Connect with us

    ಇಂದು ರಾತ್ರಿಯಿಂದ ದ.ಕ ಲಾಕ್‌ ಡೌನ್ : ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿಬಿದ್ದ ಜನತೆ..!

    Published

    on

    ಇಂದು ರಾತ್ರಿಯಿಂದ ದ.ಕ ಲಾಕ್‌ ಡೌನ್ : ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿಬಿದ್ದ ಜನತೆ..!

    ಮಂಗಳೂರು : ಜನಸಾಮಾನ್ಯರ ಮಧ್ಯೆ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಕಟ್ಟಿ ಹಾಕಲು  ದಕ್ಷಿಣ ಕನ್ನಡ ಜಿಲ್ಲೆ ಇಂದು ರಾತ್ರಿ 8 ಗಂಟೆಯಿಂದ  ಸಂಪೂರ್ಣ ಲಾಕ್ ಡೌನ್ ಆಗಲಿದೆ. ಈ ಹಿನ್ನಲೆ ಕೊನೆ ಕ್ಷಣದ ಖರೀದಿಗಾಗಿ ಜನ ಮಾರುಕಟ್ಟೆಗೆ ಮುಗಿ ಬಿದ್ದಿದ್ದಾರೆ.

    ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಯಲ್ಲಿ  ಜನರು ಮುಗಿಬಿದ್ದಿರುವ ದೃಶ್ಯ ನಗರದ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.

    ಇಂದು ರಾತ್ರಿ  8 ಗಂಟೆಯಿಂದ ಜುಲೈ 23 ಬೆಳಗ್ಗಿನ ಜಾವ 5 ಗಂಟೆ ತನಕ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸಂಪೂರ್ಣ ಲಾಕ್ ಡೌನ್ಆಗಲಿದೆ,

    ಆದರೆ  ಈ ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೂ ಸಾಮಾಜಿಕ ಅಂತರ ಮರೆತು ಜನರು ದಿನಸಿ ವಸ್ತುಗಳ ಖರೀದಿಸುತ್ತಿರುವ ದೃಶ್ಯ ನಗರದ  ಕದ್ರಿ ಮಾರುಕಟ್ಟೆಯಲ್ಲಿ ಕಂಡು ಬಂದಿದೆ.

    ಇನ್ನು ಲಾಕ್ ಡೌನ್ ವೇಳೆ ಹಾಲು, ತರಕಾರಿ, ಮೊಟ್ಟೆ, ದಿನಸಿ ವಸ್ತುಗಳು, ಮಾಂಸ ಲಭ್ಯ, ತುರ್ತು ಆರೋಗ್ಯ ಸೇವೆಗಳು ಲಭ್ಯ, ಹೊಟೇಲ್​ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಲಭ್ಯ, ಅಗತ್ಯ ಸರ್ಕಾರಿ ಕಚೇರಿಗಳು ಹಾಗೂ ಕೃಷಿ ಸಂಬಂಧಿತ ಕಚೇರಿಗಳು ತೆರೆದಿರಲಿವೆ,

    ಅನಗತ್ಯ ಓಡಾಟ, ಬಾರ್, ವೈನ್ ಶಾಪ್, ಹೊಟೇಲ್ ಸೇವೆ, ಖಾಸಗಿ ವಾಹನ ಸಂಚಾರ, ಬ್ಯಾಂಕ್ ಸೇವೆ, ಸಾರ್ವಜನಿಕ ಸಾರಿಗೆ, ಮಾಲ್, ಉದ್ಯಾನವನ, ದೇವಸ್ಥಾನ, ಮಸೀದಿ, ಚರ್ಚ್, ಕ್ರೀಡೆ, ಸಣ್ಣ ಕೈಗಾರಿಕೆ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ.

    ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡ ಕಾಯಿದೆಯ ಅನುಸಾರ ಐಪಿಸಿ ಸೆಕ್ಷನ್ 56 ರಿಂದ 60, ಐಪಿಸಿ ಸೆಕ್ಷನ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎಚ್ಚರಿಸಿದ್ದಾರೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    WATCH : ಭೂಮಿ ಕುಸಿದು ಗುಂಡಿಯೊಳಗೆ ಬಿದ್ದ ಟ್ರಕ್; ಭಯಾನಕ ವೀಡಿಯೋ ವೈರಲ್

    Published

    on

    ಮಂಗಳೂರು/ ಮಹಾರಾಷ್ಟ್ರ: ಪೋಸ್ಟ್‌ ಆಫೀಸ್‌ ಕಾಂಪ್ಲೆಕ್ಸ್‌ನ ನೆಲ ಏಕಾ ಏಕಿ ಕುಸಿದು ಬಿದ್ದ ಕಾರಣ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಸೇರಿದ್ದ ಟ್ರಕ್‌ ಒಂದು ಗುಂಡಿಗೆ ಬಿದ್ದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ನಗರದ ಅಂಚೆ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ.

    ಟ್ರಕ್‌ ಪುಣೆ ಮುನ್ಸಿಪಲ್ ಕಾರ್ಪೋರೆಷನ್‌ಗೆ ಸೇರಿದ್ದಾಗಿದ್ದು, ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಪೋಸ್ಟ್ ಆಫೀಸ್ ಬಳಿ ಬಂದಿತ್ತು. ಈ ವೇಳೆ ಟ್ರಕ್‌ ನಿಲ್ಲಿಸಿದ್ದ ಜಾಗದಲ್ಲೇ ಭೂಮಿ ಕುಸಿದು ಟ್ರಕ್‌ ಭೂಮಿಯ ಒಡಲಿಗೆ ಜಾರಿದೆ. ಈ ವೇಳೆ ಟ್ರಕ್‌ನಲ್ಲಿದ್ದ ಚಾಲಕ ಹಾರಿ ತಪ್ಪಿಸಿಕೊಂಡ ಕಾರಣ ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ. ಭೂಮಿ ಕುಸಿದ ಕಾರಣ ಸುಮಾರು 40ರಿಂದ50 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಟ್ರಕ್‌ ಇದರಲ್ಲಿ ಸಿಲುಕಿಕೊಂಡಿದೆ.

    ಇದನ್ನೂ ಓದಿ : ವ್ಯಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿ

    ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಆಫೀಸ್ ಮುಂಬಾಗದಲ್ಲಿ ಈ ರೀತಿ ಕುಸಿತ ಆಗಲು ಕಾರಣ ಏನು ಅನ್ನೋ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕ್ರೇನ್‌ ಹಾಗೂ ಜೆಸಿಬಿ ಸಹಾಯದಿಂದ ಟ್ರಕ್‌ ಮೇಲೆತ್ತಲಾಗಿದೆ.

    Continue Reading

    DAKSHINA KANNADA

    ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!

    Published

    on

    ಮಂಜೇಶ್ವರ/ಮಂಗಳೂರು: ಈ ಹಿಂದೆ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿಯನ್ನು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಕರ್ನಾಟಕದಲ್ಲಿ ವೈದ್ಯರು ಕನ್ನಡದಲ್ಲೇ  ಔಷಧ ಚೀಟಿಯನ್ನು ಬರೆಯುವಂತೆ ಕನ್ನಡ ಪ್ರಾಧಿಕಾರ ಸೂಚನೆ ಕೂಡಾ ನೀಡಿತ್ತು. ಆದರೆ ಕರ್ನಾಟಕದಲ್ಲಿ ಈ ಸೂಚನೆ ಕಟ್ಟುನಿಟ್ಟಾಗಿ ಜಾರಿಯಾಗುವ ಮೊದಲೇ ಕೇರಳದ ಕಾಸರಗೋಡಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು, ಕಾಸರಗೋಡಿನ ಮಂಜೇಶ್ವರದಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಳೀ ಮೋಹನ ಚೂಂತೂರು ರವರು ಕನ್ನಡ ಪ್ರೇಮ ಮೆರೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿನೆಲೆ ಅವರು ಇತ್ತೀಚೆಗೆ ಮಂಗಳೂರು ಭೇಟಿ ನೀಡಿದ ವೇಳೆ ವೈದ್ಯರು ಕೂಡಾ ಕನ್ನಡದಲ್ಲಿ ಔಷಧ ಚೀಟಿಯನ್ನು ಜನರಿಗೆ ಅರ್ಥವಾಗುವಂತೆ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

    ಹಾಗಾಗಿ ರಾಜ್ಯದಲ್ಲಿ ಒಬ್ಬ ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಮೊದಲ ಸ್ಪಂದನ ನೀಡಿದ್ದರು. ಇದೀಗ ಕೇರಳ ರಾಜ್ಯದಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ  ಔಷಧ ಚೀಟಿ ಬರೆಯುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ.

    ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸುವಂತೆ ಸಚಿವರಿಗೆ ಪ್ರಾಧಿಕಾರ ಪತ್ರ

    ಅದಾದ ಬಳಿಕ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿ ಬಳಿಕ ಸಾಧಕ ಬಾಧಕ ನೋಡಿಕೊಂಡು ಅನುಷ್ಠಾನಕ್ಕೆ ತರವಲಾಗುವುದು ಎಂದಿದ್ದರು. ಈಗ ಗಡಿನಾಡಿನ ಕನ್ನಡಿಗ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿರುವುದನ್ನು ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

    Continue Reading

    LATEST NEWS

    ಲೋ ಬಿಪಿಯಿಂದ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾ*ವು

    Published

    on

    ಬೆಂಗಳೂರು : ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾ*ವನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ  ಗಬ್ಯೂರು ಗ್ರಾಮದಲ್ಲಿ  ನಡೆದಿದೆ.

    5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃ*ತ ಬಾಲಕ. ಗಬ್ಯೂರ್‌ನಲ್ಲಿ ಸೈನಿಕ, ನವೋದಯ ಕೋಚಿಂಗ್ ಪಡೆಯುತ್ತಿದ್ದ. ಇನ್ನು ಕೋಚಿಂಗ್ ಸೆಂಟರ್‌ನಲ್ಲೇ ಏಕಾಏಕಿ ಲೋ ಬಿಪಿಯಾಗಿ ಬಾಲಕ ಶಿವಪ್ರಸಾದ್ ಸಾವನಪ್ಪಿದ್ದು, ಗಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending