Connect with us

LATEST NEWS

ಮೀನಿನ ಫ್ಯಾಕ್ಟರಿ ದುರಂತ: ಮೃತ ಕುಟುಂಬಕ್ಕೆ 15 ಲಕ್ಷ ಪರಿಹಾರ-CPIM ನಾಯಕರ ಭೇಟಿ

Published

on

ಮಂಗಳೂರು: ನಗರದ ಎಸ್​.ಇ.ಝಡ್​ನ ಮೀನಿನ ಫ್ಯಾಕ್ಟರಿಯಲ್ಲಿ ನಡೆದ ದುರಂತದಲ್ಲಿ ಐವರು ಸಾವನ್ನಪ್ಪಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಕಂಪನಿ ಒಪ್ಪಿಗೆ ಸೂಚಿಸಿದೆ.


ಮೀನಿನ ಫ್ಯಾಕ್ಟರಿಯ ತ್ಯಾಜ್ಯದಲ್ಲಿ ಬಿದ್ದಿದ್ದ ಓರ್ವನನ್ನು ರಕ್ಷಿಸಲು ಹೋಗಿ ಐವರು ಸಾವನ್ನಪ್ಪಿ ಮೂವರು ಅಸ್ವಸ್ಥಗೊಂಡಿದ್ದರು. ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮರುಲ್ಲಾ ಇಸ್ಲಾಂ,

ಉಮರುಲ್ಲಾ ಫಾರೂಕ್, ನಿಜಾಮುದ್ದೀನ್, ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಮೃತಪಟ್ಟಿದ್ದರು. ದುರಂತ ಸಂಭವಿಸಿದ ಬಳಿಕ ಕುಟುಂಬ ಸದಸ್ಯರು ವಿಮಾನ ಮೂಲಕ ಮಂಗಳೂರು ತಲುಪಿದ್ದು, ಅವರಿಗೆ ಮೃತದೇಹ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿತ್ತು.

ಆದರೆ ಫಿಷ್ ಮಿಲ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಂಪನಿ ಪರಿಹಾರ ಧನ ನೀಡಬೇಕು. ಅಲ್ಲಿಯವರಗೆ ಮೃತದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು ಡಿವೈಎಫ್ಐ, ಸಿಐಟಿಯು ನಾಯಕರು ಬೇಡಿಕೆ ಮುಂದಿಟ್ಟಿದ್ದರು.

ಹಲವು ಹಂತಗಳ ಮಾತುಕತೆಯ ನಂತರ ಕಂಪನಿ ಮೃತಪಟ್ಟ ಕಾರ್ಮಿಕರ ಪ್ರತಿಯೊಂದು ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಒಪ್ಪಿಗೆಯನ್ನು ಸೂಚಿಸಿತು.

ಸಂತ್ರಸ್ತ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿದ ಸಿಪಿಐಎಂ ಕಾರ್ಯಕರ್ತರು

ಮಂಗಳೂರಿನ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾದ ಪಶ್ಚಿಮ ಬಂಗಾಳದ 5 ಸಂತ್ರಸ್ತ ಕಾರ್ಮಿಕರ ಮನೆಗಳಿಗೆ 24ನಾರ್ತ್ ಪರಗಣ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿ ಸಂತೈಸಿದೆ.

ದುರಂತದಲ್ಲಿ ಮಡಿದ ವಲಸೆ ಕಾರ್ಮಿಕರಿಗೆ 25 ಲಕ್ಷ ಪರಿಹಾರಕ್ಕೆ ಒತ್ತಾಯಿಸಿದ್ದಾರೆ ಹಾಗೂ ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೇಸ್ ಸರಕಾರ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದು ಆ ಕಾರಣಕ್ಕಾಗಿ ಇವತ್ತು ಪಶ್ಚಿಮ ಬಂಗಾಲದ ಕಾರ್ಮಿಕರು ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ.‌

ಮಂಗಳೂರಿನಲ್ಲಿ ನಡೆದ ವಲಸೆ ಕಾರ್ಮಿಕರ ಸಾವಿಗೆ ಮಮತಾ ಬ್ಯಾನರ್ಜಿ ಸರಕಾರವೇ ನೇರ ಹೊಣೆ ಎಂದು ದೂರಿದ್ದಾರೆ. ಈಗಾಗಲೇ ಪಶ್ಚಿಮ ಸರಕಾರ ಘೋಷಿಸಿದ 2 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು.

ಕಂಪೆನಿ ಮಾಲಕನನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು 24 ನಾರ್ತ್ ಪರಗಣಸ್‌ನ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮ್ರಿನಲ್ ಚಕ್ರವರ್ತಿ ಒತ್ತಾಯಿಸಿದ್ದಾರೆ.

ಈ ವೇಳೆ ಸಿಪಿಐಎಂ ಪಕ್ಷದ ರಾಜ್ಯಸಮಿತಿ ಸದಸ್ಯರಾದ ನಿರಪದ ಸರದಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಅಹಮದ್ ಆಲಿ ಖಾನ್, ಜಿಲ್ಲಾ ಸಮಿತಿ ಸದಸ್ಯರಾದ ಇಮ್ತಿಯಾಜ್ ಹುಸೈನ್ ಹಾಗೂ ಪಕ್ಷದ ಸ್ಥಳೀಯ ಸಮಿತಿ ಮುಖಂಡರು ಉಪಸ್ಥಿತರಿದ್ದರು.

FILM

ಕ್ಲಿಕ್ ಆಯ್ತು ‘ಪುಷ್ಪ ಪುಷ್ಪ’…ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ ಗೆ ಫ್ಯಾನ್ಸ್ ಫಿದಾ

Published

on

ಟಾಲಿವುಡ್ : ಸದ್ಯ ಟಾಲಿವುಡ್ ಅಂಗಳದಲ್ಲಿ ‘ಪುಷ್ಪ 2 : ದಿ ರೂಲ್‌’ ಸೌಂಡ್ ಜೋರಾಗಿದೆ. ಅಲ್ಲು ಅರ್ಜುನ್ ಸಿನಿಮಾ ಅಂದ್ರೆ ಹೇಳ್ಬೇಕಾ..ಮೊದಲೇ ಕ್ರೇಜ್ ಹೆಚ್ಚಿಸಿರುತ್ತೆ. ಪುಷ್ಪ ಈಗಾಗಲೇ ಫಸ್ಟ್ ಲುಕ್, ಟೀಸರ್ ಎಲ್ಲದರ ಮೂಲಕಾನೂ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ ಹಾಡಿನ ಸರದಿ.


ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ :

‘ಪುಷ್ಪ 2 : ದಿ ರೂಲ್‌’ ಸಿನಿಮಾದ ಕುರಿತು ಯಾವ ಅಪ್ಡೇಟ್ ಕೊಡುತ್ತದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಮೇ 1 ರಂದು ಸಿನೆಮಾದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಪುಷ್ಪ ಪುಷ್ಪ ಅನ್ನೋ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಅಲ್ಲು ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಾಸ್ ಲುಕ್ ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿರೋದಂತೂ ಸುಳ್ಳಲ್ಲ. ಎಂದಿನಂತೆ ಅಲ್ಲು ಡ್ಯಾನ್ಸ್ ಸಕತ್ತಾಗಿಯೇ ಇದೆ. ಟೀ ಗ್ಲಾಸ್ ಹಿಡಿದು ಅಲ್ಲು ಅರ್ಜುನ್ ವ್ಹಾವ್ ಎಂದೆನಿಸುವಂತೆ ಸ್ಟೆಪ್ ಹಾಕಿದ್ದಾರೆ.

ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಸದ್ಯ 9.7 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಮೂಲಕ ಭಾರತದಲ್ಲಿನ ಸಂಗೀತ ಪಟ್ಟಿಯಲ್ಲಿ ಈ ಹಾಡು ಅಗ್ರಸ್ಥಾನ ಪಡೆದುಕೊಂಡಿದೆ.

ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅಲ್ಲು ಅರ್ಜುನ್ ಪಾತ್ರದ ಮೇಲೆ ಚಿತ್ರಿಸಲಾಗಿದೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು ,ನಕಾಶ್ ಅಜೀಜ್, ದೀಪಕ್ ಬ್ಲೂ ದನಿಯಾಗಿದ್ದಾರೆ.  ‘ಪುಷ್ಪ ಪುಷ್ಪ’ ಹಾಡು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಎಂಬ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ತೆರೆಗೆ ಯಾವಾಗ?

ಅಲ್ಲು ಅರ್ಜುನ್ ಜೊತೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ , ಡಾಲಿ ಧನಂಜಯ್, ಜಗದೀಶ್ ಪ್ರತಾಪ್ ಭಂಡಾರಿ, ರಾವ್ ರಮೇಶ್, ಜಗಪತಿ ಬಾಬು, ಅಜಯ್, ಸುನಿಲ್, ಮೈಮ್ ಗೋಪಿ, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮೊದಲಾದವರು ಪಾತ್ರವಾಗಿದ್ದಾರೆ.

‘ಪುಷ್ಪ 2: ದಿ ರೂಲ್’ ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾದಲ್ಲಿದ್ದ ಆಕ್ಷನ್‌ ಗಿಂತ ಹೆಚ್ಚಿನ ಆಕ್ಷನ್ ಪುಷ್ಪಾ 2 ನಲ್ಲಿ ಇರಲಿದೆಯಂತೆ. ಪುಷ್ಪಾದಲ್ಲಿ ಮರಗಳ್ಳತನದ ಕಥೆ ಇದ್ರೆ, ಪುಷ್ಪಾ2 ನಲ್ಲಿ ಕೆಂಪು ಮರಳು ಕಳ್ಳಸಾಗಾಟದ ಬಗ್ಗೆ ಹೇಳಲಾಗಿದೆ.

Continue Reading

LATEST NEWS

ಹೊಸ ಅಪ್​ಡೇಟ್ ನೊಂದಿಗೆ ಬರುತ್ತಿದೆ ವಾಟ್ಸ್ಆ್ಯಪ್; ಏನದು ಗೊತ್ತಾ!?

Published

on

ಮಂಗಳೂರು : ಆ್ಯಪ್ ಗಳು ಅಂದ್ರೆ ಹೊಸ ಹೊಸ ಫೀಚರ್ ಗಳ ಅನಾವರಣ ಮಾಡುತ್ತಿರುತ್ತವೆ. ಬಳಕೆದಾರರಿಗೆ ಅನುಕೂಲತೆಯನ್ನು ಸೃಷ್ಟಿಸಲು ನವೀನ ಫೀಚರ್ ಗಳನ್ನು ಅಳವಡಿಸಲಾಗುತ್ತದೆ. ವಾಟ್ಸ್ ಆ್ಯಪ್ ಕೂಡ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದೆ.


ಏನಿದು ಫೀಚರ್ ?

ವಾಟ್ಸ್ ಆ್ಯಪ್ ಗೆ ಅತ್ಯಂತ ಹೆಚ್ಚಿನ ಬಳಕೆದಾರರಿದ್ದಾರೆ. ಈಗಾಗಲೇ ನೂತನ ಫೀಚರ್ ಗಳನ್ನು ವಾಟ್ಸ್ ಆ್ಯಪ್ ಪರಿಚಯಿಸುತ್ತಿರುತ್ತದೆ. ಇದೀಗ ಹೊಸ ಫೀಚರ್​ವೊಂದನ್ನು ಪರಿಶೀಲಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವೀಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದಾಗಿದೆ. ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ನಿಯರ್ ​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಜನಪ್ರಿಯ. ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ.

Continue Reading

LATEST NEWS

123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

Published

on

ದೆಹಲಿ: ಭಾರತೀಯ ಹವಾಮಾನ ಇಲಾಖೆ ಮೇ ತಿಂಗಳ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿದ್ದು ಇದೀಗ ಅಚ್ಚರಿ ಮೂಡಿಸಿದೆ. 1901ರ ನಂತರ ಏಪ್ರಿಲ್‌ನಲ್ಲಿ ಇಷ್ಟೊಂದು ತಾಪಮಾನವನ್ನು ದಾಖಲಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

havamana

ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ದೇಶದಲ್ಲಿ 1901ರ ನಂತರ ಇದೇ ಮೊದಲ ಬಾರಿಗೆ ಹೆಚ್ಚು ತಾಪಮಾನ ಏರಿಕೆಯಾಗಿರುವುದು. ಎಪ್ರಿಲ್ ತಿಂಗಳಿನಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತೆ ಮಳೆ ಬಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚಿನ ಉರಿಬಿಸಿಲು, ಶಾಖ ಮತ್ತು ಆಲಿಕಲ್ಲು ಮುಂದವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಮೇ ತಿಂಗಳಿನಲ್ಲಿ ಬಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 11 ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂದೆ ಓದಿ..; ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಏಪ್ರಿಲ್ 5 ರಿಂದ 7 ರವರೆಗೆ, ನಂತರ 15 ರಿಂದ 30 ರವರೆಗೆ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಾಗಿದೆ. ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ಕನಿಷ್ಠ ತಾಪಮಾನ 28.12 ಡಿಗ್ರಿ ಸೆಲ್ಸಿಯಸ್ ಎಂದು ಮೊಹಾಪಾತ್ರ ಹೇಳಿದ್ದಾರೆ. ದಕ್ಷಿಣ ಪರ್ಯಾಯ ದ್ವೀಪದ ಭಾರತದಲ್ಲಿ 1980 ರ ದಶಕದಿಂದಲೂ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಮುಂದಿನ 11 ದಿನದ ಶಾಖದ ಅಲೆ, ಆಲಿಕಲ್ಲು ಮಳೆ:

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್‌ನಲ್ಲಿ ಮೇ ತಿಂಗಳಲ್ಲಿ 8-11 ದಿನಗಳವರೆಗೆ ಶಾಖದ ಅಲೆಗಳು ಇರಬಹುದೆಂದು ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗ ಕರ್ನಾಟಕ, ತೆಲಂಗಾಣದಲ್ಲಿ 5-5 ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಉತ್ತರ ಭಾರತ, ಮಧ್ಯ ಭಾರತ ಮತ್ತು ಪೆನಿನ್ಸುಲಾರ್ ಭಾರತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ದಿನಗಳ ಕಾಲ ಆಲಿಕಲ್ಲು ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

Trending