Connect with us

    LATEST NEWS

    ಹೆಣ್ಣು ಹೆತ್ತಿದಕ್ಕೆ ಅವಮಾನ; 3 ಹೆಣ್ಣು ಮಕ್ಕಳ ತ*ಬ್ಬಲಿಯಾಗಿಸಿ ಹೊರಟ ತಾಯಿ

    Published

    on

    ಮಂಗಳೂರು/ಕೊಪ್ಪಳ: ಮೂರು ಹೆಣ್ಣು ಹೆತ್ತಳು ಎನ್ನುವ ಕಾರಣಕ್ಕೆ ಪತಿ ಸೇರಿದಂತೆ ಪತಿಯ ಕುಟುಂಬಸ್ಥರು ನಿಂದಿಸಿದರು ಎನ್ನುವ ಕಾರಣಕ್ಕೆ ಮನನೊಂದು ಹನುಮವ್ವ ಆ*ತ್ಮಹತ್ಯೆ ಮಾಡಿಕೊಂಡು ಇ*ಹಲೋಕ ತ್ಯಜಿಸಿದ್ದಾರೆ.
    ತಾಯಿ ಎದೆಗವಚಿಕೊಂಡು ಹಾಲು ಉಣ್ಣಬೇಕಾದ ನಾಲ್ಕು ತಿಂಗಳು ಹೆಣ್ಣು ಕೂಸು ಈಗ ಅ*ನಾಥ. ಅಷ್ಟೇ ಅಲ್ಲ, ನಾಲ್ಕು, ಮೂರು ವರ್ಷದ ಇನ್ನೆರಡು ಹೆಣ್ಣು ಮಕ್ಕಳೂ ಸಹ ಅ*ನಾಥವಾಗಿವೆ.

    ಮುಖ್ಯ ಯುವತಿಯ ಪತಿ ಗಣೇಶ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

    ಈಗ ಮಕ್ಕಳು ತಂದೆ, ತಾಯಿ ಇಲ್ಲದೆ ಅ*ನಾಥವಾಗಿವೆ. ಇತರ ಐವರು ಆರೋಪಿಗಳು ನಾಪತ್ತೆಯಾಗಿದ್ದರು. ಬಳಿಕ ತೀವ್ರವಾದ ಕಾರ್ಯಾಚರಣೆಯ ವೇಳೆ ಒಬ್ಬೊಬ್ಬರೆ ಪತ್ತೆಯಾಗುತ್ತಿದ್ದಾರೆ.

    ಕೊ*ಲೆಯಾಗಿರುವ ಶಂಕೆ :

    ಮಗಳು ಆ*ತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದು ತಂದೆ ತಾಯಿ ಪೊಲೀಸರ ಹೇಳಿದ್ದು, ಕೊ*ಲೆಯಾಗಿರಬಹುದು ಏಂದು ಶಂಕಿಸಲಾಗಿದೆ. ಹೆಣ್ಣು ಮಕ್ಕಳನ್ನೇ ಹೆತ್ತಿರುವ ಕಾರಣಕ್ಕೆ ಗಂಡನ ಮನೆಯವರು ಹಿಂಸೆ ನೀಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

    ಆ ಮೂವರು ಮಕ್ಕಳು ಗಣೇಶನ ಸಹೋದರನ ಮನೆಯಲ್ಲಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಡಿ. ಸುರೇಶ ತಿಳಿಸಿದ್ದಾರೆ.

    ಸಮಗ್ರ ತನಿಖೆಯಾಗಬೇಕು. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಹೆಣ್ಣು ಹೆರುವುದೇ ತಪ್ಪಾ, ಇಂಥವರಿಗೆ ದೇವರು ಶಿಕ್ಷೆ ನೀಡಲಿ ಎಂದು ಮೃತಳ ತಂದೆ ಬಸಪ್ಪ ಕೋರಿ ಹೇಳಿದ್ದಾರೆ. ಸದ್ಯ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    Zomato ಪ್ರತಿ ಆರ್ಡರ್ ಗೆ ₹10 ಶುಲ್ಕ ಹೆಚ್ಚಳ!

    Published

    on

    ನವದೆಹಲಿ: ಆನ್ ಲೈನ್ ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್ ಫಾರ್ಮ್ ಫೀ) ₹10 ಹೆಚ್ಚಳ ಮಾಡಿದೆ.

    ಹಬ್ಬಗಳ ಸಂದರ್ಭದಲ್ಲಿ ಆರ್ಡರ್ ಗಳ ಸಂಖ್ಯೆ ಹೆಚ್ಚಿರುವುದರಿಂದ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಸದ್ಯ ದೆಹಲಿಯಲ್ಲಿ ₹10 ಹೆಚ್ಚು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಬೇರೆ ಬೇರೆ ನಗರದಲ್ಲಿ ಶುಲ್ಕದ ದರ ಬದಲಾಗಲಿದೆ ಎಂದಿರುವ ಕಂಪನಿ ಯಾವ ನಗರದಲ್ಲಿ ಎಷ್ಟು ಶುಲ್ಕ ಇರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.

    ಕಳೆದ ಏಪ್ರಿಲ್ ತಿಂಗಳಿನಲ್ಲಿಯೂ ಜೊಮಾಟೊ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು ₹4 ಏರಿಕೆ ಮಾಡಿತ್ತು. ಈಗ ಮತ್ತೆ ದರ ಏರಿಸಿ ಪ್ರಕಟಣೆ ಹೊರಡಿಸಿದೆ.

    Continue Reading

    LATEST NEWS

    ಗ್ರಾಹಕನಿಗೆ 50 ಪೈಸೆ ಹಿಂತಿರುಗಿಸದ ಅಂಚೆ ಕಚೇರಿಗೆ 15,000 ರೂ. ದಂಡ

    Published

    on

    ಚೆನ್ನೈ: ಬರೀ 50 ಪೈಸೆ ಅಲ್ವಾ ಎಂದು ಗ್ರಾಹಕನ ಬೇಡಿಕೆ ನಿರ್ಲಕ್ಷಿಸಿದ ಅಂಚೆ ಕಚೇರಿಯೊಂದಕ್ಕೆ 15,000 ರೂ. ದಂಡ ವಿಧಿಸಿದ ಅಪರೂಪದ ಘಟನೆ ನಡೆದಿದೆ.

    ಚೆನ್ನೈನ ಮಾನ್ಯ ಎಂಬುವರು 2023ರ ಡಿಸೆಂಬರ್‌ನಲ್ಲಿ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಮಾಡಲು 30 ರೂ. ನೀಡಿದ್ದರು. ಅದಕ್ಕೆ ನಿಗದಿತ ಶುಲ್ಕ 29.50 ರೂ. ಆಗಿತ್ತು. ಬಾಕಿ 50 ಪೈಸೆ ಕೊಡಲು ಸಿಬಂದಿ ಒಪ್ಪಿಲ್ಲ. ನಮ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೊತ್ತ ರೌಂಡಾಫ್ ಆಗಿದ್ದು, 30 ರೂ. ತೋರಿಸುತ್ತಿದ್ದು ಅಷ್ಟನ್ನೇ ಪಾವತಿ ಮಾಡಿ ಎಂದರು. ಅದಕ್ಕೆ ಒಪ್ಪದ ಮಾನ್ಯ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿ ಮಾಡುತ್ತೇನೆ ಎಂದರೂ ಸಿಬ್ಬಂದಿ ಒಪ್ಪಿರಲಿಲ್ಲ.

    ಅಂಚೆ ಕಚೇರಿ ವಿರುದ್ಧ ಚೆನ್ನೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿ, ಪ್ರತಿ ದಿನ ರೌಂಡಾಫ್ ಮಾಡುವುದರಿಂದ ಬೃಹತ್ ಮೊತ್ತ ಸಂಗ್ರಹಿಸಿದಂತಾಗುತ್ತದೆ. ಇದು ಕಪ್ಪುಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸರಕಾರಕ್ಕೆ ಬರುವ ಜಿಎಸ್‌ಟಿ ನಷ್ಟವಾಗುತ್ತದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ವೇದಿಕೆ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    Continue Reading

    LATEST NEWS

    ಮುಸ್ಲಿಂ ಯುವತಿಯ ವರಿಸಿದ ಹಿಂದು ಯುವಕ; ಪೊಲೀಸ್ ಠಾಣೆ ಮೆಟ್ಟಿಲೇರಿದ ಅಂತರ್ ಧರ್ಮೀಯ ವಿವಾಹ

    Published

    on

    ಮಂಗಳೂರು: ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗೆಂದು ಪೊಲೀಸರ ಮೊರೆ ಹೋದ ಸಂದರ್ಭದಲ್ಲಿ ಯುವತಿಯನ್ನು ಪೊಲೀಸರು ಯುವಕನ ಜೊತೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು, ಇದರಿಂದ ಪ್ರಿಯಕರ ಪೊಲೀಸ್‌ ಠಾಣೆ ಮುಂದೆಯೇ ಪ್ರತಿಭಟನೆ ಮಾಡಿದ್ದಾನೆ. ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ.

    ಈ ಘಟನೆ ನಡೆದಿರುವುದು ಹಾವೇರಿ ಮಹಿಳಾ ಠಾಣೆಯಲ್ಲಿ. ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರ ಪ್ರತಿಭಟನೆ ಮಾಡಿದ್ದಾನೆ. ಕಳೆದ ಮೂರು ವರ್ಷದಿಂದ ಯುವಕ ಪ್ರದೀಪ್‌ ಬಣಕಾರ್‌ ಮತ್ತು ತಂಜಿಮ್‌ ಭಾನು ಪರಸ್ಪರ ಪ್ರೀತಿ ಮಾಡುತ್ತಿದ್ದು, ಹದಿನೈದು ದಿನದ ಹಿಂದೆ ಮನೆಯಿಂದ ಓಡಿ ಹೋಗಿ, ವಿವಾಹವಾಗಿದ್ದಾರೆ.

    ಅಲ್ಲಿಂದ ನೇರವಾಗಿ ಹಾವೇರಿ ಮಹಿಳಾ ಪೊಲೀಸ್‌ ಠಾಣೆಗೆ ಜೋಡಿ ಬಂದಿದ್ದು, ಮನೆಯವರ ಬೆದರಿಕೆ ಇದ್ದುದ್ದರಿಂದ ರಕ್ಷಣೆ ಕೋರಿ ಬಂದಿದ್ದರು. ಪೊಲೀಸರು ಇದೀಗ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ, ಎಲ್ಲಾ ಸಮಸ್ಯೆ ಬಗೆಹರಿಸಿದಿದ್ದರೂ, ಆಕೆಯನ್ನು ಮಾತ್ರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಆಕೆಯನ್ನು ಮನೆಗೆ ಕಳಿಸಿಕೊಂಡುವಂತೆ ಪ್ರಿಯಕರ ಹೇಳಿದ್ದಾನೆ.

    ಆದರೆ ಪೊಲೀಸರು ಈಗ ಹೊರಗೆ ಹೋದರೆ ಸಮಸ್ಯೆ ಆಗುತ್ತೆ, ಇಬ್ಬರಿಗೂ ಏನಾದರೂ ಮಾಡಬಹುದು. ಅದಕ್ಕೆ ಅಲ್ಲಿಯೇ ಕೂರಿಸಿದ್ದಾರೆ ಎಂದು ಹೇಳಿದ್ದಾನೆ. ನಾನು ನನ್ನ ಹೆಂಡ್ತಿನ ಕರೆದುಕೊಂಡು ಹೋಗಬೇಕು ಎಂದು ಸ್ಟೇಷನ್‌ ಮುಂದೆಯೇ ಕೂತುಕೊಳ್ತೇನೆ ಎಂದು ಯುವಕ ಪಟ್ಟು ಹಿಡಿದು ಕುಳಿತಿರುವುದಾಗಿ ವರದಿಯಾಗಿದೆ.

    Continue Reading

    LATEST NEWS

    Trending