಕಿರಣಕುಮಾರ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬೈಕ್ ನಂಬರ್ ಪರಿಶೀಲಿಸಿದಾಗ ಅದು ಕಡ್ಲೇಬಾಳು ವಿಳಾಸ ತೋರಿಸಿದೆ. ಗ್ರಾಮಸ್ಥರಿಗೆ ವಿಚಾರಿಸಿದಾಗ, ಕಡ್ಲೆಬಾಳು ಗ್ರಾಮದ ನಾ*ಪತ್ತೆಯಾಗಿದ್ದ ತಿಪ್ಪೇಶನ ವಿಚಾರ ಗೊತ್ತಾಗಿದೆ. ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು ಶ*ವವನ್ನು ಗುರುತಿಸಿದ್ದಾರೆ. ಸದ್ಯಕ್ಕೆ ಕಡ್ಡೇಬಾಳು ಗ್ರಾಮದ ತಿಪ್ಪೇಶ ಸಾವಿನ ವಿಚಾರ ನಿಗೂಢವಾಗಿದೆ. ಇದು ಅ*ಪಘಾತದಿಂದವಾದ ಸಾವೇ ಅಥವಾ ಯಾರಾದರೂ ಕೊಲೆ ಮಾಡಿ, ಇಲ್ಲಿ ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.

    ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.‌ ಮಂಜುನಾಥ್, ವಿಜಯ್ ಕುಮಾರ್ ಎಂ‌. ಸಂತೋಷ್, ದಾವಣಗೆರೆ ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್. ಬಸವರಾಜ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    Continue Reading

    LATEST NEWS

    ವಿಹೆಚ್‌ಪಿ ಭೂಮಿ ಪೂಜೆಯಲ್ಲಿ ಪುತ್ತೂರು ಶಾಸಕ..! ಚರ್ಚೆ ಹುಟ್ಟುಹಾಕಿದ ಅಶೋಕ್‌ ರೈ..!

    Published

    on

    ಪುತ್ತೂರಿನಲ್ಲಿ ನಡೆದ ಸಂಘ ಪರಿವಾರದ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯಲ್ಲಿ ಶಾಸಕ ಹಾಗೂ ಮಾಜಿ ಶಾಸಕಿ ಇಬ್ಬರೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ವೇದಿಕೆ ಏರಿ ಗೌರವ ಕೂಡಾ ಸ್ವೀಕರಿಸಿದ್ದಾರೆ.

    ಸೈದ್ಧಾಂತಿಕವಾಗಿ ಕಾಂಗ್ರೆಸ್ ಪ್ರಭಲವಾಗಿ ವಿರೋಧಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಈ ಇಬ್ಬರು ಭಾಗವಹಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಭಾಗವಹಿಸಿದ ಇಬ್ಬರೂ ಸಂಘದ ನಿಷ್ಠಾವಂತರಾಗಿದ್ದು, ಕಾರಣಾಂತರದಿಂದ ಕಾಂಗ್ರೆಸ್‌ ಸೇರ್ಪಡೆಯಾದವರು ಎಂಬುದು ಇಲ್ಲಿ ಗಮನಾರ್ಹ. ಇದೇ ಕಾರಣಕ್ಕೆ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು, ಅವಧಿ ಮುಗಿದ ಮೇಲೆ ಅಶೋಕ್‌ ರೈ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ.

    ಬಿಜೆಪಿ ಟಿಕೇಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆಯ ಸಮೀಪದಲ್ಲಿ ಕಾಂಗ್ರೆಸ್ ಸೇರಿ ಅಶೋಕ್ ಕುಮಾರ್ ರೈ ಟಿಕೇಟ್ ಗಿಟ್ಟಿಸಿಕೊಂಡಿದ್ದರು. ಬಳಿಕ ಪುತ್ತೂರಿನಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಶಾಸಕರಾಗಿಯೂ ಆಯ್ಕೆ ಆಗಿದ್ದರು. ಆದ್ರೆ ಪುತ್ತೂರಿನಲ್ಲಿ ಸ್ವಂತ ಬಲದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಅಶೋಕ್ ಕುಮಾರ್ ರೈ ಬಲ ತುಂಬುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಇಂಬು ನೀಡುವಂತೆ ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಏರಿ ಕೇಸರಿ ಶಾಲು ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ವಲಯ ಮಾತ್ರವಲ್ಲದೆ ಬಿಜೆಪಿ ವಲಯದಲ್ಲೂ ಭಾರಿ ಚರ್ಚೆಗಳು ಆರಂಭವಾಗಿದೆ.

    Continue Reading

    LATEST NEWS

    Trending