Connect with us

    LATEST NEWS

    ಈ ವರುಷ ‘ತುಳಸಿ ವಿವಾಹ’ ಯಾವಾಗ ಗೊತ್ತಾ? ಪೂಜಾ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

    Published

    on

    ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ವರ್ಷಕೊಮ್ಮೆ ತುಳಸಿ ವಿವಾಹ ನಡೆಸಲಾಗಿದ್ದು, ತುಳಸಿ ವಿವಾಹದಲ್ಲಿ ತುಳಸಿ ಸಸ್ಯದ ಮದುವೆಯನ್ನು ವಿಷ್ಣುವಿನ ಸಾಲಿಗ್ರಾಮ್ ರೂಪದೊಂದಿಗೆ ನಡೆಸಲಾಗುತ್ತದೆ.

    ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಮಗಳನ್ನು ಮದುವೆಯಲ್ಲಿ ನೀಡುವಷ್ಟೇ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ವರ್ಷ ತುಳಸಿ ವಿವಾಹ ಯಾವಾಗ ನಡೆಯುತ್ತದೆ, ಮುಹೂರ್ತ ಸಮಯ, ಪೂಜಾ ವಿಧಾನಗಳ ಬಗೆಗೆ ಇಲ್ಲಿ ತಿಳಿಯೋಣ

    ಈ ಬಾರಿಯ ತುಳಸಿ ವಿವಾಹ :

    ಪಂಚಾಂಗದ ಪ್ರಕಾರ, ನವೆಂಬರ್ 13 ರಂದು ಬರುವ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹ ಪೂಜೆಯನ್ನು ನಡೆಸಲಾಗುತ್ತದೆ. ದ್ವಾದಶಿ ತಿಥಿ ನವೆಂಬರ್ 12 ರಂದು ಸಂಜೆ 04:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 13 ರಂದು ಮಧ್ಯಾಹ್ನ 01:01 ಕ್ಕೆ ಕೊನೆಗೊಳ್ಳುತ್ತದೆ.

    ತುಳಸಿ ವಿವಾಹ ಆಚರಣೆ ಹೇಗೆ ಮಾಡಬೇಕು :

    ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಮತ್ತು ಕೆಂಪು ಅಥವಾ ಹಳದಿ ಬಟ್ಟೆಗಳನ್ನು ಧರಿಸಿ. ಮಂತ್ರಗಳನ್ನು ಪಠಿಸುವಾಗ, ವಿಷ್ಣುವನ್ನು ಪ್ರಾರ್ಥಿಸಿ. ಗೋಧೂಲಿ ವೇಲಾ ಸಮಯದಲ್ಲಿ ಶಾಲಿಗ್ರಾಮ್ ಜೀ ಮತ್ತು ತುಳಸಿಯ ವಿವಾಹ ಸಮಾರಂಭವನ್ನು ನಡೆಸಿ. ಈ ಸಮಯದಲ್ಲಿ, ತುಳಸಿಯನ್ನು 16 ಆಭರಣಗಳಿಂದ ಅಲಂಕರಿಸಿ. ಶಾಲಿಗ್ರಾಮ್ ಜಿ ಅವರಿಗೆ ಶ್ರೀಗಂಧದ ಪೇಸ್ಟ್ ಹಚ್ಚಿ ಮತ್ತು ಅವರಿಗೆ ಹಳದಿ ಉಡುಪನ್ನು ಧರಿಸಿ. ಹೂವುಗಳು, ಹೂಮಾಲೆಗಳು, ಹಣ್ಣುಗಳು, ಪಂಚಾಮೃತ, ಧೂಪದ್ರವ್ಯ, ದೀಪಗಳು, ಪರದೆ ಮತ್ತು ಇತರ ಅಲಂಕಾರಗಳನ್ನು ಅರ್ಪಿಸಿ.

    ಮನೆಯಲ್ಲಿ ತುಳಸಿ ಗಿಡವನ್ನು ಹೊಂದಿರುವುದು ಶುಭವೆಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಸಂತೋಷ, ಸಮೃದ್ಧಿ ಮತ್ತು ಲಕ್ಷ್ಮಿ ದೇವಿಯ ಉಪಸ್ಥಿತಿಯನ್ನು ಜೀವನದಲ್ಲಿ ತರುತ್ತದೆ ಎಂದು ನಂಬಲಾಗಿದೆ.

    ತುಳಸಿ ವಿವಾಹ ಸಾಮಗ್ರಿಗಳು :

    ತುಳಸಿ ವಿವಾಹಕ್ಕೆ ಬಳಸುವ ಸಾಮಾಗ್ರಿಗಳು ಮರದ ವೇದಿಕೆ, ಕುಂಕುಮ, ಹಣ್ಣುಗಳು, ಹೂವುಗಳು, ಶ್ರೀಗಂಧ, ಧೂಪದ್ರವ್ಯ, ತುಪ್ಪದ ದೀಪ, ಸಿಂಧೂರ, ಹೂವಿನ ಹಾರ, ಕೆಂಪು ಸ್ಕಾರ್ಫ್, ಮೇಕಪ್ ವಸ್ತುಗಳು, ಕಬ್ಬು, ಕಲಶ, ಗಂಗಾನದಿಯ ಪವಿತ್ರ ನೀರು, ಮಾವಿನ ಎಲೆಗಳು ಮತ್ತು ಸಿಹಿತಿಂಡಿಗಳು ಇತ್ಯಾದಿಗಳು ಸೇರಿವೆ.

    LATEST NEWS

    ಸ್ವಯಂ ಚಿಕಿತ್ಸೆ ಮಾಡುವ ಮುಖಾಂತರ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ; ಹೇಗೆ ಗೊತ್ತಾ ?

    Published

    on

    ಮಂಗಳೂರು/ಹೊಸದಿಲ್ಲಿ: ಯಾವುದೇ ರಿತಿಯ ಮೆಡಿಸಿನ್‌ಗಳಿಲ್ಲದೆ ಲ್ಯಾಬ್‌ನಲ್ಲಿ ಬೆಳೆಸಲಾದ ವೈರಸ್‌ಗಳನ್ನು ಬಳಸಿ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು ವಿಜ್ಞಾನಿಯೊಬ್ಬರು ಗುಣಪಡಿ­ಸಿ­­­­ಕೊಂ­ಡಿರುವ ಆಶದಚರ್ಯಕರ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.

    ಬಿಯಾಟ ಹ್ಯಾಲ್ಸಿ (49) ಎಂಬ ವಿಜ್ಞಾನಿ ಈ ಸ್ವಯಂ ಪ್ರಯೋಗಕ್ಕೆ ಒಳಗಾಗಿ ಯಶಸ್ಸು ಸಾಧಿಸಿರುವ ಘಟನೆ ನಡೆದಿದೆ.

    ಹ್ಯಾಲ್ಸಿ 2020ರಲ್ಲಿ ಸ್ತನ ಕ್ಯಾನ್ಸರ್‌ಗೆ ಕೀಮೋಥೆರಪಿ ಮಾಡಿಸಿಕೊಂಡು ಗುಣಮುಖರಾಗಿ­ದ್ದರು. ಬಳಿಕ ಮತ್ತೂಮ್ಮೆ ಕ್ಯಾನ್ಸರ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿ, ಲ್ಯಾಬ್‌ನಲ್ಲಿ ಬೆಳೆಸಿದ ವೈರಸ್‌ಗಳನ್ನು ಇಂಜೆಕ್ಟ್ ಮಾಡಿಕೊಂಡು ಗುಣಮುಖ­ರಾ­­ಗಿದ್ದಾರೆ ಎಂದು ವರದಿಗಳು ತಿಳಿಸಿವೆ.

     

    ಇದನ್ನೂ ಓದಿ : ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್‌ಪೋರ್ಟ್ ಪಡೆದ ಮಗ .. ! 

     

    ಏನಿದು ಲ್ಯಾಬ್‌ ವೈರಸ್‌?:

    ಕ್ಯಾನ್ಸರ್‌ ಚಿಕಿತ್ಸೆಗಾಗಿ ಲ್ಯಾಬ್‌ನಲ್ಲಿ ಬೆಳೆಸಿದ ವೈರಸ್‌ಬಳಕೆ ಮಾಡುವುದನ್ನು ವೈದ್ಯರು ಅನುಸರಿಸುತ್ತಾರೆ. ಈ ವೈರಸ್‌ಗಳು ಕ್ಯಾನ್ಸರ್‌ಕಾರಕ ವೈರಸ್‌ಗಳನ್ನು ಕೊಲ್ಲುವ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುತ್ತವೆ. ಕ್ಯಾನ್ಸರ್‌ನ ಮೊದಲ ಹಂತದಲ್ಲಿ ಮಾತ್ರ ಈ ಮಾದರಿ ಚಿಕಿತ್ಸೆಯನ್ನು ಬಳಸಲಾ­ಗುತ್ತಿತ್ತು. ಆದರೆ, ಈಗ ಕೊನೇ ಹಂತದ ಕ್ಯಾನ್ಸರ್‌ ಸಹ ಗುಣವಾಗಿದೆ ಎನ್ನುವುದು ವಿಜ್ಞಾನಿಗಳನ್ನೂ ಅಚ್ಚರಿಗೆ ದೂಡಿದೆ.

    Continue Reading

    LATEST NEWS

    ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್‌ ಆಹಾರದಿಂದಲೇ 32 ಕೆಜಿ ಸ್ಲಿಮ್​ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್​!

    Published

    on

    ದೇಹದ ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ವಿಭಿನ್ನವಾಗಿರುತ್ತದೆ. ಕೆಲವರು ಕೇವಲ ಕಟ್ಟುನಿಟ್ಟಿನ ಆಹಾರಕ್ರಮ ಮತ್ತು ಪದ್ದತಿಯನ್ನು ಅನುಸರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ, ಇನ್ನೂ ಕೆಲವರು ಕಟ್ಟುನಿಟ್ಟಿನ ಡಯಟ್ ಜೊತೆಗೆ ಜಿಮ್‌ಗೆ ಹೋಗಿ ಕಠಿಣವಾದ ವ್ಯಾಯಾಮಗಳನ್ನು ಮಾಡಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ತೂಕ ಇಳಿಸಿಕೊಂಡ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗಿದೆ ನೋಡಿ.

    ಹೌದು ಅಂಕುರ್ ಛಾಬ್ರಾ ಅವರು ಕೇವಲ 90 ದಿನಗಳಲ್ಲಿ ಎಂದರೆ ಮೂರು ತಿಂಗಳುಗಳಲ್ಲಿ ಸುಮಾರು 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮೊದಲೆಲ್ಲಾ ತಮ್ಮ ಹೆಚ್ಚಿನ ತೂಕದಿಂದ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದ ಇವರು ಈಗ ತೂಕ ಕಡಿಮೆ ಮಾಡಿಕೊಂಡು ಮೊದಲಿಗಿಂತ ಫಿಟ್ ಆಂಡ್ ಫೈನ್ ಆಗಿದ್ದಾರೆ.

    ಅಂಕುರ್ ಛಾಬ್ರಾ

    ತೂಕ ಜಾಸ್ತಿ ಇದ್ದಾಗ ಅಂಕುರ್ ಅವರಿಗೆ ತುಂಬಾನೇ ಸಮಸ್ಯೆಗಳು ಕಾಡುತ್ತಿದ್ದವಂತೆ.. ಅಧಿಕ ತೂಕವನ್ನು ಹೊಂದಿದ್ದ ಕಾರಣ ನನ್ನ ಕುಟುಂಬದ ಸದಸ್ಯರೊಡನೆ ಹೆಚ್ಚು ಕಾಲ ಓಡಾಡಲು ಮತ್ತು ಅವರೊಂದಿಗೆ ಉತ್ಸಾಹದಿಂದ ಸಮಯ ಕಳೆಯಲು ತುಂಬಾನೇ ಕಷ್ಟವಾಗುತ್ತಿತ್ತು, ಇದೇ ನನಗೆ ತೂಕ ಇಳಿಸಿಕೊಳ್ಳಲು ಮುಖ್ಯವಾದ ಪ್ರೇರಣೆ ಆಯಿತು ಅಂತ ಹೇಳುತ್ತಾರೆ ಅಂಕುರ್.

    90 ದಿನಗಳಲ್ಲಿ 32 ಕೆಜಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಂಡಿದ್ದಾರೆ?

    ಅಂಕುರ್ ಛಾಬ್ರಾ ಅವರು ಅತ್ಯಂತ ಸರಳವಾದ ಸಮರ್ಪಿತ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಸುಮಾರು 90 ದಿನಗಳಲ್ಲಿ 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅಂಕುರ್ ಅವರು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೆಚ್ಚಾಗಿ ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರು. ಕೇವಲ ಪ್ರೋಟೀನ್ ಭರಿತ ಆಹಾರ ಮತ್ತು ಅವರು ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ವರ್ಕೌಟ್‌ ಮಾಡ್ತಿದ್ದಾಗೆ ಹೇಳಿದ್ದಾರೆ. ಅಂಕುರ್ ಛಾಬ್ರಾ ಅವರ ವಿವರವಾದ ದಿನಚರಿ ಹೀಗಿತ್ತು..

    ಬೆಳಿಗ್ಗೆಯ ಆಹಾರ

    ಅಂಕುರ್ ಅವರು ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟ ನೀರು, ಜೀರಿಗೆ ನೀರು ಅಥವಾ ಅಜ್ವೈನ್ ನೀರು ಹೀಗೆ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಜೊತೆಗೆ 5 ನೆನೆಸಿಟ್ಟ ಬಾದಾಮಿಗಳನ್ನು ಸೇವಿಸಿದರಂತೆ. ಬೆಳಗಿನ ಉಪಾಹಾರಕ್ಕಾಗಿ, 7 ರಿಂದ 7.30 ರ ನಡುವೆ ಸ್ವಲ್ಪ ಪ್ರಮಾಣದ ಪೋಹಾವನ್ನು, ಮೂರು ಮೊಟ್ಟೆಯ ಬಿಳಿ ಭಾಗಗಳೊಂದಿಗೆ ಮತ್ತು ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿಯನ್ನು ಸೇವಿಸಿದರಂತೆ.

    ಬೆಳಗಿನ ಸ್ನ್ಯಾಕ್ಸ್

    ‌11ಗಂಟೆಗೆ ಹಣ್ಣುಗಳೊಂದಿಗೆ ಒಂದು ಕಪ್ ಗ್ರೀನ್ ಟೀ

    ಮಧ್ಯಾಹ್ನ ಊಟ

    ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹಣ್ಣುಗಳು ಮತ್ತು ಮೊಳಕೆಕಾಳುಗಳನ್ನು ಸೇವಿಸಿದರಂತೆ. ಸಾಂದರ್ಭಿಕವಾಗಿ, ಅವರು ಸಾಂಬಾರ್ ಮತ್ತು ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ರಾಗಿ ದೋಸೆ ಅಥವಾ ತರಕಾರಿ, ಮಜ್ಜಿಗೆ ಮತ್ತು ಸಲಾಡ್‌ನೊಂದಿಗೆ ಒಂದು ಚಪಾತಿಯನ್ನು ಸೇವಿಸುತ್ತಿದ್ದರಂತೆ.

    ಮಧ್ಯಾಹ್ನ ಸ್ನ್ಯಾಕ್ಸ್‌

    ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆಂಗಿನ ನೀರು ಅಥವಾ ಹರ್ಬಲ್ ಟೀ ಸೇವಿಸಿದರಂತೆ, ಕೆಲವೊಮ್ಮೆ ಅದಕ್ಕೆ ಪೂರಕವಾಗಿ ಹುರಿದ ಚನಾ, ಮಖನಾ ಅಥವಾ ಮಿಶ್ರ ಬೀಜಗಳನ್ನು ತೆಗೆದುಕೊಳ್ಳುತ್ತಿದ್ದರು.

    ಸಂಜೆಯೇ ರಾತ್ರಿ ಊಟ ಫಿನಿಶ್

    ಸಂಜೆ 5 ಗಂಟೆಯ ಸುಮಾರಿಗೆ ಐದು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ 100 ಗ್ರಾಂ ಮಿಶ್ರ ತರಕಾರಿಗಳ ಜೊತೆಗೆ ಒಂದು ಚಪಾತಿ ಅಥವಾ ಒಂದು ಮೂಂಗ್, ಓಟ್ಸ್ ಅಥವಾ ಸೂಜಿ ಚಿಲ್ಲಾ ತೆಗೆದುಕೊಳ್ಳುತ್ತಿದ್ದರು. ಊಟದ ನಂತರ ಸರಿ ಸುಮಾರು ಒಂದೂವರೆ ಗಂಟೆಗಳ ನಂತರ, ಒಂದು ಕಪ್ ಗ್ರೀನ್ ಟೀ ಅಥವಾ ತುಳಸಿ ಬೀಜಗಳ ರೂಪದಲ್ಲಿ ರಾತ್ರಿ ಪಾನೀಯವನ್ನು ಸೇವಿಸಿದರಂತೆ. ಸದಾ ಕಾಲ ಹೈಡ್ರೆಟ್ ಆಗಿರಲಿಕ್ಕೆ ನಾನು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುತ್ತೇನೆ ಮತ್ತು ದಿನಕ್ಕೆ ಎರಡು ಬಾರಿ ಸಿಹಿಗೊಳಿಸದ ಬ್ಲ್ಯಾಕ್ ಕಾಫಿಯನ್ನು ಕುಡಿಯುತ್ತೇನೆ ಅಂತ ಅಂಕುರ್ ಹೇಳಿದ್ದಾರೆ.

    Continue Reading

    FILM

    ಅಭಿಷೇಕ್‌-ಅವಿವಾ ಪುತ್ರನಿಗೆ ಅಂಬರೀಷ್‌ ಹೆಸರು

    Published

    on

    ಕನ್ನಡ ಚಿತ್ರರಂಗ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ನವೆಂಬರ್‌ 12) ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ಅವಿವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆಗಸ್ಟ್‌ ತಿಂಗಳಿನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಿದಿತ್ತು. ಅದರ ಬೆನ್ನಲ್ಲೇ ಸೆಪ್ಟೆಂಬರ್‌ 18, 2024ರಂದು ಅವಿವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಸೀಮಂತದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದು, ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

    ಸೀಮಂತ ಕಾರ್ಯಕ್ರಮದ ಅವಿವಾ ಫೋಟೋ ನೋಡಿದ ಅಭಿಮಾನಿಗಳು ಗಂಡು ಮಗುವೇ ಜನಿಸುವುದು ಎಂದು ಗೆಸ್‌ ಮಾಡಿದ್ದರು. ಅವಿವಾ ಬಿದ್ದಪ್ಪ ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡಿದಾಗಲೂ ಕೂಡ ಅನೇಕರು ಗಂಡು ಮಗು, ಅಂಬರೀಷ್‌ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಮಾಡುತ್ತಿದ್ದರು.

    ಇದೀಗ ಎಲ್ಲರ ನಿರೀಕ್ಷೆಗಳು ಸರಿಯಾಗಿದ್ದು ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಗಂಡು ಮಗುವಾಗಿದೆ. ಹೀಗಾಗಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಾಗಿ ಅಂಬರೀಷ್‌ ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಮಾತುಗಳು ಎಲ್ಲರ ಬಾಯಲ್ಲಿ ಇದೆ. ಜೊತೆಗೆ ಇನ್ನೊಂದು ವಿಶೇಷವಾದ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದ್ದರೆ. ಮುದ್ದಾದ ಮೊಗ್ಗಗನಿಗೆ ತಾತನ ಹೆಸರೇ ಇಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಅಂದರೆ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಮಗನಿಗೆ ಅಂಬರೀಷ್‌ ಅವರ ಹೆಸರೇ ಇಡಲಾಗುತ್ತದೆ. ಹಳೆಯ ಸಂಪ್ರದಾಯದಂತೆ ತಾತನ ಹೆಸರನ್ನೇ ಮೊಮ್ಮಗನಿಗೆ ಇಡುವ ಪದ್ಧತಿಯನ್ನು ಸುಮಲತಾ ಹಾಗೂ ಅಭಿಷೇಕ್‌ ಮುಂದುವರಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲವರು ಹೊಸ ಹೆಸರಿಟ್ಟು ಸರ್‌ ನೇಮ್‌ ಅಂಬರೀಷ್‌ ಎಂದು ಇಡುವ ಸಾಧ್ಯತೆ ಎಂದು ಸಹ ಹೇಳುತ್ತಿದ್ದಾರೆ.

    ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಜೂನ್ 5, 2023ರಂದು ಪೋಷಕರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

    Continue Reading

    LATEST NEWS

    Trending