Connect with us

    LATEST NEWS

    ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಇಳಿಕೆ!

    Published

    on

    ನವದೆಹಲಿ: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ.

    ಹೌದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು ಸರ್ಕಾರ ಒಂದು ಮಾರ್ಗವನ್ನು ಕಂಡುಕೊಂಡಿದೆ. ಆದರೆ, ಅದನ್ನು ಆರಂಭಿಸಲು ಸರ್ಕಾರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ನಿವಾರಣೆಯಾಗುತ್ತಿದೆ. ಇದರಿಂದ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಬಹುದು. ಆದ್ದರಿಂದ, ಮಿಶ್ರ ಇಂಧನದಿಂದ ಚಲಿಸುವ ಕಾರುಗಳು ಮಾರುಕಟ್ಟೆಯನ್ನು ತಲುಪಿವೆ.

    ಇಂಧನ ಫ್ಲೆಕ್ಸ್ ಜೊತೆಗೆ ಎಥೆನಾಲ್ ನಿಂದ ಚಲಿಸುವ ಕಾರುಗಳೂ ಮಾರುಕಟ್ಟೆಗೆ ಬರಲಿವೆ ಎಂದು ಸಾರಿಗೆ ಸಚಿವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಅದರ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರಾರಂಭವಾಗಲಿದೆ ವಾಟರ್‌ ಮೆಟ್ರೋ

    Published

    on

    ಮಂಗಳೂರು: ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್‌ ಮೆಟ್ರೋ ಯೋಜನೆಯನ್ನು ಏಪ್ರಿಲ್‌ 25ರಂದು ಉದ್ಘಾಟಿಸಿದ್ದರು. ಅದರಂತೆ ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲೂ ವಾಟರ್‌ ಮೆಟ್ರೋ ಸೇವೆ ಸಿಗುವ ಸಾಧ್ಯತೆಯಿದೆ. ಕರ್ನಾಟಕ ಮಾರಿಟೈಮ್ ಬೋರ್ಡ್ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು ತಯಾರಿಸಲು ನಿರ್ಧರಿಸಿದ್ದು ಟೆಂಡರ್‌ ಆಹ್ವಾನಿಸಿದೆ. ಈ ಸಾರಿಗೆ ಜಾಲ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್‌ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸಲಿದೆ.

    ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್‌ ದೂರದವರೆಗೆ ಬೋಟ್‌ ಸಂಚರಿಸಲಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಕೊಚ್ಚಿಯ ನಂತರ ಮಂಗಳೂರು ವಾಟರ್‌ ಮೆಟ್ರೋ ಯೋಜನೆ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಿದೆ. ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಸಂಪರ್ಕಿತ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ರಚಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಿಂದ ಜೀವನೋಪಾಯದ ಅವಕಾಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    2024-2025ರ ಬಜೆಟ್ ಮಂಡನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ವಾಟರ್ ಮೆಟ್ರೋ ಸೇವೆಯನ್ನು ಆರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಘೋಷಿಸಿದ್ದರು.

    ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್‌ ಮೆಟ್ರೋ ಯೋಜನೆಯನ್ನು ಏಪ್ರಿಲ್‌ 25ರಂದು ಉದ್ಘಾಟಿಸಿದ್ದರು. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳಲ್ಲಿ ಈ ಮೆಟ್ರೋ ಸಂಚಾರ ಮಾಡುತ್ತಿದ್ದು, 8 ಎಲೆಕ್ಟ್ರಿಕ್ ಬೋಟ್‌ಗಳು, 38 ಟರ್ಮಿನಲ್‌ಗಳ ಮೂಲಕ ವಾಟರ್‌ ಮೆಟ್ರೋ ಸೇವೆ ನೀಡುತ್ತಿದೆ.

    Continue Reading

    LATEST NEWS

    ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮುಗಿಸಿ ತೆರಳುತ್ತಿದ್ದಾಗ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು !!

    Published

    on

    ಮಂಗಳೂರು/ಗದಗ : ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಸಾವನಪ್ಪಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾದ ಘಟನೆ ಭೈರನಹಟ್ಟಿ ಗ್ರಾಮದ ಬಳಿ ಇಂದು (ನ.06) ಬೆಳಿಗ್ಗೆ ನಡೆದಿದೆ.

    ಮೃತರನ್ನು ಬಾಗಲಕೋಟೆಯ ಸಿದ್ದರಾಮ ಹಾಗೂ ಹೇಮಾ ಎಂದು ಗುರುತಿಸಲಾಗಿದೆ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾಗೆ ಗಾಯಗಳಾಗಿದ್ದು, ಅವರನ್ನು ನರಗುಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಬುಧವಾರ ಬೆಳಿಗ್ಗೆ ಅಪಘಾತ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಲಾರಿ, ಬಾಗಲಕೋಟೆಗೆ ಹೊರಟ್ಟಿದ್ದ ಕಾರು ಇದಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉಪ್ಪಿನಂಗಡಿ: ರಸ್ತೆ ಬದಿ ಪ*ಲ್ಟಿಯಾದ ಕಂಟೈನರ್‌ ಲಾರಿ

    Published

    on

    ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರೇನಹಳ್ಳಿ ಸಮೀಪ ಕಂಟೈನರ್‌ ಲಾರಿಯೊಂದು ಸೋಮವಾರ (ನ.4) ರಾತ್ರಿ ಉಪ್ಪಿನಂಗಡಿ ರಸ್ತೆ ಬದಿ ಪ*ಲ್ಟಿಯಾದ ಘಟನೆ ಸಂಭವಿಸಿದೆ.

    ಲಾರಿಯಲ್ಲಿದ್ದ ಹೊಸ ಕಾರುಗಳು ನ*ಜ್ಜುಗುಜ್ಜಾಗಿವೆ.

    ಬದಿಗೆ ಬಿದ್ದ ಲಾರಿಯನ್ನು ಮಂಗಳವಾರ (ನ.5) ಕ್ರೇನ್‌ ಮೂಲಕ ಮೇಲಕ್ಕೆತ್ತುವ ವೇಳೆ ಕೆಲವು ತಾಸು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

    ಇದರ ಪರಿಣಾಮ ಕೆಲವು ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸ ಬೇಕಾಗಿತ್ತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

    Continue Reading

    LATEST NEWS

    Trending