Connect with us

    LATEST NEWS

    ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿದ್ರಾ ಮುನಿರತ್ನ? ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ!

    Published

    on

    ಮಂಗಳೂರು/ಬೆಂಗಳೂರು : ಅತ್ಯಾಚಾ*ರ ಆರೋಪದಡಿ ಜೈಲು ಪಾಲಾಗಿರುವ ಮುನಿರತ್ನ ವಿರುದ್ಧ ಸಂ*ತ್ರಸ್ತೆ ಮತ್ತೆ ಆರೋಪಿಸಿದ್ದಾರೆ. ಇಂದು(ಅ.9) ಸುದ್ದಿಗೋಷ್ಟಿ ನಡೆಸಿರುವ ಮಹಿಳೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಶಾಸಕ ಮುನಿರತ್ನ ಅವರು ಇಬ್ಬರು ಮಾಜಿ ಮುಖ್ಯಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನಗೆ ಸರ್ಕಾದಿಂದ ಭದ್ರತೆ ಕೊಟ್ಟಲ್ಲಿ ನಾನು ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವೀಡಿಯೋವನ್ನು ಕೊಡುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಎಷ್ಟೇ ವಿರೋಧಿಸಿದ್ರೂ ಕೇಳಲಿಲ್ಲ:

    ಶಾಸಕ ಮುನಿರತ್ನ ಮಾಡಿದ ಕೃ*ತ್ಯ ವಿರುದ್ದ ಹೋರಾಟ ಮಾಡ್ತಿದ್ದೇನೆ. 2020ರಲ್ಲಿ ಮುನಿರತ್ನ ನನಗೆ ಪರಿಚಯ ಆಗಿದ್ರು, ಆನಂತರ ಮೆಸೇಜ್, ಕಾಲ್, ವೀಡಿಯೋ ಕಾಲ್ ಮಾಡ್ತಾರೆ. ಕಾಲ್‌ ರಿಸೀವ್ ಮಾಡು ಎಂದು ಒತ್ತಾಯ ಮಾಡುತ್ತಿದ್ರು. ನನ್ನ ಮನೆಯ ಸೆಕೆಂಡ್ ಫ್ಲೋರ್‌ಗೆ ಕರೆದುಕೊಂಡು ಹೋಗಿ ತಬ್ಬಿ ಕೊಳ್ತಾರೆ. ನೀವು ನನ್ನ ತಂದೆ ಸಮಾನ ಎಂದಾಗ ನಾನು ಕೇವಲ ಶಾಸಕ ಅಲ್ಲ. ನೀನು ಕೆಳಗೆ ಹೇಗೆ ಹೋಗ್ತಿಯಾ ನೋಡ್ತಿನಿ ಎಂದು ಬೆದರಿಕೆ ಹಾಕಿದ್ದರು. ಅಲ್ಲಿಯೇ ನನ್ನ ಮೇಲೆ ಅತ್ಯಾಚಾ*ರ ಮಾಡಿದ್ರು. ಎಷ್ಟೇ ವಿರೋಧಿಸಿದ್ರೂ ಕೇಳಲಿಲ್ಲ, ನನಗೆ ಆಗ ದೂರು ಕೊಡಲು ಭಯ ಇತ್ತು. ಇದೀಗ ಚೆಲುವರಾಜು ದೂರು ಕೊಟ್ಟ ಕಾರಣ ನಾನು ಇದೀಗ ನಾನು ದೂರು ಕೊಟ್ಟೆ ಎಂದು ಮಹಿಳೆ ಹೇಳಿದ್ದಾರೆ.

    ವೀಡಿಯೋ ತೋರಿಸಿ ಹೆದರಿಸಿದ್ರು :

    ನನ್ನನ್ನು ಮುನಿರತ್ನ ವೀಡಿಯೋ ತೋರಿಸಿ ಹೆದರಿಸಿದ್ರು. ಅವರ ಫೇಸ್ ಬ್ಲರ್ ಮಾಡಿ ನನ್ನ ಫೇಸ್ ಇರೋ ವೀಡಿಯೋ ತೋರಿಸಿ ಹೆದರಿಸಿದ್ರು. ಕಾರ್ಪೋರೇಟರ್ ವಾಸುದೇವ್ ವಿರುದ್ದ ವೀಡಿಯೋ ಮಾಡೋಕೆ ಹೇಳಿದ್ರು. ಅದನ್ನು ನಾನು ಮಾಡಲ್ಲ ಎಂದಿದ್ದೆ. ಮುನಿರತ್ನ ಅವರೇ ನಮಗೆ ಪೋನ್ ಕೊಟ್ಟು ಕಳಿಸ್ತಿದ್ರು. ಬಳಿಕ ಸಂಬಂಧಿಕ ಸುಧಾಕರ್ ಫೋನ್ ತೆಗೆದುಕೊಳ್ತಿದ್ರು. ಹೀಗೆ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಕೊಟ್ಟ ಮೊಬೈಲ್ ವೀಡಿಯೋ ನಾನು ಸೇವ್ ಮಾಡಿಕೊಂಡಿದ್ದೇನೆ. ಎಲ್ಲೂ ನಮ್ಮ ವೈಯಕ್ತಿಕ ಮೊಬೈಲ್ ಬಳಸಲು ಬಿಡ್ತಿದ್ದಿಲ್ಲ ಎಂದು ಆರೋಪಿಸಿದ್ದಾರೆ.

    ಸೀಟ್ ಗಾಗಿ ಹನಿಟ್ರ್ಯಾಪ್:

    ಮಾಜಿ ಸಿಎಂ ಇಬ್ಬರಿಗೆ ಹನಿಟ್ರ್ಯಾಪ್‌ ಮಾಡಿ ಟಾರ್ಚರ್ ನೀಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುನಿರತ್ನ ಅವರ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ತುಂಬಾ ಅಡ್ವಾನ್ಸ್ಡ್ ಕ್ಯಾಮೆರಾಗಳಿವೆ. ನಮ್ಮಂಥವರ ಅಸಹಾಯಕತೆ ಬಳಸಿಕೊಂಡು ಮಾಜಿ ಸಿಎಂ, ಸಚಿವರು, ಮಾಜಿ ಸಿಎಂ, ಶಾಸಕರು ಹನಿಟ್ರ್ಯಾಪ್ ವೀಡಿಯೋ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಸಿಪಿ, ಸಿಪಿಐ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಬ್ರೈನ್ ಮ್ಯಾಪಿಂಗ್ ಮಾಡಿಸಲಿ ಎಂದು ಅಶ್ವತ್ಥ ನಾರಾಯಣ, ಅಶೋಕ್ ಗೆ ಸಂತ್ರಸ್ಥೆ ಚಾಲೆಂಜ್ ಮಾಡಿದ್ದಾರೆ.

    ಹನಿಟ್ರ್ಯಾಪ್ ಮಾಡುವುದಕ್ಕೆ ನನ್ನನ್ನು ಬಳಕೆ ಮಾಡಿಕೊಂಡಿಲ್ಲ, ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಸಿನಿಮಾ ನಟಿಯರು ಇಲ್ಲ. ಇನ್ನು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾದ ಸುಮಾರು ಐದಾರು ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಸುಮ್ಮನಾಗಿದ್ದಾರೆ.

    ಇದನ್ನೂ ಓದಿ : ಬಿಗ್‌ಬಾಸ್ ಮನೆಯ ಉಸ್ತುವಾರಿ ಸರಿಯಿಲ್ವಂತೆ!

    ಅವರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲ ಸತ್ಯಗಳೂ ಹೊರಗೆ ಬರಲಿವೆ ಎಂದು ಹೇಳಿದರು. ಅನೇಕ ಮಹಿಳೆಯರನ್ನು ಶಾಸಕ ಮುನಿರತ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಲವು ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಲು ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ವಿಜಯೇಂದ್ರ 10 ನಿಮಿಷ ಅಪಾಯಿಂಟ್ ಮೆಂಟ್ ಬೇಕಿದೆ. ಹತ್ತೇ ಹತ್ತು ನಿಮಿಷ ಅವರ ಜೊತೆ ಮಾತಾಡಬೇಕು. ಇದಕ್ಕೆ ಅವಕಾಶ ಮಾಡಿಕೊಡಿ ಎಂದಿರುವ ಮಹಿಳೆ, ಇಷ್ಟೆಲ್ಲ ಆದ್ರೂ ಮುನಿರತ್ನ ಪಕ್ಷದಲ್ಲಿ ಇರಿಸಿಕೊಂಡಿದ್ದೀರಲ್ಲ ಎಂದು ಕೇಳಬೇಕಿದೆ ಎಂದಿದ್ದಾರೆ.

    LATEST NEWS

    ಸ್ಯಾಂಡಲ್‌ವುಡ್ ನಟಿಯರನ್ನು ಸೌತೆಕಾಯಿಗೆ ಕಾವಲಿಸಿದ ರೈತ; ಆ ಡಿಫರೆಂಟ್ ಐಡಿಯಾ ಯಾವುದು ಗೊತ್ತಾ ??

    Published

    on

    ಮಂಗಳೂರು/ರಾಮನಗರ: ಸೌತೆಕಾಯಿ ಮೇಲೆ ದೃಷ್ಠಿ ಬೀಳದಂತೆ ಚಿನ್ನಪಟ್ಟಣ ತಾಲೂಕಿನ ಗರಕಹಳ್ಳಿನ ರೈತ ಇಡೀ ಸ್ಯಾಂಡಲ್‌ವುಡ್ ನಟಿಯರ ಸುಂದರವಾದ ಭಾವಚಿತ್ರಗಳನ್ನು ಹೊಲದಲ್ಲಿ ಅಳವಡಿಸಿದ್ದಾನೆ. ತನ್ನ ಬೆಳೆ ಕಾಪಾಡಿಕೊಳ್ಳಲು ಈ ದಾರಿಯನ್ನು ಆರಿಸಿದ್ದಾನೆ ಎನ್ನಲಾಗಿದೆ.


    ಸ್ಯಾಂಡಲ್‌ವುಡ್ ನಟಿಯರಾದ ರಮ್ಯ, ರಾಗಿಣಿ ದ್ವಿವೇದಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಸೋನಾಲ್ ಸೇರಿ ಇನ್ನು ಇಡೀ ಸ್ಯಾಂಡಲ್‌ವುಡ್ ನಟಿಯರ ಭಾವಚಿತ್ರವನ್ನು ಪ್ಲೇಕ್ಸ್ ಮಾದರಿಯಲ್ಲಿ ಹಾಕಿದ್ದ ಈ ಐಡಿಯಾ ಎಲ್ಲರಿಗೂ ಹೊಸತೆನಿಸಿದೆ.
    ಎಲ್ಲಾ ರೈತರು ತಮ್ಮ ತಮ್ಮ ಬೆಳೆಗೆ ದೃಷ್ಠಿ ತಾಕದಂತೆ ಮಾಡಲು ಇಂಥಹದ್ದೇ ಐಡಿಯಾ ಮಾಡಿದರ ಹೇಗಿರುತ್ತೆ ಅಂತ ಚರ್ಚೆ ಶುರು ಮಾಡಿದೆ.
    ಹೊಲದಲ್ಲಿ ನಟಿಮಣಿಯರ ಮುಗುಳುನಗುವ ಸುಂದರ ಫೋಟೋಗಳನ್ನು ಅಳವಡಿಸುವ ಮೂಲಕ ದಾರಿ ಮಧ್ಯೆ ಹೋಗುವವರ ದೃಷ್ಠಿಯನ್ನು ಹಿರೋಯಿನ್‌ಗಳ ಮೇಲೆ ಬೀಳುವಂತೆ ಮಾಡಿ ದೃಷ್ಠಿ ತಾಕದೆ ಇರಲಿ ಎನ್ನುವುದು ಈ ರೈತನ ಐಡಿಯಾ ಎಂದು ಹೇಳಿಕೊಂಡಿದ್ದಾನೆ.

    Continue Reading

    FILM

    ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    Published

    on

    ಕಾಟೇರ, ರಾಬರ್ಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

    ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್‌ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅದಕ್ಕೆ ತರುಣ್‌ ಕೂಡ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಲವ್‌ ಎಂದಿದ್ದಾರೆ.

    ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ಅಂದಹಾಗೆ, ಆಗಸ್ಟ್‌ 11ರಂದು ತರುಣ್‌ ಮತ್ತು ಸೋನಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    Continue Reading

    LATEST NEWS

    ದೇವಸ್ಥಾನಗಳಲ್ಲಿ ಚಲನಚಿತ್ರ ಶೂಟಿಂಗ್…ಕೇರಳ ಹೈಕೋರ್ಟ್ ಗರಂ..!

    Published

    on

    ಮಂಗಳೂರು/ಕೇರಳ: ದೇವಸ್ಥಾನಗಳಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವ ವಿಚಾರವಾಗಿ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೇವಾಲಯಗಳು ಪೂಜಾ ಸ್ಥಳವಾಗಿದ್ದು, ಚಲನಚಿತ್ರ ಚಿತ್ರೀಕರಣದ ಸ್ಥಳವಾಗಬಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತ್ರಿಪ್ಪುಣಿತೂರ ಶ್ರೀ ಪೂರ್ಣತ್ರಯಿಶ ದೇವಸ್ಥಾನದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ವಿಚಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ಹಿಂದೂಯೇತರ ಧರ್ಮಗಳ ಚಿತ್ರೀಕರಣಕ್ಕೆ ದೇವಸ್ಥಾನದ ಆವರಣದ ಒಳಗೆ ಅನುಮತಿ ನೀಡಿದ ವಿಚಾರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗಿದ್ದು, ವಾಣಿಜ್ಯ ಕಾರಣದಿಂದ ನಡೆಯುವ ಸಿನೆಮಾ ಚಿತ್ರೀಕರಣದಿಂದ ಕ್ಷೇತ್ರಕ್ಕೆ ಅಗೌರವ ತಂದಂತಾಗುತ್ತದೆ ಎಂದು ವಾದಿಸಲಾಗಿತ್ತು. ಈ ರೀತಿ ದೇವಸ್ಥಾನಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವುದರಿಂದ ಭಕ್ತರ ಭಾವನೆಗೂ ಘಾಸಿ ಆಗುತ್ತದೆ. ಉತ್ಸವದ ಸಂದರ್ಭದಲ್ಲಿ ಮಾವುತರು ಮದ್ಯ ಸೇವಿಸುವುದು ಮತ್ತು ಸಂದರ್ಶಕರು ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸುವುದು ಮೊದಲಾದ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.

    ಇದನ್ನೂ ಓದಿ :ಬಿಗ್‌ಬಾಸ್ ಮನೆಯಲ್ಲಿ ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​!
    ಈ ವಿಚಾರವಾಗಿ ಹೈಕೋರ್ಟ್‌, ಕೇರಳ ರಾಜ್ಯ ಸರ್ಕಾರ ಮತ್ತು ಕೊಚ್ಚಿನ್ ದೇವಸ್ವಂ ಬೋರ್ಡ್‌ ನಿಂದ ವಿವರಣೆ ಕೇಳಿದೆ. ದೇವಸ್ಥಾನಗಳಲ್ಲಿ ಧಾರ್ಮೀಕೇತರ ಚಿತ್ರೀಕರಣಕ್ಕೆ ಅವಕಾಶ ನೀಡುವುದರಿಂದ ಹಿಂದೂ ದೇಗುಲಗಳ ನಿಯಮ ಉಲ್ಲಂಘಿಸಿದಂತಾಗುತ್ತದೆ. ಪೂಜೆ ಮತ್ತು ಭಕ್ತಿಯ ಮೌಲ್ಯಗಳನ್ನು ತುಂಬುವ ಜಾಗದಲ್ಲಿ ವ್ಯಾಪಾರೀಕರಣದ ಪ್ರವೃತಿ ಬೆಳೆಯಲು ಅವಕಾಶ ಹೇಗೆ ನೀಡಿದ್ದೀರಿ ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ.

    Continue Reading

    LATEST NEWS

    Trending