Connect with us

    LIFE STYLE AND FASHION

    ಕಪ್ಪು ಕಲೆ ಇರುವ ಈರುಳ್ಳಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ.?

    Published

    on

    ಬಹಳಷ್ಟು ಈರುಳ್ಳಿಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನ ಗಮನಿಸಬೇಕು. ಲಘುವಾಗಿ ಉಜ್ಜಿದರೆ ಈ ಕಲೆಗಳು ಹೋಗಬಹುದು. ಅಂದ ಹಾಗೆ, ಹಸಿ ಈರುಳ್ಳಿಯನ್ನು ತಿನ್ನುವುದು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಅದರ ವಿಟಮಿನ್ ಸಿ ಅಂಶದಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    ಅಲ್ಲದೆ, ಇದು ಪೊಟ್ಯಾಸಿಯಮ್ ಅಂಶದಿಂದಾಗಿ ಹೃದಯವನ್ನ ಆರೋಗ್ಯಕರವಾಗಿರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನ ನಿಯಂತ್ರಿಸುತ್ತದೆ. ಇದು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ನೀವು ಈರುಳ್ಳಿಯನ್ನ ಖರೀದಿಸಿದಾಗ ಅಥವಾ ಸಿಪ್ಪೆ ತೆಗೆಯುವಾಗ ಈರುಳ್ಳಿ ಮೇಲೆ ಕಪ್ಪು ಕಲೆಗಳಿರುವುದನ್ನ ಕಾಣಬಹುದು. ಒಂದೇ ನೋಟದಲ್ಲಿ ಇದು ಸಾಮಾನ್ಯವಾಗಿ ಒಂದು ರೀತಿಯ ಶಿಲೀಂಧ್ರದಂತೆ ಕಾಣುತ್ತದೆ.

    ವಾಸ್ತವವಾಗಿ, ಈ ಕಪ್ಪು ಕಲೆಗಳು ಆಸ್ಪರ್ಗಿಲಸ್ ನೈಗರ್ ಎಂಬ ನಿರ್ದಿಷ್ಟ ರೀತಿಯ ಶಿಲೀಂಧ್ರದಿಂದ ಉಂಟಾಗುತ್ತವೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ಈರುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಕಪ್ಪು ಶಿಲೀಂಧ್ರದಂತಹ ಗಂಭೀರ ಕಾಯಿಲೆಯನ್ನ ಉಂಟು ಮಾಡದಿದ್ದರೂ, ಇದು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ.

    ಈ ಶಿಲೀಂಧ್ರವು ನಮ್ಮ ದೇಹದಲ್ಲಿ ಅಲರ್ಜಿಯನ್ನ ಉಂಟು ಮಾಡುತ್ತದೆ. ವಿಶೇಷವಾಗಿ ಈಗಾಗಲೇ ಅಲರ್ಜಿಯಿಂದ ಬಳಲುತ್ತಿರುವವರು ಈ ರೀತಿಯ ಈರುಳ್ಳಿಯನ್ನ ತಿನ್ನಬಾರದು. ಅಲ್ಲದೆ, ಈ ಈರುಳ್ಳಿ ಅಸ್ತಮಾ ಅಥವಾ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾನಿಕಾರಕವಾಗಿದೆ. ಆದ್ದರಿಂದ ಈರುಳ್ಳಿಯಲ್ಲಿ ಕಪ್ಪು ಕಲೆಗಳಿದ್ದರೆ, ಅದನ್ನು ಚೆನ್ನಾಗಿ ಸಿಪ್ಪೆ ಸುಲಿದು ತಿನ್ನಿ. ಈರುಳ್ಳಿಯ ಒಂದು ಅಥವಾ ಎರಡು ಪದರಗಳನ್ನ ತೆಗೆದು ನಂತರ ತಿನ್ನುವುದು ಉತ್ತಮ.

    ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡುಬಂದರೆ, ಅದನ್ನು ತಿನ್ನುವುದನ್ನು ತಪ್ಪಿಸಿ, ವಿಶೇಷವಾಗಿ ಈ ರೀತಿಯ ಶಿಲೀಂಧ್ರವು ಅದರಲ್ಲಿ ಕಾಣಿಸಿಕೊಂಡರೆ. ಯಾಕಂದ್ರೆ, ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.

    LIFE STYLE AND FASHION

    ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ

    Published

    on

    ಕೋಳಿ ಮಾಂಸವು ಪ್ರೋಟಿನ್ ಭರಿತ ಆಹಾರವಾಗಿದೆ ಮತ್ತು ಮಾಂಸಾಹಾರಿಗಳ ಫೇವರೆಟ್ ಫುಡ್ ಎಂದರೆ ತಪ್ಪಾಗಲಾರದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಿಕನ್ ಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಮಾಂಸಪ್ರಿಯರು ಕೋಳಿಯ ಅಂಗಾಂಗಗಳನ್ನು ವಿವಿಧ ರೀತಿಯಲ್ಲಿ ಸಾರು, ಫ್ರೈ, ಸುಕ್ಕಾ ಸೇರಿದಂತೆ ಮುಂತಾದ ಅಡುಗೆ ಮಾಡಿ ತಿನ್ನುವರು. ಆದರೆ ನಿಮಗೆ ತಿಳಿದಿದೆಯೇ? ಕೋಳಿಮಾಂಸದ ಕೆಲವು ಭಾಗಗಳನ್ನು ತಿನ್ನಬಾರದು. ಏಕೆ ಎಂಬುದನ್ನು ತಿಳಿಸುತ್ತೇವೆ.

    ಯಾವ ಭಾಗ ತಿನ್ನಬಾರದು ?

    ಚಿಕನ್ ಸ್ಕಿನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಹೆಚ್ಚಿನ ಕೊಬ್ಬು ಇರುವುದು ಮಾತ್ರವಲ್ಲದೇ ಚಿಕನ್ ಫ್ರೆಶ್ ಆಗಿರಲು ಕೆಮಿಕಲ್ಸ್ ಬಳಸಿರುತ್ತಾರೆ. ಆದ್ದರಿಂದ ಕೋಳಿಯ ಚರ್ಮವನ್ನು ತಿನ್ನಬಾರದು ಎಂದು ಹೃದ್ರೋಗ ತಜ್ಞರು ಸಲಹೆ ನೀಡುತ್ತಾರೆ.

    ನಾಟಿ ಕೋಳಿ

    ನಾಟಿ ಕೋಳಿಯು ತಿನ್ನಲು ಯೋಗ್ಯವಾಗಿದ್ದು ಅದಕ್ಕೆ ಯಾವುದೇ ರೀತಿಯ ಕೆಮಿಕಲ್ಸ್, ಇಂಜೆಕ್ಷನ್ ಕೊಟ್ಟು ಬೆಳೆಸಿರುವುದಿಲ್ಲ. ಆದರೆ ಫಾರಂ ಚಿಕನ್‌ಗೆ ಅಧಿಕವಾದ ಸಿರಿಂಜ್ ಬಳಕೆ ಮತ್ತು ಅದು ಬೇಗ ಬೆಳೆಯಲು ಔಷಧಗಳನ್ನು ನೀಡುತ್ತಾರೆ ಎನ್ನಲಾಗುತ್ತದೆ. ಆದ್ದರಿಂದ ಆದಷ್ಟು ನಾಟಿ ಕೋಳಿಯನ್ನು ತಿನ್ನಿರಿ.

    ಸ್ಕಿನ್ ಸಂಪೂರ್ಣ ಹಾನಿಕಾರಕವೇ ?

    ಚಿಕನ್ ಸ್ಕಿನ್‌ನಲ್ಲಿ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಂಶವಿದೆ. ಹಾಗಾಗಿ ಕೋಳಿ ಮಾಂಸವನ್ನು ಪ್ರತಿನಿತ್ಯ ಸೇವಿಸದೆ 15 ದಿನಕ್ಕೊಮ್ಮೆ ತಿನ್ನುವುದು ಉತ್ತಮ. ಅಧಿಕ ರಕ್ತದೊತ್ತಡ ಇರುವವರು ಕೋಳಿಯ ಚರ್ಮವನ್ನು ತಿನ್ನಬಾರದು.

    ಕೋಳಿಯ ಎದೆಯ ಭಾಗವು ಹೆಚ್ಚಿನ ಪ್ರೋಟಿನ್ ಹೊಂದಿದ್ದು, ಆರೋಗ್ಯಕ್ಕೆ ಒಳ್ಳೆಯದು. ತೂಕ ನಿಯಂತ್ರಣಕ್ಕೆ ಇದು ಸಹಕಾರಿ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಕೋಳಿ ಎದೆ ತುಂಬಾ ಒಳ್ಳೆಯದು. ಕೋಳಿಯ ತೊಡೆಯ ಭಾಗವನ್ನು ತಿಂದರೂ ತುಂಬಾ ಒಳ್ಳೆಯದು.

    Continue Reading

    LATEST NEWS

    ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!

    Published

    on

    ಮಂಗಳೂರು: ಎಲ್ಲಾ ರೀತಿಯ ಹಣ್ಣುಗಳಲ್ಲಿ ಒಂದಲ್ಲಾ ಒಂದು ವಿಶಿಷ್ಟವಾದ ಗುಣಗಳಿರುತ್ತವೆ. ಹಣ್ಣುಗಳು ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು, ವಿಟಮಿನ್ ಗಳನ್ನು ನೀಡುತ್ತವೆ. ಅದರಲ್ಲೂ ಪ್ರಾಕೃತಿಕವಾಗಿ ಸಿಗುವ ಹಣ್ಣುಗಳು ಮನುಷ್ಯನ ದೇಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಕೆಲವು ಹಣ್ಣುಗಳು ನಮ್ಮ ಮನೆಯಲ್ಲೇ ಬೆಳೆದರು ನಾವು ತಿನ್ನುವುದಿಲ್ಲ. ನಮ್ಮ ಮನೆ ಹತ್ತಿರವೇ ಸಿಗುವ ಪಪ್ಪಾಯ ಹಣ್ಣನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಅದರಲ್ಲೂ ಕಾಯಿ ಪಪ್ಪಾಯಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ, ಅದರಲ್ಲಿರುವ ಪ್ರಯೋಜನಗಳನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.

    ಕಾಯಿ ಪಪ್ಪಾಯಿಯಲ್ಲಿ ಅಡಗಿದೆ ಆರೋಗ್ಯಕರ ಲಕ್ಷಣಗಳು:

    ಪಪ್ಪಾಯಿ ಹಣ್ಣಿನ ಸೇವನೆಯಿಂದ ಅನೇಕ ಪ್ರಯೋಜನಗಳು ಇವೆ. ಅದರಲ್ಲೂ ಕಾಯಿ ಪಪ್ಪಾಯಿ ಹಣ್ಣು ತಿಂದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಪಪ್ಪಾಯಿ ಹಣ್ಣು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಕಾಯಿ ಪಪ್ಪಾಯಿಯನ್ನು ತಿನ್ನುವುದಕ್ಕೆ ಕಹಿ ಎಂದು ಹಿಂದೆ ಸರಿದು ಬಿಡುತ್ತಾರೆ. ಬೇವಿನ ಗಿಡ ಕಹಿಯಾದರು ಕೂಡ ಅದರಿಂದ ಒಳ್ಳೆಯ ಆರೋಗ್ಯ ಗುಣಲಕ್ಷಣಗಳು ಇರುವುದು ತಿಳಿದೇ ಇದೆ. ಅದೇ ರೀತಿ ಕಾಯಿ ಪಪ್ಪಾಯದಲ್ಲೂ ಆರೋಗ್ಯಕರ ಪ್ರಯೋಜನಗಳಿವೆ.


    ಕಾಯಿ ಪಪ್ಪಾಯಿ ಹಣ್ಣನ್ನು ಸಾಂಬರು ಅಥವಾ ಜ್ಯೂಸ್ ಮಾಡಿ ಬೇಕಾದರೂ ಕುಡಿಯಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಕೆಲವರು ಹೊರಗಡೆಯ ಜಂಕ್ ಫುಡ್ ಆಹಾರ ತಿಂದು ದಪ್ಪವಾಗುವುದು ಸಾಮಾನ್ಯ. ಪಪ್ಪಾಯ ಕಾಯಿ ಹಣ್ಣನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮೃದ್ದವಾದ ವಿಟಮಿನ್ ಹಾಗೂ ಮಿನರಲ್ಸ್ ಗಳು ಸಿಗುತ್ತವೆ.
    ದೇಹದಲ್ಲಿ. ಗಾಯಗಳಿದ್ದರೆ ವಾಸಿಯಾಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ.

    ಇದನ್ನೂ ಓದಿ: ರುಚಿ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್​.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!

    ಈ ಎಲ್ಲಾ ಲಾಭಗಳನ್ನು ಕಾಯಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಪಡೆಯಬಹುದು. ಹಣ್ಣುಗಳ ಸೇವನೆಯಿಂದ ಆರೋಗ್ಯ ವೃದ್ದಿಗೆ ಕಾರಣವಾಗುತ್ತದೆ. ಹಾಗಾಗಿ ಹೊರಗಿನ ಜಂಕ್ ಫುಡ್ ಗೆ ಮಾರುಹೋಗುವ ಬದಲು,  ಹಣ್ಣು-ಹಂಪಲು ತಿನ್ನುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.

    Continue Reading

    LIFE STYLE AND FASHION

    ರುಚಿ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್​.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!

    Published

    on

    ಅವರವರ ರುಚಿ ಅವರವರೇ ಆಸ್ವಾದಿಸಬೇಕು! ಇಲ್ಲಿ ಆಹಾರವಿಲ್ಲದೆ ನಮ್ಮ ಜೀವನ ಇಲ್ಲ. ಹಾಗಂತ ಎಲ್ಲಾ ಸಂದರ್ಭದಲ್ಲೂ ಹಸಿವಿಗಾಗಿಯೇ ಆಹಾರ ತೆಗೆದುಕೊಳ್ಳಲ್ಲ. ಒಂದಷ್ಟು ಬಾಯಿ ಚಪಲ ಇರುತ್ತದೆ. ತಿನ್ನುವ ಆಹಾರದಲ್ಲಿ ಜನ ರುಚಿ ಹುಡುಕುತ್ತಾರೆ. ಆ ಜವಾಬ್ದಾರಿ ನಮ್ಮ ನಾಲಿಗೆಯ ಮೇಲೆ!

    ನಾಲಿಗೆಯ ರುಚಿಗೆ ತಕ್ಕಂತೆ ಆಹಾರ ನೋಡುತ್ತೇವೆ. ಅಂದರೆ ಆಹಾರದ ಆಯ್ಕೆ ನಮ್ಮ ನಾಲಿಗೆಗೆ ಬೇಕಾದುದನ್ನು ಆಧರಿಸಿವೆ. ಆದರೆ ಇದ್ದಕ್ಕಿದ್ದಂತೆ ನಾಲಿಗೆಯ ರುಚಿ ಮಂದವಾದರೆ ಅಪಾಯಕಾರಿ! ಯಾಕೆಂದರೆ.. ನಾಲಿಗೆ ರುಚಿ ಕಳೆದುಕೊಳ್ಳುವುದು ಗಂಭೀರ ಕಾಯಿಲೆಗಳ ಲಕ್ಷಣ. ಏಕಾಏಕಿ ನಾಲಿಗೆಯ ರುಚಿ ಬದಲಾದರೆ ಎಂತಹ ರೋಗಗಳ ಮುನ್ಸೂಚನೆ ಗೊತ್ತಾ..?

    ನಾಲಿಗೆ ರುಚಿ ಬದಲಾಗೋದು ಯಾಕೆ?

    ಜ್ವರ: ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ನಾಲಿಗೆ ರುಚಿ ಕಳೆದುಕೊಳ್ಳುತ್ತದೆ. ಇದು ಸಾಮಾನ್ಯ ದೈಹಿಕ ಸಮಸ್ಯೆ. ಕೆಲವು ಸಂದರ್ಭಗಳಲ್ಲಿ ಇದು ರೋಗದ ಲಕ್ಷಣವೂ ಆಗಿರಬಹುದು.

    ಮಧುಮೇಹ: ಈ ರೋಗಿಗಳು ನಾಲಿಗೆಯ ರುಚಿಯಲ್ಲಿ ಆಗಾಗ ಬದಲಾವಣೆ ಅನುಭವಿಸುತ್ತಾರೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯ ಸ್ಥಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ.

    ಹಲ್ಲಿನ ಸಮಸ್ಯೆ: ಅಲ್ಲಿನ ಸಮಸ್ಯೆಗಳು ನಾಲಿಗೆಯ ರುಚಿಯ ಮೇಲೆ ಪರಿಣಾಮ ಬೀರುತ್ತವೆ. ಒಸಡಿನ ಉರಿಯೂತ, ಕುಳಿ ಮತ್ತು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಇಂಥ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

    ನರವೈಜ್ಞಾನಿಕ ಸಮಸ್ಯೆಗಳು: ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ ಅಂತಹ ಅನೇಕ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ನಾಲಿಗೆ ರುಚಿಯಲ್ಲಿ ಬದಲಾವಣೆ ತರುತ್ತವೆ.

    ಕೆಮ್ಮು – ಶೀತ: ಕೆಮ್ಮು ಮತ್ತು ಶೀತದ ಸಮಯದಲ್ಲಿ ನಾಲಿಗೆ ರುಚಿಯನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಅದು ಮೂಗಿಗೆ ಅಡ್ಡಿಪಡಿಸುತ್ತದೆ. ಇದು ನಮ್ಮ ರುಚಿಯನ್ನು ನಿರ್ಧರಿಸಲು ಕಾರಣವಾಗಿದೆ.

    Continue Reading

    LATEST NEWS

    Trending