Connect with us

LATEST NEWS

ಮೀನು ಫ್ಯಾಕ್ಟರಿ ದುರಂತ ನಡೆದು 2 ದಿನ ಕಳೆದರೂ ಉಸ್ತುವಾರಿ ಸಚಿವ ಸೇರಿ ಶಾಸಕ, ಸಂಸದರು ಮೌನ: ಮುನೀರ್‌ ಆಕ್ರೋಶ

Published

on

ಮಂಗಳೂರು: ಬಜ್ಪೆಯ ಎಸ್‌ಇಝಡ್ ನ ಶ್ರೀ ಉಲ್ಕಾ ಮೀನುಗಾರಿಕಾ ಘಟಕದಲ್ಲಿ ದುರಂತ ನಡೆದು 48 ಗಂಟೆ ದಾಟಿದರೂ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಘಟನೆಯ ಕುರಿತು ಪ್ರತಿಕ್ರಿಯಿಸಿಲ್ಲ, ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವುದಿಲ್ಲ.

ಆಡಳಿತ ಪಕ್ಷದ ಶಾಸಕರು, ಸಂಸದರು ಸಹ ಮೃತ ಕುಟುಂಬಸ್ಥರಿಗೆ ಸಾಂತ್ವನ ನೀಡಿರುವುದಿಲ್ಲ. ಈ ಮೌನ ನಿರಾಶದಾಯಕ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬಲಿಯಾದವರ ಮೃತದೇಹಗಳು ಹುಟ್ಟೂರು ತಲುಪಿವೆ. ಶ್ರೀ ಉಲ್ಕಾ ಕಂಪೆನಿ ಮಧ್ಯಂತರ ಪರಿಹಾರವಾಗಿ ತಲಾ 15 ಲಕ್ಷ ರೂಪಾಯಿಗಳನ್ನು ಘೋಷಿಸಿದೆ. ಆದರೆ ಇಷ್ಟು ಮಾತ್ರ ಕ್ರಮಗಳು ಸಾಲುವುದಿಲ್ಲ. ರಾಜ್ಯ ಸರಕಾರ ಹಾಗೂ ಕಂಪೆನಿಗಳು ಸೇರಿ ಬಲಿಯಾದವರ ಪ್ರತಿ ಕುಟುಂಬಗಳಿಗೆ ಕನಿಷ್ಟ 50 ಲಕ್ಷ ರೂಪಾಯಿ ಪರಿಹಾರ ಧನ ಒದಗಿಸಬೇಕು.

ಪ್ರಧಾನ ಆರೋಪಿಯಾಗಿರುವ ಶ್ರೀ ಉಲ್ಕಾ ಕಂಪೆನಿಯ ಮಾಲಕನನ್ನು ತಕ್ಷಣ ಬಂಧಿಸಬೇಕು ಹಾಗೂ ಸಮಗ್ರ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆ, ಎಸ್ ಇ ಝಡ್ ಅಧಿಕಾರಿಗಳ ಮೇಲೂ ಮೊಕದ್ದಮೆ ಹೂಡಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
ಶ್ರೀ ಉಲ್ಕಾ ದುರಂತಕ್ಕೆ ಕಂಪೆನಿ ಮಾತ್ರವಲ್ಲದೆ ಬಾಯ್ಲರ್ ಹಾಗೂ ಕಾರ್ಖಾನೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ ಸಹಿತ ಸರಕಾರದ ವಿವಿಧ ಇಲಾಖೆಗಳ ನಿರ್ಲಕ್ಷ್ಯ ಪ್ರಧಾನ ಕಾರಣವಾಗಿರುವುದರಿಂದ ರಾಜ್ಯ ಸರಕಾರವೂ ಈ ದುರಂತಕ್ಕೆ ಹೊಣೆ ಹೊತ್ತುಕೊಳ್ಳಬೇಕಿದೆ.

ಜೀತಗಾರರ ರೀತಿ ದುಡಿದು ದಾರುಣವಾಗಿ ಮೃತ ಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೌನ ಮುರಿಯಬೇಕು ಹಾಗೂ ಕಂಪೆನಿಯು ಘೋಷಿಸಿರುವ 15 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ಸೇರಿದಂತೆ ರಾಜ್ಯ ಸರಕಾರ ಒಟ್ಟು ಪ್ರತಿ ಕುಟುಂಬಗಳಿಗೆ 50 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು.

ಹಾಗೆಯೆ ಈ ದುರಂತಕ್ಕೆ ಹೊಣೆಗಾರರಾದ ನಿರ್ಲಕ್ಷ್ಯ ವಹಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಬೇಕು. ಶ್ರೀ ಉಲ್ಕಾ ಕಂಪೆನಿಯ ಸೂಪರ್ ವೈಸರ್ ಗಳ ಬಂಧನ ನಡೆಸಿ ಮಾಲಕನನ್ನು ರಕ್ಷಿಸಲು ಅವಕಾಶ ನೀಡಬಾರದು.

ದುರಂತದ ಪ್ರಧಾನ ಆರೋಪಿಯಾಗಿರುವ ಶ್ರೀ ಉಲ್ಕಾ ಕಂಪಿನಿಯ ಮಾಲಕನನ್ನು ತಕ್ಷಣ ಬಂಧಿಸಬೇಕು ಹಾಗೂ SEZ ಸಹಿತ ಮಂಗಳೂರಿನ ಕೈಗಾರಿಕಾ ಘಟಕಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಶೋಷಣೆ, ವಲಸೆ ಕಾರ್ಮಿಕರ ದುರ್ಬಳಕೆಗೆ ಅಂತ್ಯ ಹಾಡಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಆ ಕುರಿತು ಜಿಲ್ಲಾಡಳಿತ ಕಾರ್ಮಿಕ ಸಂಘಟನೆಗಳು,

ಕೈಗಾರಿಕಾ ಸಂಘದ ಮುಖಂಡರ ಜಂಟಿ ಸಭೆಯನ್ನು ಕರೆಯಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ. ಬೇಡಿಕೆಗಳು ಈಡೇರದಿದ್ದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆ ಸೇರಿಸಿ ಎಸ್ ಇ ಝಡ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

DAKSHINA KANNADA

ಕಡಬ: ಬಿಳೆನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!

Published

on

ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.

ಅಸ್ಥಿಪಂಜರ

ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.

Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್‌:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್

Published

on

ಬಂಟ್ವಾಳ : ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಪೋರೇಟರ್‌ ಆಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ಕವಿತಾ ಸನಿಲ್‌ ವಿಧಾನ ಸಭಾ ಚುನಾವಣೆಯಲ್ಲೂ ಸಾಕಷ್ಟು ಪ್ರಚಾರ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಅವರಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಕವಿತಾ ಸನಿಲ್ ಸದ್ಯ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ತನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಪಕ್ಷ ಚಟುವಟಿಕೆಯಿಂದ ದೂರ ಉಳಿದಿದ್ದರು. ಯಾವುದಾದರು ಒಂದು ನಿಗಮ ಸಿಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾದ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಟ್ವಾಳಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಬಿಜೆಪಿ ಬಾವುಟ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ : ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!

Continue Reading

DAKSHINA KANNADA

‘ಕೇಸರಿಕರಣ’ವಾದ ಡಿಡಿ ನ್ಯೂಸ್..! ಚರ್ಚೆಗೆ ಕಾರಣವಾದ ಹೊಸ ಲೋಗೋ..!

Published

on

ಮಂಗಳೂರು : ಚುನಾವಣಾ ಸಮಯದಲ್ಲೇ ದೇಶದ ಸರ್ಕಾರಿ ಚಾನೆಲ್ ದೂರದರ್ಶನ ತನ್ನ ಲೋಗೋದ ಬಣ್ಣವನ್ನು ಬದಲಾಯಿಸಿದೆ. ಡಿಡಿ ನ್ಯೂಸ್‌ ತನ್ನ ಲೋಗೋ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. 1959 ರಲ್ಲಿ ಆರಂಭವಾಗಿದ್ದ ದೂರದರ್ಶನದ ಲೋಗೋ ನೀಲಿ ಬಣ್ಣದಾಗಿದ್ದು, ಇದೀಗ ಚುನಾವಣೆಯ ಹೊಸ್ತಿಲಲ್ಲಿ ಕೇಸರಿ ಬಣ್ಣಕ್ಕೆ ಬದಲಾಯಿಸಿದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ದೇಶದಲ್ಲಿ ಎಲ್ಲವನ್ನೂ ಕೇಸರಿಕರಣ ಮಾಡುವ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.

ಕೇಂದ್ರ ಸರ್ಕಾರದ ಪ್ರಸಾರಭಾರತಿ ಅಡಿಯಲ್ಲಿ ಬರುವ ದೂರದರ್ಶನ ಏಕಾಏಕಿ ತನ್ನ ಲೋಗೋವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಇದನ್ನು ದೂರದರ್ಶನ ತನ್ನ ಅಧಿಕೃತ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ಲೋಗೋ ಕೇವಲ ದೃಶ್ಯ ಸೌಂದರ್ಯದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಮೌಲ್ಯಗಳು ಒಂದೇ ಆಗಿರುವಾಗ, ನಾವು ಈಗ ಹೊಸ ಅವತಾರದಲ್ಲಿ ಸಿಗಲಿದ್ದೇವೆ. ಹಿಂದೆಂದಿಗಿಂತಲೂ ಉತ್ತಮ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ. ಎಲ್ಲಾ ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ! ” ಎಂದು DD News ತನ್ನ ಅಧಿಕೃತ ‘X’ ಹ್ಯಾಂಡಲ್‌ನಲ್ಲಿ ಅದರ ಹೊಸ ಲೋಗೋದ ವೀಡಿಯೊದೊಂದಿಗೆ ಪೋಸ್ಟ್ ಮಾಡಿದೆ. ಜೊತೆಗೆ “ಕೇವಲ ಧೈರ್ಯದ ಬರವಸೆಯಲ್ಲ..ವೇಗದ ಮತ್ತು ನಿಖರತೆಯ ಬರವಸೆ ; ಹಕ್ಕುಗಳ ಮತ್ತು ಸತ್ಯದ ಬರವಸೆ ; ಸಂವೇದನೆಯ ಹಾಗೂ ಸತ್ಯದ ಬರವಸೆ ;  ಯಾಕೆಂದರೆ ಡಿಡಿ ನ್ಯೂಸ್ ನಲ್ಲಿ ಬಂದರೆ ಅದು ಸತ್ಯ! ಡಿಡಿ ನ್ಯೂಸ್ – ಭರೋಸಾ ಸಚ್ ಕಾ..” ಎಂದು ಹೇಳಿಕೊಂಡಿದ್ದಾರೆ.

2012 ಮತ್ತು 2014 ರ ನಡುವೆ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಈ ಬೆಳವಣಿಗೆಯನ್ನು ಟೀಕಿಸಿದ್ದಾರೆ. ಪ್ರಸಾರ ಭಾರತಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ (AIR) ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ.”ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ತನ್ನ ಬ್ರ್ಯಾಂಡಿಂಗ್‌ಗಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿರುವುದು ಸರಿಯಲ್ಲ” ಎಂದು ಸಿರ್ಕಾರ್ ಸಾಮಾಜಿಕ ಮಾಧ್ಯಮ ಸೈಟ್ ‘X’ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ “ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ನಾನು ಪರಿಗಣಿಸುತ್ತೇನೆ” ಎಂದು ಸಿರ್ಕಾರ್ ಹೇಳಿದ್ದಾರೆ, ಲೋಗೋ ಬದಲಾವಣೆ ಮಾಡಿರುವ ಸಮಯವನ್ನು ಪ್ರಶ್ನಿಸಿದ ಅವರು. “ಇದು ರಾಜ್ಯಗಳಲ್ಲಿ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಕೇಸರಿ ಒಂದು ನಿರ್ಧಿಷ್ಟ ಧರ್ಮವನ್ನು ಸೂಚಿಸುವ ಬಣ್ಣವಾಗಿದ್ದು ಅದನ್ನು ದೂರದರ್ಶನ ಬಳಸಿಕೊಂಡಿದ್ದು ತಪ್ಪು” ಎಂದಿದ್ದಾರೆ.

ದೂರದರ್ಶನದ ಈ ಬೆಳವಣಿಗೆಯ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದು, ಹೊಸ ಸಂಸತ್‌ನಲ್ಲಿ ಒಳಗೆ ಎಲ್ಲಾ ಕಡೆ ಕೇಸರಿಕರಣ ಮಾಡಲಾಗಿದೆ. ಇದೀಗ ದೇಶದ ಜನರನ್ನು ದೂರದರ್ಶನದ ಮೂಲಕ ಕೇಸರಿಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

Continue Reading

LATEST NEWS

Trending