LATEST NEWS
ಕೇಕ್‌ಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆ – ಎಫ್‌ಎಸ್‌ಎಸ್‌ಎಐ ಎಚ್ಚರಿಕೆ
Published
2 months agoon
By
NEWS DESK2ಬೆಂಗಳೂರು: ರಾಜ್ಯಾದ್ಯಂತ ಪರೀಕ್ಷೆಗೆ ಒಳಪಡಿಸಲಾದ 235 ಕೇಕ್ ಮಾದರಿಗಳ ಪೈಕಿ 12ರಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕರ್ನಾಟಕದ ಕೇಕ್ ಪ್ರಿಯರಿಗೆ ಎಚ್ಚರಿಕೆ ನೀಡಿದೆ.
ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ಸೇರಿದಂತೆ ಜನಪ್ರಿಯ ಕೇಕ್ ಪ್ರಭೇದಗಳಲ್ಲಿ ಹಾನಿಕಾರಕ ಪದಾರ್ಥಗಳು ಪತ್ತೆಯಾಗಿವೆ ಎಂದು FSSAI ಬಹಿರಂಗಪಡಿಸಿದೆ.ಬೇಕರಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ, ಕ್ಯಾನ್ಸರ್ ಗೆ ಕಾರಣವಾಗುವ ಯಾವುದೇ ರಾಸಾಯನಿಕ ಅಥವಾ ಬಣ್ಣಗಳನ್ನು ಕೇಕ್ ಗಳಲ್ಲಿ ಬಳಸಬಾರದು. ರಾಜ್ಯಾದ್ಯಂತ ಕೇಕ್‌ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ಶಂಕೆಯಿಂದಾಗಿ 235 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿ 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್‌ಸೆಟ್ ಯೆಲ್ಲೋ, ಪೊನ್ಸೆಯು 4ಆರ್ ಮತ್ತು ಕಾರ್ಮೋಸಿನ್‌ನಂತಹ ಹಾನಿಕಾರಕ ಅಂಶಗಳು ಕಂಡುಬಂದಿವೆ.
ಈ ಹಿಂದೆ ಆಹಾರ ಸುರಕ್ಷತಾ ಇಲಾಖೆಯು ಗೋಬಿ ಮಂಚೂರಿಯನ್, ಕಬಾಬ್, ಪಾನಿ ಪುರಿಯಂತಹ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಕೇಕ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಹೆಚ್ಚಾಗಿ ಬಳಸುವುದರಿಂದ, ಇಲಾಖೆಯು ಈಗ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ಕೇಕ್‌ಗಳಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಕ್ ತಯಾರಕರಿಗೆ ಎಚ್ಚರಿಕೆ ನೀಡಲಾಗಿದೆ.
BIG BOSS
BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್
Published
2 minutes agoon
26/11/2024By
NEWS DESK2ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುತ್ತಾರೆ ಎಂದು ಮೋಕ್ಷಿತಾ ಕಾರಣ ಹೇಳ್ತಾರೆ. ಅದಕ್ಕೆ, ಉಗ್ರಂ ಮಂಜು, ಅದು ನಂಬಿಕೆ ದ್ರೋಹ ಎಂದು ಕೂಗಾಡಿದ್ದಾರೆ.
ನಂತರ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.
International news
14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !
Published
17 minutes agoon
26/11/2024By
NEWS DESK3ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಒಲಿಂಪಿಯನ್ ‘ಎಮ್ಮಾ ಮೆಕ್ ಕೀನ್’ ಸೋಮವಾರ ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ವಿದಾಯ ಘೋಷಿಸಿದ್ದಾರೆ.
ಮೆಕ್ ಕಿಯಾನ್ ಮೂರು ಬೇಸಿಗೆ ಒಲಿಂಪಿಕ್ಸ್ ಗಳಲ್ಲಿ 14 ಒಲಿಂಪಿಕ್ ಪದಕಗಳ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ:ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಇವರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನದ ಪದಕಗಳು, ಮೂರು ಬೇಸಿಗೆ ಒಲಿಂಪಿಕ್ ಗಳಲ್ಲಿ ಪದಕ ಬಂದಿದೆ. ಇನ್ನೂ ಟೋಕಿಯೊ ಒಲಿಂಪಿಕ್ 2020ರಲ್ಲಿ, ಎಮ್ಮಾ ಏಳು ಪದಕ ಗೆಲ್ಲುವುದರೊಂದಿಗೆ ಒಂದೇ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
LATEST NEWS
ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್..!
Published
23 minutes agoon
26/11/2024By
NEWS DESK2ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಿದೆ. ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.
ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.
LATEST NEWS
ಸುಳ್ಯ: ಅಂಗಡಿ ಮತ್ತು ಹೋಟೆಲ್ನ ಬೀಗ ಮುರಿದು ಕಳ್ಳತನ- ನಗದು ಹಣ ಕಳವು
ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಆಡಳಿತ !
ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ
ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ
ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !
WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
Trending
- LATEST NEWS6 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru4 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION5 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS3 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!