Connect with us

MANGALORE

ಮಂಗಳೂರು: ರೇಖಾ.ಕೆ.ಎಸ್‌ಗೆ ಡಾಕ್ಟರೇಟ್‌ ಪದವಿ

Published

on

ಮಂಗಳೂರು: ಮಂಗಳೂರು ನಗರದ ಸೂಟರ್‌ಪೇಟೆಯ ರೇಖಾ.ಕೆ.ಎಸ್ ಅವರ ‘ರತ್ನಕುಮಾರ್ ಸಾಂಭರಿಯಾ ಕೀ ಕಹಾನಿಯೊ ಮೆ ಅಭಿವ್ಯಕ್ತ್ ದಲಿತ್ ಚೇತನ’ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ.


ವಿವಿಯ ಹಿಂದಿ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಂಯೋಜಕಿ ಡಾ. ಸುಮಾ. ಟಿ. ರೋಡನ್ನವರ್ ಅವರ ಮಾರ್ಗದರ್ಶನದಲ್ಲಿ ಇವರು ಪ್ರಬಂಧ ರಚಿಸಿದ್ದಾರೆ.

ಪ್ರಸ್ತುತ ಇವರು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ, ಕೊಣಾಜೆ ಇಲ್ಲಿ ಹಿಂದಿ ಉಪನ್ಯಾಸಕಿರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಮತಿ.ಕೆ ಮತ್ತು ಕೃಷ್ಣ ಸೂಟರ್ ಪೇಟೆ ಅವರ ಪುತ್ರಿ. ಏ. 23 ರಂದು ಮಂಗಲೂರು ವಿವಿಯಲ್ಲಿ ನಡೆಯಲಿರುವ 40ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ನಡೆಯಲಿದೆ.

DAKSHINA KANNADA

Mangaluru: ಕ್ರಿಕೆಟ್ ಮೈದಾನಕ್ಕೆ ಗೂಳಿ ಎಂಟ್ರಿ- ಯರ್ರಾಬಿರ್ರಿ ಓಡಿದ ಆಟಗಾರರು..!

Published

on

ಮಂಗಳೂರು: ಕ್ರಿಕೆಟ್ ಪಂದ್ಯಾವಳಿ ನಡೆಯುವ ವೇಳೆ ಇದ್ದಕಿದ್ದಂತೆ ಗೂಳಿಯೊಂದು ಮೈದಾನಕ್ಕಿಳಿದು ಅಲ್ಲಿದ್ದ ಪ್ರತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋದ ಘಟನೆಯೊಂದು ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳವಾರ ಸಮೀರ್ ಎಂಬವರ ಟ್ವಿಟರ್ ಖಾತೆಯಲ್ಲಿ ಹಾಕಿರುವ ವೀಡಿಯೋ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಎಲ್ಲಿ ನಡೆದದ್ದು ಎಂಬುದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ಭಿನ್ನ ಭಿನ್ನ ಹಾಸ್ಯಾಸ್ಪದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವೀಡಿಯೋದಲ್ಲಿರುವಂತೆ ಎರಡು ಗೂಳಿಗಳು ಕಾದಾಡಿಕೊಂಡಿವೆ. ಬಳಿಕ ಎರಡೂ ಗೂಳಿಗಳು ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಬಳಿಗೆ ಬಂದಿವೆ. ಒಂದು ಗೂಳಿ ಮೈದಾನಕ್ಕಿಳಿದು ಅಲ್ಲಿದ್ದ ಆಟಗಾರರನ್ನು ಬೆನ್ನಟ್ಟಿದೆ. ಈ ಸಂದರ್ಭದಲ್ಲಿ ಆಟಗಾರರು ಬದುಕಿದೆಯಾ ಬಡ ಜೀವ ಎಂದು ಎದ್ನೋ ಬಿದ್ನೋ ಎಂದು ಓಡತೊಡಗಿದ್ದಾರೆ. ಘಟನೆಯಲ್ಲಿ ಯಾವುದೇ ಅಪಾಯ ಉಂಟಾದ ಬಗ್ಗೆ ಮಾಹಿತಿ ಇಲ್ಲ.

Continue Reading

DAKSHINA KANNADA

ಆರ್‌. ಅಶೋಕ್‌ ವಿರುದ್ಧ ಬಜರಂಗದಳ ಗರಂ – ಮಂಗಳೂರಿಗೆ ಬನ್ನಿ ಎಂದು ಸವಾಲ್

Published

on

ಮಂಗಳೂರು: ಪಬ್‌ ದಾಳಿ ವಿಚಾರದಲ್ಲಿ ನಾನು ಯಾವ ಒತ್ತಡಕ್ಕೂ ಒಳಗಾಗದೆ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದು, ಇದೀಗ ಬಜರಂಗದಳದ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭಾ ಅಧಿವೇಶನದಲ್ಲಿ ಮಂಗಳೂರಿನ ಜೆರೋಸಾ ಶಾಲೆಯ ವಿಚಾರದ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್‌ ಅಶೋಕ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಗೃಹ ಸಚಿವರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಉದಾಹರಣೆ ನೀಡಿದ ಅಶೋಕ್ ಈ ವಿಚಾರ ಹೇಳಿದ್ದಾರೆ. ಆದ್ರೆ ಆರ್. ಅಶೋಕ್ ಅವರ ಹೇಳಿಕೆ ಈಗ ಜಿಲ್ಲೆಯ ಬಜರಂಗದಳದ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿದೆ. ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಬಗ್ಗೆ ಬರೆದಿರುವ ಬಜರಂಗಳದ ಜಿಲ್ಲಾ ಸಹಸಂಯೋಜಕ ಪುನೀತ್ ಅತ್ತಾವರ ಅಶೋಕ್ ವಿರುದ್ಧ ಕಿಡಿ ಕಾರಿದ್ದಾರೆ. ಆರ್,ಅಶೋಕ್ ಅವರ ಹೆಸರು ಉಲ್ಲೇಖಿಸಿ “ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಕ್ಕಡ ರೀತಿ ಬಳಸಬೇಡಿ” ಎಂದಿದ್ದಾರೆ. ಇನ್ನು ಮುಂದುವರೆದು “ಅಡ್ಜೆಸ್ಟ್‌ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆ ಇಲ್ಲಾ” ” ಪ್ರತಿಪಕ್ಷ ನಾಯಕನಾಗಿರುವ ನೀವು ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ” ” ಹಿಂದೂ ವಿರೋಧಿ ಕೃತ್ಯದ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನಿವೋಬ್ಬರು ಹೆಚ್ಚಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಆರ್‌ .ಅಶೋಕ್ ಬಜರಂಗದಳದ ವಿರುದ್ಧ ಆಡಿರುವ ಮಾತುಗಳನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಬೇಕು ಎಂದು ಬರೆದುಕೊಂಡಿದ್ದಾರೆ. ಮಂಗಳೂರಿನ ವೆಲೆನ್ಸಿಯಾದ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಯನ್ನು ಸರಿಯಾಗಿ ನಿಭಾಯಿಸಿ ಎಂದು ಗೃಹ ಸಚಿವರಿಗೆ ಸಲಹೆ ನೀಡಿದ್ದರು.

Continue Reading

DAKSHINA KANNADA

ಸೇಂಟ್‌ ಜೆರೋಸಾ ಶಾಲೆ ಕೇಸ್: ಮೀಡಿಯಾಗೆ ಹೇಳಿಕೆ ಕೊಟ್ಟ ಹಿಂದು ಶಿಕ್ಷಕಿ ಸಸ್ಪೆಂಡ್..!

Published

on

ಮಂಗಳೂರು: ಸೇಂಟ್ ಜೆರೊಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮ ಅವಹೇಳನದ ಪಾಠ ಆರೋಪ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ತೊಕ್ಕೊಟ್ಟುವಿನ ಹೋಲಿ ಏಂಜಲ್ ಶಾಲೆಯ ಪ್ರಾಥಮಿಕ ತರಗತಿ ಶಿಕ್ಷಕಿ ಕವಿತಾ ಅವರನ್ನು ಅಮಾನತು ಮಾಡಲಾಗಿದೆ.

ಶಿಕ್ಷಕಿ ಕವಿತಾ ಅವರ ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಮಗಳ ಶಾಲೆಯಲ್ಲಿ ಕೇಳಿ ಬಂದ ಆರೋಪ ಅಂದರೆ ಫೆಬ್ರವರಿ 10ರಂದು ಶಿಕ್ಷಕಿ ಕವಿತಾ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಗೆ ಬಂದಿದ್ದರು. ಈ ವೇಳೆ ಕವಿತಾ ಅವರು ಶಾಲೆ ವಿರುದ್ಧ ನೀಡಿದ್ದ ಹೇಳಿಕೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೇ ಹೋಲಿ ಏಂಜಲ್ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಹುದ್ದೆಯಿಂದಲೇ ವಜಾ ಮಾಡಿದೆ ಎಂದು ಶಿಕ್ಷಕಿ ಕವಿತಾ ದೂರಿದ್ದಾರೆ. ಅಲ್ಲದೆ ಈ ಘಟನೆ ಬಳಿಕ ಕವಿತಾ ಅವರ ಮೊಬೈಲ್‍ಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಅತ್ಯಂತ ಅಶ್ಲೀಲವಾಗಿ ತನಗೆ ಬೇರೆ ಬೇರೆ ನಂಬರ್‌ಗಳಿಂದ ಕರೆಗಳು ಬರುತ್ತಿದ್ದು, ಈ ಎಲ್ಲಾ ನಂಬರ್‌ಗಳು ಹಾಗೂ ಆಡಿಯೋ ರೆಕಾರ್ಡ್‌ಗಳನ್ನು ನಾನು ಕಂಕನಾಡಿ ಪೊಲೀಸರಿಗೆ ನೀಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಕವಿತಾ ಮಾಧ್ಯಮಕ್ಕೆ ಹೇಳಿದ್ದಾರೆ.

Continue Reading

LATEST NEWS

Trending