ಕುಂದಾಪುರ: ಜಿಂಕೆ ಮರಿಯೊಂದು ಪಾಳು ಬಾವಿಗೆ ಬಿದ್ದುದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ರಕ್ಷಿಸಿದ ಘಟನೆ ಕುಂದಾಪುರದ ಕೇದೂರು ಗ್ರಾಮ ಪಂಚಾಯತ್ನ ಶಾನಾಡಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಮರಿ ದಾರಿ ಕಾಣದೆ ಪಾಳು ಬಾವಿಗೆ ಬಿದ್ದಿತ್ತು.
ಇದನ್ನು ಗಮನಿಸಿದ ಒಂದು ಯುವಕರ ತಂಡ ಹರಸಾಹಸ ಪಟ್ಟು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.
ಸುಮಾರು ಒಂದು ವರ್ಷ ಪ್ರಾಯದ ಜಿಂಕೆ ಮರಿ ಇದಾಗಿದ್ದು, ಸದ್ಯ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.
ಬಳಿಕ ಇಲಾಖೆಯವರು ಜಿಂಕೆ ಮರಿಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.