ದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಶೂಟೌಟ್ಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ತಿಲ್ಲು ತಾಜ್ಪುರಿಯಾ ತನ್ನ ಸಹಚರರಿಂದ ಲೈವ್ ಅಪ್‌ಡೇಟ್ಸ್ ಪಡೆದುಕೊಳ್ಳುತ್ತಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಗ್ಯಾಂಗ್‌ಸ್ಟರ್ ತಿಲ್ಲು ತಾಜ್ಪುರಿಯಾ
30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಜಿತೆಂದರ್ ಮಾನ್ ಗೋಗಿ ಈ ಶೂಟೌಟ್ನಲ್ಲಿ ಮೃತಪಟ್ಟಿದ್ದ.
ವಕೀಲರ ವೇಷದಲ್ಲಿ ನ್ಯಾಯಾಲಯದ ಆವರಣ ಪ್ರವೇಶಿಸಿದ್ದ ಹಂತಕರು ವಿಶೇಷ ಭದ್ರತೆಯಲ್ಲಿ ಕರೆತಂದಿದ್ದ ಗೋಗಿಯ ಮೇಲೆ ಗುಂಡು ಹಾರಿಸಿದ್ದರು.
ಈ ವೇಳೆ ಪೊಲೀಸರು ಹಾರಿಸಿದ್ದ ಗುಂಡಿಗೆ ಹಂತಕರು ಬಲಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ನಂತರ ಬಂಧಿಸಿದ್ದರು.
ರೋಹಿಣಿ ಕೋರ್ಟ್ನಲ್ಲಿ ಹತ್ಯೆ ನಡೆಯುವಾಗ
ತಿಲ್ಲು ತಾಜ್ಪುರಿಯಾ ತನ್ನ ಸಹಚರರಾದ ರಾಹುಲ್ ತ್ಯಾಗಿ ಮತ್ತು ಜಗದೀಪ್ ಜಗ್ಗ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.
ವಿರೋಧಿಯನ್ನು ಕೊಲ್ಲಲು ಹೋಗಿದ್ದ ಹಂತಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತಿಲ್ಲು ಪ್ರತಿ ನಿಮಿಷಕ್ಕೊಮ್ಮೆ ಫೋನ್ ಮೂಲಕ ಅಪ್‌ಡೇಟ್ಸ್ ಪಡೆಯುತ್ತಿದ್ದ.
ರೋಹಿಣಿ ಕೋರ್ಟ್ನಿಂದ ಅವರು ಎಷ್ಟು ದೂರದಲ್ಲಿದ್ದಾರೆ ಎಂದು ಪ್ರಶ್ನಿಸಿದ್ದ. ಇದೀಗ ಬಂಧನದಲ್ಲಿರುವ ವಿನಯ್ ಮತ್ತು ಉಮಂಗ್ ಎಂಬ ಇನ್ನಿಬ್ಬರೊಂದಿಗೂ ತಿಲ್ಲು ಸಂಪರ್ಕದಲ್ಲಿದ್ದ.
ತಿಲ್ಲುಗೆ ತಾಜಾ ಅಪ್‌ಡೇಟ್ಸ್ ಕೊಡಲೆಂದೇ ಇವರಿಬ್ಬರು ನ್ಯಾಯಾಲಯಕ್ಕೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ
ಶೂಟರ್ಗಳ ಸುತ್ತಲೂ ಪೊಲೀಸರು ಇದ್ದಾರೆ ಎಂದು ತಿಳಿದ ನಂತರ ತಿಲ್ಲು ಹೆದರಿದ್ದ. ಕೊಲ್ಲಲು ಹೋಗಿದ್ದ ತನ್ನ ಸಹಚರರು ಹೊರಬರುವುದು ಕಷ್ಟ ಎಂದು ಅರಿವಾದ ನಂತರ,
ನ್ಯಾಯಾಲಯದ ಆವರಣದಲ್ಲಿದ್ದ ಇನ್ನಿಬ್ಬರಿಗೆ ಅಲ್ಲಿಂದ ಹೊರಗೆ ಬರುವಂತೆ ಸೂಚಿಸಿದ್ದ. ರೋಹಿಣಿ ಕೋರ್ಟ್ನ ಪಾರ್ಕಿಂಗ್ ಲಾಟ್ ಹತ್ತಿರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದಾಗ, ತಕ್ಷಣ ಅಲ್ಲಿಂದ ಓಡಿಹೋಗುವಂತೆ ಸೂಚಿಸಿದ್ದ.