Connect with us

    LATEST NEWS

    ಕುಂದಾಪುರ: ಪಾಳು ಬಾವಿಗೆ ಬಿದ್ದ ಜಿಂಕೆಮರಿ ರಕ್ಷಿಸಿದ ಯುವಕರ ತಂಡ

    Published

    on

    ಕುಂದಾಪುರ: ಜಿಂಕೆ ಮರಿಯೊಂದು ಪಾಳು ಬಾವಿಗೆ ಬಿದ್ದುದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ರಕ್ಷಿಸಿದ ಘಟನೆ ಕುಂದಾಪುರದ ಕೇದೂರು ಗ್ರಾಮ ಪಂಚಾಯತ್‌ನ ಶಾನಾಡಿಯಲ್ಲಿ ನಡೆದಿದೆ.


    ನಿನ್ನೆ ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಮರಿ ದಾರಿ ಕಾಣದೆ ಪಾಳು ಬಾವಿಗೆ ಬಿದ್ದಿತ್ತು.

    ಇದನ್ನು ಗಮನಿಸಿದ ಒಂದು ಯುವಕರ ತಂಡ ಹರಸಾಹಸ ಪಟ್ಟು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.

    ಸುಮಾರು ಒಂದು ವರ್ಷ ಪ್ರಾಯದ ಜಿಂಕೆ ಮರಿ ಇದಾಗಿದ್ದು, ಸದ್ಯ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.

    ಬಳಿಕ ಇಲಾಖೆಯವರು ಜಿಂಕೆ ಮರಿಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

    BANTWAL

    ಕಳ್ಳತನಕ್ಕೆ ವೃದ್ಧೆಯ ಕತ್ತು ಹಿಸುಕಿದ ಕಿರಾತಕರು..!

    Published

    on

    ಮಂಗಳೂರು : ಕಿಟಕಿಯ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು ವೃದ್ಧೆಯ ಕತ್ತು ಹಿಸುಕಿ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡೂರು ಗ್ರಾಮದ ಬಲಿಪಗುಳಿ ಎಂಬಲ್ಲಿ  ನಡೆದಿದೆ.

    ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು ಅಜ್ಜಿಯನ್ನು ಘಾಸಿಗೊಳಿಸಿ ಚಿನ್ನಾಭರಣ ಲೂಟಿದ್ದಾರೆ. ಮನೆಯ ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72)ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಚಿನ್ನ ಕಸಿದು ಪರಾರಿಯಾಗಿದ್ದಾರೆ.

    ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಸೊಸೆ ಐಸಮ್ಮಾ ಅವರಿಗೆ ಈ ವಿಚಾರ ಬೆಳಗ್ಗೆ ಅರಿವಿಗೆ ಬಂದಿದೆ. ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಅತ್ತೆ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಏನೋ ತೀವೃ ಅಸೌಖ್ಯ ಎಂದು ಶಂಕಿಸಿ ಮನೆಯವರು, ನೆರೆಯ ಸಂಬಂದಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂದಿಗಳು ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಇದಾದ ಬಳಿಕ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ಅಜ್ಜಿಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಮೂಲಕ ಪರಿಶೀಲನೆ ನಡೆಸಲಾಗಿದೆ. ಗಾಯಗೊಂಡ ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    ಕತ್ತೆಗೂ ಒಂದು ಕಾಲ..! ಈ ದೇಶದ ಆರ್ಥಿಕತೆಗೆ ಕತ್ತೆಯೇ ಆಸರೆ..!

    Published

    on

    ಮಂಗಳೂರು :  ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಪಾಕಿಸ್ತಾನ ಸಾಲದ ಸುಳಿಯಲ್ಲಿ ನಲುಗಿ ಹೋಗಿದೆ. ಆದ್ರೆ ಸೂಕ್ತ ಆರ್ಥಿಕ ನೀತಿಯನ್ನು ಜಾರಿ ಮಾಡದ ಪಾಕಿಸ್ತಾನ ಆರ್ಥಿಕ ನಷ್ಟದಿಂದ ಹೊರಬರಲು ದೇಶದಲ್ಲಿ ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಿದೆ. ಇದರಿಂದ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಕತ್ತೆಗಳ ಸಂಖ್ಯೆ ಏರಿಕೆಯಾಗ್ತಾ ಇದು ಜನರ ಆರ್ಥಿಕ ಪರಿಸ್ಥಿತಿ ಚೇತರಿಸುತ್ತಿದೆಯಂತೆ.

    ಕತ್ತೆಯ ಸಂಖ್ಯೆ ಏರಿಕೆ ಕಾರಣ ಇದು..!

    ಪಾಕಿಸ್ತಾನದಲ್ಲಿ ಕಳೆದೊಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು, ದೇಶದ 80 ಲಕ್ಷ ಜನ ಈ ಕತ್ತೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕತ್ತೆಗಳಿಂದಾಗಿಯೇ ತನ್ನ ವಿದೇಶಿ ವಿನಿಮಯ ಹೆಚ್ಚಿಸಿಕೊಂಡಿರುವ ಪಾಕಿಸ್ತಾನ, ದೇಶದ ಆರ್ಥಿಕ ಸುಧಾರಣೆಗೆ ಮುಂದಾಗಿದೆ. ಚೀನಾ ದೇಶದಲ್ಲಿ ಪಾಕಿಸ್ತಾನದ ಕತ್ತೆಗಳಿಗೆ ಬೇಡಿಕೆ ಇದ್ದು, ಪಾಕಿಸ್ತಾನ ಈ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುತ್ತಿದೆ. ಈ ರಪ್ತಿನಿಂದಾಗಿ ಪಾಕಿಸ್ತಾನದ ಜನರ ಗಳಿಕೆಯಲ್ಲಿ 40% ಹೆಚ್ಚಳವಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಮಹಮ್ಮದ್ ಔರಂಗಜೇಬ್ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 15 ಕೋಟಿ ಜಾನುವಾರುಗಳಿವೆ. ಅವುಗಳಲ್ಲಿ ಸರಿ ಸುಮಾರು 59 ಲಕ್ಷ ಕತ್ತೆಗಳೇ ಇದೆ ಅಂತೆ.


    ಜಗತ್ತಿನ ಕತ್ತೆಗಳ ದೊಡ್ಡ ಆಮದುದಾರ ದೇಶ ಚೀನಾ..!

    ಚೀನಾ ದೇಶದಲ್ಲಿ ಕತ್ತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಜಗತ್ತಿನ ಹಲವು ದೇಶಗಳಿಂದ ಕತ್ತೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ಪಾಕಿಸ್ತಾನ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುವ ಮೂರನೇ ದೊಡ್ಡ ದೇಶವಾಗಿದೆ. ಚೀನಾದಲ್ಲಿ ಕತ್ತೆಗಳಿಂದ ಔಷಧ ತಯಾರಿ ಸೇರಿದಂತೆ ಕತ್ತೆ ಹಾಲು, ಮಾಂಸ ಹಾಗೂ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಇನ್ನು ಕತ್ತೆ ಮಾಂಸ ಚೀನಾ ದೇಶದ ಜನಪ್ರೀಯ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದೆ.

    Continue Reading

    FILM

    ಕನ್ನಡತಿ ರಂಜನಿ ರಾಘವನ್‌ಗೆ ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಯ ಗರಿ..!! ಈ ಬಗ್ಗೆ ರಂಜನಿ ಹೇಳಿದ್ದೇನು?

    Published

    on

    ಬೆಂಗಳೂರು: ಪುಟ್ಟಗೌರಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ರಂಜನಿ ರಾಘವನ್ ಕನ್ನಡತಿ ಸೀರಿಯಲ್ ಮೂಲಕ ಅತೀ ಹೆಚ್ಚು ಮೆಚ್ಚುಗೆಯನ್ನು ಪಡೆದಿದ್ದಾರೆ. ಈ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ತನ್ನ ಸ್ವಚ್ಛಂದವಾದ ಕನ್ನಡದಿಂದಾಗಿ ಕನ್ನಡಿಗರ ಹೃದಯ ಕದ್ದ ನಟಿ. ನಟನೆಯಲ್ಲಿ ಮಾತ್ರವಲ್ಲದೇ ಬರಹದಲ್ಲೂ ಸೈ ಎನಿಸಿಕೊಂಡಿದ್ದಾರೆ ರಂಜನಿ.

    ಒಳ್ಳೆಯ ಬರಹಗಾರ್ತಿಯೂ ಆಗಿರುವ ರಂಜನಿ ರಾಘವನ್ ಇತ್ತೀಚೆಗೆ ‘ಕಥೆ ಡಬ್ಬಿ’ ಎಂಬ ಕಥಾಸಂಕಲನ ಹಾಗೂ ‘ಸ್ವೈಪ್‌ರೈಟ್’ ಎಂಬ ಕಾದಂಬರಿಯನ್ನು ಬರೆದಿದ್ದು ಸಾಹಿತ್ಯ ಲೋಕದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿ, ಸಿನೆಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಇದ್ದರೂ ಬಿಡುವ ಮಾಡಿಕೊಂಡು ಕಥೆ ಬರೆಯುತ್ತಾರೆ. ಇನ್ನು ನಟನೆಯಲ್ಲಿ ಸದಾ ಬ್ಯುಸಿ ಇರುವವರು ಬಿಡುವು ಮಾಡಿಕೊಳ್ಳುವುದೇ ಕಷ್ಟ. ಈ ಮಧ್ಯೆ ರಂಜನಿ ತಮ್ಮ ಸಾಹಿತ್ಯ ಆಸಕ್ತಿಗಾಗಿ ಬಿಡುವು ಮಾಡಿಕೊಂಡು ಕಥೆಗಳನ್ನು ಬರೆಯುತ್ತಾರೆ.

    ಕುಡಿದ ಅಮಲಿನಲ್ಲಿ ತೇಲಾಡಿದ ಉರ್ಫಿ ಜಾವೇದ್..!

    ಇದೀಗ ಇವರ ಸಾಹಿತ್ಯಾಭಿರುಚಿಗಾಗಿ ಹೆಮ್ಮೆಯ ಗರಿಯೊಂದು ಮುಡಿಗೇರಿದೆ. ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕ ಸಂಘದ ವತಿಯಿಂದ “ಯುವ ಸಾಹಿತ್ಯ ರತ್ನ ಬಿರುದು” ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಜೊತೆ ವೀಡಿಯೋ ಮಾಡಿ ರಂಜನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅವರ ಕಥೆ ಡಬ್ಬಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ ಸಾಹಿತ್ಯಾಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. “ಈ ಹಿಂದೆ ನಾನು ಬರೆದ ಕಥೆ ಡಬ್ಬಿ ಪುಸ್ತಕಕ್ಕೆ ಬಹಳಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದೀರಿ. ಹಾಗೆ ತುಂಬಾ ಜನ ನನ್ನ ಫ್ಯಾನ್ ಪೇಜ್ ಮೂಲಕ ಪ್ರಮೋಷನ್ ಗಳನ್ನು ನೀಡಿದ್ದೀರಿ ನಿಮಗೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

    ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ಮುಜುಗರ ಎನಿಸುತ್ತಿದೆ. ಈ ಪ್ರಶಸ್ತಿಯನ್ನು ಎಲ್ಲಾ ಸಾಹಿತಿಗಳಿಗೆ, ಓದುಗಾರರಿಗೆ ಮತ್ತು ಅಭಿಮಾನಿಗಳಿಗೆ ನಾನು ಅರ್ಪಣೆ ಮಾಡುತ್ತೇನೆ ಎಂದು ಹೇಳಿದರು.

    Continue Reading

    LATEST NEWS

    Trending