Connect with us

    NATIONAL

    ಕಾಸರಗೋಡು: ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ನಾರಾಯಣ ಮಯ್ಯ ನಿಧನ

    Published

    on

    ಕಾಸರಗೋಡು: ಮಧೂರು ಎಲ್ಲಂಗಳ ನಿವಾಸಿ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ನಾರಾಯಣ ಮಯ್ಯ(66) ಅಸೌಖ್ಯದಿಂದ ನಿಧರಾಗಿದ್ದಾರೆ.


    ಕಂದಾಯ ಇಲಾಖೆಯಲ್ಲಿ ಕ್ಲರ್ಕ್‌ ಆಗಿ ಸೇವೆ ಆರಂಭಿಸಿ ಕಣ್ಣೂರ್‌, ವಯನಾಡ್‌ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಅಥಾರಿಟಿಯ ಉಪ ಜಿಲ್ಲಾಧಿಕಾರಿ,

    ಕೊಲ್ಲಂ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿ, ಸಬ್‌ಡಿವಿಶನಲ್‌ ಮ್ಯಾಜಿಸ್ಟ್ರೇಟ್‌ ಆಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

    LATEST NEWS

    ಡಿಜಿಟಲ್ ಅರೆಸ್ಟ್‌ಗೆ ಶಿಕ್ಷಕಿಗೆ ಹೃದಯಾಘಾತ : ಫೇಕ್ ಕಾಲ್‌ ಬಗ್ಗೆ ಇರಲಿ ಎಚ್ಚರ..!

    Published

    on

    ಮಂಗಳೂರು ( ಆಗ್ರಾ ) : “ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಉಳಿಸಲು ರೂ.1 ಲಕ್ಷ ನೀಡಿ” ಇಂತಹ ಕರೆಯೊಂದನ್ನು ಸ್ವೀಕರಿಸಿದ ಮಹಿಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಸರ್ಕಾರಿ ಬಾಲಕಿಯ ಜ್ಯೂನಿಯರ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯೂ ಆಗಿದ್ದ ಮಹಿಳೆ ಮಗಳ ಕುರಿತಾದ ಈ ಕರೆಯಿಂದ ಇಹಲೋಕ ತ್ಯಜಿಸಿದ್ದಾರೆ.

    ಸೆಪ್ಟಂಬರ್ 30 ರಂದು ಈ ಘಟನೆ ಆಗ್ರಾದಲ್ಲಿ ನಡೆದಿದ್ದು, 58 ವರ್ಷದ ಮಾಲ್ತಿ ವರ್ಮಾ ಎಂಬವರು ನಕಲಿ ಕರೆಯನ್ನೇ ಸತ್ಯವೆಂದು ನಂಬಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಾಲ್ತಿ ವರ್ಮಾ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿ, ಆಕೆಗೆ ನಿರಂತರ ಕರೆ ಮಾಡಿದ್ದಾನೆ. ಮಗಳ ಕುರಿತಾಗಿ ಆತ ಹೇಳಿದ ವಿಚಾರವನ್ನು ಸತ್ಯ ಎಂದು ನಂಬಿದ ಆಕೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

    ಮಗನಿಗೆ ಕರೆ ಮಾಡಿ ಮಗಳು ಈ ರೀತಿಯಾಗಿ ಸಿಕ್ಕಿಬಿದ್ದಿದ್ದು, ಆಕೆಯ ಬಿಡುಗಡೆಗೆ ಹಣ ಬೇಕು ತಕ್ಷಣ ಹಣ ಹಾಕು ಅಂದಿದ್ದಾರೆ. ಆದ್ರೆ ಕಾಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಗ ಇದೊಂದು ನಕಲಿ ಕಾಲ್ ಎಂಬುದಾಗಿ ತಾಯಿಗೆ ಮನವರಿಕೆ ಮಾಡಿದ್ದಾನೆ. ಆದ್ರೆ ವ್ಯಾಟ್ಸಾಪ್‌ ಡಿಪಿಯಲ್ಲಿ ಪೊಲೀಸ್ ಅಧಿಕಾರಿ ಫೋಟೋ ಹಾಕಿದ್ದ ವ್ಯಕ್ತಿ ಶಿಕ್ಷಕಿ ಮಾಲ್ತಿ ವರ್ಮಾ ಅವರಿಗೆ ಸತತ ನಾಲ್ಕು ಘಂಟೆಗಳ ಕಾಲ ಟಾರ್ಚರ್ ನೀಡಿದ್ದಾನೆ.

     

    ಮಾಲ್ತಿ ವರ್ಮಾ ಅವರಿಗೆ ಕರೆ ಮಾಡಿದ್ದ ನಂಬರ್ ಪಾಕಿಸ್ತಾನದ ಕೋಡ್ ಹೊಂದಿದ್ದು ಈ ಕರೆ ನಕಲಿ ಎಂದು ಮಾಲ್ತಿ ವರ್ಮಾ ಅವರಿಗೆ ಮನವರಿಕೆ ಮಾಡಲಾಗಿತ್ತು. ಆದ್ರೆ ಮಗಳ ಬಗ್ಗೆ ಬಂದ ಕೆಟ್ಟ ವಾರ್ತೆ ಕೇಳಿದ್ದ ತಾಯಿ ಮಾಲ್ತಿ ವರ್ಮಾ ಅವರಿಗೆ ಆಘಾತ ಆಗಿತ್ತು. ಜೊತೆಗೆ ಆರೋಪಿ ನಿರಂತರ ನಾಲ್ಕು ಘಂಟೆಗಳ ಕಾಲ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಕೂಡಾ ಇವರಿಗೆ ಘಾಸಿಯಾಗಿದೆ. ಈ ಡಿಜಿಟಲ್‌ ಅರೆಸ್ಟ್‌ನಿಂದ ಭಯ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾದ ಮಾಲ್ತಿ ವರ್ಮಾ ಅವರಿಗೆ ಮನೆಗೆ ಬಂದ ಬಳಿಕ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಆಗ್ರಾದ ಎಸಿಪಿ ಮಯಾಂಕ್ ತಿವಾರಿ ತಿಳಿಸಿದ್ದಾರೆ..

    Continue Reading

    LATEST NEWS

    ಸಚಿವಾಲಯದ ಮೂರನೇ ಮಹಡಿಯಿಂದ ಹಾರಿದ ಡೆಪ್ಯೂಟಿ ಸ್ಪೀಕರ್

    Published

    on

    ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ಹಾಗೂ ಅಜಿತ್ ಪವಾರ್ ಬಣದ ಶಾಸಕ ನರಹರಿ ಜಿರ್ವಾಲ್ ಸಚಿವಾಲಯದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ಕೆಳಗ್ಗೆ ನೆಟ್ ಅಳವಡಿಸಿದ್ದ ಕಾರಣ ಅವರು ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಧಂಗಾರ್ ಸಮುದಾಯದ ಎಸ್ಟಿ (ಪರಿಶಿಷ್ಟ ಪಂಗಡ) ಮೀಸಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಈ ಘಟನೆ ನಡೆದಿದೆ.

    ಹಾರಿದ ಬಳಿಕ ನೆಟ್​ನಲ್ಲಿ ಸಿಲುಕಿದ್ದ ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ನರಹರಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಲು ಬಂದಿದ್ದರು, ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಇದಾದ ಬಳಿಕ ಶುಕ್ರವಾರವೂ ಸಿಎಂ ಭೇಟಿಗೆ ತೆರಳಿದ್ದು, ಸಿಎಂ ಸಿಗಲಿಲ್ಲ.

    ನರಹರಿ ಜೊತೆಗೆ ಇನ್ನೂ ಕೆಲವರು ನೆಟ್‌ಗೆ ಹಾರಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಬುಡಕಟ್ಟು ಶಾಸಕರೂ ಇದ್ದರು. ಎಲ್ಲ ಶಾಸಕರು ನೆಟ್‌ನಲ್ಲಿಯೇ ನಿಂತು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಉಪಸಭಾಪತಿ ತಮ್ಮ ಸರ್ಕಾರದ ಮೇಲೆಯೇ ಕೋಪಗೊಂಡು ಸಿಟ್ಟಿನ ಭರದಲ್ಲಿ ಈ ಹೆಜ್ಜೆ ಇಟ್ಟಿದ್ದಾರೆ.

    ಆದರೆ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ಛಾವಣಿಯಿಂದ ಕೆಳಗೆ ಜಿಗಿದ ನಂತರ ಯಾವುದೇ ಗಾಯವೂ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಗಿದ ಬಳಿಕ ಕೆಳಗಿದ್ದ ಬಲೆಯಲ್ಲಿ ಸಿಲುಕಿದ್ದರಿಂದ ಬಚಾವಾಗಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು.

    ಸಂಪುಟ ಸಭೆಯ ದಿನ, ಎಲ್ಲಾ ಶಾಸಕರು ಸಿಎಂ ಅವರನ್ನು ಭೇಟಿಯಾಗಬೇಕಿತ್ತು ಆದರೆ ಸಾಕಷ್ಟು ಪ್ರಯತ್ನ ಮಾಡಿದರೂ ಶಿಂಧೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಹೀಗಾಗಿ ಕಟ್ಟಡದಿಂದ ಜಿಗಿದಿದ್ದಾರೆ.

    Continue Reading

    LATEST NEWS

    ತಿರುಪತಿ ಲಡ್ಡು ವಿವಾದ: ಹೊಸ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ

    Published

    on

    ನವದೆಹಲಿ : ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್ಎಸ್ಎಸ್ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದುಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಲು ಸೂಚಿಸಿದೆ.

    ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಶೇಷ ತನಿಖಾ ತಂಡದಲ್ಲಿ (ಎಸ್ಐಟಿ)ಆಂಧ್ರಪ್ರದೇಶ ಪೊಲೀಸ್ ಇಬ್ಬರು ಅಧಿಕಾರಿಗಳು, ಒಬ್ಬ ಎಫ್ಎಸ್ಎಸ್ಎಐನ ಹಿರಿಯ ಅಧಿಕಾರಿ ಇರಲಿದ್ದಾರೆಎಸ್ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಪೀಠ ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ಅವರಿದ್ದ ಪೀಠವು, ‘ ವಿಚಾರಕ್ಕೆ ನ್ಯಾಯಾಲಯವನ್ನು ರಣರಂಗವಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ದೇವರಲ್ಲಿ ನಂಬಿಕೆ ಹೊಂದಿರುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸಲು ಎಸ್ಐಟಿ ರಚನೆ ಮಾಡಲಾಗಿದೆ ಎಂದಿದೆ.

    ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಹೇಳಿಕೆ ನೀಡಿದ್ದು, ಎಸ್ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು. ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು. ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು. ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ.

    ಇದನ್ನೂ ಓದಿ : ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!

    ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವು ನೇಮಿಸಿದ ಎಸ್ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಪೀಠವು ಮೆಹ್ತಾ ಅವರನ್ನು ಕೇಳಿತ್ತು.

    Continue Reading

    LATEST NEWS

    Trending