LATEST NEWS
ನೊಣದ ಮೂಲಕ ಆರೋಪಿಯ ಪತ್ತೆ ; ಹೇಗೆ ಗೊತ್ತಾ?
ಮಂಗಳೂರು/ಮಧ್ಯಪ್ರದೇಶ: ಯುವಕನೊಬ್ಬ ಧರಿಸಿದ್ದ ಬಟ್ಟೆಯ ಮೇಲೆ ಸಿಲುಕಿಕೊಂಡಿದ್ದ ನೊಣದ ಮೂಲಕ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿರುವ ಘಟನೆ ನಡೆದಿದೆ.
ಕೊಲೆ ಮಾಡಿರುವವರು ತಾವು ಸಿಕ್ಕಿಬೀಳಬಾರದೆಂಬ ಯೋಚನೆಯಲ್ಲಿ ಭಾರೀ ಜಾಗರೂಕತೆಯಿಂದ ಸಾಕ್ಸಿಯೆಲ್ಲವನ್ನೂ ನಾಶ ಮಾಡಿ ಬಿಡುತ್ತಾರೆ. ಆದರೆ ಕೇವಲ ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದ್ದು ನಿಜಕ್ಕೂ ಅದ್ಭುತವೇ ಸರಿ.
ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿಯಾದ ಧರಮ್ ಠಾಕೂರ್ ತನ್ನ ಚಿಕ್ಕಪ್ಪ ಮನೋಜ್ ಠಾಕೂರ್‌ನನ್ನು ಹತ್ಯೆ ಮಾಡಿದ್ದ. ಮನೋಜ್ ಠಾಕೂರ್ ಕೆಲಸದ ನಿಮಿತ್ತ ಮನೆಯಿಂದ ಹೋದವರು ರಾತ್ರಿಯಾದರೂ ವಾಪಾಸ್ ಬಂದಿರಲಿಲ್ಲ. ಅನಂತರ ಅ.31 ರಂದು ದೇವೋರಿ ತಪ್ರಿಯಾ ಗ್ರಾಮದ ಕೃಷಿ ಭೂಮಿಯಲ್ಲಿ ಶವ ಪತ್ತೆಯಾಗಿತ್ತು.
ಆರೋಪಿ ಧರಮ್ ಮಾತ್ರ ಮನೋಜ್ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದ. ಆತನ ಕಣ್ಣು ಕೆಂಪಾಗಿತ್ತು. ಎದೆಯ ಮೇಲೆ ಕೆಲವೊಂದು ಗುರುತುಗಳಿತ್ತು. ಆತನ ಬಟ್ಟೆಯ ಮೇಲೆ ನೊಣಗಳು ಇದ್ದಿದ್ದು, ಅನುಮಾನ ಮೂಡಿತ್ತು. ನಂತರ ನೊಣವನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ಅದರ ಮೇಲೆ ರಕ್ತದ ಕೆಲಗಳು ಕಂಡು ಬಂದಿತ್ತು. ಆರೋಪಿ ಕಪ್ಪು ಬಣ್ಣದ ಶರ್ಟ್ ಧರಿಸಿದ್ದರಿಂದ ರಕ್ತದ ಕಲೆಗಳು ಕಾಣಿಸಿಕೊಂಡಿರಲಿಲ್ಲ. ಆರೋಪಿಯ ಬಟ್ಟೆಯನ್ನು ಫೋರೆನ್ಸಿಕ್ ತಂಡ ಪರಿಶೀಲನೆ ಮಾಡಿದ್ದು, ರಕ್ತದ ಕಲೆಗಳಿರುವುದು ಖಚಿತವಾಯಿತು.
ಆರಂಭದಲ್ಲಿ ನಿರಪರಾಧಿ ಎಂದು ಆರೋಪಿ ಹೇಳಿದರೂ ನಂತರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯು ವ್ಯಕ್ತಿಗೆ ಮೊಳೆ ಇರುವ ವಸ್ತುವಿನಿಂದ ಹೊಡೆದ ಕಾರಣದಿಂದ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ. ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ಧಾರೆ.
BIG BOSS
BBK11: ಗೋಲ್ಡ್ ಸುರೇಶ್‌ಗೆ ಶಾಪ ಹಾಕಿದ ಅನುಷಾ..ಕಾರಣವೇನು ಗೊತ್ತಾ..?
ಕನ್ನಡದ ಬಿಗ್ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್ಬಾಸ್ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್‍ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್‍ನಿಂದ ಹೋಗುವಂತೆ ಮಾಡುತ್ತಿದ್ದರು.
ಆಗ ಗೋಲ್ಡ್ ಸುರೇಶ್ ತಮ್ಮ ಡ್ರಮ್ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್ ಮುಗಿದ ಬಳಿಕ ಗಲಾಟೆಯಾಗಿದೆ.
ಇನ್ನೂ, ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ದೊಡ್ಡ ಅವಕಾಶವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್ಬಾಸ್ ಈ ಟಾಸ್ಕ್ಗಳನ್ನು ನೋಡಿದ್ದಾರೆ. ಟಾಸ್ಕ್ ಗೆದ್ದ ತಂಡಕ್ಕೆ ಬಿಗ್ಬಾಸ್ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.
LATEST NEWS
ಬರೋಬ್ಬರಿ 4ಕೋಟಿ ರೂ.ಗೆ ಹರಾಜಾದ ಈ ನಾಣ್ಯ; ಇದರ ವಿಶೇಷತೆ ಏನು?
ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಅಪರೂಪದ ನಾಣ್ಯವೊಂದು ಸುಮಾರು 4.25 ಕೋಟಿ ರೂ.ಗೆ ಹರಾಜಾಗಿದೆ. ಈ ಬಗ್ಗೆ ಕ್ಯಾಲಿಫೋರ್ನಿಯಾ ಗ್ರೇಟ್ ಕಲೆಕ್ಷನ್ಸ್ ನ ಅಧ್ಯಕ್ಷ ಇಯಾನ್ ರಸೆಲ್ ಮಾಹಿತಿ ನೀಡಿದ್ದು, ಸದ್ಯ ಒಂದು ನಾಣ್ಯ ಬರೋಬ್ಬರಿ 4ಕೋಟಿಗೆ ಹರಾಜಾಗಿರುವುದು ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದ್ದು, ಇದು 20ನೇ ಶತಮಾನದ ಅಪರೂಪದ ನಾಣ್ಯಗಳಲ್ಲೊಂದು. ಈ ನಾಣ್ಯ ಅಮೆರಿಕದ ಕಾಸಿನದು ಎಂದು ಹರಾಜು ಏಜೆನ್ಸಿ ಹೇಳಿದೆ. ಈ ನಾಣ್ಯದ ಮೇಲೆ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಚಿತ್ರವಿರುವುದನ್ನು ಕಾಣಬಹುದು. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ ‘ಎಸ್’ ಚಿಹ್ನೆಯನ್ನು ಈ ನಾಣ್ಯದಲ್ಲಿ ಮಾಡಲಾಗಿಲ್ಲ. ಇಡೀ ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ, ಅದಕ್ಕಾಗಿಯೇ ಈ ನಾಣ್ಯವು ತುಂಬಾ ಅಪರೂಪವಾಗಿದೆ.
ಗ್ರೇಟ್ ಕಲೆಕ್ಷನ್ ಹೆಸರಿನ ಹರಾಜು ಸಂಸ್ಥೆಯು ಈ ಅಪರೂಪದ ನಾಣ್ಯದ ಹರಾಜನ್ನು ಆನ್‌ಲೈನ್‌ನಲ್ಲಿ ನಡೆಸಿತು. ಹರಾಜಿನ ಮೊದಲು, ಈ ನಾಣ್ಯವು ಓಹಿಯೋದ ಮೂವರು ಸಹೋದರಿಯರ ಬಳಿ ಇತ್ತು. ಆದರೆ, ಅವರ ಗುರುತನ್ನು ಗೌಪ್ಯವಾಗಿ ಇರಿಸಲಾಗಿದೆ. 1978ರಲ್ಲಿ ಈ ನಾಣ್ಯಗಳಲ್ಲಿ ಒಂದನ್ನು 15 ಲಕ್ಷ ರೂ.ಗೆ ಮಾರಾಟ ಮಾಡಿತ್ತು.
LATEST NEWS
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್
ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್ ಹಾಗೂ ಟ್ರಂಪ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ವಿರುದ್ದ ಟ್ರಂಪ್ ಗೆಲುವು ಸಾಧಿಸಿದ್ದಾರೆ.
ಅಮೆರಿಕ(ಯುಇಎಸ್)ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಂಡ ಮುನ್ನಡೆ ಸಾಧಿಸಿರುವ ಬೆನ್ನಲ್ಲಿ ಇದು ಅಮೆರಿಕನ್ನರಿಗೆ ಅದ್ಭುತ ಗೆಲುವು ನಾವು ಇತಿಹಾಸ ನಿರ್ಮಿಸಿದ್ದೇವೆ ಎಂದು ಟ್ರಂಪ್ ಗೆಲುವನ್ನು ಘೋಷಿಸಿಕೊಂಡಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹಿಂದೆಂದೂ ಕಂಡಿರದ ರಾಜಕೀಯ ಗೆಲುವು. ನಾನು ಅಮೆರಿಕಾದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಗೆಲುವು “ಅಮೆರಿಕನ್ ಜನರಿಗೆ ಭವ್ಯವಾದ ಗೆಲುವು” ಎಂದು ಕರೆದರು.ನಾವು ಇತಿಹಾಸ ನಿರ್ಮಿಸಿದ್ದೇವೆ, ಇದು ಅಮೆರಿಕಕ್ಕೆ ಸುವರ್ಣ ಯುಗ.ಈ ವರ್ಷದ ಆರಂಭದಲ್ಲಿ ಹತ್ಯೆಯ ಯತ್ನದಿಂದ ಬದುಕುಳಿದ ಟ್ರಂಪ್, “ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದ್ದಾನೆ ಎಂದು ಹೇಳಿದರು.
ಇದು ಹಿಂದೆಂದೂ ಯಾರೂ ನೋಡದ ಚಳುವಳಿಯಾಗಿದೆ. ನಾವು ನಮ್ಮ ಗಡಿಗಳನ್ನು ನಮ್ಮ ದೇಶದ ಎಲ್ಲಾ ಸಮಸ್ಯೆಯನ್ನು ಸರಿಪಡಿಸುತ್ತೇವೆ. ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ 25 ರಾಜ್ಯಗಳಲ್ಲಿ ಮತ್ತು ಕಮಲಾ ಹ್ಯಾರಿಸ್ 16 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗೆಲುವಿಗೆ 270 ಸ್ಥಾನಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ.
ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ರಂಪ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೋದಿ, ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ವಹಿವಾಟು ಮತ್ತಷ್ಟು ಉತ್ತಮಪಡಿಸಲು ಜಂಟಿಯಾಗಿ ಹೆಜ್ಜೆ ಹಾಕೋಣ ಎಂದಿದ್ದಾರೆ.
ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರಿಗೆ ಐತಿಹಾಸಿಕ ಚುನಾವಣಾ ಗೆಲುವಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸನ್ನು ಮುಂದುವರೆಸುತ್ತಿದ್ದೀರಿ. ಭಾರತ-ಅಮೆರಿಕ ವ್ಯಾಪಕ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸೋಣ ಎಂದು ಮೋದಿ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.
- DAKSHINA KANNADA4 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA2 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್
- LATEST NEWS4 days ago
ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?