ಮಂಗಳೂರು: ಸುರತ್ಕಲ್ ವಿವಾದಿತ ಟೋಲ್‌ಗೇಟ್ ತೆರವುಗೊಳಿಸಲು ಈಗಾಗಲೇ ಹೋರಾಟ ಸಮಿತಿಯಿಂದ ಆಕ್ರೋಶಭರಿತ ಪ್ರತಿಭಟನೆಗಳು ನಡೆದವು. ಇನ್ನು ಅ.28ರಿಂದ ಟೋಲ್‌ಗೇಟ್ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ.
ಇಂದು ಸುರತ್ಕಲ್ ವಿಶ್ವಕಲ್ಯಾಣ ಮಂಟಪದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟೋಲ್‌ಗೇಟ್‌ನಲ್ಲಿ ಎಂದಿನಂತೆ ಟೋಲ್ ಸಂಗ್ರಹ ಮುಂದುವರೆದಿದ್ದು ಈ ಹಿನ್ನೆಲೆ ಹೋರಾಟಗಾರರ ಆಕ್ರೋಶದ ಕಾವು ಇನ್ನೂ ಆರಿಲ್ಲ.
ಸ್ಥಳದಲ್ಲಿ ಎರಡು ಕೆ.ಎಸ್.ಆರ್.ಪಿ ತುಕಡಿಗಳು ಮತ್ತು ಸುರತ್ಕಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸುಮಾರು 100 ಪೊಲೀಸರನ್ನು ಆಯೋಜನೆ ಮಾಡಲಾಗಿದೆ.