DAKSHINA KANNADA
ದ.ಕ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಆಯ್ಕೆ
ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.
ಮೂಡುಬಿದಿರೆ: ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.
ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ ನ ಸಭಾಭವನದಲ್ಲಿ ನಿರ್ಗಮಿತ ಅಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಏರ್ಮಾಳ್ ರೋಹಿತ್ ಹೆಗ್ಡೆ( ಗೌರವಾಧ್ಯಕ್ಷ), ಚಂದ್ರಹಾಸ ಸನಿಲ್(ಕೋಶಾಧಿಕಾರಿ), ರಶ್ಮಿತ್ ಶೆಟ್ಟಿ, ಶಕ್ತಿಪ್ರಸಾದ್ ಶೆಟ್ಟಿ (ಉಪಾಧ್ಯಕ್ಷರು), ವಿದ್ಯಾಧರ್ ಜೈನ್(ಉಪ ಕಾರ್ಯದರ್ಶಿ) ಹಾಗೂ ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ.
ಸೆ.18ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಸಭೆ ನಡೆಯಲಿದ್ದು, ಈ ವರ್ಷದ ಕಂಬಳದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ಸಭೆಯಲ್ಲಿ ಪುತ್ತೂರು ಶಾಸಕ, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಂಬಳವನ್ನು ನಡೆಸುವ ಬಗ್ಗೆ ತಯಾರಿ ನಡೆಯುತ್ತಿದೆ.
ಜಿಲ್ಲಾ ಕಂಬಳ ಸಮಿತಿ ಹಾಗೂ ಇತರ ಕಂಬಳ ಸಮಿತಿಗಳ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಿಗೆ 5 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಭರವಸೆಯಿತ್ತರು.
ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳ ಕ್ಷೇತ್ರದ ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತೇನೆ ಎಂದರು.
ಸಮಿತಿಯ ಮಾಜಿ ಅಧ್ಯಕ್ಷರಾದ ಪಿ.ಆರ್ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಶಾಂತಾರಾಮ ಶೆಟ್ಟಿ ಬಾರ್ಕೂರ, ಮೂಲ್ಕಿ ಸೀಮೆಯ ದುಗ್ಗಣ ಸಾಮಂತ, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ನಿರ್ಗಮನ ಕಾರ್ಯದರ್ಶಿ ರಕ್ಷಿತ್ ಜೈನ್, ಪ್ರಮುಖರಾದ ಶ್ರೀಕಾಂತ್ ಭಟ್ ನಂದಳಿಕೆ, ಇರುವೈಲ್ ಸತೀಶ್ಚಂದ್ರ ಸಾಲ್ಯಾನ್, ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
ಹೊಸ ಮುಖ ಪ್ರತಿಭೆ ; ಯಕ್ಷಗಾನ ಯುವ ಕಲಾವಿದ ‘ಅಕ್ಷಯ್ ಭಟ್ ಮೂಡುಬಿದ್ರೆ’
ಜೀವನದಲ್ಲಿ ಯಾವಾಗಲೂ ಉತ್ತಮ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯ. ಅದೇನೋ ಇಂತಹವರೇ ಆಗಬೇಕೆಂದಿಲ್ಲ , ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಶಕ್ತಿ ಇರುವುದನ್ನು ನಾವು ಕಾಣುತ್ತೇವೆ. ಅದ್ಯಾಕೋ ಗೊತ್ತಿಲ್ಲ ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅದು ‘ಅಕ್ಷಯ್ ಭಟ್ ಮೂಡುಬಿದ್ರೆ’.
ಹುಟ್ಟಿದ್ದು 24.4.1997 ರಂದು ಮೂಡಬಿದ್ರೆಯಲ್ಲಿ. ತಿನ್ನುವುದಕ್ಕೂ ಕಷ್ಟವಿದ್ದ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಮುಗಿಸಿದರು. ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಗಿ ಯಕ್ಷಗಾನ ಕಲೆಯತ್ತ ಸಾಗಿದರು. ನಿರಂತರ ಪರಿಶ್ರಮದಿಂದ 4 ಜನರಿಗೆ ಪರಿಚಯವಾಗುವಷ್ಟು ಬೆಳೆದಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ, ಪಿತ್ರಾರ್ಜಿತವಾದ ಯಾವುದೇ ಆಸ್ತಿಯು ದೊರಕದ ಕಾರಣ ತಾನೇ ಶಿರ್ತಾಡಿಯಲ್ಲಿ ಜಾಗ ತೆಗೆದು ಮನೆಯನ್ನು ಕಟ್ಟಿ ಸತತ 8 ತಿಂಗಳಿಂದ ತಂದೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದಾರೆ. ಇಂತಹ ಜೀವನ ದೊರಕುವುದಕ್ಕೆ ಮೂಲ ಕಾರಣ ಯಾವುದು ಎಂದು ಕೇಳಿದರೆ “ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಅನುಗ್ರಹ ಹಾಗೂ ತಂದೆ ತಾಯಿಯ ಆಶೀರ್ವಾದ ಮತ್ತು ಪ್ರೋತ್ಸಾಹ” ಎಂದು ಹೇಳುತ್ತಾರೆ.
ಎಳವೆಯ ಪ್ರಾಯದಿಂದಲೂ ಕಷ್ಟದ ಜೀವನವನ್ನು ಸಾಗಿಸಿ. ತನ್ನನ್ನು ಹಾಗೂ ತನ್ನ ತಂದೆ ತಾಯಿಯನ್ನು ಆಡಿಕೊಂಡವರ ಬಾಯಲ್ಲಿ ಹೊಗಳಿಸಿಕೊಳ್ಳಬೇಕೆಂಬ ಹಠದಿಂದ ಪದವಿ ಶಿಕ್ಷಣ ಮುಗಿಸಿ ತದನಂತರ ಹನುಮಗಿರಿ ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿ, ಪ್ರಸ್ತುತ ಕಟೀಲು ಮೇಳದಲ್ಲಿ 8ನೇ ವರ್ಷದ ತಿರುಗಾಟದಲ್ಲಿದ್ದಾರೆ. ಆವತ್ತು ಯಾರೆಲ್ಲ ತಮ್ಮ ಪರಿಸ್ಥಿತಿಯನ್ನು ಕಂಡು ನಕ್ಕು ಅಪಹಾಸ್ಯ ಮಾಡುತ್ತಿದ್ದರೋ, ಈಗ ಅವರೇ ಹೊಗಳುತ್ತಿದ್ದಾರೆ. . ಸಾಧನೆಗೆ ಕೊನೆ ಇಲ್ಲ ಹಾಗಾಗಿ ಸಾದಿಸಿದ್ದು ಏನು ಇಲ್ಲ ಇನ್ನಷ್ಟು ಸಾಧನೆಯನ್ನು ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕಲಾವಿದನಾಗಿ ಬೆಳೆಯಬೇಕು ಎಂಬುವುದು ಅವರ ಆಲೋಚನೆ.
ಯಾವ ಪಾತ್ರಕ್ಕೂ ಅಕ್ಷಯ್ ‘ಸೈ’ ಎಂಬಂತೆ ಬಹು ಕ್ರಿಯಾಶೀಲ , ಪ್ರತಿಭಾನ್ವಿತ ಗುಣ ಹೊಂಂದಿದ್ದು, ಅವರ ಮುಖದ ಲವಲವಿಕೆ , ಸದಾ ಉತ್ಸಾಹಿ ಭಾವವೇ ಬಹು ಆಕರ್ಷಣೀಯವಾಗಿಹುದು. ಅತೀ ಸಣ್ಣ ಪ್ರಾಯದಲ್ಲೇ ಯಕ್ಷಗಾನ ರಂಗದಲ್ಲಿ ತಮ್ಮ ಛಾಯಪ್ರಭಾವ ಬೀರುತ್ತಿದ್ದಾರೆ. ಯಾರ ಹಂಗೂ ಇಲ್ಲದೆ ಸ್ವತಂತ್ರ್ಯವಾಗಿ ತಮ್ಮ ಕುಟುಂಬದೊಂದಿಗೆ ದಿನ ಕಳೆಯುತ್ತಾ, ದುರ್ಗಾಮಾತೆ ಸೇವೆಯೊಡನೆ, ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಅಕ್ಷಯ್‌ನಂತ ಅನೇಕ ಕಲಾವಿದರು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಆದರೆ ಅವರನ್ನು ಗುರುತಿಸುವಲ್ಲಿ ನಾವು ಸೋತಿದ್ದೇವಷ್ಟೇ.
ಬರಹ : ಅಶ್ವಿತಾ ಭಟ್
DAKSHINA KANNADA
ಮೌನದ ಪಯಣ
ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಹೊರಟಾಗ ಕಷ್ಟ, ಅನುಮಾನ , ಸೋಲು ಉಂಟಾಗುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ನಾವು ಇಟ್ಟ ಹೆಜ್ಜೆಯ ಹಿಂದಿಡಬಾರದು. ಎದುರಾಗುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿ ಗೆಲುವಿನ ಪತಾಕೆಯ ಎತ್ತಿ ಹಾರಿಸಬೇಕು.
ಗೆಲುವು ದೊರೆತಾದ ಮೇಲೆ ನಾವು ಬಂದ ದಾರಿಯ ಮರೆಯಬಾರದು, ಜೊತೆಗೆ ಇದ್ದು ಸಹಕರಿಸಿದ ವ್ಯಕ್ತಿಯನ್ನು ಮರೆಯಬಾರದು. 99% ಪರಿಶ್ರಮದ ಮೇಲೆ 1% ಅದೃಷ್ಟ ಅವಲಂಬಿತವಾಗಿರುತ್ತದೆ. ಗೆದ್ದಾಗ ಅತಿಯಾಗಿ ಹಿಗ್ಗದೆ, ಸೋತಾಗ ಅತಿಯಾಗಿ ಕುಗ್ಗದೆ ಎರಡನ್ನೂ ಸಮ ಮನಸ್ಸಿನಿಂದ ಸ್ವೀಕರಿಸಬೇಕು. ಒಮ್ಮೆಲೇ ಗೆಲ್ಲುವು ಸಲ್ಲದು ಹಾಗೆಂದು ಪ್ರಯತ್ನ ಪಡದೆ ಸುಮ್ಮನೆ ಇರಬಾರದು. ಪ್ರತಿಯೊಂದರಿಂದಲೂ ಪಾಠ ಕಲಿತು ತಿದ್ದುತ್ತಾ ಸಾಗುತ್ತಿರಬೇಕು. ಜನರ ಮಾತಿಗೆ ಕಿವಿಗೊಡದೆ ನಮ್ಮ ಪಾಡಿಗೆ ನಮ್ಮ ಪಥದಿ ನಾವು ಸಾಗುತ್ತಿರಬೇಕು.
ನೀನು ಏನೇ ಮಾಡಿದರೂ ಆಡಿಕೊಳ್ಳುವ ಸಮಾಜ ಇದು. ಜನರ ಬಾಯಿಗೆ ಸಿಗದೆ ಹೋಗುವುದು ಅಸಾಧ್ಯ ಹಾಗಾಗಿ ಆ ಕಡೆ ಲಕ್ಷ್ಯ ವಹಿಸದೆ ದೃಷ್ಟಿಯ ಕೇವಲ ಗುರಿ ಕಡೆ ಮಾತ್ರ ಇಡು. ಸಾಗುವ ದಾರಿಯಲ್ಲಿ ನೀ ಒಬ್ಬಂಟಿ ಎನಿಸಿದರೂ ಪರವಾಗಿಲ್ಲ ಮೌನದಿ ನಿನ್ನ ಪಯಣ ಬೆಳೆಸು.
ಬರಹ : ಅಶ್ವಿತಾ ಭಟ್
DAKSHINA KANNADA
ಕೂಳೂರಿನ ಹಳೆ ಸೇತುವೆಯಲ್ಲಿ ಭೀಕರ ಅಪಘಾತ; ಓರ್ವ ಸಾ*ವು
ಮಂಗಳೂರು : ಕೂಳೂರಿನ ಹಳೆ ಸೇತುವೆಯಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪ*ಘಾತ ಸಂಭವಿಸಿ ಓರ್ವ ವ್ಯಕ್ತಿ ಮೃ*ತ ಪಟ್ಟಿದ್ದಾನೆ. ಸ್ಕೂಟರ್‌ನಲ್ಲಿದ್ದ ಮತ್ತೋರ್ವ ಗಂಭೀ*ರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಲಾರಿ ಸ್ಕೂಟರ್‌ಗೆ ಡಿ*ಕ್ಕಿ ಹೊಡೆದಿದೆ ಎನ್ನಲಾಗಿದೆ. ಮೊದಲೇ ಶಿಥಿಲವಾಸ್ಥೆಯಲ್ಲಿ ಇರುವ ಈ ಸೇತುವೆಯಲ್ಲಿ ವೇಗವಾಗಿ ಲಾರಿ ಚಲಾಯಿಸಿದ ಕಾರಣ ಈ ಅಪಘಾ*ತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಳ್ಳುಳ್ಳಿಯನ್ನು ಹೀಗೆ ಸಂಗ್ರಹಿಸಿಟ್ಟರೆ ತಿಂಗಳಾದ್ರೂ ತಾಜಾವಾಗಿರುತ್ತೆ
ಅಪಘಾ*ತದಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃ*ತಪಟ್ಟ ಕಾರಣ ಕೆಲ ಕಾಲ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಮೃ*ತದೇಹವನ್ನು ಆಸ್ಪತ್ರೆಗೆ ರವಾನಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಕೂಟರ್ ಸವಾರರು ಯಾರು ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.