Connect with us

    LATEST NEWS

    ಪ್ರೀತಿಸಿದ ಹುಡುಗ ಬೇಡ; ಯಾವ ಹೀರೋಗೂ ಕಮ್ಮಿ ಇರದವನು ಸಿಗಲಿ; ಬನಶಂಕರಿ ದೇವಿಗೆ ಬಂದಿವೆ ವಿಚಿತ್ರ ಬೇಡಿಕೆಯ ಪತ್ರಗಳು!

    Published

    on

    ಬೆಂಗಳೂರು : ದೇವಾಲಯಗಳ ಹುಂಡಿಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನೋಟಿನಲ್ಲೋ ಅಥವಾ ಚೀಟಿಯಲ್ಲಿ ಬರೆದೋ ಹಾಕಿರುವುದು ಸಿಗುತ್ತದೆ. ಪರೀಕ್ಷೆಯಲ್ಲಿ ನನ್ನನ್ನು ಪಾಸ್ ಮಾಡು ದೇವರೇ ಎಂಬ ಕೋರಿಕೆ ಅಥವಾ ಪ್ರೀತಿಸಿದ ಹುಡುಗ/ ಹುಡುಗಿ ಸಿಗಲಿ ಎಂಬ ನಿವೇದನೆಯೂ ಇರುತ್ತದೆ. ಪ್ರಸಿದ್ಧ ದೇವಾಲಯಗಳ ಹುಂಡಿಗಳಲ್ಲಿ ಸಾಮಾನ್ಯವಾಗಿ ಪತ್ರ ಸಿಗುತ್ತಿರುತ್ತದೆ.

    ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ವಿಭಿನ್ನ ಬೇಡಿಕೆಗಳ ಪತ್ರ ಸಿಕ್ಕಿವೆ. ಇಲ್ಲಿ ಸಿಕ್ಕಿರುವ ಪತ್ರಗಳಲ್ಲಿ ಒಂದೊಂದು, ಒಂದೊಂದು ತೆರನಾದ ನಿವೇದನೆಯುಳ್ಳ ಪತ್ರಗಳು.

    ಈಗ ಅವನು ಬೇಡ, ಯಾವ ಹೀರೋಗೂ ಕಮ್ಮಿ ಇರದವನು ಸಿಗಲಿ :

    ಈ ಬಾರಿ ಸಿಕ್ಕಿರುವ ಪತ್ರದಲ್ಲಿ ವಿಭಿನ್ನ ಬೇಡಿಕೆಯಿದೆ. ಈ ಪತ್ರಗಳನ್ನು ನೋಡಿ ಆಡಳಿತ ಮಂಡಳಿಯವರು ಶಾಕ್ ಆಗಿದ್ದಾರೆ. “ಅಮ್ಮ ನಾನು ತಪ್ಪು ಮಾಡಿದ್ದೇನೆ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ಟರೇ ಯಾರನ್ನು ಮದುವೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ ನನ್ನ ಮದುವೆಯನ್ನು, ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರುವ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮಾಡಿಸು‌” ಎಂದು ಪತ್ರವೊಂದರಲ್ಲಿ ಬರೆಯಲಾಗಿದೆ.

    ಅಲ್ಲದೇ, “ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನನ್ನನ್ನು ಹೆಚ್ಚಾಗಿ ಪ್ರೀತಿ ಮಾಡಬೇಕು‌. ನಾನೆಂದರೇ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು, ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಾ ಅಂತ ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕು ಅಂತ ಹುಡುಗನ ಜೊತೆ ಮದುವೆ ಮಾಡಿಸು” ಎಂದು ಯುವತಿಯೊಬ್ಬಳು ದೇವರಿಗೆ ಪತ್ರ ಬರೆದಿದ್ದಾಳೆ.

    ರಮ್ಯ ಮತ್ತು ಉಮೇಶ್ ದೂರವಾಗಲಿ…ತಾಯಿ ಆಸ್ತಿ ನನಗೇ ಸಿಗಲಿ…

    ಸಿಕ್ಕಿರುವ ಪತ್ರವೊಂದರಲ್ಲಿ ಆಸ್ತಿಯ ಬಗ್ಗೆ ಬರೆಯಾಗಲಿ. ‘ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ನನಗೆ ಯಾವುದೇ ಅಡ್ಡಿಯಾಗದೆ ಬರುವಂತೆ ಮಾಡು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋಥರ ಮಾಡು ತಾಯಿ ಎಂದು ಬರೆಯಾಗಲಿದೆ.

    ಮತ್ತೊಂದು ಪತ್ರದಲ್ಲಿ ಅಮ್ಮ ತಾಯಿ, ರಮ್ಯ ಮತ್ತು ಉಮೇಶ್ ಇಬ್ಬರು ದೂರ ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗುತ್ತದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂದು ಪತ್ರ ಬರೆದಿದ್ದಾರೆ.

    ಇದನ್ನೂ ಓದಿ : ಕಾರು ಪಲ್ಟಿ; ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಸಾ*ವು

    ಇನ್ನೊಂದು ಪತ್ರದಲ್ಲಿ ತಾಯಿ ಮಗನ ಬಗ್ಗೆ ಆತನ ಸಾಂಸಾರಿಕ ಬದುಕಿನ ಬಗ್ಗೆ ಪ್ರಾರ್ಥಿಸಿದ್ದಾಳೆ. ಅಮ್ಮ ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ, ನನ್ನ ಮಗ ಶಶಾಂಕ್​ನ ನಿಶ್ಚಿತಾರ್ಥ ಆಗಿದೆ. ನನ್ನ ಮಗನನ್ನು ಮದುವೆ ಆಗುತ್ತಿರುವ ಹುಡುಗಿ ರಮ್ಯ ನನ್ನ ಮಗನ ಜೊತೆ ಚೆನ್ನಾಗಿದೆ ಇರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೆ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ ಎಂದು ಬರೆಯಲಾಗಿದೆ.

     

    dehali

    ಸ್ಪೀಕರ್ ಹುದ್ದೆಗೆ ಚುನಾವಣೆ..! ಇತಿಹಾಸದಲ್ಲೇ ಮೊದಲು..!

    Published

    on

    ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲು ಎನ್‌ಡಿಎ ಹಿಂದೇಟು ಹಾಕಿದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.


    ಹದಿನೆಂಟನೇ ಲೋಕಸಭೆಯಲ್ಲಿ ಹತ್ತು ವರ್ಷಗಳ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಇದೇ ಕಾರಣದಿಂದ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಲು ಆರಂಭಿಸಿವೆ. ಅಧಿವೇಶನದ ಆರಂಭದಲ್ಲಿ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿಯ ಕಾಂಗ್ರೆಸ್ ಸಂಸದರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ನೇಮಿಸಲಾಗಿತ್ತು. ಇದೀಗ 18 ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ನಿಂದ ಓಂ ಬಿರ್ಲಾ ಅವರ ಹೆಸರು ಮತ್ತೆ ಮುಂದಿಡಲಾಗಿದೆ. ಒಮ್ಮತದ ಸ್ಪೀಕರ್ ಆಯ್ಕೆಯ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷದ ನಡುವೆ ನಡೆದ ಮಾತುಕತೆ ವಿಫಲವಾಗಿದೆ.

    ಇದನ್ನು ಓದಿ: ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ

    ಓಂ ಬಿರ್ಲಾ ಅವರನ್ನು ಒಮ್ಮತದ ಆಯ್ಕೆಯಾಗಿ ಪರಿಗಣಿಸಲು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಕಾನೂನುಬದ್ಧವಾಗಿ ವಿರೋಧ ಪಕ್ಷಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮನವಿ ಮಾಡಿತ್ತು. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕೂಡ ನಡೆದಿತ್ತು. ಆದರೆ ವಿರೋಧ ಪಕ್ಷದ ಮನವಿಗೆ ಎನ್‌ಡಿಎನಿಂದ ಸಕಾರಾತ್ಮಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
    ಎನ್‌ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಇರುವ ಕಾರಣ ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ತೊಂದರೆ ಇಲ್ಲ. ಆದ್ರೆ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ . ಹೀಗಾಗಿ ಅಸಹಕಾರದ ಹೆಜ್ಜೆಯನ್ನು ವಿರೋಧ ಪಕ್ಷ ಇಡಲು ಅವರೇ ಪ್ರೇರೇಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    Continue Reading

    LATEST NEWS

    ದಕ್ಷಿಣ ಭಾರತದ ಜೈನ ಮುಖಂಡ, ಬೆಳಗಾವಿಯ ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲ ಇನ್ನಿ*ಲ್ಲ

    Published

    on

    ಬೆಳಗಾವಿ: ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾವಸಾಹೇಬ ಪಾಟೀಲ ಅವರು ನಿಧ*ನರಾಗಿದ್ದಾರೆ. ರಾವಸಾಹೇಬ ಪಾಟೀಲರು ಜೈನ ಮುಖಂಡರು, ಖ್ಯಾತ ಉದ್ಯಮಿಯೂ ಆಗಿದ್ದರು.

    ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸಹಕಾರಿ ಧುರೀಣರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದು ಬೆಳಗ್ಗೆ ಇ*ಹಲೋಕವನ್ನು ತ್ಯ*ಜಿಸಿದ್ದಾರೆ.

    ರಾವಸಾಹೇಬ ಪಾಟೀಲರ ನಿ*ಧನದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳ ಆಂ*ಕ್ರದನ ಮುಗಿಲು ಮುಟ್ಟಿದೆ. ಮೃ*ತರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಪಟ್ಟಣದಲ್ಲಿ ಇಂದು ಸಂಜೆ ಅಂ*ತ್ಯಸಂ*ಸ್ಕಾರ ನಡೆಯಲಿದೆ.

    ರಾವಸಾಹೇಬ ಪಾಟೀಲರು ಅರಿಹಂತ ಉದ್ಯೋಗ ಸಮೂಹ ಸಂಸ್ಥೆಯ ಸಂಸ್ಥಾಪಕ‌ ಅಧ್ಯಕ್ಷರಾಗಿದ್ದರು. ಹಲವಾರು ಉದ್ಯಮ ಜೊತೆಗೆ ಅರಿಹಂತ ಬ್ಯಾಂಕ್‌ ಶಾಖೆಗಳನ್ನ ಹೊಂದಿದ್ದರು. ಸದ್ಯ ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    Continue Reading

    LATEST NEWS

    ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮನೆಯಲ್ಲಿ ಅ*ಗ್ನಿ ಅವಘಡ

    Published

    on

    ಮಂಗಳೂರು/ಶಿರಸಿ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಯಲ್ಲಿ ಮಂಗಳವಾರ(ಜೂ.25) ಅ*ಗ್ನಿ ಅವಘ*ಡ ಸಂಭವಿಸಿದೆ.


    ಶಿರಸಿಯ ಕೆ.ಎಚ್.ಬಿ. ಕಾಲೋನಿಯಲ್ಲಿರುವ ಅನಂತಕುಮಾರ್ ಹೆಗಡೆಯವರ ಮನೆಯೊಳಗಿನ ಜಿಮ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂ*ಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

    ಬೆಂ*ಕಿಯಿಂದ ಜಿಮ್‌ನಲ್ಲಿ ಇದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಾಜಿ ಸಂಸದ ಮತ್ತು ಅವರ ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ‌ ನಡೆದಿದೆ.

    Continue Reading

    LATEST NEWS

    Trending